ಕೊಪ್ಪಳ ಕದನ : ಅರಳಿದ ಕಮಲ

ಕೊಪ್ಪಳ : ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ….ಯಡಿಯೂರಪ್ಪ,,ಹೆಚ….ಡಿ.ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ… ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದ ಕೊಪ್ಪಳ ವಿಧಾನಸಭಾ ಉಪ ಚುನಾವಣೆಯಲ್ಲಿ ಕೊನೆಗೂ ಬಿಜೆಪಿಯ ಕರಡಿ ಸಂಗಣ್ಣ ೪ನೇ ಬಾರಿ ಜಯಭೇರಿ ಬಾರಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿದಂತಾಗಿದೆ. ಅಲ್ಲದೇ ಕಾಂಗ್ರೆಸ… ಮತ್ತು ಜೆಡಿಎಸ… ತೀವ್ರ ಮುಖ ಭಂಗ ಅನುಭವಿಸಿವೆ. ಬಿಜೆಪಿಯ ಕರಡಿ ಸಂಗಣ್ಣನವರು ತಮ್ಮ ಸಮೀಪದ ಪ್ರತಿಸ್ಪ—ರ್ ಕಾಂಗ್ರೆಸ…ನ ಬಸವ ರಾಜ ಹಿಟ್ನಾಳ… ಅವರನ್ನು ೧೨,೪೮೮ ಮತಗಳ ಅಂತರದಿಂದ ಪರಾಭವಗೊಳಿಸಿ ಗೆಲುವಿನ ನಗು ಬೀರಿದ್ದಾರೆ. ಕರಡಿ ಸಂಗಣ್ಣ- ೬೦,೪೦೫, ಕಾಂಗ್ರೆಸ…ನ ಬಸವರಾಜ ಹಿಟ್ನಾಳ-೪೭,೯೧೭ ಹಾಗೂ ಜೆಡಿಎಸ…ನ ಪ್ರದೀಪ ಗೌಡ ಮಾಲಿ ಪಾಟೀಲ ೨೦,೭೧೭ ಮತ ಪಡೆದಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ೧೯೯೯ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪ—ರ್ಸಿದ್ದ ಕರಡಿ ಸಂಗಣ್ಣ ಗೆಲುವಿನ ನಗು ಬೀರಿ ವಿಧಾನಸಭೆ ಪ್ರವೇಶಿಸಿ ದ್ದರು. ೨೦೦೪ರಲ್ಲಿ ಬಿಜೆಪಿಗೆ ಸೇರಿ ಸ್ಪ—ರ್ಸಿ ದ್ದರೂ ಕೂಡ ಕರಡಿ ಸಂಗಣ್ಣ ಕಾಂಗ್ರೆಸ…ನ ಬಸವರಾಜ ಹಿಟ್ನಾಳ… ಎದುರು ಸೋಲನು ಭವಿಸಿದ್ದರು. ನಂತರ ೨೦೦೮ರಲ್ಲಿ ಬಿಜೆಪಿಯಿಂದ ಜೆಡಿಎಸ… ತೆಕ್ಕೆಗೆ ಸೇರಿ ಸ್ಪ—ರ್ಸಿ ಗೆಲುವು ಸಾ— ಸಿದ್ದರು. ತದನಂತರ ಆಪರೇಶನ… ಕಮಲಕ್ಕೆ ಒಳಗಾದ ಕರಡಿ ಸಂಗಣ್ಣ ಜೆಡಿಎಸ… ತೊರೆದು ಬಿಜೆಪಿಗೆ ಸೇರಿದ್ದರು. ಅಂತೂ ನಾಲ್ಕನೇ ಬಾರಿಯೂ ಕೊಪ್ಪಳ ಮತದಾರರು ಕರಡಿ ಸಂಗಣ್ಣ ಕೊರಳಿಗೆ ಜಯದ ಮಾಲೆ ಹಾಕಿದ್ದಾರೆ. ಕೊಪ್ಪಳದ ಗವಿ ಸಿದ್ದೇಶ್ವರ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ ೮ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಂಡಿತ್ತು. ಮೊದಲ ಸುತ್ತಿ ನಿಂದಲೇ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯ ಕರಡಿ ಸಂಗಣ್ಣ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡು ಜಯಭೇರಿ ಬಾರಿಸಿ ದ್ದಾರೆ. ಆದರೆ ಕಾಂಗ್ರೆಸ…ನ ಹಿಟ್ನಾಳ… ಮತ್ತು ಜೆಡಿಎಸ… ಅಭ್ಯರ್ಥಿ ಪ್ರದೀಪ ಗೌಡ ಮಾಲಿ ಪಾಟೀಲ… ತೀವ್ರ ಹಿನ್ನಡೆ ಅನುಭವಿಸಿ ಸೋಲ ನುಭವಿಸಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಗೆಲುವಿನೊಂದಿಗೆ ಮುಖ್ಯಮಂತ್ರಿಯಾಗಿ ಅ— ಕಾರ ಸ್ವೀಕರಿಸಿದ ಡಿ.ವಿ.ಸದಾನಂದಗೌಡರು ಮೊದಲ ಸವಾಲಿನಲ್ಲಿ ಯಶಸ್ವಿಯಾಗಿ ಪಾಸ… ಆಗಿದ್ದಾರೆ. ಕೊಪ್ಪಳದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಬ್ಬರದ ಪ್ರಚಾರ ನಡೆಸಿದ್ದು, ಅವರ ಜನಪ್ರಿಯತೆ ಇನ್ನೂ ತಗ್ಗಿಲ್ಲ ಎಂಬುದರ ಸೂಚನೆಯೂ ಇದಾಗಿದೆ. ಬಿಜೆಪಿಯ ಸಂಗಣ್ಣ ಕರಡಿ, ಜೆಡಿಎಸ…ನ ಪ್ರದೀಪ ಗೌಡ ಮಾಲಿ ಪಾಟೀಲ… ಹಾಗೂ ಕಾಂಗ್ರೆಸ…ನ ಬಸವರಾಜ ಹಿಟ್ನಾಳ… ಸೇರಿದಂತೆ ೧೪ ಮಂದಿ ಕಣದಲ್ಲಿದ್ದಾರೆ. ಆಪರೇಷನ… ಕಮಲಕ್ಕೆ ಒಳಗಾಗಿ ಜೆಡಿಎಸ… ಶಾಸಕರಾಗಿದ್ದ ಕರಡಿ ಸಂಗಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಸೆಪ್ಟೆಂಬರ… ೨೬ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾ ವಣೆ ನಡೆದಿತ್ತು. ಈ ಬಾರಿ ಒಟ್ಟು ೧,೩೪,೦೨೨ ಜನರು ಮತದಾನ ಮಾಡಿದ್ದು, ಇದರಲ್ಲಿ ೬೯,೮೩೭ ಪುರುಷರು, ೬೪,೧೮೫ ಮಹಿಳೆಯರು ಸೇರಿ ದ್ದಾರೆ. ಒಟ್ಟಾರೆ ಶೇ.೭೩.೪೪ರಷ್ಟು ಪುರು ಷರು ಮತ ಚಲಾಯಿಸಿದ್ದು, ಶೇ.೬೯.೪೮ರಷ್ಟು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದರು.

No Comments to “ಕೊಪ್ಪಳ ಕದನ : ಅರಳಿದ ಕಮಲ”

add a comment.

Leave a Reply

You must be logged in to post a comment.