ಶ್ರವಣಬೆಳಗೊಳದಲ್ಲಿ ಚಿನ್ನದ ನಿಕ್ಷೇಪ : ಬರೀ ಓಳು

ಹಾಸನ : ಜೈನರ ಪ್ರಸಿದಟಛಿ ಯಾತ್ರಾ ಸ್ಥಳವಾಗಿರುವ ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮ ದಲ್ಲಿರುವ ಅತಿಶಯ ಸಿದಿಟಛಿ ಕ್ಷೇತ್ರ ಹಾಗೂ ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ಚಿನ್ನದ ನಿಕ್ಷೇಪ ವಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ರಾಜ್ಯ ಪ್ರಾಚ್ಯ ವಸ್ತು ಇಲಾಖೆ ನಿರ್ದೇಶಕ ಆರ್‌.ಗೋಪಾಲ್‌ ಅವರ ಹೇಳಿಕೆಗೆ ಸಂಬಂಧಿಸಿದಂತೆ ಜನತಾಮಾಧ್ಯಮ ಪತ್ರಿಕೆ ಮಾಹಿತಿ ಕಲೆ ಹಾಕಿತು. ಚಾಮರಾಜನಗರದಲ್ಲಿ ಆರ್‌.ಗೋಪಾಲ್‌ ಅವರು ಪ್ರವಾ ಸೋದ್ಯಮ ದಿನಾಚರಣೆ ಕಾರ್ಯ ಕ್ರಮದಲ್ಲಿ ಪ್ರವಾಸೋದ್ಯಮ ಸಂದೇಶ ಬಿಡುಗಡೆ ಮಾಡಿ ಮಾತ ನಾಡುವ ವೇಳೆ ಈ ಹೇಳಿಕೆ ನೀಡಿ ದ್ದರು. ಉದಯವಾಣಿ ದಿನ ಪತ್ರಿಕೆಯಲ್ಲಿ ವರದಿಯೂ ಪ್ರಕಟ ವಾಗಿದೆ. ಈ ಜಾಡು ಬೆನ್ನು ಹತ್ತಿದ ಪತ್ರಿಕೆ, ಚಿನ್ನದ ನಿಕ್ಷೇಪದ ಬಗ್ಗೆ ಮಾಹಿತಿ ಯನ್ನೇನೋ ಕಲೆ ಹಾಕಿತ್ತು. ನಂಬಿದ್ದರೆ ನಂಬಿ, ಬಿಟ್ಟರೆ ಬಿಡಿ. ಶ್ರವಣ ಬೆಳಗೊಳದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಹೇಳಿಕೆ ನೀಡಿದ್ದ ಆರ್‌.ಗೋಪಾಲ್‌ ಅವರಿಗೇ ಸರಿ ಯಾದ ಮಾಹಿತಿ ಇಲ್ಲ. ಶನಿವಾರ ನಗರದ ಪ್ರಾಚ್ಯ ವಸ್ತು ಇಲಾಖೆಗೆ ಪತ್ರಿಕೆ ತೆರಳಿ ಪ್ರಶ್ನಿಸಿತು. ಪ್ರಾಚ್ಯ ವಸ್ತು ಇಲಾಖೆಯವರು ಶ್ರೀರಂಗಪಟ್ಟಣದಲ್ಲಿರುವ ವೃತ್ತ ಇರುವುದು ನಿಜವೇ? ಎಂದು ಪ್ರಶ್ನಿಸಿದರು. ನಂತರ ಮೈಸೂರಿನ ಪ್ರಾಚ್ಯ ವಸ್ತು ಇಲಾಖೆ, ಕಮೀಷನರ್‌ ಇಲಾಖೆ ಕಛೇರಿಯನ್ನು ಸಂಪ ರ್ಕಿಸಲಾಯಿತು. ಆರ್‌.ಗೋಪಾಲ್‌ ಅವರು ಸಸ್ಪೆಂಡ್‌ ಆಗಿ ೩ ತಿಂಗಳುಗಳು ಕಳೆದಿವೆ. ಈಗ ಸಿದಟಛಿನಗೌಡರ್‌ ನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿದಟಛಿನಗೌಡರ್‌ ಅವರಿಗೂ ಚಿನ್ನದ ನಿಕ್ಷೇಪದ ಬಗ್ಗೆ ಪ್ರಶ್ನಿಸಿದಾಗ, ನನ್ನ ಬಳಿ ಮಾಹಿತಿ ಇಲ್ಲ ಎಂದು ಉತ್ತರಿಸಿದರು. ಹಾಗೂ ಹೀಗೂ ರಾಜಗೋಪಾಲ್‌ ಅವರ ಮೊಬೈಲ್‌ನ್ನು ಪತ್ತೆ ಹಚ್ಚಿ ರಾಜಗೋಪಾಲ್‌ ಅವರನ್ನು ಸಂಪರ್ಕಿಸಲಾಯಿತು. ರಾಜಗೋಪಾಲ್‌ ಹೇಳಿದ್ದೇನು ಗೊತ್ತೆ? ನನಗೂ ಅಷ್ಟಾಗಿ ಮಾಹಿತಿ ಇಲ್ಲ. ಹಿರಿಯ ಭೂ ವಿಜ್ಞಾನಿ ಅಧಿಕಾರಿ ಹೆಚ್‌.ಎಸ್‌.ಎನ್‌. ಪ್ರಕಾಶ್‌ ಅವರು ಹೇಳಿದ್ದರು. ಹಾಗಾಗಿ ನಾನು ಸಮಾರಂಭದಲ್ಲಿ ಹೇಳಿದ್ದೆ ಎಂದು ಜಾರಿಕೊಂಡರು. ಪುನಃ ರಾಜಗೋಪಾಲ್‌ ಅವರನ್ನು ಪ್ರಶ್ನಿಸಿದಾಗ, ಹೆಚ್‌.ಎಸ್‌.ಎನ್‌. ಪ್ರಕಾಶ್‌ ಅವರು ತುಮಕೂರು ಜಿಲ್ಲೆ ಯವರು. ಇವರು ಹಿರಿಯ ಅಧಿಕಾರಿ. ಅವರನ್ನೇ ಪ್ರಶ್ನಿಸಿ ಎಂದು ಹೇಳಿದರು. ಅವರ ಮೊಬೈಲ್‌ ನಂ.೯೫೩೯೪೧ ೬೬೩೯ ಎಂದು ಹೇಳಿದರು. ಪತ್ರಿಕೆ ಇಷ್ಟಕ್ಕೂ ಸುಮ್ಮನಾಗಲಿಲ್ಲ. ಹೆಚ್‌.ಎಸ್‌.ಎನ್‌. ಪ್ರಕಾಶ್‌ ಅವರಿಗೆ ಫೋನ್‌ ಮಾಡಿದಾಗ, ಆ ನಂಬರ್‌ ಚಾಲ್ತಿಯಲ್ಲಿಯೇ ಇರಲಿಲ್ಲ. ಒಬ್ಬ ಅಧಿಕಾರಿ ಮಾಡಿದ ಪ್ರಮಾದಕ್ಕೆ ಏನೆನ್ನಬೇಕು?

No Comments to “ಶ್ರವಣಬೆಳಗೊಳದಲ್ಲಿ ಚಿನ್ನದ ನಿಕ್ಷೇಪ : ಬರೀ ಓಳು”

add a comment.

Leave a Reply