ಅರಸೀಕೆರೆ,ಹಾಸನ,ಹೊಳೆನರಸೀಪುರ – ಬರಗಾಲಪೀಡಿತ ಫೋಷಣೆಗೆ ಶಿಫಾರಸ್ಸು

ಹಾಸನ: ಜಿಲ್ಲೆಯ ಅರಸೀಕೆರೆ, ಹೊಳೆನರಸೀಪುರ ಮತ್ತು ಹಾಸನ ತಾಲ್ಲೂಕು ಬರಗಾಲಪೀಡಿತ ಫೋಷಣೆಗೆ ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಜಿಲ್ಲಾ—ಕಾರಿ ಡಾ.ಕೆ.ಜಿ. ಜಗದೀಶ… ಪತ್ರಿಕೆಗೆ ತಿಳಿಸಿದರು. ಬೇಲೂರು ತಾಲ್ಲೂಕಿನ ಹಳೇ ಬೀಡು ಹೋಬಳಿಯನ್ನು ಬರಗಾಲ ಪೀಡಿತ ಪಟ್ಟಿಗೆ ಸೇರಿಸಲಾಗಿದೆ ಎಂದು ಜಿಲ್ಲಾ—ಕಾರಿ ವಿವರಿಸಿದರು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ರುವ ಬಗ್ಗೆ ಪರಿಹಾರ ಕೊಡಲು ಅವ ಕಾಶವಿದೆ. ಶೇ.೫೦ಕ್ಕಿಂತ ಹೆಚ್ಚು ಹಾನಿ ಯಾಗಿದ್ದರೆ ಪರಿಹಾರ ನೀಡಬಹುದು. ರೈತರು ಬೆಳೆ ಪರಿಹಾರಕ್ಕೆ ಮನವಿ ಮಾಡಿ ಕೊಳ್ಳಬಹುದು ಎಂದು ವಿವರಿಸಿದರು. ಕಾಫಿ ಬೆಳೆಗೆ ಹಾನಿಯಾಗಿರುವುದು ತಮ್ಮ ಗಮನಕ್ಕೂ ಬಂದಿದೆ. ಈಗ ಕಾಫಿ ಬೆಳೆ ಸುಧಾರಣೆಯ ಹಂತದಲ್ಲಿದೆ. ಮೆಣಸು ಬೆಳೆಗೆ ತುಂಬಾ ನಷ್ಟವಾಗಿದೆ ಎಂದರು. ಪರಿಸ್ಥಿತಿ ಅವಲೋಕನ ಮಾಡಲಾಗು ತ್ತಿದೆ. ಜಿಲ್ಲಾಡಳಿತ ಸ್ಥಿತಿ ನಿಭಾಯಿಸಲು ಸನ್ನದ್ದವಾಗಿದೆಎಂದುತಿಳಿಸಿದರು. ಬರಗಾಲಪೀಡಿತ ಪ್ರದೇಶ ಫೋಷಣೆ ಯಾದರೆ ಜಾನುವಾರುಗಳಿಗೆ ಮೇವು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ವಿವಿಧ ಕೆಲಸಗಳನ್ನು ಕೈಗೆತ್ತಿಕೊಳ್ಳ ಲಾಗುವುದು. ಸರ್ಕಾರ ಈ ಕುರಿತು ನಿರ್ಧರಿಸಬೇಕು ಎಂದು ಹೇಳಿದರು.

No Comments to “ಅರಸೀಕೆರೆ,ಹಾಸನ,ಹೊಳೆನರಸೀಪುರ – ಬರಗಾಲಪೀಡಿತ ಫೋಷಣೆಗೆ ಶಿಫಾರಸ್ಸು”

add a comment.

Leave a Reply

You must be logged in to post a comment.