ಭರವಸೆಯ ಮಹಾಪೂರ ಹರಿಯಿತೇ ವಿನಃ ನೆರವು ದೊರೆಯಲಿಲ್ಲ

ಹಾಸನ : ಸಾಲು ಮರದ ತಿಮ್ಮಕ್ಕ ಯಾರಿಗೆ ತಾನೇ ಗೊತ್ತಿಲ್ಲ. ಈ ತಾಯಿ ತನ್ನ ಪತಿಯೊಂದಿಗೆ ಸೇರಿ ಸಾವಿರಾರು ಗಿಡ ನೆಟ್ಟು ಪೋಷಿಸಿದರು. ಸಸಿಗಳನ್ನೇ ಮಕ್ಕ ಳೆಂದು ಪ್ರೀತಿಸಿದರು. ನಿಜವಾಗಿಯೂ ಸಾಲು ಮರದ ತಿಮ್ಮಕ್ಕ ಎಲ್ಲರಿಗೂ ಮಾದರಿ. ಅವರಿ ಗಿರುವ ಪರಿಸರ ಕಾಳಜಿ ಮೆಚ್ಚ ತಕ್ಕದ್ದೇ. ಅವರ ಆದರ್ಶ ಕೂಡ. ಸಣ್ಣ ವಯಸ್ಸಿನಿಂದಲೂ ಬಡತನ ವನ್ನೇ ಹಾಸು ಹೊದ್ದು ಮಲಗಿದ್ದ ಸಾಲುಮರದ ತಿಮ್ಮಕ್ಕ ಇವೊತ್ತಿಗೂ ಬಡತನದ ಬೇಗುದಿಯಲ್ಲಿಯೇ ಬೇಯುತ್ತಿದ್ದಾರೆ. ತುಂಬಾ ಜನಕ್ಕೆ ಈ ಬಗ್ಗೆ ಗೊತ್ತಿಲ್ಲದಿರಬಹುದು. ತಿಮ್ಮಕ್ಕನಿಗೆ ಇರುವ ಆದಾಯ ಏನೂ ಇಲ್ಲ. ಸರ್ಕಾರ ್ರತಿ ತಿಂಗಳು ೪೦೦ ರೂ. ವೃದ್ದಾಪ್ಯ ವೇತನ ನೀಡುತ್ತಿದೆ. ಇದೇ ಅವರಿಗೆ ಆಧಾರ. ಏನಾದರೂ ವೃದ್ದಾಪ್ಯ ವೇತನ ಕೈಕೊಟ್ಟರೆ ಆ ತಿಂಗಳ ಬದುಕೇ ದುಸ್ತರ. ಪರಿಸರಕ್ಕೆ ಸಂಬಂಧಿಸಿದಂತೆ ಹಲವಾರು ರಾಜ್ಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ಗಳನ್ನು ಪಡೆದುಕೊಂಡ ಸಾಲುಮರದ ತಿಮ್ಮಕ್ಕನ ಬದುಕಿನ ಕಥೆ, ವ್ಯಥೆ. ಸಾಲುಮರದ ತಿಮ್ಮಕ್ಕನನ್ನು ಮತ್ತೊಬ್ಬ ಪರಿಸರ ಪ್ರೇಮಿ ಬೇಲೂರು ತಾಲ್ಲೂಕಿನ ಬಳ್ಳೂರು ಉಮೇಶ… ಸಲಹುತ್ತಿದ್ದಾರೆ. ಆದರೆ ಅವರ ಜೀವನ ನಿರ್ವಹಣೆಗೆ ಬೇರೆ ಆದಾಯ ಇಲ್ಲವೇ ಇಲ್ಲ. ಬದುಕಿನ ಬಂಡಿಯನ್ನು ತಿಮ್ಮಕ್ಕ ಹೇಗೋ ಸವೆಸು ತ್ತಿದ್ದಾರೆ. ಬಳ್ಳೂರು ಉಮೇಶ… ಈಗ ತಿಮ್ಮಕ್ಕನ ಬೆಂಬಲಕ್ಕೆ ಇದ್ದಾರೆ. ಸಾಲುಮರದ ತಿಮ್ಮಕ್ಕ ಸೋಮವಾರ ಸರ್ಕಾರಿ ಕಲಾ ಕಾಲೇಜಿಗೆ ಆಗಮಿಸಿ ದ್ದರು. ವಿಶ್ವ ಹಿರಿಯ ನಾಗರಿಕರ ದಿನಾ ಚರಣೆ ಅಂಗವಾಗಿ ಅವ ರನ್ನು ಅರ್ಥಪೂರ್ಣ ವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪತ್ರಿಕೆ ಅವರನ್ನು ಸಂದ ರ್ಶಿಸಿತು. ಅವರ ಮನ ದಾಳದ ಮಾತುಗಳನ್ನು ಕೇಳಿ. ಪ್ರಶ್ನೆ : ಪ್ರಶಸ್ತಿಗಳು ಎಷ್ಟು ಲಭಿಸಿವೆ? ಪರಿ ಸರದ ಬಗ್ಗೆ ಕಾಳಜಿ ಹೇಗೆ ಹುಟ್ಟಿತು? ಉತ್ತರ : ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪರಿಸರ ಪ್ರಶಸ್ತಿಗಳು ಸಾಕಷ್ಟು ಲಭಿಸಿವೆ. ಅರ್ಧ ಮನೆಯಷ್ಟು ತುಂಬಿ ಇಡಬಹುದಾದ ಫಲಕಗಳು ಇವೆ. ಪರಿಸರದ ಬಗ್ಗೆ ಕಾಳಜಿ ಹುಟ್ಟಿದ್ದು ನನ್ನ ಪತಿಯ ಪ್ರೇರಣೆಯಿಂದ. ಪತಿ ಯಾವಾಗಲೂ ಮರ, ಗಿಡ, ಪರಿಸರದ ಬಗ್ಗೆಯೇ ಆಲೋಚಿಸುತ್ತಿದ್ದರು. ಪ್ರ : ಇಷ್ಟೆಲ್ಲಾ ಪ್ರಶಸ್ತಿ ಲಭಿಸಿರುವಾಗ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ? ಉ: ಅಯ್ಯೋ! ಈ ಬಗ್ಗೆ ಏಕೆ ಕೇಳು ತ್ತೀರಿ? ಎಲ್ಲಾ ಸರ್ಕಾರಗಳು ಭರವಸೆ ನೀಡುತ್ತವೆಯೇ ಹೊರತು ನೆರವಿನ ಹಸ್ತ ಚಾಚಲಿಲ್ಲ. ಸಾಲುಮರದ ತಿಮ್ಮಕ್ಕನಿಗೆ ನಿವೇಶನ, ಹಣಕಾಸು ನೆರವು ಒದ ಗಿಸುವುದಾಗಿ ಭರವಸೆಯ ಮಹಾಪೂರ ಗಳನ್ನೇ ಹರಿಸಿದವು. ಯಾವ ನಿವೇಶನವೂ ದೊರೆಯಲಿಲ್ಲ. ಹಣಕಾಸಿನ ನೆರವೂ ಸಿಗಲಿಲ್ಲ. ಇದಕ್ಕೆ ಇಂತಹದ್ದೇ ಸರ್ಕಾರ ವೆಂದು ಹೇಳುವುದಿಲ್ಲ. ಹೆಚ….ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗಲೂ ಭರವಸೆ ದೊರಕಿತ್ತು. ಪ್ರಯೋಜನವಾಗಲಿಲ್ಲ. ಯಡಿಯೂರಪ್ಪ ಸರ್ಕಾರ ಮಾತನಾಡಿ ಸಲೇ ಇಲ್ಲ. ಇನ್ನು ಈ ಸರ್ಕಾರ ಏನು ಮಾಡುತ್ತದೋ ನನಗೆ ಗೊತ್ತಿಲ್ಲ. ಪ್ರ : ಹಾಗಾದರೆ ನಿಮ್ಮ ಬದುಕಿನ ನಿರ್ವಹಣೆ ಹೇಗೆ? ವಯಸ್ಸಾದ ಕಾಲ ದಲ್ಲಿ ಮುಂದೇನು? ಉ : ನನಗೆ ರಾಜ್ಯ ಸರ್ಕಾರ ೪೦೦ ರೂ. ವೃದ್ದಾಪ್ಯ ವೇತನ ಕೊಡುತ್ತಿದೆ. ಅದರಲ್ಲೇ ನಿರ್ವಹಣೆ. ಹಲವು ಸಂಘ- ಸಂಸ್ಥೆಗಳು ನನ್ನನ್ನು ಕರೆದು ಸನ್ಮಾನಿಸು ತ್ತವೆ. ಸನ್ಮಾನಿಸುವ ವೇಳೆ ಸಣ್ಣ-ಪುಟ್ಟ ಆರ್ಥಿಕ ನೆರವು ಕೊಡುತ್ತಿವೆ. ಹೇಗೋ ನಿರ್ವಹಣೆ ಆಗುತ್ತಿದೆ. ಕೊನೆಗಾಲದಲ್ಲಿ ನನ್ನ ಆಶ್ರಯಕ್ಕೆ ಸರ್ಕಾರವೇನೂ ಬರುತ್ತದೆ ಎಂದು ನಂಬಿಲ್ಲ. ಅದರ ಬಗ್ಗೆ ಚರ್ಚೆ ನಡೆಸುವುದೂ ಇಲ್ಲ. ನಾನು ಹುಟ್ಟಿದ್ದು ಕಡು ಬಡತನದಲ್ಲಿ. ಬೆಳೆದಿದ್ದು ಕೂಡ ಇದೇ ವಾತಾವರಣ. ನನ್ನ ಪತಿಯಮನೆಯಲ್ಲಿಯೂ ಇದಕ್ಕೇನೂಹೊರ ತಾಗಿರಲಿಲ್ಲ. ಬಡತನವನ್ನೇ ಹೊದ್ದು ಬದು ಕಿದೆವು. ಯಾರಿಗೂ ಕೇಡು ಬಗೆಯಲಿಲ್ಲ. ಕಿತ್ತು ತಿನ್ನುವ ಬಡತನವಿದ್ದರೂ,ಸಸಿಗಳನ್ನು ನೆಡುವುದರಲ್ಲಿ ಹಿಂದೆ ಬೀಳಲಿಲ್ಲ. ಸಸಿಗಳನ್ನು ನೆಟ್ಟು ಪೋಷಿಸುವುದರಲ್ಲಿಯೇ ಸಂತೋಷ ಕಂಡುಕೊಂಡೆವು. ಪ್ರ : ಸಸಿ ನೆಡಲು ಪ್ರೇರಣೆ ಏನು? ಬಡತನದ ನಡುವೆ ಈ ಕೆಲಸ ಕಷ್ಟಸಾಧ್ಯವೆನಿಸಲಿಲ್ಲವೇ? ಉ : ಸಸಿ ನೆಡಲು ನನ್ನ ಪತಿಯೇ ಪ್ರೇರಣೆ. ನಮಗೆ ಮಕ್ಕಳ ಭಾಗ್ಯ ಇರಲಿಲ್ಲ. ತುಂಬಿದ ಮನೆಯಲ್ಲಿ ನನ್ನ ಮೈದುನ ಮತ್ತು ನಾದಿನಿಯಮದುವೆಮಾಡಿದೆವು.ಸಂಕಷ್ಟದ ದಿನಗಳನ್ನು ಹೇಗೋ ದೂಡಿದೆವು. ಆದರೆ ಮಕ್ಕಳಿಲ್ಲದಿದ್ದುದು ಚಿಂತೆಗೂ ಕಾರಣ ವಾಗಿತ್ತು. ನನ್ನ ಪತಿ ಚಿಂತೆ ದೂರ ಮಾಡುವ ಸಲುವಾಗಿಯೇ ಸಸಿಗಳನ್ನು ನೆಟ್ಟು ಪೋಷಿ ಸಲು ನಿರ್ಧರಿಸಿದರು. ಇದಕ್ಕೆ ನನ್ನ ಸಹ ಮತವೂ ಇತ್ತು. ೪ ಕಿ.ಮೀ. ಉದ್ದಗಲದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಿದೆವು. ಇದನ್ನೇ ನಮ್ಮ ಮಕ್ಕಳೆಂದು ಪ್ರೀತಿಸಿದೆವು. ಇವೊತ್ತು ಆ ಮಕ್ಕಳು ದೊಡ್ಡದಾಗಿ ಬೆಳೆದಿವೆ. ಇದ ಕ್ಕಿಂತ ಇನ್ಯಾವ ಭಾಗ್ಯ ದೊರೆಯಬೇಕು? ನೂರಾರು ಮಕ್ಕಳು ಅವೇ ಅಲ್ಲವೇ? ರಾಜ ಕಾರಣ ನಮಗೆ ಒಗ್ಗುವುದಿಲ್ಲ. ನಾನು ಹೆಚ್ಚು ಓದಿಕೊಂಡಿಲ್ಲ. ಭಾಷೆಯ ಹಿಡಿತ ಮೊದಲೇ ಇಲ್ಲ. ನನಗೆ ತೋಚಿದ್ದನ್ನು ಮಕ್ಕಳಿಗೆ ಹೇಳು ತ್ತೇನೆ. ಪರಿಸರ ಕಾಪಾಡಿ ಎಂದು ಯಾವಾ ಗಲೂ ಸಲಹೆ ನೀಡುತ್ತಿರುತ್ತೇನೆ.

No Comments to “ಭರವಸೆಯ ಮಹಾಪೂರ ಹರಿಯಿತೇ ವಿನಃ ನೆರವು ದೊರೆಯಲಿಲ್ಲ”

add a comment.

Leave a Reply

You must be logged in to post a comment.