ಕೃಷ್ಣಾಗೆ ಒಂದು ದಿನದ ನ್ಯಾಯಾಂಗ ಬಂಧನ

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆ ಯಲ್ಲಿ ಅವ್ಯವಹಾರ, ಅಭ್ಯರ್ಥಿಗೆ ಬೆದರಿಕೆ ಹಾಕಿದ ಆರೋಪ ಹೊತ್ತಿರುವ ಕೆ.ಪಿ. ಎಸ್‌.ಸಿ. ಮಾಜಿ ಅಧ್ಯಕ್ಷ ಡಾ।।ಹೆಚ್‌. ಎನ್‌.ಕೃಷ್ಣ ಅವರನ್ನು ಬಂಧಿಸಿದ್ದು, ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನ ದಲ್ಲಿಡಲಾಗಿದೆ. ಸಾಕು ಮಗಳ ಮದುವೆ ಹಿನ್ನಲೆಯಲ್ಲಿ ಆಗಸ್ಟ್‌ ೧೨ರ ಮಧ್ಯಾಹ್ನದವರೆಗೂ ಮಧ್ಯಂತರ ಜಾಮೀನು ಪಡೆದಿದ್ದ ಡಾ।।ಕೃಷ್ಣ , ಬುಧವಾರ ಒಂದನೇ ಎ.ಸಿ. ಎಂ.ಎಂ. ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದಂತೆ ಬಂಧಿಸಲಾಯಿತು. ಕೃಷ್ಣ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲ ಹನು ಮಂತರಾಯ ವಾದ ಮಂಡಿಸಿದರು. ಪರ&ವಿರೋಧ ವಾದ ಆಲಿಸಿದ ನ್ಯಾಯಾ ಲಯವು ಜಾಮೀನು ಬಗ್ಗೆ ಗುರುವಾರ ತೀರ್ಪು ನೀಡುವುದಾಗಿ ಪ್ರಕಟಿಸಿತು. ಬಿ.ವಿ.ಉಮೇಶ್‌ ಹಾಗೂ ಖಲೀಲ್‌ ಅಹಮ್ಮದ್‌ ಎಂಬುವವರು ಕೃಷ್ಣ ವಿರುದಟಛಿ ರಿಟ್‌ ಅರ್ಜಿ ಸಲ್ಲಿಸಿದ ಮೇರೆಗೆ ನ್ಯಾಯಾ ಲಯವು ಪ್ರಕರಣದ ತನಿಖೆಗೆ ಆದೇಶಿಸಿತ್ತು. ಕೃಷ್ಣ ಪರ ವಾದ : ಆಶಾ ಪರ್ವೀನ್‌, ವೈ.ಬಿ.ಅರ್ಚನಾ, ಸಲ್ಮಾ ಪಿರ್ತೊಸ್‌ ಎಂಬುವವರು ಕೆ.ಪಿ.ಎಸ್‌.ಸಿ. ನೇಮ ಕಾತಿ ಸಂದರ್ಭದಲ್ಲಿ ಸುಳ್ಳು ಜಾತಿ ಪತ್ರ ನೀಡಿದ್ದು, ಇದಕ್ಕೆ ಅಂದಿನ ಆಯೋಗದ ಅಧ್ಯಕ್ಷ ಡಾ।।ಕೃಷ್ಣ ಅವರನ್ನೇ ಹೊಣೆ ಮಾಡಿರುವುದು ಸರಿಯಲ್ಲ. ಹಾಗೆಯೇ ೨೦೦೫ರಲ್ಲಿ ಎಂ.ಎಸ್‌. ಅಲ್ಲಾ ಬಕ್ಷ್‌ ಎಂಬುವವರು ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆ ಯಾಗಿದ್ದ ಸಂದರ್ಭದಲ್ಲಿ ಮೂಲ ದಾಖಲಾತಿಗಳನ್ನು ಹಾಜರುಪಡಿಸದಿದ್ದ ರಿಂದ ಆಯ್ಕೆ ರದ್ದುಪಡಿಸಲಾಗಿತ್ತು. ಇದಕ್ಕೆ ಅಂದಿನ ಆಯ್ಕೆ ಸಮಿತಿಯಲ್ಲಿದ್ದ ಇತರೆ ಐವರು ಸದಸ್ಯರು ಕೂಡ ಸಹಿ ಮಾಡಿದ್ದಾರೆ. ಆದರೆ ಕೃಷ್ಣ vente de vrai viagra ಅವರೊಬ್ಬ ರನ್ನೇ ಆರೋಪಿಯನ್ನಾಗಿ ಮಾಡ ಲಾಗಿದೆ. ಇದು ಸರಿಯಲ್ಲ. ಅಲ್ಲಾ ಭಕ್ಷ್‌ ೨೦೦೭ರಲ್ಲಿ ಕೆ.ಪಿ. ಎಸ್‌.ಸಿ. ಮೂಲಕ ಮತ್ತೆ ಆಯ್ಕೆಗೊಂಡು ಹಿಂದುಳಿದ ವರ್ಗಗಳ ಇಲಾಖೆ ಅಧಿ ಕಾರಿಯಾಗಿದ್ದಾರೆ. ಇಲ್ಲಿಯವರೆಗೂ ಸುಮ್ಮನಿದ್ದ ಅವರು ಈಗ ೨೦೦೫ ರಲ್ಲಿ ನಡೆಯಿತೆನ್ನಲಾದ ಬೆದರಿಕೆ ಪ್ರಕ ರಣದ

ಬಗ್ಗೆ ಪೊಲೀಸರಿಗೆ ಹೇಳಿಕೆ ಕೊಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ವಕೀಲ ಹನುಮಂತ ರಾಯ ಅವರು ಕೃಷ್ಣ ಪರ ವಾದಿಸಿ ಜಾಮೀನಿಗೆ ಮನವಿ ಮಾಡಿದ್ದಾರೆ.

No Comments to “ಕೃಷ್ಣಾಗೆ ಒಂದು ದಿನದ ನ್ಯಾಯಾಂಗ ಬಂಧನ”

add a comment.

Leave a Reply

You must be logged in to post a comment.