ದಕ್ಷಿಣ ಪದವೀಧರ ಕ್ಷೇತ್ರ : ಶೇ.೫೩.೦೬ ಮತದಾನ

ಹಾಸನ : ರಾಜ್ಯ ವಿಧಾನ ಪರಿಷತ್ಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಬುಧ ವಾರ ನಡೆದ ಚುನಾವಣೆಯು ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.೫೩.೬೦ ಮತದಾನವಾಗಿದೆ. ಮೈಸೂರು, ಮಂಡ್ಯ, ಚಾಮರಾಜ ನಗರ ಹಾಗೂ ಹಾಸನ ಜಿಲ್ಲೆಯಲ್ಲಿ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ ೮ ಗಂಟೆಗೆ ಆರಂಭಗೊಂಡ ಮತದಾನವು, ಸಂಜೆ ೪ ಗಂಟೆಗೆ ಮುಗಿ ಯಿತು. ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನ, ಮಧ್ಯಾಹ್ನದ ವೇಳೆಗೆ ಬಿರುಸು ಪಡೆದುಕೊಂಡಿತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾ ವಣೆಗೆ ಮತಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗಿತ್ತು. ಈ ಚುನಾವಣೆಯಲ್ಲಿಯೂ ಮತದಾರರ ಪ್ರತಿಕ್ರಿಯೆ ನೀರಸವಾಗಿತ್ತು. ಅಭ್ಯರ್ಥಿಗಳ ಬೆಂಬಲಿಗರು ಮಾತ್ರ ಭಾರೀ ಉತ್ಸಾಹದಲ್ಲಿದ್ದುದು ಕಂಡು ಬಂತು.

No Comments to “ದಕ್ಷಿಣ ಪದವೀಧರ ಕ್ಷೇತ್ರ : ಶೇ.೫೩.೦೬ ಮತದಾನ”

add a comment.

Leave a Reply

You must be logged in to post a comment.