ಜಿಲ್ಲೆಯ ಹಲವೆಡೆ ಬರ : ಪರಿಹಾರಕ್ಕೆ ಒತ್ತಾಯ

ಹಾಸನ : ಪ್ರಕೃತಿ ವಿಕೋಪದಿಂದ ಬರದ ದವಡೆಗೆ ಸಿಲುಕಿರುವ ಹೊಳೆ ನರಸೀಪುರ, ಅರಕಲಗೂಡು, ಚನ್ನರಾಯ ಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕು ಗಳಲ್ಲಿ ಬರ ಪರಿಹಾರ ಕಾರ್ಯ ಕೈಗೆತ್ತಿ ಕೊಳ್ಳುವಂತೆ ವಿಧಾನ ಪರಿಷತ… ಸದಸ್ಯ ಪಟೇಲ… ಶಿವರಾಂ ಒತ್ತಾಯಿಸಿದ್ದಾರೆ. ಈ ನಾಲ್ಕೂ ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ಕೆರೆ-ಕಟ್ಟೆಗಳು ಬರಿದಾಗಿವೆ. ಮುಂಬರುವ ದಿನಗಳಲ್ಲಿ ಜನ-ಜಾನು ವಾರುಗಳಿಗೂ ಕುಡಿಯುವ ನೀರಿಗೆ ತೊಂದರೆಯಾಗಲಿದೆಎಂದು ಹೇಳಿದ್ದಾರೆ. ರಾಗಿ, ಹುರುಳಿ, ಭತ್ತ, ಮೆಕ್ಕೆ ಜೋಳ ಮಳೆಯಿಲ್ಲದೆ ಸೊರಗಿವೆ. ಬಿತ್ತಿದ ಬೆಳೆ ಬಾಡಿವೆ. ಮತ್ತೊಂದೆಡೆ ಕೆಲವು ಬೆಳೆ ಗಳು ನಾನಾ ರೋಗದ ಬಾಧೆಯಿಂದ ತತ್ತರಿಸುತ್ತಿವೆ ಎಂದರು. ಜನತಾಮಾಧ್ಯಮ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಶುಂಠಿ, ಕಬ್ಬು, ಸೂರ್ಯಕಾಂತಿ, ಹತ್ತಿ ಬೆಳೆ ಬಾಡಿವೆ. ಔಷ— ಸಿಂಪಡಿಸಿದರೂ ಪ್ರಯೋಜನ ವಾಗಿಲ್ಲ. ಈಗಾಗಲೇ ಜಿಲ್ಲಾದ್ಯಂತ ಪ್ರವಾಸ ನಡೆಸಿ ರೈತರ ಪರಿಸ್ಥಿತಿ ಅರಿ ತಿದ್ದೇನೆ ಎಂದು ಹೇಳಿದರು. ವಿಶೇಷವಾಗಿ ಅರಸೀಕೆರೆ ಮತ್ತು ಚನ್ನ ರಾಯಪಟ್ಟಣ ತಾಲ್ಲೂಕಿನಲ್ಲಿ ಹಿಂದೆಂದೂ ಕಂಡರಿಯದ ಬರದ ಪರಿಸ್ಥಿತಿ ಎದು ರಾಗಿದೆ. ಬಹುತೇಕ ಗ್ರಾಮೀಣ ಭಾಗ ಗಳಲ್ಲಿ ಕುಡಿಯುವ ನೀರು ಪೂರೈಕೆಗೂ ತೊಂದರೆಯಾಗಿದೆ ಎಂದರು. ಬರ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಗಳಿಗೆ ಮನವರಿಕೆ ಮಾಡಿಕೊಡಬೇಕಾ ಗಿದೆ. ಶೀಘ್ರದಲ್ಲಿಯೇ ನಿಯೋಗವನ್ನು ಕೊಂಡೊಯ್ದು ಒತ್ತಡ ಹೇರಲಾಗು ವುದು. ಜಿಲ್ಲಾ ಉಸ್ತುವಾರಿ ಸಚಿವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಾಗು ವುದು ಎಂದು ಹೇಳಿದರು. ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬರ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ವಿಶೇಷ ಅ—ವೇಶನ ಕರೆಯಬೇಕು. ಮುಖ್ಯಮಂತ್ರಿ ಗಳು ಕೂಡಲೇ ಈ ಕುರಿತು ಸ್ಪಷ್ಟನೆ ನೀಡ ಬೇಕು ಎಂದು ಒತ್ತಾಯಿಸಿದರು. ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಹಾಗಾಗಿ ರೈತರು ಗುಳೇ ಹೋಗುವ ಸಾಧ್ಯತೆಯೂ ಇದೆ. ಈಗಿಂದೀಗಲೇ ಜಾನುವಾರುಗಳಿಗೆ ಕುಡಿಯುವ ನೀರು, ಮೇವನ್ನು ಒದ ಗಿಸಬೇಕು ಎಂದು ಕೋರಿದರು. ಬಯಲು ಸೀಮೆ ಪ್ರದೇಶದಲ್ಲಿ ಮಳೆ ಯಿಲ್ಲದೆ ಬಿತ್ತಿದ ಬೆಳೆ ಬಾಡಿದೆ. ಬೇಲೂರು ತಾಲ್ಲೂಕಿನ ಹಲವು ಭಾಗಗಳಲ್ಲಿಯೂ ಮಳೆಯ ಅಭಾವದಿಂದ ರೈತರು ತೊಂದರೆಗೊಳಗಾಗಿದ್ದಾರೆ ಎಂದು ಪಟೇಲ… ಶಿವರಾಂ ವಿವರಿಸಿದರು. ಮಲೆನಾಡು ಪ್ರದೇಶದಲ್ಲಿ ವಿಪರೀತ ಮಳೆ ಸುರಿದು ಕಾಫಿ ಹಣ್ಣು ನೆಲಕ್ಕೆ ಉದುರುತ್ತಿದೆ. ಮೆಣಸಿಗೆ ರೋಗ ತಗು ಲಿದೆ. ಏಲಕ್ಕಿ ಬೆಳೆ ಕೂಡ ಅಪಾಯದ ಅಂಚಿಗೆ ಸಿಲುಕಿದೆ. ಹಲವೆಡೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಹಾಗಾಗಿ ಮಲೆನಾಡು ಭಾಗಕ್ಕೂ ಪರಿ ಹಾರ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳ ಬೇಕು ಎಂದು ಒತ್ತಾಯಿಸಿದರು. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳ ದಿದ್ದರೆ ಪಕ್ಷದ ಹಿರಿಯ ಮುಖಂಡ ರೊಂದಿಗೆ ಚರ್ಚಿಸಿ, ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪಟೇಲ… ಶಿವರಾಂ ಎಚ್ಚರಿಸಿದ್ದಾರೆ.

No Comments to “ಜಿಲ್ಲೆಯ ಹಲವೆಡೆ ಬರ : ಪರಿಹಾರಕ್ಕೆ ಒತ್ತಾಯ”

add a comment.

Leave a Reply

You must be logged in to post a comment.