ಮೈಸೂರು ದಸರಾ ಆರಂಭ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ನವ ವಧುವಿನಂತೆ ಸಿಂಗಾರ ಗೊಂಡಿದ್ದು, ೪೦೧ನೇ ದಸರಾ ಮಹೋ ತ್ಸವಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಸದಾನಂದಗೌಡ ಅವರೊಂದಿಗೆ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದರ ಬೆನ್ನಲ್ಲೇ ೯ ದಿನಗಳ ಖಾಸಗಿ ದರ್ಬಾರ…ಗೆ ರಾಜ ವಂಶಸ್ಥ ಶ್ರೀಕಂಠದತ್ತ ಒಡೆಯರ… ಹಸಿರು ನಿಶಾನೆ ತೋರಿಸಿದರು. ಭ್ರಷ್ಟಾಚಾರ, ಅನ್ಯಾಯ, ಅಕ್ರಮ, ದೌರ್ಜನ್ಯಗಳ ವಿರುದ್ದ ಹೋರಾಟ ಅನಿ ವಾರ್ಯವಾಗಿದ್ದು, ಎಲ್ಲರೂ ಪುರುಷ ಸಿಂಹಗಳಾಗಬೇಕು ಎಂದು ಪೇಜಾವರ ಶ್ರೀಗಳು ಆಶೀರ್ವಚನ ನೀಡಿದರು. ಶತಮಾನಗಳಿಂದ ಆಚರಿಸಿಕೊಂಡು ಬರ ಲಾಗುತ್ತಿರುವ ವಿಶ್ವ ಪ್ರಸಿದ್ದ ಮೈಸೂರು ದಸರಾ ಉತ್ಸವ ಶಾಂತಿ, ನೆಮ್ಮದಿ, ಸಮೃದ್ದಿಯ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ದಸರಾ ಹಬ್ಬ ಆಚರಿಸಲಾಗು ವುದು ಎಂದು ಅವರು ಹೇಳಿದರು. ಇತ್ತ ಅರಮನೆಯಲ್ಲಿ ಶ್ರೀಕಂಠದತ್ತ ಒಡೆ ಯರ… ಖಾಸಗಿ ದರ್ಬಾರ… ಆರಂಭಿಸಿದರು. ರಾಜ ಸಂಪ್ರದಾಯದಂತೆ ದರ್ಬಾರ…ಗೆ ಆಗಮಿಸಿದ ಅವರು, ನವಗ್ರಹ ಪೂಜೆ ನೆರವೇರಿಸಿದರು. ಅರಮನೆ ಪುರೋಹಿತರು ಹಾಗೂ ಒಡೆಯರ… ಚಿನ್ನದ ಸಿಂಹಾ ಸನಕ್ಕೆ ಪೂಜೆ ಸಲ್ಲಿಸಿದರು. ನಂತರ ಒಡೆಯರ… ಸಿಂಹಾಸನ ಏರಿದರು. ಪತ್ನಿ ಪ್ರಮೋದಾ ದೇವಿ ಒಡೆಯರ… ಅವರ ಪಾದ ಪೂಜೆ ನಡೆಸಿದರು. ಅರಮನೆ ಸರದಾರರು ಒಡೆಯರ…ಗೆ ಬಹು ಪರಾಕ… ಹೇಳಿದರು. ಸುಮಾರು ೨೫೦ ಕೆ.ಜಿ. ತೂಕದ ಸಿಂಹಾಸನದಲ್ಲಿ ಆಸೀನರಾಗಿದ್ದ ಒಡೆಯರ…, ಸಂಜೆಯ ವರೆಗೂ ದರ್ಬಾರ… ನಡೆಸಿದರು. ೯ ದಿನಗಳ ಕಾಲ ನಡೆಯುವ ಈ ನವರಾತ್ರಿ ಹಬ್ಬಕ್ಕೆ ಅರಮನೆ ಬಳಿ ಹಾಗೂ ನಗರದಾದ್ಯಂತ ಬಿಗಿ ಬಂದೋ ಬಸ…್ತ ಏರ್ಪಡಿಸಲಾಗಿದೆ. ಕೇಂದ್ರದ ೧೦೦ ಸೇನಾ ತುಕಡಿಗಳು ಸೇರಿದಂತೆ ರಾಜ್ಯದ ೫ ಸಾವಿರ ಪೊಲೀಸರು ರಕ್ಷಣೆ ಹೊಣೆಯನ್ನು ಹೊತ್ತಿದ್ದಾರೆ.

No Comments to “ಮೈಸೂರು ದಸರಾ ಆರಂಭ”

add a comment.

Leave a Reply

You must be logged in to post a comment.