“ಭದ್ರ” ಸಾಧನೆಯ ನಂತರ ರುದ್ರ

ಪ್ರಜ್ವಲ್‌ ದೇವರಾಜ್‌ ಚಿತ್ರರಂಗಕ್ಕೆ ಬಂದು ಐದು ವರ್ಷಗಳಾದರೂ ಒಂದು ಹಿಟ್‌ ಚಿತ್ರ ಕೊಡದೆ ಪೀಕಲಾಡುತ್ತಿದ್ದು, ಅಂತಹ ಸುಂದರ ಘಳಿಗೆ ಭದ್ರ ಚಿತ್ರದಿಂದ ಬಂದಿರುತ್ತದೆ. ಕಾರಣ ಚಿತ್ರವು ಸತತ ೫೦ ದಿನಗಳು ಪ್ರದರ್ಶನಗೊಂಡು ಗಳಿಕೆಯಲ್ಲಿ ಉತ್ತಮ ಸಾಧನೆಯಾಗಿದೆ. ಇದರನ್ವಯ ನಿರ್ಮಾಪಕರು ಸಂತೋಷಕೂಟವನ್ನು ಏರ್ಪಾಟು ಮಾಡಿದ್ದರು. ಮಗನ ಖುಷಿಯನ್ನು ಹಂಚಿಕೊಳ್ಳಲು ಅಪ್ಪ ಡೈನಾಮಿಕ್‌ ಸ್ಟಾರ್‌ ದೇವರಾಜ್‌ ಮಾತನಾಡುತ್ತಾ ಭದ್ರ ಚಿತ್ರವು ಪ್ರಜ್ವಲ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿದೆ, ಇದರಿಂದ ಜವಾಬ್ದಾರಿ ಹೆಚ್ಚಿದ್ದು ಎಚ್ಚರಿಕೆಯಿಂದ ನಡೆಯಬೇಕು ಎಂದು ತಂಡಕ್ಕೆ ಹಿತವಚನ ನೀಡಿ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು. ನಿರ್ಮಾಪಕ ಕುಮಾರ್‌ ಫೋನ್‌ ಮುಖಾಂತರವೆ ಚಿತ್ರದ ವ್ಯವಹಾರ ಮಾಡುತ್ತಾರೆ ಅವರ ಕೆಲಸವನ್ನು ನೋಡಿ ನಾವು ಕಲಿಯಬೇಕಾಗಿದೆ. ಪ್ರಜ್ವಲ್‌ಗೆ ಹಿಟ್‌ ಸಿಗಬೇಕೆಂದು ನನ್ನ ಮನದಾಳದ ಆಸೆ ಇತ್ತು ಅದು ಈ ಚಿತ್ರದಿಂದ ನೆರವೇರಿದೆ ಅಂತ ಲೈಫುಇಷ್ಟೇನೆ ನಿರ್ಮಾಪಕ ಜಾಕ್‌ ಮಂಜು ತಿಳಿಸಿದರು. ಚಿತ್ರದ ಮೂದಲ ಪ್ರೆಸ್‌ ಮೀಟ್‌ನಲ್ಲೆ ಹೇಳಿದ್ದೆ ಈ ಚಿತ್ರ ಹಿಟ್‌ ಆಗಿತ್ತದೆಯೆಂದು, ಅದೇ ರೀತಿ ಸಕ್ಸಸ್‌ ಮೀಟ್‌ ಇವತ್ತು ನಡೆಯುತ್ತಿದ್ದು, ಪ್ರಜ್ವಲ್‌ ಮತ್ತು ನನಗೆ ಭದ್ರ ಲೈಫ್‌ ಕೊಟ್ಟಿದೆ. ಕುಮಾರ್‌ರವರು ಇನ್ನು ಹೆಚ್ಚು ಚಿತ್ರ ನಿರ್ಮಿಸುವಂತಾಗಲಿ ಅಂದರು ನಿರ್ದೇಶಕ ಮಹೇಶ್‌ರಾವ್‌.ಇದೇ ಮೊದಲಬಾರಿ ತಂದೆ ಜೊತೆ ವೇದಿಕೆ ಹಂಚಿಕೊಂಡಿದ್ದೇನೆ ಅದು ನನಗೆ ಖುಷಿಯಾಗುತ್ತಿದೆ. ಚಿತ್ರ ಸಕ್ಸಸ್‌ ಆಗಿರುವುದು ಮೂವರಿಂದ ಅದು ಚಿತ್ರದ ತಂಡ, ಮಾದ್ಯಮ ಮತ್ತು ಜನರು ಎಂಬುದು ಪ್ರಜ್ವಲ್‌ ದೇವರಾಜ್‌ ಉವಾಚವಾಗಿತ್ತು. ನಾನು ಇಲ್ಲಿಯವರೆವಿಗೂ ಹಿಟ್‌ ಹಾಗೂ ಫ್ಲಾಪ್‌ ಚಿತ್ರ ಕೊಟ್ಟಿದ್ದೇನೆ. ಆದರೂ ಚಿತ್ರಕ್ಕೆ ಪ್ರಚಾರ ಮಾಡಲು ಕಲಿತಿದ್ದು ಜಾಕ್‌ಮಂಜುರವರಿಂದ. ಚಿತ್ರಮಂದಿರ ಬುಕ್‌ ಮಾಡುವುದು ನನಗೆ ಸುಲಭದ ಕೆಲಸ ಆದರೆ ಪ್ರಚಾರ ಮಾಡುವುದು ನನಗೆ ಗೊತ್ತಿರಲಿಲ್ಲ ಅದಕ್ಕೆ ಜಾಕ್‌ಮಂಜುರವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಮತ್ತು ಭದ್ರ ಸಕ್ಸಸ್‌ ಸಂಪೂರ್ಣ ಕ್ರೆಡಿಟ್‌ ಮಂಜುರವರಿಗೆ ಸಲ್ಲಬೇಕು ಎಂದು ಯಶಸ್ಸಿನ ಕಿರೀಟವನ್ನು ಮಂಜುಗೆ ನೀಡಿ, ಇದೇ ತಂಡದಿಂದ ಮುಂದೆ ರುದ್ರ ಎಂಬ ಚಿತ್ರ ನಿರ್ಮಾಣ ಮಾಡುತ್ತೆನೆ ಅದು ಸ್ವಮೇಕ ಚಿತ್ರವಾಗಿದ್ದು, ಅದು ಪ್ರಜ್ವಲ್‌ದೇವರಾಜ್‌ ಕಾಲ್‌ಶೀಟ್‌ ಸಿಕ್ಕ ನಂತರ ಎಂದು ನಿರ್ಮಾಪಕ ಕುಮಾರ್‌ ಹೇಳುವುದರೊಂದಿಗೆ ಗೋಷ್ಠಿ ಸಮಾರೋಪ ಗೊಂಡಿತು. ಇದಕ್ಕೂ ಮುಂಚೆ ಸಾಹಿತಿ ಗೌಸ್‌ಪೀರ್‌, ಸಲಾಂ, ರಾಂಮೂರ್ತಿ ಚಿತ್ರದ ಸಂತಸವನ್ನು ಹಂಚಿಕೊಂಡರು. ಹಿರಿಯ ಪತ್ರಕರ್ತ ಹಾಗೂ ನಟ ವಿಜಯ್‌ಸಾರಥಿರವರು ಪ್ರತಿಯೊಬ್ಬರ ವಿವರ ಹೇಳಿ ನಿರೂಪಣೆ ಮಾಡಿದರು.

No Comments to ““ಭದ್ರ” ಸಾಧನೆಯ ನಂತರ ರುದ್ರ”

add a comment.

Leave a Reply

You must be logged in to post a comment.