ದೇಶದ ಹಲವೆಡೆ ಭೂಕಂಪ

ನವದೆಹಲಿ : ದೇಶದ ಹಲವೆಡೆ ಭೂಕಂಪವಾಗಿದೆ. ಪಶ್ಚಿಮ ಬಂಗಾಳ, ಲಕ್ನೋ, ಪಾಟ್ನಾ, ಡಾರ್ಜಿಲಿಂಗ್‌, ಸಿಕ್ಕಿಂ ಮತ್ತಿತರೆಡೆ ಭೂಮಿ ಕಂಪಿಸಿದೆ. ೧೦ ದಿನ ದಲ್ಲಿ ಎರಡನೇ ಬಾರಿ ಭೂಕಂಪವಾಗಿದೆ. ಪಶ್ಚಿಮ ಬಂಗಾಳ ಕತ್ತಲಲ್ಲಿ ಮುಳುಗಿದೆ. ಈಶಾನ್ಯ ಭಾರತ ಸೇರಿದಂತೆ ನೇಪಾಳ, ಬಾಂಗ್ಲಾ ದೇಶಗಳಲ್ಲಿ ೬.೮ ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಭಾರಿ ಸಾವು ನೋವಿನ ಶಂಕೆ ವ್ಯಕ್ತವಾಗಿದ್ದು, ವಾಯುಪಡೆ ವಿಮಾನ ಗಳನ್ನು ರಕ್ಷಣಾ ಕಾರ್ಯಕ್ಕೆ ಕಳುಹಿಸಲಾಗಿದೆ. ೮ ಮಂದಿ ಸಾವಿಗೀಡಾದ ಬಗ್ಗೆ ವರದಿಗಳು ಬಂದಿದ್ದು, ನೂರಾರು ಮಂದಿ ಗಾಯಗೊಂಡಿ ದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಆತಂಕ ನೆಲೆ ಮಾಡಿದೆ. ಭಾನುವಾರ ಸಂಜೆ ೬.೧೦ಕ್ಕೆ ಸರಿ ಸುಮಾರು ಒಂದು ನಿಮಿಷ ಭೂಮಿ ಕಂಪಿ ಸಿದೆ. ಸಿಕ್ಕಿಂನಲ್ಲಿನ ಇಂಡೋ ಟಿಬೆಟಿಯನ್‌ ಗಡಿ ಭದ್ರತಾ ಪಡೆಯ ೨ ಕಟ್ಟಡಗಳು ನೆಲ ಸಮಗೊಂಡಿವೆ. ಪಶ್ಚಿಮ ಬಂಗಾಳದ ಹಲ ವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಆದಾಗ್ಯೂ, ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಸಿಕ್ಕಿಂ ಮುಖ್ಯಮಂತ್ರಿಗೆ ತಿಳಿಸಿ ದ್ದಾರೆ. ಅವರು ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಪ್ರಾಧಿಕಾರದ ತುರ್ತು ಸಭೆ ಕರೆದಿದ್ದಾರೆ. ಭೂಕಂಪ ಭಾರಿ ಪ್ರಮಾಣದಲ್ಲಿ ಇತ್ತೆಂದು ತಜ್ಞರು ಹೇಳಿದ್ದು, ಎಲ್ಲೆಡೆ ಆತಂಕದ ವಾತಾ ವರಣ ನೆಲೆಸಿದೆ. ಇದರ ಕೇಂದ್ರ ಬಿಂದು ಸಿಕ್ಕಿಂ – ನೇಪಾಳದ ಗಡಿ ಪ್ರದೇಶದಲ್ಲಿತ್ತೆಂದು ಅಂದಾಜು ಮಾಡಲಾಗಿದೆ. ಕಂಪನದ ಅನುಭವ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಬಿಹಾರ, ಉತ್ತರ ಪ್ರದೇಶ, ಹಾಗೂ ಜಾರ್ಖಂಡ್‌ಗೂ ತಟ್ಟಿದ್ದು, ಎಲ್ಲೆಡೆ ಆತಂಕದ ವಾತಾವರಣ ನೆಲೆಸಿದೆ. ಕತ್ತಲಲ್ಲಿ ಪಶ್ಚಿಮ ಬಂಗಾಳ : ಭಾನು ವಾರ ಸಂಜೆ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನತೆ ಕಗ್ಗತ್ತಲಿನಲ್ಲಿ ಪರದಾಡುತ್ತಿದ್ದಾರೆ. ಇಲ್ಲೂ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿ ಕೊಂಡಿದ್ದು, ಜನತೆ ಭಯಭೀತಗೊಂಡಿದ್ದಾರೆ. ಉತ್ತರ ಬಂಗಾಳ ವ್ಯವಹಾರಗಳ ಸಚಿವ ಗೌತಮ್‌ ದೇವ್‌ ಅವರು ಭೂಕಂಪದಿಂದಾಗಿ ಕಾಲಿಂಪಾಂಗ ಸೇರಿದಂತೆ ಹಲವೆಡೆ ಭೂ ಕುಸಿತಗಳು ಸಂಭವಿಸಿದ್ದು, ಹಲವು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆತಂಕಪಡುವ ಅಗತ್ಯ ವಿಲ್ಲ ಎಲ್ಲೆಡೆ ತುರ್ತು ಪರಿಹಾರ ಕಾರ್ಯ ತಂತ್ರಗಳನ್ನು ರೂಪಿಸಲಾಗಿದೆ ಎಂದಿದ್ದಾರೆ. ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

No Comments to “ದೇಶದ ಹಲವೆಡೆ ಭೂಕಂಪ”

add a comment.

Leave a Reply

You must be logged in to post a comment.