ಹಾವಿನ ಕೇಶವಈಗ ಲಕ್ಷಾಪತಿ

ಡಿಸುತ್ತಾ, ಒಂದೊಂದು ರೂಪಾಯಿಗೂ ಜನರ ಬಳಿ ಕೈ ಚಾಚುತ್ತಿದ್ದ ಹಾವಿನ ಕೇಶವ ಎಂದೇ ಗುರುತಿಸಲ್ಪಡುತ್ತಿದ್ದ ವ್ಯಕ್ತಿಯ ಬ್ಯಾಂಕ… ಬ್ಯಾಲೆನ…್ಸ ೨ ಲಕ್ಷ ರೂ.ಗೂ ಅ—ಕ… ೯ ಲಕ್ಷ ರೂ. ಮೌಲ್ಯದ ಮಾರುತಿ ಸುಜುಕಿ, ಸ್ವಿಫ…್ಟ ಡಿಸೈರ… ಕಾರಿನ ಮಾಲೀಕ… ಹೌದಾ?ಎಂದುಬಾಯಿ ಬಿಡುವ ಮುನ್ನ ಯೋಚಿಸಿ. ಹಾವುಗಳನ್ನು ತೋರಿಸಿ, ಅವು ಗಳನ್ನು ಆಟ ಆಡಿಸುತ್ತಾ, ಇವುಗಳಿಗೆ ಆಹಾರ ನೀಡಬೇಕು ಎಂದು ನಿಮ್ಮ ಮುಂದೆ ಬಂದಾಗ, ಯೋಚಿಸದೆ ಕೈಲಾದಷ್ಟು ಹಣ ನೀಡಿರು ತ್ತೀರಿ. ಆಗ ನಿಮ್ಮ ಮನಸ್ಸಿನಲ್ಲಿ ನಮ್ಮ ಮನೆಗೆ ಹಾವು ಬಂದರೆ ಈ ಕೇಶವನನ್ನು ಕರೆಯ ಬೇಕು ಎಂದೂ ಅಂದುಕೊಂಡು ಫೋನ… ನಂ. ತೆಗೆದುಕೊಂಡಿರುತ್ತೀರಿ. ಅಂಥ ಸಂದರ್ಭ ಎದುರಾದರೆ ಫೋನ… ಮಾಡಿರುತ್ತೀರಿ. ಇಲ್ಲವೇ ಯಾರಿಗಾದರೂ ನೀಡಿರುತ್ತೀರಿ. ಹಾವು ಹಿಡಿದ ನಂತರ ೫೦೦ ರೂ. ಕೇಳಿ ದಾಗ ಪ್ರಾಣಕ್ಕಿಂತ ದೊಡ್ಡದಾ ಎಂದು ಕೊಟ್ಟಿ ರುತ್ತೀರಿ. ಈ ಹಣದಲ್ಲಿ ೨ ಲಕ್ಷ ರೂ.ಗೂ ಆ—ಕ ಹಣ ಇಟ್ಟಿರಲು ಸಾಧ್ಯವಾ? ೯ ಲಕ್ಷ ರೂ.ನ ಕಾರು ಕೊಳ್ಳಲು ಸಾಧ್ಯವಾ? ಎಂದು ಗೊಂದಲ ಕ್ಕೀಡಾಗಿದ್ದರೆ ಮುಂದೆ ಓದಿ. ಹಾವಿನ ಕೇಶವನ ಕೆಲಸ ಎಂದರೆ ಹಾವು ಆಡಿಸಿ ಹಣ ಪಡೆಯುವುದು ಹಾಗೂ ಹಾವು ಹಿಡಿದಾಗ ಅದಕ್ಕೊಂದಿಷ್ಟು (೫೦೦ ರೂ.) ಶುಲ್ಕ ಪಡೆಯುವುದು. ಇಂತಿಷ್ಟರಲ್ಲಿ ಚಕ್ರಾ— ಪತಿ ಆಗಲು ಸಾಧ್ಯವಾ ಎಂದು ಯೋಚಿಸಿ. ಹಿನ್ನಲೆ ಕೆದಕಿದಾಗ ದೊರೆತ ಮಾಹಿತಿ ಇಷ್ಟು. ಹಾವಿನ ಕೇಶವ ಹಾವಿನ ವಿಷ ಮಾರಾಟ ಮಾಡಿ ಕೊಲೆಗೆ ಕಾರಣನಾದ ಆರೋಪದ ಮೇಲೆ ಇದುವರೆಗೆ ಎರಡು ಬಾರಿ ಬಂಧನ ಕ್ಕೊಳಗಾಗಿದ್ದಾನೆ. ಹಾಸನದ ಮೆಡಿಕಲ… ಕಾಲೇಜಿನ ಪ್ರೊಫೇಸರ… ಒಬ್ಬರ ಹೆಂಡತಿಯ ಹತ್ಯೆಗೆ ಹಾಗೂ ಬೆಂಗಳೂರಿನ ಶಿವಾನಂದ… ಅವರ ಹೆಂಡತಿ ಹತ್ಯೆಗೆ ತಲಾ ೨೫ ಸಾವಿರ ರೂ. ಹಾಗೂ ೧೦ ಸಾವಿರ ರೂ. ಹಣ ಪಡೆದು ವಿಷ ಮಾರಿರುವುದಾಗಿ ಸ್ವತಃ ಕೇಶವನೇ ಒಪ್ಪಿ ಇದರಿಂದ ಕೇಶವ ಕೇವಲ ಹಾವುಗಳನ್ನು ಆಡಿಸುತ್ತಾ, ಮನೆಗೆ ಬಂದ ಹಾವುಗಳನ್ನು ಹಿಡಿಯುವುದಷ್ಟನ್ನೇ ಮಾಡದೆ, ವಿಷದ ಮಾರಾಟವನ್ನೂ ಮಾಡುತ್ತಿದ್ದಾನೆ ಎಂಬು ದನ್ನು ತಿಳಿಯಬಹುದು. ವಿಷವನ್ನು ಕೇವಲ ಹತ್ಯೆ ಮಾಡಲು ಅಲ್ಲದೆ ಮಾದಕ ವಸ್ತು ವಾಗಿಯೂ ಬಳಸಲಾಗುತ್ತದೆ. ಪ್ರಮುಖ ವಾಗಿ ಮದ್ಯ, ಅದರಲ್ಲೂ ಬ್ರಾಂದಿಗೆ ಮಿಶ್ರಣ ಮಾಡಿದರೆ ಹೆಚ್ಚಿನ ಕಿಕ… ಕೊಡುತ್ತದೆ ಎಂಬ ನಂಬಿಕೆಯಿಂದ ವಿಷವನ್ನು ಖರೀದಿಸಲಾಗು ತ್ತದೆ. ವಿಷವು ಪ್ರೋಟೀನ…ನಿಂದ ತಯಾ ರಾಗುವುದರಿಂದ ನೇರವಾಗಿ ರಕ್ತಕ್ಕೆ ಸೇರ ದಿದ್ದರೆ ಅಪಾಯವಿಲ್ಲದಿರುವುದನ್ನು ಮಾದಕ ವಸ್ತುವಾಗಿ ಬಳಸಲು ಕಾರಣವಾಗಿದ್ದು, ಇದು ಕೇಶವನ ಆದಾಯದ ಪ್ರಮುಖ ಮೂಲ. ಜೊತೆಗೆ ಹಾವುಗಳನ್ನು ಹಿಡಿಯಲು ೫೦೦ ರೂ. ಶುಲ್ಕ ಪಡೆಯುವ ಕೇಶವ ಹಿಡಿದ ಹಾವು ಗಳನ್ನು ಇಟ್ಟುಕೊಂಡು ಬೀದಿಗಳಲ್ಲಿ ಆಟವಾಡಿ ಸುತ್ತಾ, ಜೀವನ ನಡೆಸುತ್ತಿರುವನಂತೆ ಮೇಲ್ನೋ ಟಕ್ಕೆ ಕಾಣುತ್ತಾನೆ. ಆದರೆ ಹಿಡಿದ ಹಾವುಗಳನ್ನು ಸಾಯಿಸಿ, ಅವುಗಳ ಚರ್ಮವನ್ನೂ ಮಾರಾಟ ಮಾಡುತ್ತಿರುವುದನ್ನು ಅರಣ್ಯ ಇಲಾಖೆಯು ದೃಢಪಡಿಸಿದೆ. (ಆದರೆ ದೂರು ನೀಡಿಲ್ಲ.) ಹಾವುಗಳ ಚರ್ಮ ಹಾಗೂ ವಿಷದ ಮಾರಾಟದಿಂದ ಕೇಶವ ಈಗ ಲಕ್ಷಾ—ಪತಿ. ೨ ಲಕ್ಷ ರೂ.ಗೂ ಅ—ಕ ಬ್ಯಾಂಕ… ಬ್ಯಾಲೆನ…್ಸ ಹಾಗೂ ೯ಲಕ್ಷ ರೂ. ಸ್ವಿಫ…್ಟ ಡಿಸೈರ… ಕಾರಿನ ಮಾಲೀಕ.

No Comments to “ಹಾವಿನ ಕೇಶವಈಗ ಲಕ್ಷಾಪತಿ”

add a comment.

Leave a Reply

You must be logged in to post a comment.