ದಲಿತರಿಗೆ ಬಹಿಷ್ಕಾರ ಪ್ರಕರಣ : ಪರಿಹಾರ ಕೊಡದ ಡಿ.ಸಿ.-ಎಸ್ಪಿ ವಿರುದಟಛಿ ಕ್ರಮಕ್ಕೆ ಬಿ.ಎಸ್ಪಿ ಆಗ್ರಹ

ಅರಕಲಗೂಡು: ಸಿದ್ದಾಪುರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ದಲಿತ ಕುಟುಂಬಗಳಿಗೆ ತತ್‌ ಕ್ಷಣದ ಪರಿಹಾರ ಒದಗಿಸಲು ಜಿಲ್ಲಾಡಳಿತ ವಿಫಲವಾಗಿದೆ. ಪರಿಣಾಮವಾಗಿ ಬಹಿಷ್ಕೃತರು ಅಕ್ಕ ಪಕ್ಕದ ಹಳ್ಳಿಯವರಿಂದ ಧಾನ್ಯ ಪಡೆದು ಹಸಿವು ಇಂಗಿಸಿಕೊಳ್ಳಬೇಕಾದ ಹೀನ ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಪ್ರಕರಣ ಕುರಿತು ನಿರ್ಲಕ್ಷ್ಯ ತಾಳಿರುವ ಹಾಸನ ಜಿಲ್ಲಾಧಿಕಾರಿ ಹಾಗೂ ಎಸ್‌.ಪಿ.ಯವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ತಾಲ್ಲೂಕಿನ ಕೊಣನೂರು ಹೋಬಳಿ ಸಿದ್ದಾಪುರ ಗ್ರಾಮದಲ್ಲಿ ಕುಳುವಾಡಿಕೆ ಮಾಡಲು ನಿರಾಕರಿಸಿದ್ದರಿಂದಾಗಿ ೯ ಕುಟುಂಬಗಳಿಗೆ ಸಾಮಾಜಿಕ ಬಹಿ ಷ್ಕಾರ ಹಾಕಲಾಗಿತ್ತು. ಗ್ರಾಮದಲ್ಲಿ ಇನ್ನೂ ಬಿಗಿ ಪರಿಸ್ಥಿತಿ ಇರುವುದರಿಂದ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ. ಸದರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಬಿಎಸ್‌ಪಿ ರಾಜ್ಯಾ ಧ್ಯಕ್ಷ ಮಾರಸಂದ್ರ ಮುನಿಯಪ್ಪ ಹಾಗೂ ಬಿಎಸ್‌ಪಿ ರಾಜ್ಯ ಸಂಯೋಜಕ ಎನ್‌.ಮಹೇಶ್‌ ಸಂತ್ರಸ್ತ ದಲಿತ ಕುಟುಂಬಗಳ ಅಳಲನ್ನು ಆಲಿಸಿದರು. ತಿಂಗಳ ಹಿಂದೆ ಗಣೇಶನ ಹಬ್ಬಕ್ಕೆ ಚಪ್ಪರ ಹಾಕಲು ಕುಳುವಾಡಿಕೆ ಕುಟುಂಬಗಳವರು ನಿರಾ ಕರಿಸಿದ್ದರು. ಮತ್ತು ಗಣೇಶ ವಿಸರ್ಜಿಸುವ ಸಂದರ್ಭದಲ್ಲಿ ಏರ್ಪಾಡಾಗಿದ್ದ ಗೊಂಬೆಯಾಟ ವೀಕ್ಷಿಸಲು ತೆರಳಿದ್ದ ದಲಿತರನ್ನು ಅಪಮಾನಿಸಿ ಕಳುಹಿಸಲಾಗಿತ್ತೆನ್ನಲಾಗಿದೆ. ಇತ್ತೀಚೆಗೆ ಸವಿತಾ ಸಮಾಜದ ವ್ಯಕ್ತಿಯೋರ್ವರು ನಿಧನ ರಾದಾಗ ಗುಂಡಿ ತೆಗೆಯಲು ಸಹ ದಲಿತರು ನಿರಾಕರಿಸಿ ದ್ದರೆನ್ನಲಾಗಿದೆ. ಇದರಿಂದ ಕ್ರೋಧಗೊಂಡ ಗ್ರಾಮದ ಪಂಚಾಯ್ತಿ ಸದಸ್ಯ ಸೋಮಶೇಖರ್‌, ಶಿಕ್ಷಕ ಶಿವಶಂಕರಾ ಚಾರಿ, ಪಟೇಲ್‌ ಕಿಟ್ಟ, ಅಶೋಕ, ಕೃಷ್ಣ, ಶಿವೇಗೌಡ ಮತ್ತು ಆಟೋ ಹರೀಶ ಮತ್ತಿತರರು ಸೇರಿಕೊಂಡು ದಲಿತರಾದ ವೆಂಕಟೇಶಯ್ಯ, ಅಣ್ಣಯ್ಯ, ಸೋಮಯ್ಯ, ಕೃಷ್ಣಯ್ಯ, ಚೆಲು ವಯ್ಯ ಮತ್ತಿತರರ ಮೇಲೆ ಹಲ್ಲೆ ನಡೆಸಲು ಮುಂದಾದರಲ್ಲದೇ ಜಾತಿ ಹೆಸರಿಡಿದು ಅಪಮಾನಿಸಿದ್ದಾರೆ. ಅಂದೇ ಬೆಳಿಗ್ಗೆ ಗ್ರಾಮದಲ್ಲಿ ಸಭೆ ಸೇರಿ ೯ ದಲಿತ ಕುಟುಂಬಗಳವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಈ ಸಂದರ್ಭ ತಮಗೆ ಜೀವ ಭಯವಿದ್ದು , ಕೊಣನೂರು ಠಾಣೆಗೆ ದೂರು ನೀಡಿದರೂ ಸಹ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸಿದ ಕೊಣ ನೂರು ಎಸ್ಸೈ ಪ್ರವೀಣ್‌ ಮತ್ತು ಸಿಪಿಐ ಕುಮಾರ ಸ್ವಾಮಿ ಮರುದಿನ ಬೆಳಿಗ್ಗೆ ಪ್ರಕರಣ ದಾಖಲಿಸಿಕೊಂಡಿ ದ್ದಾರೆ ಎಂದರು. ಕಳೆದ ಶನಿ ವಾರದಂದು ಪ್ರಕ ರಣಕ್ಕೆ ಕಾರಣ ರಾದ ಕಿಡಿಗೇಡಿಗಳ ನೇತೃತ್ವದಲ್ಲಿಯೇ ಪಟ್ಟಣದಲ್ಲಿ ಪ್ರತಿ ಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಸ್ಥಳ ದಲ್ಲಿ ಹಾಜರಿದ್ದರೂ, ಯಾರನ್ನೂ ಬಂಧಿಸಿಲ್ಲ. ಸೋಮವಾರ ಶಾಂತಿ ಸಭೆ ಕರೆದಿದ್ದಾರೆ. ಆದರೆ ತಮಗೆ ಜೀವ ಬೆದರಿಕೆ ಇರುವುದರಿಂದ ಆರೋಪಿಗಳನ್ನು ಬಂಧಿಸುವವರೆಗೂ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇವೆ ಎಂದರು. ನಂತರ ಪತ್ರಿಕಾಗೋಷ್ಠಿ ನಡೆಸಿದ ಮಾರಸಂದ್ರ ಮುನಿಯಪ್ಪ ಮತ್ತು ಎನ್‌.ಮಹೇಶ್‌, ಗ್ರಾಮದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ, ಭಯಭೀತರಾಗಿರುವ ಕುಟುಂಬಗಳು ದಿನಗೂಲಿ ಯನ್ನೇ ಅವಲಂಬಿಸಿವೆ. ಆದರೆ ಜಿಲ್ಲಾಡಳಿತವಾಗಲೀ, ತಾಲ್ಲೂಕು ಆಡಳಿತವಾಗಲೀ ಇದುವರೆಗೂ ಕೆಲಸ ಒದಗಿಸುವ ಮತ್ತು ಗಂಜಿ ಕೇಂದ್ರ ತೆರೆಯುವ ಕೆಲಸ ಮಾಡಿಲ್ಲ. ಸಮು ದಾಯದ ಮುಖಂಡರುಗಳು ಹೊರಗಿನಿಂದ ಬಂದು ಆಹಾರ ಧಾನ್ಯಗಳನ್ನು ಒದಗಿಸಿ, ೯ ಕುಟುಂಬಗಳಿಗೂ ಒಂದೇ ಕಡೆ ಅಡುಗೆ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಗೆ ದಲಿತ ಕುಟುಂಬಗಳನ್ನು ದೂಡಿರುವ ಜಿಲ್ಲಾಡಳಿತದ ನಿರ್ಲಕ್ಷ್ಯ ಆಕ್ಷೇಪಾರ್ಹವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಮತ್ತು ಎಸ್‌.ಪಿ.ಯವರನ್ನು ಹೊಣೆಗಾರರನ್ನಾಗಿ ಮಾಡಿ ತಕ್ಷಣ ದಿಂದಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಘಟನೆ ಜರುಗಿದ ಮೇಲೆ ಸವರ್ಣೀಯರ ಮನಸ್ಸು ಪರಿ ವರ್ತನೆ ಮಾಡುವ ಕೆಲಸ ಆಗಿಲ್ಲ, ಸದರಿ ಪ್ರಕರಣದಲ್ಲಿ ಪೊಲೀಸ್‌ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕಣ್ಣೆದುರಿಗೆ ಆರೋಪಿ ಗಳು ಓಡಾಡುತ್ತಿದ್ದರೂ ಬಂಧಿಸದೇ ಯಾವ ಮಣ್ಣಾಂಗಾಟಿ ಸಭೆ ಮಾಡುತ್ತಾರೋ ತಿಳಿಯುತ್ತಿಲ್ಲ,.ದೌರ್ಜನ್ಯ ನಡೆದು ೫ ದಿನ ವಾದರೂ, ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಹಸಿವಿನಿಂದ ಪರಿತಪಿಸುತ್ತಿದ್ದಾರೆ ಆದ್ದರಿಂದ ತಕ್ಷಣದಿಂದಲೇ ತುರ್ತು ಕ್ರಮ ಕೈಗೊಂಡು ಉದ್ಯೋಗ ನೀಡಬೇಕು ಹಾಗೂ ತಾತ್ಕಾಲಿಕ ಪರಿಹಾರ ನೀಡಬೇಕು. ತಕ್ಷಣ ಕ್ರಮ ಜರುಗಿಸದ ಪೋಲೀಸ್‌ ಅಧಿಕಾರಿಗಳ ವಿರುದಟಛಿ ಕ್ರಮವಾಗಬೇಕು. ಅಲ್ಲಿಯವರೆಗೂ ಯಾವ ಶಾಂತಿ ಸಭೆ ನಡೆಯುವುದನ್ನು ಒಪ್ಪುವುದಿಲ್ಲ. ರಾಜ್ಯ ಮಟ್ಟದಲ್ಲಿ ಈ ಕುರಿತು ಹೋರಾಟ ನಡೆಸಲಾಗುವುದು. ಸಿ.ಎಂ. ಭೇಟಿಯಾಗಿ ದಲಿತರಿಗೆ ರಕ್ಷಣೆ ನೀಡುವಂತೆ ಕೋರಲಾಗುವುದು ಎಂದರು. ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕುಮಾರ್‌ ಗೌರವ್‌, ಶಿವಮ್ಮ ಹಾಗೂ ಜಿಲ್ಲಾ ಮುಖಂಡರಾದ ಬಿ.ಸಿ.ರಾಜೇಶ್‌ ಹಾಜರಿದ್ದರು.

No Comments to “ದಲಿತರಿಗೆ ಬಹಿಷ್ಕಾರ ಪ್ರಕರಣ : ಪರಿಹಾರ ಕೊಡದ ಡಿ.ಸಿ.-ಎಸ್ಪಿ ವಿರುದಟಛಿ ಕ್ರಮಕ್ಕೆ ಬಿ.ಎಸ್ಪಿ ಆಗ್ರಹ”

add a comment.

Leave a Reply

You must be logged in to post a comment.