ಉಪೇಂದ್ರ ಚಿತ್ರದ ಹಾಡಿನಲ್ಲಿ ಅಣ್ಣಾಹಜಾರೆ

ಕಳೆದ ತಿಂಗಳು ಇಡೀ ಭಾರತದಲ್ಲಿ ಯಾರ ಬಾಯಲ್ಲಿ ನೋಡಿದರೂ ಅಣ್ಣಾಹಜಾರೆ ಎಂಬ ಕೂಗು ಕೇಳುತ್ತಲೇ ಇತ್ತು. ಕೆಲವು ದಿನಗಳ ಹಿಂದೆ  ಪಾರ್ಕ್‌ನಲ್ಲಿ ಅಣ್ಣಹಜಾರೆಗೆ ಬೆಂಬಲ ಸೂಚಿಸಿ ವಿದ್ಯಾರ್ಥಿಗಳು, ಸಾಹಿತಿಗಳು, ನಟರು ಸೇರಿದ್ದರು. ನಂತರ ಸುದ್ದಿ ತಣ್ಣಗಾಯಿತು. ಆದರೆ ಮಹಾಲಕ್ಷೀಲೇಔಟ್‌ನಲ್ಲಿರುವ ಚೆನ್ನಮ್ಮನಗುಂಡಿ ಮೈದಾನದಲ್ಲಿ ಬೃಹದಾಕಾರದ ಅಣ್ಣಾಹಜಾರೆರವರ ಕಟ್‌ಔಟ್‌ಗಳು ರಾರಾಜಿಸುತ್ತಿದ್ದು ನಡುವೆ ದೊಡ್ಡ ಪೆಂಡಾಲ್‌ ಹಾಕಿ ಅಣ್ಣಾಹಜಾರೆಗೆ ಬೆಂಬಲ ಸೂಚಿಸಲು ಹಾಡನ್ನು ಹಾಡುತ್ತಿದ್ದರು. ಪತ್ರಕರ್ತರು ಅಲ್ಲಿಗೆ ಹೋದಾಗ ವಿಸ್ಮಯವೆನಿಸಿ ನಟ ಉಪೇಂದ್ರರನ್ನು ಕೇಳಿದಾಗ ಚಿತ್ರದಲ್ಲಿ ಅಣ್ಣಾಹಜಾರೆ ಬೆಂಬಲಕ್ಕೆ ಹಾಡನ್ನು ಸೃಷ್ಟಿಸಿದ್ದು ಅದರ ಚಿತ್ರೀಕರಣ ನಡೆಯುತ್ತಿದೆ ಎಂದು ಹಾಡಿಗೆ ಫೈವ್‌ಸ್ಟಾರ್‌ ಗಣೇಶ್‌ ಹೇಳಿಕೊಟ್ಟಂತೆ ಹೆಜ್ಜೆ ಹಾಕಿ ಅವರು ಶಾಟ್‌ ಓಕೆ ಅಂದಾಗ ತಂಡವು ಪತ್ರಕರ್ತರಲ್ಲಿ ಮಾತಿಗೆ ಕುಳಿತುಕೊಂಡರು.ಆಪ್ತರಕ್ಷಕ ಚಿತ್ರ ನಿರ್ಮಿಸಿದ ಕೃಷ್ಣಪ್ರಸಾದ್‌ ಈಗ ಸೂಪರ್‌ಸ್ಟಾರ್‌ ಉಪೇಂದ್ರರನ್ನು ಹಾಕಿಕೊಂಡು ಆರಕ್ಷಕ ಎಂಬ ಕನ್ನಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಚಿತ್ರದ ಟಾಕಿ ಭಾಗದ ಕೆಲಸವು ಮುಗಿದಿದ್ದು, ಚಿತ್ರದಲ್ಲಿ ೫ ಹಾಡುಗಳು ಇದ್ದು ೩ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಉಳಿದ ಎರಡು ಹಾಡುಗಳ ಪೈಕಿ ಒಂದನ್ನು ಅಣ್ಣಾಹಜಾರೆ ಮೇಲೆ ಬಿಂಬಿತವಾಗುವಂತೆ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರದಲ್ಲಿ ನಾಯಕ ಪೋಲಿಸ್‌ಆμಸರ್‌ ಆಗಬೇಕೆಂಬ ಕನಸು ಕಾಣುತ್ತಾನೆ ಅವನು ಆಗುತ್ತಾನೋ ಇಲ್ಲವೋ ಎಂಬುದಾಗಿ ಈಗ ಹೇಳಲಾಗುವುದಿಲ್ಲ ಏಕೆಂದು ಕೇಳಿದರೆ ರಹಸ್ಯ ಅಂತಾರೆ ಉಪೇಂದ್ರ. ಹಾಗು ಅವರ ಇಮೇಜ್‌ಗೆ ತಕ್ಕಂತೆ ಸಿನಿಮಾ ಮಾಡಿಲ್ಲವಂತೆ. ಈ ಹಾಡು ನೋಡಿ ರಾಜಕೀಯ ಚಿತ್ರವಿರಬೇಕಂದು ಅನಿಸಿದ್ದರೆ ಅದು ಸುಳ್ಳು ಕೇವಲ ಮನರಂಜನೆಗೋಸ್ಕರ ಹಾಡನ್ನು ಇಡಲಾಗಿದೆ. ಉಪೇಂದ್ರರವರ ಓಂ, ರಕ್ತಕಣ್ಣೀರು ಚಿತ್ರ ನೋಡಿ ಆರಕ್ಷಕ ಚಿತ್ರದ ಕಥೆಗೆ ಇವರೆ ಸರಿಯಾದವರು ಎಂದು ಅಂದೇ ತೀರ್ಮಾನಿಸಿದ್ದೆ ಎಂಬುದಾಗಿ ಚಿತ್ರದ ಬಗ್ಗೆ ಮಾತು ಹಂಚಿಕೊಂಡರು ನಿರ್ದೇಶಕ ಪಿ.ವಾಸು. ಉಪೇಂದ್ರರವರಿಗೆ ಚಿತ್ರಕಥೆ ಚೆನ್ನಾಗಿ ಹಿಡಿಸಿದ್ದು ಇಂತಹ ಚಿತ್ರಕಥೆಯನ್ನು ಇಲ್ಲಿಯವರೆವಿಗೂ ನೋಡಿಲ್ಲವಂತೆ. ಕೊನೆಯ ೨೦ ನಿಮಿಷದ ಕ್ಲೈಮಾಕ್ಸ್‌ನಲ್ಲಿ ಚಿತ್ರದ ಕಥೆ ಏನೆಂಬುದು ಗೊತ್ತಾಗುತ್ತದೆಂದು ಹೇಳಿ ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದರು ವಾಸು. ಚಿತ್ರದಲ್ಲಿ ಇಬ್ಬರು ನಾಯಕಿಯರಾದ ಸದಾ ಮತ್ತು ರಾಗಿಣಿ ನಟಿಸುತ್ತಿದ್ದು ರಾಗಿಣಿ ವೈದ್ಯೆ ಪಾತ್ರ ಮಾಡುತ್ತಿದ್ದು ಅಂದಿನ ಚಿತ್ರೀಕರಣದಲ್ಲಿ ಉಪೇಂದ್ರರ ಜೊತೆಗೆ ಹೆಜ್ಜೆ ಹಾಕುತ್ತಿದ್ದರು. ನಿರ್ಮಾಪಕ ಕೃಷ್ಣಪ್ರಸಾದ್‌ಗೆ ಅ ಅಕ್ಷರವು ಒಲಿದ ಕಾರಣ ನಿರ್ದೇಶಕರಿಗೆ ಹಟ ಮಾಡಿ ಅ ಅಕ್ಷರದಿಂದಲೇ ಚಿತ್ರದ ಹೆಸರನ್ನು ಇಡಿಸಿದ್ದಾರೆ ಅಂತ ಉಪೇಂದ್ರ ತಿಳಿಸಿದರು. ರಾಗಿಣಿ ಮಾತ್ರ ಫುಲ್‌ ಖುಷಿಇದ್ದು, ಕಾರಣ ಏನು ಎಂದು ಕೇಳಿದರೆ ನಾನು ಮೂದಲ ಬಾರಿ ಉಪೇಂದ್ರ ಜೊತೆ ನಟಿಸುತ್ತಿದ್ದೇನೆ ಹಾಗೂ ಹಿರಿಯ ನಿರ್ದೇಶಕ ವಾಸು ಚಿತ್ರದಲ್ಲಿ ಇರುವುದು ಖುಷಿಗೆ ಕಾರಣ ಎಂದರು.

No Comments to “ಉಪೇಂದ್ರ ಚಿತ್ರದ ಹಾಡಿನಲ್ಲಿ ಅಣ್ಣಾಹಜಾರೆ”

add a comment.

Leave a Reply

You must be logged in to post a comment.