ಕಾಂಗ್ರೆಸ್‌ ಪರಿಶಿಷ್ಟ ಅಧ್ಯಕ್ಷರ ವಿರುದಟಛಿ ದೌರ್ಜನ್ಯ ಆರೋಪ

ಹಾಸನ : ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಹಾಗೂ ಪರಿಶಿಷ್ಟ ಜಾತಿ ವರ್ಗದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಿ.ಸಿ.ಸಣ್ಣಸ್ವಾಮಿ ಬೆದರಿಕೆ ಹಾಕಿ ಆಸ್ತಿ ಲಪಟಾಯಿಸಲು ಹುನ್ನಾರ ನಡೆಸಿದ್ದು, ಇವರ ವಿರುದಟಛಿ ಕ್ರಮ ಕೈಗೊಳ್ಳಬೇಕೆಂದು ಕಾಲೇಜು ಉಪನ್ಯಾಸಕಿ ತಾಯಮ್ಮ ಕುಟುಂಬದವರು ಒತ್ತಾಯಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕಿ ತಾಯಮ್ಮ, ಈಕೆಯ ಸಹೋದರ ದ್ಯಾವಯ್ಯ ಮತ್ತು ಇವರ ತಾಯಿ ಸಣ್ಣಮ್ಮ, ಅರಕಲಗೂಡು ತಾಲ್ಲೂಕಿನ ದೊಡ್ಡಗಾವನಹಳ್ಳಿ ಗ್ರಾಮದ ಸರ್ವೆ ನಂ.೧೯ರಲ್ಲಿ ತಮ್ಮ ಹೆಸರಿನಲ್ಲಿರುವ ೯.೧೫ ಎಕರೆ ಜಮೀನನ್ನು ಕಬಳಿಸಲು ತಂತ್ರ ರೂಪಿಸಿದ್ದಾರೆ ಎಂದರು. ತನ್ನ ತಾಯಿ ಹುಚ್ಚಮ್ಮಳನ್ನು ಸಣ್ಣಮ್ಮಳೆಂದು, ತಮ್ಮ ದೇವರಾಜನನ್ನು ದ್ಯಾವಯ್ಯನೆಂದು ನಕಲಿ ಸಹಿ ಮತ್ತು ಭಾವಚಿತ್ರದೊಂದಿಗೆ ನಕಲಿ ದಾಖಲೆ ಸೃಷ್ಟಿಸಿ, ಬ್ಯಾಂಕಿನಿಂದ ಸಾಲ ಪಡೆದು, ೨೦೦೭ರ ಜುಲೈ ೨೮ರಂದು ವಂಚಿಸಿ ದ್ದರು. ಈ ಕುರಿತು ಅರಕಲಗೂಡು ಪೊಲೀಸರು ಪ್ರಕರಣ ದಾಖಲಿಸಿ ದ್ದಾರೆಂದು ವಿವರಿಸಿದರು. ನ್ಯಾಯಾಲಯದಲ್ಲಿಯೂ ಕೂಡ ಸಾಬೀತಾಗಿ ಆತನ ತಾಯಿ ಚೆನ್ನಯ್ಯ ಮತ್ತು ಸಹೋದರ ದೇವರಾಜನಿಗೆ ಜೈಲು ಶಿಕ್ಷೆ ಆಗುತ್ತದೋ ಎಂದು ಭಾವಿಸಿ ಕೇಸಿನಿಂದ ಬಚಾವಾಗಲು ಯೋಚಿಸಿ, ವಾಮ ಮಾರ್ಗದಲ್ಲಿ ರೌಡಿಗಳ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು. ಮನೆಗೆ ಅತಿಕ್ರಮ ಪ್ರವೇಶ ಮಾಡಿ ಸಲು ಸತತ ಪ್ರಯತ್ನ ಮಾಡುತ್ತಿದ್ದು, ಡಿ.ಸಿ.ಸಣ್ಣಸ್ವಾಮಿ ಮತ್ತು ಆತನ ಜೊತೆ ಇರುವ ರೌಡಿಗಳು ಮನೆ ಬಾಗಿಲನ್ನು ಒಡೆಸಿ, ಮನೆಯಲ್ಲಿದ್ದವರನ್ನು ಹೊರ ಹಾಕಿ ವಸ್ತುಗಳನ್ನು ಹಾಗೂ ಒಡವೆ ಗಳನ್ನು ದೋಚಿದ್ದಾರೆ. ಈ ಬಗ್ಗೆ ಪೊಲೀಸ ರಿಗೆ ದೂರು ಕೊಡಲಾಗಿದೆ ಎಂದರು. ಚೆನ್ನಯ್ಯನಿಗೆ ೮೫ ವರ್ಷ ವಯಸ್ಸಾಗಿದ್ದು, ದೈಹಿಕವಾಗಿ ತುಂಬಾ ಸೊರಗಿದ್ದಾರೆ. ಇದನ್ನು ದುರುಪಯೋಗಪಡಿಸಿಕೊಳ್ಳು ತ್ತಿರುವ ಸಣ್ಣಸ್ವಾಮಿ, ಚೆನ್ನಯ್ಯ ಅವರನ್ನು ಮುಗಿಸಲು ಸಂಚು ರೂಪಿಸಿ, ಇದನ್ನು ನಮ್ಮ ಕುಟುಂಬದವರ ಮೇಲೆ ಆಪಾದನೆ ಹೊರಿಸಲು ಪ್ರಯತ್ನಿಸಿದ್ದಾರೆ ಎಂದರು. ದೊಡ್ಡಗಾವನಹಳ್ಳಿ ಗ್ರಾಮದಲ್ಲಿ ಚೆನ್ನಯ್ಯನಿಗೆ ತನ್ನದೇ ಆದ ಸ್ವಂತ ಮನೆ ಮತ್ತು ೫ ಎಕರೆ ಜಮೀನು ಇದ್ದರೂ, ಅಲ್ಲಿಗೆ ಹೋಗದೆ ನಮ್ಮ ಆಸ್ತಿಗೆ ಬಂದು ತೊಂದರೆ ಕೊಡುತ್ತಿದ್ದಾರೆ ಎಂದರು. ತಕ್ಷಣವೇ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಅಲ್ಲದೆ ಸಣ್ಣಸ್ವಾಮಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

No Comments to “ಕಾಂಗ್ರೆಸ್‌ ಪರಿಶಿಷ್ಟ ಅಧ್ಯಕ್ಷರ ವಿರುದಟಛಿ ದೌರ್ಜನ್ಯ ಆರೋಪ”

add a comment.

Leave a Reply

You must be logged in to post a comment.