ರೆಡ್ಡಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ

ಬಳ್ಳಾರಿ : ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸೋಮ ವಾರ ಬೆಳಗ್ಗೆ ಗಣಿ ಧಣಿ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಗಳನ್ನು ವಶಪಡಿಸಿಕೊಂಡಿದೆ. ಬಳ್ಳಾರಿಯ ನೆಹರೂ ನಗರದಲ್ಲಿರುವ ಕೂಡ್ಲಿಗಿ ಬಿಜೆಪಿ ಶಾಸಕ ನಾಗೇಂದ್ರ ಅವರ ಮನೆ, ಅಸೋಸಿಯೇಟೆಡ… ಮೈನಿಂಗ… ಕಂಪೆನಿಯ ಮಾಲೀಕರಾಗಿ ರುವ ಜನಾರ್ಧನ ರೆಡ್ಡಿ ಅವರಪತ್ನಿ ಲಕ್ಷ್ಮೀಅರುಣಾಅವರಮನ ಹಾಗೂ ಕಚೇರಿ, ಡೆಕ್ಕನ… ಮೈನಿಂಗ… ಸಿಂಡಿ ಕೇಟ… ಮಾಲೀಕ ರಾಜೇಂದ್ರ ಅವರ ಮನೆಯ ಮೇಲೆ ದಾಳಿ, ಮಾಜಿ ಮಾಲೀಕರಾದ ಪಾರ್ವತಮ್ಮ ಅವರ ನಿವಾಸದ, ಜಿಂದಾಲ… ವಿಜಯನಗರ ಸ್ಟೀಲ…್ಸ ಲಿಮಿಟೆಡ…ನ ಕಚೇರಿಯ ಆಡಳಿತ ವಿಭಾಗ, ಮಾನವ ಸಂಪನ್ಮೂಲ ವಿಭಾಗ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಸೇರಿದಂತೆ ೭ ಕಡೆ ದಾಳಿ ನಡೆಸಿದ ೨೫ ಮಂದಿ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೂಡ್ಲಿಗಿ ಶಾಸಕ ನಾಗೇಂದ್ರ ಅವರ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅವರು ಹಾಜರಿರಲಿಲ್ಲ. ಅವರ ಸಂಬಂಧಿಕರು ಮಾತ್ರ ಇದ್ದರು ಎನ್ನಲಾಗಿದೆ. ಚಿತ್ರದುರ್ಗ,ದಾವಣಗೆರೆ,ಧಾರವಾಡ ದಲ್ಲೂ ಸಿಬಿಐ ದಾಳಿ : ಬಳ್ಳಾರಿಯಲ್ಲಿ ಡಿಎಫ…ಓ ಆಗಿದ್ದ ಮುತ್ತಯ್ಯ ಅವರು ಜನಾ ರ್ಧನ ರೆಡ್ಡಿ ಅವರೊಂದಿಗೆ ನಂಟು ಹೊಂದಿ ದ್ದಾರೆ ಎಂಬ ಆಪಾದನೆಯ ಹಿನ್ನಲೆಯಲ್ಲಿ ಚಿತ್ರ ದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನೇರಲ ಗುಂಟೆ ಗ್ರಾಮದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಮೂರು ಕಡೆ ದಾಳಿ : ಡೆಕ್ಕನ…ಮೈನಿಂಗ…ಕಂಪೆನಿಮಾಲೀಕ ರಾಜೇಂದ್ರ ಜೈನ… ಅವರ ಮೂರು ಕಚೇರಿ ಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮುತ್ತಯ್ಯ ಅವರು ಪ್ರಸ್ತುತ ಧಾರವಾಡ ಜಿಲ್ಲೆಯ ಗುಂಗಾರುಗುಟ್ಟಿ ಅರಣ್ಯ ತರಬೇತಿ ಕೇಂದ್ರದ ಅಧಿಕಾರಿಯಾಗಿದ್ದು, ಅವರು ತಂಗಿದ್ದ ಅರಣ್ಯ ಇಲಾಖೆಯ ಅತಿಥಿಗೃಹದ ಮೇಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೇ ದಾವಣಗೆರೆಯ ಶಿವ ಕುಮಾರ ಬಡಾವಣೆಯಲ್ಲಿರುವ ಮುತ್ತಯ್ಯ ಅವರ ಮನೆಯ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ. ಪ್ರಸ್ತುತ ಮುತ್ತಯ್ಯ ಅವರು ಡೆಹ್ರಾಡೂನ… ಪ್ರವಾಸದಲ್ಲಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಓಬಳಾಪುರ ಮೈನಿಂಗ… ಕಂಪೆನಿ ಮಾಲೀಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಂಪೆನಿಯ ವ್ಯವ ಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ಮನೆಯ ಮೇಲೆ ಸೆ.೫ ರಂದು ದಾಳಿ ನಡೆಸಿ ಬಂಧಿಸಿದ್ದ ಸಿಬಿಐ ಅಧಿಕಾರಿಗಳು ಗಣಿಗಾರಿಕೆ ಸಂಬಂಧಿಸಿದ ದಾಖಲೆಗಳು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ, ಕಾರು, ಹೆಲಿಕಾಪ್ಟರ… ವಶಪಡಿಸಿಕೊಂಡಿದ್ದರು. ಪ್ರಸ್ತುತ ಹೈದರಾಬಾದ… ಸಮೀಪದ ಚಂಚಲ ಗುಡ ಕೇಂದ್ರ ಕಾರಾಗೃಹದಲ್ಲಿ ರುವ ಜನಾ ರ್ಧನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ.

No Comments to “ರೆಡ್ಡಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ”

add a comment.

Leave a Reply