ಅವೈಜ್ಞಾನಿಕ ಭೂ ಪರಿಹಾರ : ಸ್ವೇಚ್ಛಾಚಾರಕ್ಕೆ ಅನ್ನದಾತ ಕಂಗಾಲು

ಹಾಸನ : ಅನ್ನದಾತ ಯಾವಾಗಲೂ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಲೇ ಇದ್ದಾನೆ. ಬರದಿಂದ ನೇಗಿಲ ಯೋಗಿ ಮುಂದೇ ನೆಂದು ಹೊಳೆಯದೆ ಕೈ ಚೆಲ್ಲಿದ್ದಾನೆ. ಇಂತಹ ಕಷ್ಟದ ವೇಳೆಯಲ್ಲಿಯೂ ಅವೈಜ್ಞಾನಿಕ ಭೂ ಪರಿಹಾರವು ರೈತ ನನ್ನು ದಂಗು ಬಡಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎನ್‌.ಹೆಚ್‌.೪೮ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣಗೊಳಿಸಲು ನೆಲಮಂಗಲದಿಂದ ಹಾಸನದವರೆ ವಿಗೂ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿ ಸಿದೆ. ರಸ್ತೆಯ ಇಕ್ಕೆಲದಲ್ಲಿರುವ ರೈತರ ಜಮೀನನ್ನು ಅಗಲೀಕರಣ ಉದ್ದೇಶಕ್ಕೆ ಬಳಸಿ ಕೊಂಡು ಪರಿಹಾರ ನೀಡಲು ಮುಂದಾಗಿದೆ. ಈ ಪರಿಹಾರ ಅವೈಜ್ಞಾನಿಕವಾಗಿದೆ. ಯಾವುದೇ ಮಾನದಂಡವನ್ನು ಅನು ಸರಿಸಿಲ್ಲ. ಪ್ರಾಧಿಕಾರದವರ ಮನಸೋ ಇಚ್ಛೆ ಮತ್ತು ಸ್ವೇಚ್ಛಾಚಾರ ಪ್ರವೃತ್ತಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಜಿಲ್ಲಾಧಿಕಾರಿಗಳನ್ನು ಪರಿಹಾರಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಅಧಿ ಕಾರಿಯನ್ನಾಗಿ ನಿಯೋಜಿಸಲಾಗಿದೆ. ಅಕ್ಟೋಬರ್‌ ೧೩ ರಿಂದ ೧೭ರವರೆವಿಗೂ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನದ ಸಭೆಯನ್ನು ಕಲಾಭವನ ದಲ್ಲಿ ಆಯೋಜಿಸಲಾಗಿದೆ. ವಿಪರ್ಯಾಸ ಎಂದರೆ ಎಕರೆಗೆ ೪೦ ಸಾವಿರ ರೂ. ಪರಿಹಾರ ಮೊದಲು ಘೊಷಣೆಯಾಗಿತ್ತು. ಈಗ ಎರಡು ಪಟ್ಟು ನೀಡುವುದಾಗಿ ಹೇಳಲಾಗುತ್ತಿದೆ. ಹಾಗಾಗಿ ಈ ರಾಜಿ ಸಂಧಾನವನ್ನು ಯಾವ ರೈತರೂ ಒಪ್ಪುವುದಿಲ್ಲ. ತೆರೆದ ನ್ಯಾಯಾಲಯದಲ್ಲಿ ಒಂದೇ ದಿನ ೧೫ ಅವಾರ್ಡ್‌ಗಳಾಗಿವೆ. ಈ ಐ ತೀರ್ಪುಗಳ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೂ ಸ್ವಾಧೀನ ಅಧಿ ಕಾರಿ ಮತ್ತು ಪ್ರಾಧಿಕಾರದವರು ಕಛೇರಿ ಯಲ್ಲಿರದೆ, ಎಲ್ಲಿಯೋ ಇದ್ದುಕೊಂಡು ಐ ತೀರ್ಪು ನೀಡಿರುವುದು ಸಮಂಜಸ ಅಲ್ಲ. ಈ ಐ ತೀರ್ಪು ಅಸಿಂಧು. ಭೂ ಸ್ವಾಧೀನ ಪರಿಹಾರ ಕಾಯ್ದೆಗೆ ಈವರೆವೆಗೂ ತಿದ್ದುಪಡಿಯೇ ಆಗಿಲ್ಲ. ೧೯೫೬ರ ಕಾಯ್ದೆ ಪ್ರಕಾರವೇ ಪರಿಹಾರ ವಿತರಿಸುತ್ತಿರುವುದು ಈ ಎಲ್ಲಾ ಅಸಮಾ ಧಾನಕ್ಕೆ ಕಾರಣವಾಗಿದೆ. ಓಬೀರಾಯನ ಪದಟಛಿತಿಯ ಈ ಪರಿಹಾರ ಬೇಡ ಎಂದು ರೈತರ ಒಕ್ಕೊರಲ ಅಭಿಪ್ರಾಯವಾಗಿದೆ. ಜನಪ್ರತಿನಿಧಿಗಳು ಯಾವುದೇ ಸಂದರ್ಭ ದಲ್ಲಿ ರೈತರ ಪರವಾಗಿ ನಿಲ್ಲಬೇಕು. ಆದರೆ ಈ ಜಿಲ್ಲೆಯಲ್ಲಿ ರೈತರ ಪರ ಜನಪ್ರತಿನಿಧಿ ಗಳು ನಿಂತಿಲ್ಲ. ಭೂಮಿ ಕಳೆದುಕೊಳ್ಳುವ ರೈತರಿಗೆ ಇದು ನುಂಗಲಾಗದ ತುತ್ತಾ ಗಿದೆ. ಇತ್ತ ಭೂಮಿಯನ್ನೂ ಕೊಟ್ಟು , ಕೈತುಂಬಾ ಹಣವನ್ನೂ ಪಡೆಯದೆ ರೈತರು ಅತಂತ್ರಗೊಳ್ಳುವುದಿಲ್ಲವೇ?

No Comments to “ಅವೈಜ್ಞಾನಿಕ ಭೂ ಪರಿಹಾರ : ಸ್ವೇಚ್ಛಾಚಾರಕ್ಕೆ ಅನ್ನದಾತ ಕಂಗಾಲು”

add a comment.

Leave a Reply

You must be logged in to post a comment.