ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ರಾಜಿನಾಮೆ : ಅ.೨೦ ಉಪಾಧ್ಯಕ್ಷರ ಚುನಾವಣೆ

ಹಾಸನ : ಪಕ್ಷದಲ್ಲಿನ ಒಳ ಒಪ್ಪಂದದಂತೆ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ಬಿ.ಡಿ.ಚಂದ್ರೇ ಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಉಪಾಧ್ಯಕ್ಷೆ ಪಾರ್ವ ತಮ್ಮ ನಂಜುಂಡಾಚಾರ್‌ ಅವರ ರಾಜಿನಾಮೆಯಿಂದ ಈಗಾಗಲೇ ತೆರವಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್‌ ೨೦ರಂದು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಅಧ್ಯಕ್ಷ ಚಂದ್ರೇಗೌಡ ಪಕ್ಷದ ವರಿಷ್ಠರ ಸೂಚನೆಯಂತೆ ಮಂಗಳ ವಾರ ಬೆಂಗಳೂರಿಗೆ ತೆರಳಿ ಪಂಚಾಯಿತಿ ಇಲಾಖೆ ಕಾರ್ಯ ದರ್ಶಿಗಳಿಗೆ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದರು. ನಿಯಮದಂತೆ ಅವರ ರಾಜಿ ನಾಮೆ ೧೫ ದಿನಗಳ ನಂತರ ಅಂಗೀ ಕಾರಗೊಳ್ಳಲಿದ್ದು, ನವೆಂಬರ್‌ ಮೊದಲ ವಾರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಸರ್ವಸಮ್ಮತ ಆಯ್ಕೆ : ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸರ್ವಸಮ್ಮತ ಆಯ್ಕೆ ನಡೆಯಲಿದೆ ಎಂದು ಜೆ.ಡಿ.ಎಸ್‌. ಜಿಲ್ಲಾಧ್ಯಕ್ಷ ಹೆಚ್‌.ಕೆ.ಜವರೇಗೌಡ ತಿಳಿಸಿದ್ದಾರೆ. ಬೆಂಗಳೂರಿನಲ್ಲಿರುವ ಅವರು ಪತ್ರಿಕೆ ಯೊಂದಿಗೆ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಹಿಂದಿನ ದಿನ ಪಕ್ಷದ ಎಲ್ಲಾ ಶಾಸಕರು, ನಾಯಕರು ಹಾಗೂ ಜಿಲ್ಲಾ ಪಂಚಾ ಯಿತಿ ಸದಸ್ಯರ ಸಭೆ ಕರೆದು, ಅವರ ಅಭಿಪ್ರಾಯ ಪಡೆದ ನಂತರ ಸರ್ವ ಸಮ್ಮತ ಆಯ್ಕೆಯನ್ನು ಪಕ್ಷದ ವರಿಷ್ಠರು ನಡೆಸುವರು. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ೧೨ : ೧೨ &ಜಿಲ್ಲಾ ಪಂಚಾಯಿತಿ ಮೊದಲ ೨೪ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾ ಧ್ಯಕ್ಷ ಸ್ಥಾನ ಬಿ.ಸಿ.ಎಂ.(ಎ) ಮಹಿಳೆಗೂ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದ ಹಿನ್ನಲೆಯಲ್ಲಿ ೧೨ ತಿಂಗಳಿಗೊಬ್ಬರಂತೆ ಇಬ್ಬರಿಗೆ ಅವಕಾಶ ನೀಡಲು ಜೆ.ಡಿ.ಎಸ್‌. ವರಿಷ್ಠರು ತೀರ್ಮಾನಿಸಿ, ಮೊದಲ ಅವಧಿಗೆ ಚಂದ್ರೇಗೌಡ ಅವರನ್ನು ಆಯ್ಕೆ ಮಾಡಿತ್ತು. ಜಿ.ಪಂ. ಬಲಾಬಲ : ಜೆ.ಡಿ.ಎಸ್‌.& ೩೩, ಕಾಂಗ್ರೆಸ್‌&೨, ಬಿ.ಜೆ.ಪಿ. ೫ ಸದಸ್ಯರನ್ನು ಹೊಂದಿದೆ.

No Comments to “ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ರಾಜಿನಾಮೆ : ಅ.೨೦ ಉಪಾಧ್ಯಕ್ಷರ ಚುನಾವಣೆ”

add a comment.

Leave a Reply

You must be logged in to post a comment.