ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಹಾಸನ : ಕನಿಷ್ಠ ಕೂಲಿಗಾಗಿ ಮತ್ತು ಸೇವಾ ಸೌಲಭ್ಯಗಳಿಗೆ ಒತ್ತಾಯಿಸಿ ಅಕ್ಟೋಬರ್‌ ೧೭ ರಿಂದ ಅನಿರ್ದಿಷ್ಟಾವಧಿ ಹೋರಾಟ ಮಾಡಲು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತೀರ್ಮಾ ನಿಸಿದ್ದು, ಅ.೧ರಂದು ತಾಲ್ಲೂಕು ಮಟ್ಟ ದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ವಿ.ಸುಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಆಧಾರದಲ್ಲಿ ನೌಕರರಿಗೆ ಪ್ರತಿ ತಿಂಗಳು ೬ ಸಾವಿರ ರೂ. ಸಂಬಳ ನೀಡಬೇಕು ಎಂದರು. ಅಗತ್ಯ ಸೇವಾ ಸೌಲಭ್ಯಗಳನ್ನು ಕೊಡಬೇಕು. ಹಾಸನ : ರಾಜ್ಯಸಭೆ ಮಾಜಿ ಸದಸ್ಯ, ಜಿಲ್ಲಾ ಜಾತ್ಯಾತೀತ ಜನತಾದಳ ಅಧ್ಯಕ್ಷ ಹೆಚ್‌.ಕೆ.ಜವರೇಗೌಡ ಅವರ ತಾಯಿ ಪುಟ್ಟಮ್ಮ (೯೨) ಬುಧವಾರ ನಿಧನ ರಾದರು. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರು ಹೋಬಳಿಯ ಹಿಂದಲ ಹಳ್ಳಿಯಲ್ಲಿ ಸಂಜೆ ನಡೆಯಿತು. ವಿಧಾನಸಭೆ ಸದಸ್ಯ ಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ಪಟೇಲ್‌ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಉಪಾಧ್ಯಕ್ಷೆ ಪಾರ್ವತಮ್ಮ, ನಗರಸಭೆ ಅಧ್ಯಕ್ಷ ಸಿ.ಆರ್‌.ಶಂಕರ್‌, ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಬಾಲಕೃಷ್ಣ, ಜಿ.ಪಂ., ತಾ.ಪಂ., ನಗರಸಭೆ ಹಾಲಿ ಹಾಗೂ ಮಾಜಿ ಸದ ಸ್ಯರು, ಮಾಜಿ ಶಾಸಕ ಹೆಚ್‌.ಎಂ. ವಿಶ್ವನಾಥ್‌, ಬಿ.ಕೆ.ರಂಗಸ್ವಾಮಿ, ಮಂಜು ನಾಥದತ್ತ, ಬೇಲೂರು ತಾಲ್ಲೂಕಿನ ಮುಖಂಡರು ಅಂತಿಮ ದರ್ಶನ ಪಡೆದರು. ಯಾವುದೇ ಬಿಸಿಯೂಟ ನೌಕರರನ್ನು ಕೆಲಸ ದಿಂದ ತೆಗೆಯಬಾರದು. ನೌಕರಿಯನ್ನು ಖಾಯಂ ಮಾಡಬೇಕು. ಹಾಗೂ ಸಾಮಾಜಿಕ ಭದ್ರತೆ ಒಳಗೊಂಡಂತೆ ಇ.ಎಸ್‌.ಐ. ಗುಂಪು ವಿಮೆ ಭವಿಷ್ಯ ನಿಧಿ ಹಾಗೂ ನಿವೃತ್ತಿ ವೇತನ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ೫೪,೭೯೩ ಶಾಲೆಗಳನ್ನೊಳ ಗೊಂಡು ಪ್ರೌಢ ಮತ್ತು ಮಾಧ್ಯಮಿಕ ಶಾಲೆ ಗಳಲ್ಲಿ ೬೯,೨೫,೯೩೨ ಮಕ್ಕಳಿಗೆ ಬಿಸಿ ಯೂಟವನ್ನು ೯೦ ಸಾವಿರ ಮಹಿಳೆಯರು ಆಡುಗೆ ಮಾಡಿ ಬಡಿಸುತ್ತಿದ್ದಾರೆ ಎಂದರು. ಕೇಂದ್ರ ಸರ್ಕಾರದ ಸುತ್ತೋಲೆ ಪ್ರಕಾರ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಿಲ್ಲಬೇಕು. ದಸರಾ ರಜಾ ಸಂಬಳವನ್ನು ನೀಡಬೇಕು. ಕ್ಲಸ್ಟರ್‌ ಮಟ್ಟದ ಸಭೆ ಗಳನ್ನು ನಡೆಸಬೇಕು ಎಂದರು. ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಪುಷ್ಪ, ಕಾರ್ಯದರ್ಶಿ ಜ್ಯೋತಿ ಇನ್ನಿ ತರರು ಹಾಜರಿದ್ದರು.

No Comments to “ಅಕ್ಷರ ದಾಸೋಹ ನೌಕರರ ಪ್ರತಿಭಟನೆ”

add a comment.

Leave a Reply

You must be logged in to post a comment.