ಕೂಪ್ಪಳ:ಅಚ್ಚರಿವಿಷಯಅಲ್ಲವೇ?

ಎರಡು ವರ್ಷಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮೂರೂ ಪಕ್ಷಗಳಿಗೆ ದಿಕ್ಸೂಚಿ ಎಂದೇ ಭಾವಿಸಿದ್ದ ಕೊಪ್ಪಳದ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ಜಾತ್ಯಾತೀತ ಜನತಾದಳದಿಂದ ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕರಡಿ ಸಂಗಣ್ಣ ಆಪರೇಷನ… ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಸೇರಿದ್ದರಿಂದ ಈ ಚುನಾವಣೆ ನಡೆ ದಿತ್ತು. ಈ ಚುನಾವಣಾ ಫಲಿತಾಂಶದಿಂದ ಕರ್ನಾಟಕದ ಪ್ರಜ್ಞಾವಂತರು ಬೆಚ್ಚಿ ಬಿದ್ದಿರು ವುದಂತೂ ನಿಜ. ಏಕೆಂದರೆ ಹಗರಣಗಳ ಸರ ಮಾಲೆಯಿಂದ ಸರ್ಕಾರದ ಚುಕ್ಕಾಣಿ ಹಿಡಿ ದಿದ್ದ ಯಡಿಯೂರಪ್ಪನವರೇ ಮಾಜಿ ಯಾಗಿ ಜಾಮೀನಿಗಾಗಿ ಅಲೆಯುತ್ತಿರು ವಾಗ, ಯಡಿಯೂರಪ್ಪ ಬಣ, ಈಶ್ವರಪ್ಪ ಬಣ, ಶೆಟ್ಟರ… (ಅನಂತಕುಮಾರ…) ಬಣ ಎಂದೆಲ್ಲಾ ಹಂಚಿ ಹೋಗಿದ್ದ ಬಿ.ಜೆ.ಪಿ.ಯ ಈ ಚುನಾವಣೆಯಲ್ಲೂ ಗೆಲುವು ಪಡೆ ದಿದೆ ಎಂಬುದೇಅಚ್ಚರಿಯವಿಷಯ. ಹಗರಣಗಳಿಂದ ಮಂಕಾಗಿದ್ದ ಬಿ.ಜೆ.ಪಿ.ಯು ಶಕ್ತಿಶಾಲಿ ರಾಜಕೀಯ ಪಕ್ಷವಾಗಿ ಮುಂದು ವರೆದಿದೆ. ಜೆ.ಡಿ.ಎಸ….ನ ಭದ್ರಕೋಟೆ ಎನಿಸಿ ಕೊಂಡಿದ್ದ ಚನ್ನಪಟ್ಟಣದಲ್ಲಿ ಗೆಲುವು ಪಡೆದಾಗ ಬಿಜೆಪಿ ಚುನಾವಣಾ ತಂತ್ರದ ಬಗ್ಗೆ ಕುತೂ ಹಲ, ಆಶ್ಚರ್ಯ ಒಟ್ಟೊಟ್ಟಿಗೆ ಆಗಿತ್ತು. ಉಪ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತರೂಢ ಪಕ್ಷಗಳಿಗೆ ಗೆಲುವು ಸಾಮಾನ್ಯವಾದರೂ, ಬಿ.ಜೆ.ಪಿ. ಸರ್ಕಾರದ ಈಗಿನ ಪರಿಸ್ಥಿತಿಯಲ್ಲಿ ಇದನ್ನು ಅನ್ವಯಿಸಲಾಗದು. ಜನಪರ ಹೋಗಲಿ, ಜನರನ್ನೇ ಮರೆತಿದ್ದ ಪಕ್ಷದ ಸರ್ಕಾರವೊಂದು ಜನರಲ್ಲಿ ಒಳ್ಳೆಯ ಅಭಿ ಪ್ರಾಯ ಇಲ್ಲದ ಸಂದರ್ಭದಲ್ಲಿ ಗೆಲುವು ಸಾ—ಸಿರುವುದು ಅಚ್ಚರಿ ಸಂಗತಿಯೇ ಸರಿ. ಏಕೆಂದರೆ ಒಳ್ಳೆಯ ಜನಾಭಿಪ್ರಾಯವಿಲ್ಲದ ಪಕ್ಷಕ್ಕೆ ಪರ್ಯಾಯವಾಗಲಾರದ ವಿರೋಧ ಪಕ್ಷಗಳ ದೌರ್ಬಲ್ಯ ಪ್ರಜಾತಂತ್ರದ ನಿರ್ವಾತ ಸ್ಥಿತಿಗೆ ಕಾರಣವಾಗುತ್ತಿದೆ.

No Comments to “ಕೂಪ್ಪಳ:ಅಚ್ಚರಿವಿಷಯಅಲ್ಲವೇ?”

add a comment.

Leave a Reply

You must be logged in to post a comment.