ಭೂ ಸ್ವಾಧೀನ ವಿರೋಧಿಸಿ ಮಂದುವರೆದ ಧರಣಿ

ಹಾಸನ :ನ್ಯಾಯಾಧೀಶರ ವಸತಿ ಸಂಕೀರ್ಣಕ್ಕೆ ಭೂ ಸ್ವಾಧೀನ ಮಾಡಿ ಕೊಡಲು ಮುಂದಾಗಿರುವ ಕ್ರಮದ ವಿರುದ್ದ ರೈತರು ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿರಿಸಿದೆ. ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಹೊಸಕೊಪ್ಪಲು, ಸಂಕಲಾಪುರ, ಚನ್ನಪಟ್ಟಣ ಸುತ್ತ ಮುತ್ತಲ ರೈತರು ಧರಣಿ ನಡೆಸಿದರು. ನ್ಯಾಯಾಧೀಶರ ವಸತಿಗೃಹಕ್ಕೆ ೧೨ ಎಕರೆ ೧೪ ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನ ನಡೆದಿದ್ದು, ಮುಂದುವರೆದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು. ಭೂ ಸ್ವಾಧೀನ ಆದರೆ ನಾವು ಬೀದಿಗೆ ಬೀಳುತ್ತೇವೆ. ಈಗಾಗಲೇ ಹೌಸಿಂಗ… ಬೋಡ…ರ್ ಬಡಾವಣೆ, ಪಶು ಆಹಾರ ಘಟಕ ಇನ್ನಿತರೆ ಅಭಿವೃದ್ದಿ ಕೆಲಸಗಳಿಗೆ ಭೂಮಿ ಕಳೆದು ಕೊಂಡು ಅತಂತ್ರರಾಗಿದ್ದೇವೆ. ಇನ್ನೂ ಭೂಮಿ ಕೊಟ್ಟರೆ ಮುಂದೇನು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

No Comments to “ಭೂ ಸ್ವಾಧೀನ ವಿರೋಧಿಸಿ ಮಂದುವರೆದ ಧರಣಿ”

add a comment.

Leave a Reply