ವೃತ್ತಿ ವೈಷಮ್ಯ : ಮಾರಣಾಂತಿಕ ಹಲ್ಲೆ

ಅರಕಲಗೂಡು : ವೃತ್ತಿ ವೈಷಮ್ಯ ದಿಂದ ಮಹಿಳಾ ಉಪನ್ಯಾಸಕಿಯೋರ್ವರು ಸಹದ್ಯೋಗಿ ಉಪನ್ಯಾಸಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕಳೆದ ಬುಧವಾರ ತಾಲ್ಲೂಕಿನ ಕಬ್ಬಳಿಗೆರೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಕುರಿತು ಅಂದೇ ಕೊಣ ನೂರು ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದರೂ ಸಹ ಆರೋಪಿಗಳನ್ನು ಬಂಧಿಸದೆ ಮೀನಾಮೇಷ ಎಣಿಸು ತ್ತಿರುವ ಕೊಣನೂರು ಪೊಲೀಸರು ಮಗುಮ್ಮಾಗಿದ್ದಾರೆ. ಇತ್ತ ತೀವ್ರವಾಗಿ ಗಾಯಗೊಂಡು ೮ ಹಲ್ಲುಗಳನ್ನು ಕಳೆದುಕೊಂಡು ಮಾತನಾಡಲಾಗದೇ ಮೂಕ ವೇದನೆ ಅನುಭವಿಸುತ್ತಿರುವ ಯುವ ಅತಿಥಿ ಉಪನ್ಯಾಸಕ ಬೋಜೇ ಗೌಡ ಪತ್ರಿಕೆಯೊಂದಿಗೆ ಮೂಕ ಭಾಷೆ ಯಲ್ಲೇ ಅಳಲು ತೋಡಿಕೊಂಡರು. ಪ್ರಕರಣದ ವಿವರ ಈ ಮುಂದಿನಂತಿದೆ. ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡರ ಮಗ ಬೋಜೇ ಗೌಡ (೨೭) ಆಂಗ್ಲ ಭಾಷೆಯ ಅತಿಥಿ ಉಪ ನ್ಯಾಸಕರಾಗಿ ಕೊಣನೂರಿನ ಬಿ.ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅರ್ಜಿ ಸಲ್ಲಿಸಿದ್ದರು. ಯುಜಿಸಿ ನಿಯಮ ದಂತೆ ಸೆ.೪ರಂದು ನಡೆದ ಅತಿಥಿ ಉಪ ನ್ಯಾಸಕರ ಸಂದರ್ಶನದಲ್ಲಿ ಅರ್ಹತೆಯ ಆಧಾರದ ಮೇಲೆ ಬೋಜೇಗೌಡ ಆಯ್ಕೆ ಯಾದರು. ಮತ್ತು ೮ ಗಂಟೆಗಳ ಅವಧಿಯ ಕಾರ್ಯಭಾರವನ್ನು ಅವರಿಗೆ ನೀಡಲಾಗಿತ್ತು. ಆದರೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಆಂಗ್ಲ ಭಾಷೆಗೆ ಅತಿಥಿ ಉಪನ್ಯಾಸಕ ರಾಗಿದ್ದ ಸ್ಥಳೀಯರಾದ ರಶ್ಮಿ ಎಂಬು ವವರಿಗೆ ಬೋಜೇಗೌಡರಿಗಿಂತ ಕಡಿಮೆ ಶೈಕ್ಷಣಿಕ ಅಂಕ ಬಂದಿದ್ದರಿಂದ ಸಂದರ್ಶನ ದಲ್ಲಿ ಅನರ್ಹರಾಗಿದ್ದಾರೆ. ಇದರಿಂದ ಕುಪಿತಗೊಂಡ ರಶ್ಮಿ, ಕಾಲೇಜಿಗೆ ಪಾಠ ಮಾಡಲು ಬಂದ ಬೋಜೇಗೌಡರನ್ನು ನೀವು ಇಲ್ಲಿಗೆ ಬಂದಿದ್ದೇಕೆ? ನಾನೇ ಮೊದಲಿನಿಂದಲೂ ಇಲ್ಲಿ ಕೆಲಸ ಮಾಡು ತ್ತಿದ್ದೇನೆ ಎಂದು ತಗಾದೆ ತೆಗೆದಿದ್ದಾರೆ. ಈ ಜಟಾಪಟಿ ಮುಂದುವರೆದಾಗ, ಬೇಸತ್ತ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಮುತ್ತಯ್ಯ, ಗಲಾಟೆ ಮಾಡಿ ಕೊಳ್ಳಬೇಡಿ. ಇರುವ ೮ ಗಂಟೆ ಕಾರ್ಯ ಭಾರವನ್ನು ಇಬ್ಬರು ತಲಾ ೪ ಗಂಟೆ ಗಳಂತೆ ಹಂಚಿಕೊಳ್ಳಿ ಎಂದಿದ್ದಾರೆ. ನಂತರ ಊರಿಗೆ ವಾಪಸ್‌ ಬೈಕಿನಲ್ಲಿ ಬರುತ್ತಿದ್ದ ಬೋಜೇಗೌಡರನ್ನು ಮಾರ್ಗ ಮಧ್ಯೆ ಕಬ್ಬಳಿಗೆರೆ ಗ್ರಾಮದ ಬಳಿ ಎರಡು ಬೈಕಿನಲ್ಲಿ ಆಗಂತುಕರೊಂದಿಗೆ ಹಿಂಬಾ ಲಿಸಿ ಬಂದ ಅತಿಥಿ ಉಪನ್ಯಾಸಕಿ ರಶ್ಮಿ ಏಕಾಎಕಿ ಬೋಜೇಗೌಡನ ಬೈಕ್‌ನ್ನು ತಡೆದಿದ್ದಾರೆ. ತಕ್ಷಣ ಅವರೊಂದಿಗಿದ್ದ ಆಗಂತುಕರು ಮಾರಕಾಸ್ತ್ರಗಳಿಂದ ತೀವ್ರ ರೀತಿಯಲ್ಲಿ ಮುಖ, ಎದೆ ಹಾಗೂ ಕಾಲುಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬೋಜೇಗೌಡ ಕೆಳಗೆ ಬೀಳುತ್ತಿದ್ದಂತೆ ಪರಾರಿಯಾಗಿದ್ದಾರೆ. ಕೆಲ ಸಮಯದ ನಂತರ ಅದೇ ಮಾರ್ಗವಾಗಿ ಬಂದ ಕೊಣನೂರು ಪಿ.ಎಸ್‌.ಐ. ಪ್ರದೀಪ್‌, ಗಾಯಗೊಂಡು ಪ್ರಜ್ಞಾಶೂನ್ಯರಾಗಿದ್ದ ಬೋಜೇಗೌಡ ರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ನರ್ಸಿಂಗ್‌ ಹೋಂಗೆ ದಾಖಲಿಸ ಲಾಗಿದೆ. ತೀವ್ರ ತರವಾದ ಹಲ್ಲೆಯಿಂದ ಬೋಜೇಗೌಡ ನಿತ್ರಾಣರಾಗಿದ್ದಾರೆ

No Comments to “ವೃತ್ತಿ ವೈಷಮ್ಯ : ಮಾರಣಾಂತಿಕ ಹಲ್ಲೆ”

add a comment.

Leave a Reply