ಫುಟ…ಬಾಲ… : ೨ನೇಸುತ್ತಿಗೆ ೧೬ ತಂಡಗಳು

ಹಾಸನ : ಪದವಿ ಪೂರ್ವ ಕಾಲೇಜು ಗಳ ರಾಜ್ಯ ಮಟ್ಟದ ಎರಡು ದಿನಗಳ ಫುಟ…ಬಾಲ… ಪಂದ್ಯಾವಳಿಯು ಬುಧ ವಾರ ಆರಂಭಗೊಂಡಿದ್ದು, ಮೊದಲ ಸುತ್ತಿನಲ್ಲಿ ಬಾಲಕರ ೧೨, ಬಾಲಕಿಯರ ೪ ತಂಡಗಳು ಜಯಗಳಿಸಿ, ಎರಡನೇ ಹಂತವನ್ನು ತಲುಪಿವೆ. ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡವು ಮಂಡ್ಯ ತಂಡವನ್ನು, ಧಾರ ವಾಡವು ಬಳ್ಳಾರಿಯನ್ನು, ಶಿವಮೊಗ್ಗವು ಬೀದರ…ನ್ನು, ಬಿಜಾಪುರ ಚಿಕ್ಕಮಗ ಳೂರನ್ನು, ಕೊಡಗು ಗದಗ…ನ್ನು, ಮೈಸೂರು ಚಿತ್ರದುರ್ಗವನ್ನು , ಬೆಂಗ ಳೂರು ನಗರ ಉಡುಪಿಯನ್ನು, ಬೆಳ ಗಾಂ ಗುಲ್ಬರ್ಗಾವನ್ನು , ಬೆಂಗಳೂರು ಗ್ರಾಮಾಂತರ ಹಾವೇರಿಯನ್ನು, ಕೋಲಾರ ರಾಯಚೂರನ್ನು , ರಾಮನಗರ ದಾವಣಗೆರೆಯನ್ನು ಸೋಲಿಸಿತು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಹಾಸನದ ವಿರುದ್ದ , ಬೆಂಗಳೂರು ದಕ್ಷಿಣ ಬೀದರ… ವಿರುದ್ದ, ಗದಗ… ದಾವಣಗೆರೆ ವಿರುದ್ದ , ಉಡುಪಿ ಚಿತ್ರ ದುರ್ಗದ ವಿರುದ್ದ ಗೆಲುವು ಸಾ—ಸಿತು. ಮುಂದಿನ ಸುತ್ತಿನ ಹಾಗೂ ಅಂತಿಮ ಪಂದ್ಯಗಳು ಗುರುವಾರ ನಡೆಯಲಿದೆ. ಪಂದ್ಯಾವಳಿಯನ್ನು ನಗರಸಭಾಧ್ಯಕ್ಷ ಸಿ.ಆರ….ಶಂಕರ… ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಚಂದ್ರೇಗೌಡ, ಉಪಾಧ್ಯಕ್ಷೆ ಪಾರ್ವ ತಮ್ಮ ನಂಜುಂಡಾಚಾರ…, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೂಡ್ಲಯ್ಯ ಮತ್ತಿತರರು ಉಪಸ್ಥಿತರಿದ್ದರು.

No Comments to “ಫುಟ…ಬಾಲ… : ೨ನೇಸುತ್ತಿಗೆ ೧೬ ತಂಡಗಳು”

add a comment.

Leave a Reply

You must be logged in to post a comment.