ಜೇನು ಎಂಬ ಅಮೃತ ದ್ರವ್ಯ

ಜಗತ್ತಿನಲ್ಲಿ ಮಧು ಅರ್ಥಾತ್‌ ಜೇನುತುಪ್ಪ ಪರಮಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥ ವಾಗಿರುತ್ತದೆ. ಇದು ಸ್ವಲ್ಪ ಜಿಗುಟಾಗಿ, ಪಾರ ದರ್ಶಕವಾಗಿ, ಭಾರವಾಗಿ, ಸುವಾಸನೆ ಯುಕ್ತವಾಗಿ, ಮಂದವಾಗಿ, ಅತೀ ಮಧುರವಾಗಿ ಹಾಗೂ ನೀರಿನಲ್ಲಿ ಹಾಕಿದಾಗ ತಕ್ಷಣ ಮುಳುಗುವ ಗುಣವುಳ್ಳ ವಿಶೇಷ ದ್ರವ್ಯ ಪದಾರ್ಥವಾಗಿರುತ್ತದೆ. ತೇವಾಂಶ :ಶೇ.೧೭ರಿಂದ ೨೫ ಫಲಸಕ್ಕರೆ : ಶೇ.೩೪ ರಿಂದ ೪೦ ಗ್ಲುಕೋಸ್‌ : ಶೇ.೩೨ ರಿಂದ ೩೮ ಸಾಮಾನ್ಯ ಸಕ್ಕರೆ ಶೇ. ೨ ರಿಂದ ೫ ಅಂಟು : ಶೇ.೧ ರಿಂದ ೨ ಖನಿಜಗಳು : ಕಬ್ಬಿಣ, ಮ್ಯಾಗ್ನೀ ಶಿಯಂ, ಸುಣ್ಣ ಮ್ಯಾಂಗನೀಸ್‌, ತಾಮ್ರ. ಪೋಷಕ ದ್ರವ್ಯಗಳು : ವಿಟಮಿನ್ಸ್‌ ಬಿ ೧ಬಿ೨ ಬಿ೩ ಬಿ೧೨ ಸಿ ಮತ್ತು ಕೆ ಜೇನುತುಪ್ಪದ ಉಪಯೋಗ ಬಹಳ ಉಷ್ಣದಿಂದ ಬಾಯೊಳಗೆ ಹುಣ್ಣಾಗಿದ್ದರೆ ಜೇನುತುಪ್ಪ ಹಚ್ಚು ವುದರಿಂದ, ನೀರಿನೊಡನೆ ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು ವಾಸಿ ಯಾಗುತ್ತದೆ. ಬೇಧಿಯಾಗುತ್ತಿದ್ದರೆ ದಾಳೆಂಬೆಯ ರಸದಲ್ಲಿ ಜೇನುತುಪ್ಪ ಸೇರಿಸಿ ಕುಡಿಯ ಬೇಕು. ವಾಂತಿಯಾಗುತ್ತಿದ್ದರೆ ಅಳಲೇಕಾಯಿ ಚೂರ್ಣದೊಡನೆ ಬೆರೆಸಿ ಉಪ ಯೋಗಿಸಬೇಕು. ನೆಗಡಿ ಅಥವಾ ಶೀತದಿಂದ ಗಂಟಲು ಕಟ್ಟಿ ಧ್ವನಿ ಸರಿಯಾಗಿ ಹೊರಡದಿದ್ದರೆ ದಿನಕ್ಕೆ ೩-೪ ಸಲ ಅರ್ಧ ಚಮಚದಿಂದ ಒಂದು ಚಮಚದವರೆಗೆ ಜೇನುತುಪ್ಪ ನೆಕ್ಕುತ್ತಿರಬೇಕು. ಬೊಜ್ಜು ಕರಗಿಸುವುದಕ್ಕೆ ಕುದಿಸಿ ಆರಿಸಿದ ೧ ಲೋಟ ನೀರಿಗೆ ೨ ಚಮಚ ಜೇನುತುಪ್ಪ ಬೆರೆಸಿ ಕುಡಿಯತ್ತಿದ್ದರೆ ತೂಕ ಕಡಿಮೆಯಾಗುತ್ತದೆ. ಚೇಳುಕಡಿದಾಗ ಆ ಭಾಗಕ್ಕೆ ಜೇನುತುಪ್ಪವನ್ನು ಪದೇ ಪದೇ ಲೇಪನ ಮಾಡುತ್ತಿದ್ದರೆ ಉರಿ ಕಡಿಮೆಯಾಗು ತ್ತದೆ. ಬಿಳಿಸೆರಗು- ರಸಬಾಳೆಹಣ್ಣನ್ನು ತೆಗೆದುಕೊಂಡು ಅದರ ಜೊತೆಗೆ ಅರ್ಧ ಚಮಚ ತುಪ್ಪ ಕಾಲು ಚಮಚ ಜೇನು ತುಪ್ಪ ಬೆರೆಸಿ ಬೆಳಿಗ್ಗೆ ಮತ್ತು ರಾತ್ರಿ ೧ ವಾರದ ವರೆಗೆ ಸೇವಿಸಬೇಕು. ಬಾಳೆ ಹಣ್ಣು ನೆಲ್ಲಿಕಾಯಿ ರಸ ಜೇನುತುಪ್ಪ ಸೇರಿಸಿ ಸೇವಿಸು ವುದರಿಂದಲೂ ಬಿಳಿಸೆರಗು ಕಡಿಮೆ ಯಾಗುತ್ತದೆ. ಈ ಸಮಯದಲ್ಲಿ ಉಷ್ಣ ಪದಾರ್ಥ ಸೇವನೆ ವರ್ಜಿಸಬೇಕು. ಕೆಮ್ಮು -ತುಂಬೆ ಸೊಪ್ಪಿನ ರಸ ೧ ಚಮಚ, ಆಡುಸೋಗೆ ಸೊಪ್ಪಿನ ರಸ ೧ ಚಮಚ ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬೇಕು. ಶುಂಠಿ,ಹಿಪ್ಪಲಿ, ತೇಜ ಪತ್ರೆ ಸೈಂಧವ ಲವಣಗಳ ಸಮಭಾಗ ಚೂರ್ಣವನ್ನು ಜೇನುತುಪ್ಪದೊಡನೆ ಸೇರಿಸಿ ದಂತಗಳಿಗೆ ಉಜ್ಜಬೇಕು. ಇದರಿಂದ ವಸಡುಗಳಿಂದ ರಕ್ತ ಸೋರುವುದು ವಸಡು ಊದಿ ಕೊಳ್ಳುವುದು ಕಡಿಮೆಯಾಗುತ್ತದೆ. ಕ್ರಿಮಿ- ವಾಯು ವಿಳಂಗ ಮತ್ತು ನುಗ್ಗೆ ಚಕ್ಕೆ ಕುಟ್ಟಿ ಕಷಾಯ ಮಾಡಿ ಜೇನು ತುಪ್ಪದೊಡನೆ ಸೇವಿಸಿದರೆ ಉದರ ದಲ್ಲಿರುವ ಕ್ರಿಮಿಗಳು ನಾಶ ವಾಗುವವು. ತಾಯಿಯ ಹಾಲನ್ನು ಸೇವಿಸದ ಮಗುವಿನ ತೂಕ ಕಡಿಮೆಯಿರುತ್ತದೆ. ಹಾಲನ್ನು ಹೆಚ್ಚು ಸೇವಿಸದ ಮಕ್ಕಳಿಗೆ ಕಬ್ಬಿಣದ ಅಂಶ ಹೆಚ್ಚಾಗಿ ಸಿಗದಿರುವು ದರಿಂದ ಮಕ್ಕಳು ಚುರುಕಾಗುವುದಿಲ್ಲ. ಇದನ್ನು ನೀಗಿಸಲು ಜೇನುತುಪ್ಪ ಕೊಡಬೇಕು ಮಲಗುವ ಮೊದಲು ಒಂದು ಲೋಟ ಹಾಲಿಗೆ ೨ಚಮಚ ಜೇನು ಸೇರಿಸಿ ಕುಡಿಯುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ಗರ್ಭಿಣಿಯರು ಜೇನುತುಪ್ಪ ಸೇವಿಸಿದರೆ ಎದೆ ಹಾಲಿನ ಉತ್ಪತ್ತಿ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುವುದು. ರಕ್ತದೊತ್ತಡ ಹೆಚ್ಚಾಗಿರುವವರು ಬೆಳಿಗ್ಗೆ ಖಾಲಿ ಹೊಟ್ಟೆಗೆ ೩ ಚಮಚ ಜೇನನ್ನು ನೀರಿನಲ್ಲಿ ಸೇರಿಸಿ ಕುಡಿಯಬೇಕು. ಹೃದಯ ರೋಗದಿಂದ ಬಳಲು ವವರು ಪೊಟ್ಯಾಷಿಯಂ ಮತ್ತು ಖನಿಜಗಳು ಅಧಿಕ ಪ್ರಮಾಣದಲ್ಲಿರುವ ಜೇನುತುಪ್ಪವನ್ನು ದಿನಕ್ಕೆ ೨ ಬಾರಿ ೨ ಚಮಚದಷ್ಟು ಸೇವಿಸಬೇಕು. ಪ್ರತಿದಿನ ಜೇನುತುಪ್ಪ ಸೇವಿಸಿದರೆ ಮೆದುಳಿನ ದುರ್ಬಲತೆ ದೂರವಾಗಿ

One Comment to “ಜೇನು ಎಂಬ ಅಮೃತ ದ್ರವ್ಯ”

Leave a Reply