ಮೋಜಿನ ಜೀವನಕ್ಕೆ ಹೀಗೂ ಮಾಡುತ್ತಾರೆ !

ಹಾಸನ : ಈಗ ಸೌಹಾರ್ದ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಖಯಾಲಿಯಾಗಿಬಿಟ್ಟಿದೆ. ಸಣ್ಣ ಕಛೇರಿ ತೆರೆದು ನಾಲ್ಕೈದು ಜನ ಸದಸ್ಯರನ್ನು ನೇಮಕ ಮಾಡಿಕೊಂಡು ಒಂದು ಸಹಕಾರಿ ಸಂಘ ಎಂŸ ಹೆಸರಿನ ಫಲಕವನ್ನು ತೂಗು ಹಾಕಿ ಹಣಕಾಸಿನ ವ್ಯವಹಾರ ನಡೆಸುವುದು, ನಂತರ ನಾಲ್ಕೈದು ವರ್ಷಕ್ಕೆ ಬಾಗಿಲು ಹಾಕುವುದು ಮಾಮೂ ಲಾಗಿದೆ. ಗಿರೀಶ… ಎಂಬಾತ ಅರಸೀಕೆರೆಯಲ್ಲಿ ಚೈತನ್ಯ ಸಹಕಾರ ಸಂಘ ಸ್ಥಾಪಿಸಿ, ವಾಹನ ಸಾಲ ಕೊಡುವುದಾಗಿ ಹೇಳಿ ೪೦ ಲಕ್ಷ ರೂ.ಗೂ ಅ—ಕ ಹಣ ವಸೂಲಿ ಮಾಡಿ ಈಗ ಜೈಲಿನ ಅತಿಥಿ ಯಾಗಿದ್ದು, ಶ್ರಮವಿಲ್ಲದೆ ಅತಿ ವೇಗ ವಾಗಿ ಬಿಸ…ನೆಸ… ನಡೆಸಿ, ಶ್ರೀಮಂತನಾಗುವ ಕನಸು ಕಂಡಿದ್ದು ಇದಕ್ಕೆ ಕಾರಣ. ಈಗಂತೂ ಈ ಸೌಹಾರ್ದ ಸಹ ಕಾರ ಸಂಘಗಳನ್ನು ಸ್ಥಾಪಿಸುವುದು, ಹಣಕಾಸಿನ ವ್ಯವಹಾರ ನಡೆಸುವುದು ಹವ್ಯಾಸವಾಗಿದೆ. ಟ್ರಸ…್ಟ ಹೆಸರಿನಲ್ಲಿ ಹೆಸರು ನೋಂದಾಯಿಸಿ, ನಂತರ ಈ ಹಣಕಾಸಿನ ವ್ಯವಹಾರಕ್ಕೆ ಇಳಿಯು ವುದು, ಶ್ರಮವಿಲ್ಲದೆ, ಹೆಚ್ಚು Ÿಂಡ ವಾಳ ವಿಲ್ಲದೆ ಸಂಪಾದನೆ ಮಾಡುವ ಸುಲಭ ಕೆಲಸವಿದು. ಒಂŸತ್ತು ಸ್ನೇಹಿತರು ಸೇರಿ ಸಂಘ ಮಾಡಿಕೊಂಡು ನಡೆಸುವ ವ್ಯವಹಾರ ಹೀಗಿರುತ್ತದೆ. ಜನರಿಂದ ಷೇರುಗಳನ್ನು ಸಂಗ್ರಹಿಸಲಾಗುತ್ತದೆ. ಅದು ನಾಲ್ಕೈದು ವರ್ಷಗಳಲ್ಲಿ ೪ ಕೋಟಿ ರೂ. ದಾಟು ತ್ತದೆ. ಈ ಸಹಕಾರ ಸಂಘಗಳು ಪ್ರತಿ ವರ್ಷ ಶೇ.೩ ರಿಂದ ಶೇ.೫ರಷ್ಟು ಲಾಭ ತೋರಿಸುತ್ತವೆ. ಅಂದರೆ ೯ ರಿಂದ ೧೦ ಲಕ್ಷ ರೂ.ಗಳನ್ನು ಪ್ರತಿ ವರ್ಷ ಲಾಭ Ÿಂದಿದೆ ಎಂದು ಹೇಳುತ್ತವೆ. ಧರ್ಮಾರ್ಥ ಅಥವಾ ಸಹಾ ಯಾರ್ಥ ಸಾಲ ನೀಡಿ, ಅದು ವಸೂಲಿ ಯಾಗಿಲ್ಲ ಎನ್ನುವ ಲೆಕ್ಕ ಬಿಟ್ಟು ಅಷ್ಟು ಲಾಭ ಇರುತ್ತದೆ. ಇಷ್ಟೇ ಮೊತ್ತದ ಹಣವನ್ನು ರಾಷ್ಟ್ರೀಕೃತ ಅಥವಾ ಷೆಡ್ಯೂಲ… ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ (ಎಫ….ಡಿ.) ಇಟ್ಟರೆ ೭ ರಿಂದ ೮ ವರ್ಷ ಗಳಲ್ಲಿ ಅದು ದ್ವಿಗುಣವಾಗುತ್ತದೆ. ರಿಸವ…ರ್ ಬ್ಯಾಂಕಿನಲ್ಲೂ ಇದಕ್ಕೆ ಅವ ಕಾಶವಿದೆ. ಆದರೆ ಈ ಸಹಕಾರ ಸಂಘ ಗಳಲ್ಲಿ ಈ ೭-೮ ವರ್ಷಕ್ಕೆ ಸತತ ಶೇ.೫ ರಷ್ಟು ಲಾಭಾಂಶ ದಾಖಲಿಸಿದರೂ, ದ್ವಿಗುಣವಾಗುವುದಿಲ್ಲ. ಅಲ್ಲದೆ ಅರಸೀ ಕೆರೆಯಲ್ಲಾದ ಘಟನೆ ಗಮನಿಸಿದರೆ ಅದು ಸುರಕ್ಷಿತವೂ ಅಲ್ಲ ಎನಿಸುತ್ತದೆ. ಸಹಕಾರ ಸಂಘ ಸ್ಥಾಪಿಸುವುದು, ಶ್ರಮವಿಲ್ಲದ, ಹೆಚ್ಚು Ÿಂಡವಾಳ ಬೇಕಿ ಲ್ಲದ ಈ ಉದ್ಯೋಗ ಐಷಾರಾಮಿ ಜೀವನ ನಡೆಸŸಹುದಾದ ಉದ್ಯೋಗ ವಾಗಿ ಮಾರ್ಪಡುತ್ತಿದೆ. ಇದರ Ÿಗ್ಗೆ ಎಚ್ಚರ ವಹಿಸುವುದು ಹಾಗೂ ಇಂಥವುಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ.

No Comments to “ಮೋಜಿನ ಜೀವನಕ್ಕೆ ಹೀಗೂ ಮಾಡುತ್ತಾರೆ !”

add a comment.

Leave a Reply

You must be logged in to post a comment.