ದರ್ಶನ್‌ ಇಲ್ಲದ ‘ಸಾರಥಿ’ ಬರುತ್ತಿದ್ದಾನೆ

ನಾಯಕ ಜೈಲಿನಲ್ಲಿರುವಾಗ ಸಿನಿಮಾವೊಂದು ಬಿಡುಗಡೆಯಾಗುತ್ತಿರುವುದು ಇದೇ ಮೊದಲೇನೋ? ಅಂತೂ ದಾಖಲೆಯಾಗುತ್ತಿರುವುದರ ಜತೆಗೆ, ಕಳೆದ ಹಲವು ಸಮಯಗಳಿಂದ ತಿಣುಕಾಡುತ್ತಿದ್ದ ಘಿ‘ಸಾರಥಿಘಿ’ ರಥಯಾತ್ರೆಗೆ ಚಾಲನೆ ಸಿಕ್ಕಿದೆ. ಇದೇ ಸೆಪ್ಟೆಂಬರ್‌ ೩೦ರ ಶುಕ್ರವಾರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಾಯಕ ನಾಗಿರುವ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗು ತ್ತಿದೆ.ದರ್ಶನ್‌ ಸಹೋದರ ದಿನಕರ್‌ ತೂಗುದೀಪ್‌ ನಿರ್ದೇಶನದ ಈ ಚಿತ್ರ ಯಾವತ್ತೋ ಬಿಡುಗಡೆಯಾಗ ಬೇಕಿತ್ತು. ಆದರೆ ಇನ್ನೇನು ಚಿತ್ರಮಂದಿರಗಳಿಗೆ ಬರಲಿದೆ ಎಂಬ ಹೊತ್ತಿನಲ್ಲಿ ದರ್ಶನ್‌ ಜೈಲಿಗೆ ಹೋಗಿದ್ದರು. ಇದರಿಂದಾಗಿ ಮತ್ತಷ್ಟು ತಡವಾಗಿತ್ತು. ಇನ್ನು ವಿಳಂಬಿಸಲು ನಿರ್ಮಾಪಕ ಸತ್ಯಪ್ರಕಾಶ್‌ ಸಿದಟಛಿರಿಲ್ಲ. ಬಿಡುಗಡೆ ಮಾಡಿಯೇ ಸಿದಟಛಿ ಎಂದು ಡಂಗುರ ಸಾರಿದ್ದಾರೆ.ಒಂದೆರಡು ಕಡೆ ಸಂಭಾಷಣೆಗಳಿಗೆ ಕತ್ತರಿ ಹಾಕಿದ್ದು ಬಿಟ್ಟರೆ, ಸೆನ್ಸಾರ್‌ ಹೆಚ್ಚೇನೂ ಕೈಯಾಡಿಸಿಲ್ಲ. ಆದರೆ ಅನಿಮಲ್‌ ಬೋರ್ಡ್‌ ಅನುಮತಿ ಮೊನ್ನೆ ಶನಿವಾರವಷ್ಟೇ ಸಿಕ್ಕಿದುದರಿಂದ, ಸೆನ್ಸಾರ್‌ ತನ್ನ ಪ್ರಮಾಣ ಪತ್ರ ನೀಡಿರಲಿಲ್ಲ. ಈಗ ಎಲ್ಲವೂ ಸುಗಮವಾಗಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವೂ ಸಿಕ್ಕಿದೆ.ಪ್ರಚಾರಕ್ಕೆ ನಾಯಕ ದರ್ಶನ್‌ ಇಲ್ಲದೇ ಇದ್ದರೂ, ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ನಿರ್ದೇಶಕ-ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದಾರೆ. ದರ್ಶನ್‌ ಅಭಿಮಾನಿಗಳು ತಮ್ಮನ್ನು ಕೈ ಬಿಡುವುದಿಲ್ಲ ಎಂಬ ಭರವಸೆ ಅವರಲ್ಲಿದೆನಿಖಿತಾ ಜತೆಗಿನ ಸಂಬಂಧ ಆರೋಪ ಹೊತ್ತು ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲು ಸೇರಿರುವ ದರ್ಶನ್‌ ಚಿತ್ರವೊಂದು, ಅವರು ಜೈಲಿನಲ್ಲೇ ಇರುವಾಗ ಬಿಡುಗಡೆಯಾದರೆ ಏನಾಗಬಹುದು? ಇದಕ್ಕೆ ಸ್ಯಾಂಡಲ್‌ವುಡ್‌ ಪಂಡಿತರು ನೀಡುವ ಉತ್ತರ ತುಂಬಾ ಸಿಂಪಲ್‌. ಅದು ವೈಯಕ್ತಿಕ ಜೀವನದ ಯಾವುದೇ ಪ್ರಸಂಗ, ಚಿತ್ರಜೀವನದ ಮೇಲೆ ಆಗುವುದಿಲ್ಲ ಅನ್ನೋದು.ಅದಕ್ಕೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳು ಮಾಡಿರುವ ಸಮೀಕ್ಷೆಯನ್ನೇ ಮುಂದಿಡಲಾಗುತ್ತಿದೆ. ಪ್ರತಿ ಸಮೀಕ್ಷೆಯಲ್ಲೂ ದರ್ಶನ್‌ ಚಿತ್ರವನ್ನು ವಿರೋಧಿಸುತ್ತಿರುವವರು ತುಂಬಾ ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದಿದ್ದಾರೆ. ಚಿತ್ರ ನೋಡಿಯೇ ನೋಡುತ್ತೇವೆ ಎಂದು ಹೇಳಿದವರ ಸಂಖ್ಯೆ ಹೆಚ್ಚಿದೆ. ತಿಂಗಳುಗಟ್ಟಲೆ ಜೈಲಲ್ಲೇ ಕಳೆಯಬೇಕಾದ ಪರಿಸ್ಥಿತಿ ಸೃಷ್ಟಿಯಾದ ನಂತರವಂತೂ, ಅವರಿಗೆ ಕರುಣೆ ತೋರಿಸುವವರ ಪಟ್ಟಿ ದೊಡ್ಡದಾಗಿದೆ.ಅಂದ ಹಾಗೆ, ಈ ಚಿತ್ರ ಚಿಕ್ಕಮಗಳೂರು ಹುಡುಗಿ ದೀಪಾ ಸನ್ನಿಧಿ ಪಾಲಿಗೆ ಮೊದಲನೆಯದ್ದು. ಕನ್ನಡ ವಿರೋಧಿ ತಮಿಳು ನಟ ಶರತ್‌ ಕುಮಾರ್‌ ಇದರಲ್ಲಿ ನಟಿಸಿರುವುದು ವಿಚಿತ್ರ-ವಿಶೇಷ. ಉಳಿದಂತೆ ರಂಗಾಯಣ ರಘು, ಬುಲ್ಲೆಟ್‌ ಪ್ರಕಾಶ್‌ ಮುಂತಾದವರಿದ್ದಾರೆ. ಹರಿಕೃಷ್ಣ ಸಂಗೀತ, ರವಿವರ್ಮಾ ಆಕ್ಷನ್‌ ಚಿತ್ರಕ್ಕಿದೆ.

No Comments to “ದರ್ಶನ್‌ ಇಲ್ಲದ ‘ಸಾರಥಿ’ ಬರುತ್ತಿದ್ದಾನೆ”

add a comment.

Leave a Reply