ಕಿರುಕುಳದಿಂದಆತ್ಮಹತ್ಯೆಗೆಯತ್ನಿಸಿದ್ದ ಯುವತಿಸಾವು

ಹಾಸನ : ನೆರೆಮನೆಯ ವ್ಯಕ್ತಿಯ ಕಿರು ಕುಳದಿಂದ ಬೇಸತ್ತು ಕಳೆದ ಗುರುವಾರ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ಯುವತಿ ಬುಧವಾರ ಮೃತಪಟ್ಟಳು. ಹೆತ್ತೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಎಂಬು ವವರ ಪತಿ ಕುಮಾರ್ ಎಂಬಾತ ನೆರೆ ಮನೆಯ ನಿವಾಸಿಗಳಾದ ಗೀತಾ ಹಾಗೂ ಧರ್ಮರಾಜ್ ಎಂಬುವರ ಮಗಳು ನಂದಿನಿ (೨೨) ಎಂಬಾಕೆಯನ್ನು ನಿತ್ಯವೂ ಪೀಡಿಸುತ್ತಿದ್ದನು. ಟಿ.ಸಿ.ಹೆಚ್. ಓದು ತ್ತಿದ್ದ ಈಕೆ, ಕಾಲೇಜಿಗೆ ಹೋಗು ವಾಗ ರಸ್ತೆ ಮಧ್ಯೆ ಅಡ್ಡ ಹಾಕಿ ಕಿರುಕುಳ ನೀಡುತ್ತಿದ್ದನು ಎಂದು ಹೇಳಲಾಗಿದೆ. ಇದರಿಂದ ಜಿಗುಪ್ಸೆಗೊಂಡ ಆಕೆ ಸುಮಾರು ೪೦ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥ ಗೊಂಡಿದ್ದ ಆಕೆಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

One Comment to “ಕಿರುಕುಳದಿಂದಆತ್ಮಹತ್ಯೆಗೆಯತ್ನಿಸಿದ್ದ ಯುವತಿಸಾವು”

  1. mahesh says:

    ಪಾಪ ಆ ಹುಡುಗಿ ಏನು ಮಾಡಿತು ….ಅವನನ್ನು ನೇನಿಗೇ ಹಾಕಬೇಕು

Leave a Reply