ಅಕ್ಷರ ಜಾತ್ರೆಗೆ ಸಂಭ್ರಮದ ತೆರೆ : ನಿರೀಕ್ಷೆಗೂ ಮೀರಿದ ಜನ

ಚನ್ನರಾಯಪಟ್ಟಣ: ಕನ್ನಡ ಕಟ್ಟುವ ಮನಸ್ಸನ್ನು ಜಾಗೃತಿ ಮೂಡಿಸುವ ಮೂಲಕ ಸಾಹಿತ್ಯ ಸಮ್ಮೇಳನಗಳು ಜಾತ್ರೆ, ಸಂತೆ ಎಂಬ ಅಪವಾದವನ್ನು ಅಳಿಸಿವೆ ಎಂದು ಹಿರಿಯ ಜನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇ ಗೌಡ ಅಭಿಪ್ರಾಯಪಟ್ಟರು. ಭಾನುವಾರ ಚನ್ನರಾಯಪಟ್ಟಣ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಡಾ.ಹಿ.ಶಿ.ರಾ., ಸಮ್ಮೇಳನಗಳು ಸಂಸ್ಕೃತಿಯನ್ನು ಬಿಂಬಿಸುವ ಪ್ರತೀಕ ಗಳು. ಇವು ಜನರನ್ನು ಹೊಸ ದಿಕ್ಕಿಗೆ ಕರೆದೊಯ್ಯುತ್ತವೆ. ರಾಜಕಾರಣ ಅಧಃ ಪತನಕ್ಕಿಳಿದಿರುವ ಸಂದರ್ಭದಲ್ಲಿ ಸಮ್ಮೇ ಳನಗಳಲ್ಲಿ ಏರ್ಪಡಿಸುವ ಗೋಷ್ಠಿಗಳು ಜೀವಂತಿಕೆ ತುಂಬಿಸುತ್ತವೆ ಎಂದರು. ಭಾಷೆಯ ಉಳಿವಿಗೆ ವಿಚಾರ ಗೋಷ್ಠಿಗಳು ಎಚ್ಚರ, ಚೈತನ್ಯ ತುಂಬು ತ್ತವೆ. ಭಾಷೆಯ ಸೊಗಡು ವಿನಿಮಯ ವಾಗಲು ಈ ಗೋಷ್ಠಿಗಳು ಅಗತ್ಯ ಎಂದು ಪ್ರತಿಪಾದಿಸಿದರು. ಮಾಜಿ ಸಚಿವ, ಶಾಸಕ ಹೆಚ್‌.ಡಿ. ರೇವಣ್ಣ ಮಾತನಾಡಿ, ಕನ್ನಡ ಉಳಿಯ ಬೇಕಾದರೆ ಗ್ರಾಮಾಂತರ ಪ್ರದೇಶದಲ್ಲಿ ರುವ ಪ್ರಾಥಮಿಕ ಶಾಲೆಗಳನ್ನು ಉಳಿಸ ಬೇಕು. ಗ್ರಾಮೀಣ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಇಂಥ ಸಮ್ಮೇಳನ ಗಳು ಪರಿಹಾರ ಕಂಡುಕೊಳ್ಳಬೇಕು ಎಂದು ಆಶಿಸಿದರು. ಕನ್ನಡ ಸತ್ತರೆ ನಾವೂ ಸತ್ತಂತೆ : ಕನ್ನಡ ಸತ್ತರೆ ನಾವೂ ಸತ್ತಂತೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್‌ ಅಭಿಪ್ರಾಯಪಟ್ಟರು. ಪ್ರತಿ ಮಾತೃಭಾಷೆಗೂ ಇಂದು ಇಂಗ್ಲೀಷ್‌ ಪ್ರತಿಸ್ಪರ್ಧಿಯಾಗಿದೆ. ಗ್ರಾಮೀಣ ಜನರು ಕೂಡ ಇಂಗ್ಲೀಷ್‌ ಶಿಕ್ಷಣದ ಕಡೆ ಮುಖ ಮಾಡಿದ್ದಾರೆ. ಜನರು ಕನ್ನಡದ ಮೇಲಿನ ಪ್ರೀತಿಯನ್ನು ಕಳೆದು ಕೊಳ್ಳುತ್ತಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಮಾತೃಭಾಷೆಗಳ ಸ್ಥಿತಿ ಹೀಗೆಯೇ ಇದೆ. ಆದರೆ ಅವುಗಳು ಹೊಸ ರೂಪ ದೊಂದಿಗೆ ಮತ್ತೆ ಬೆಳೆಯುತ್ತಿವೆ ಎಂದ ಅವರು, ಗ್ರಾಮೀಣ ಪ್ರದೇಶದಲ್ಲೂ ಸಮ್ಮೇಳನಕ್ಕೆ ಇಷ್ಟೊಂದು ಜನ ಸೇರಿರು ವುದು ಹೆಮ್ಮೆ ಹಾಗೂ ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು. ಸಮಾರೋಪದ ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್‌ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಉದಯರವಿ, ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್‌, ಆರಕ್ಷಕ ವೃತ್ತ ನಿರೀಕ್ಷಕ ಮಾರಪ್ಪ , ತಹಸೀಲ್ದಾರ್‌ ವರಪ್ರಸಾದ ರೆಡ್ಡಿ , ತಾಲ್ಲೂಕು ಕನ್ನಡ ಸಾಹಿತ್ಯ ಪರಿ ಷತ್‌ ಅಧ್ಯಕ್ಷ ಪ್ರೊ.ಹೆಚ್‌.ಸಿದ್ದೇಗೌಡ ಇನ್ನಿತರರು ಹಾಜರಿದ್ದರು.

No Comments to “ಅಕ್ಷರ ಜಾತ್ರೆಗೆ ಸಂಭ್ರಮದ ತೆರೆ : ನಿರೀಕ್ಷೆಗೂ ಮೀರಿದ ಜನ”

add a comment.

Leave a Reply