ಕಾರ್ಮಿಕರ ಹಿತ ಮರೆತ ಸರ್ಕಾರ :ಹೋರಾಟ ನಡೆಸಲು ಕರೆ

ಹಾಸನ: ಕಾರ್ಮಿಕರ ಶೋಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸರ್ಕಾರಕ್ಕೆ ಕಾರ್ಮಿಕರ ಹಿತ ಚಿಂತನೆ ಇಲ್ಲ ಎಂದು ಸಿ.ಐ.ಟಿ.ಯು ಅಖಿಲ ಭಾರತ ಕಾರ್ಯದರ್ಶಿ ಕಾಂ।। ವರಲಕ್ಷ್ಮೀ ಹೇಳಿದರು. ಸೋಮವಾರ ಇಲ್ಲಿನ ಸಿ.ಐ.ಟಿ.ಯು ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಕಾರ್ಯಾಚರಣೆ ದಿನಾಚರಣೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತ ನಾಡುತ್ತಿದ್ದರು. ಜಾಗತೀಕರಣ ಮತ್ತು ಉದಾರೀ ಕರಣ ನೀತಿಯಿಂದ ಕಾರ್ಮಿಕ ವಲಯ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಈ ಕುರಿತು ಯಾರೂ ಕೂಡ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ ಎಂದು ಹೇಳಿದರು. ಕೈಗಾರಿಕೆ ಉದ್ದಿಮೆದಾರರು ತಮ್ಮ ಲಾಭವನ್ನು ಸತತವಾಗಿ ಹೆಚ್ಚಿಸಿಕೊಳ್ಳು ತ್ತಿದ್ದಾರೆ. ಆದರೆ ಕಾರ್ಮಿಕರು ಮತ್ತು ನೌಕರರ ಆದಾಯ ಕಡಿಮೆಯಾಗು ತ್ತಿದೆ. ತಿಂಗಳ ಸಂಬಳ ಹೆಚ್ಚಾದಂತೆ ಕಂಡರೂ, ಅಗತ್ಯ ವಸ್ತುಗಳ ಬೆಲೆ ಏರಿಕೆ ಇವರನ್ನು ಹೈರಾಣಾಗಿಸಿದೆ ಎಂದು ವರಲಕ್ಷ್ಮೀ ತಿಳಿಸಿದರು. ಭಾರತ ಸೇರಿದಂತೆ ಬಹುತೇಕ ರಾಷ್ಟ್ರ ಗಳು ಐ.ಎಂ.ಎಫ…. ಬಹುರಾಷ್ಟ್ರೀಯ ಬಂಡವಾಳಗಾರರ ಒತ್ತಡಕ್ಕೆ ಮಣಿದು ಸಾಲದ ಷರತ್ತುಗಳಿಗೆ ಒಳಗಾಗಿವೆ. ಸಾರ್ವಜನಿಕ ವೆಚ್ಚ ಕಡಿತ ಹೆಸರಿನಲ್ಲಿ ನೌಕರರು ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸವಲತ್ತನ್ನು ಕಸಿದುಕೊಳ್ಳಲು ಆರಂಭಿಸಿದೆ ಎಂದು ಹೇಳಿದರು. ಇದರ ವಿರುದ್ದ ಪ್ರಾನ…್ಸ, ಇಂಗ್ಲೆಂಡ…, ಸ್ಪೇನ… ಮತ್ತಿತರ ರಾಷ್ಟ್ರಗಳಲ್ಲಿ ನೌಕ ರರು ಐಕ್ಯತೆಯಿಂದ ಹೋರಾಟ ನಡೆಸು ತ್ತಿದ್ದಾರೆ. ಇಲ್ಲಿಯೂ ಕೂಡ ಹೋರಾಟ ನಡೆಸಬೇಕಾದ ಅಗತ್ಯ ಇದೆ ಎಂದು ಎಂದು ಹೇಳಿದರು. ವಾರದಲ್ಲಿ ಐದು ದಿನ ಮಾತ್ರ ಪ್ರತಿ ದಿನ ೭ ಗಂಟೆಗಳಂತೆ ೩೫ ಗಂಟೆಗಳ ಕೆಲಸದ ಅವ—ಗಾಗಿ ಡಬ್ಲ್ಯೂ.ಎಫ…. ಟಿ.ಯು ಕರೆ ನೀಡಿದೆ. ಬಹುತೇಕ ಎಲ್ಲಾ ಬಂಡವಾಳಶಾಹಿ ದೇಶಗಳಲ್ಲಿ ವಾರ ದಲ್ಲಿ ೪೦ ಗಂಟೆಗಳ ಕೆಲಸವಿದೆ. ಭಾರತದಲ್ಲಿ ಮಾತ್ರ ೬ ದಿನ ೪೮ ಗಂಟೆಗಳ ಕೆಲಸದ ಅವ— ಇದೆ ಎಂದು ವಿವರಿಸಿದರು. ಸಿ.ಐ.ಟಿ.ಯುನ ಜಿಲ್ಲಾ ಕಾರ್ಯ ದರ್ಶಿ ಧರ್ಮೇಶ… ಮಾತನಾಡಿ, ಜಾಗ ತೀಕರಣ ಮತ್ತು ಉದಾರೀಕರಣ ನೀತಿ ಯಿಂದ ಬಡವ ಮತ್ತು ಶ್ರೀಮಂತರ ನಡುವೆ ಅಂತರ ಜಾಸ್ತಿಯಾಗುತ್ತಿದೆ. ಖಾಸಗಿ ಕಂಪೆನಿಗಳಲ್ಲಿ ನೌಕರರು ಜೀತ ದಾಳುಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಜಗತ್ತಿನ ದೊಡ್ಡಣ್ಣನಂತೆ ವರ್ತಿಸು ತ್ತಿರುವ ಅಮೇರಿಕಾ ಕೂಡ ಬಿಕ್ಕಟ್ಟಿನ ಸುಳಿಯಲ್ಲಿ ನರಳುತ್ತಿದೆ. ಈ ಬಿಕ್ಕಟ್ಟಿನ ಹೊರೆಯನ್ನು ದುಡಿಯುವ ಜನರ ಮೇಲೆ ಹೇರಲು ಆಯಾ ದೇಶಗಳ ಸರ್ಕಾರಗಳು ಪ್ರಯತ್ನಿಸಿವೆ ಎಂದರು. ಈ ಸಂದರ್ಭದಲ್ಲಿ ಸಿ.ಐ.ಟಿ.ಯುನ ಜಿಲ್ಲಾಧ್ಯಕ್ಷ ಸುಕುಮಾರ…, ಎಸ….ಎಫ….ಐ. ಮಂಜು, ಗಿರೀಶ…, ಹನುಮೇಗೌಡ ಮತ್ತಿತರರು ಇದ್ದರು.

No Comments to “ಕಾರ್ಮಿಕರ ಹಿತ ಮರೆತ ಸರ್ಕಾರ :ಹೋರಾಟ ನಡೆಸಲು ಕರೆ”

add a comment.

Leave a Reply

You must be logged in to post a comment.