ಲಕ್ಷಾಂತರ ರೂ. ಪೈಪ್‌ ನೌಕರರಿಂದಲೇ ಲೂಟಿ

ಚನ್ನರಾಯಪಟ್ಟಣ : ಬಾಗೂರು ರಸ್ತೆ ಯಲ್ಲಿನ ನೀರಿನ ಪೈಪುಗಳನ್ನು ಹಾಗೂ ಯು.ಜಿ.ಡಿ. ಛೇಂಬರ್‌ಗಳ ಮುಚ್ಚಳವನ್ನು ಪುರಸಭೆ ಸಿಬ್ಬಂದಿಯೇ ಕದ್ದು ಮಾರುತ್ತಿದೆ ಎಂದು ಪತ್ರಿಕೆಗಳಲ್ಲಿ ೧೫ ದಿನಗಳ ಹಿಂದೆ ಸುದ್ದಿಯಾಗಿದ್ದರೂ, ಅದೇ ಸಿಬ್ಬಂದಿ ಮಂಗಳ ವಾರ ರಾತ್ರಿ ಜೆಸಿಬಿ ಮೂಲಕ ಮತ್ತೆ ಪೈಪ್‌ ಗಳನ್ನು ತೆಗೆದು ಕದ್ದಿರುವ ಘಟನೆ ನಡೆದಿದೆ. ಪುರಸಭಾ ಚಾಲಕ ಪಾಪಣ್ಣಿ ಹಾಗೂ

ಪಂಪ್‌ಹೌಸ್‌ ನೌಕರ ಮಂಜುನಾಥ್‌ ಎಂಬುವವರು ಅಗಲೀಕರಣ ನಡೆಯು ತ್ತಿರುವ ಬಾಗೂರು ರಸ್ತೆಯಲ್ಲಿ ಹುದು ಗಿರುವ ನೀರಿನ ಪೈಪ್‌ಗಳನ್ನು ಜೆ.ಸಿ.ಬಿ. ಬಳಸಿ ಮಂಗಳವಾರ ರಾತ್ರಿ ತೆಗೆದು ಅವು ಗಳನ್ನು ಸಾಗಿಸಲು ವಾಹನಕ್ಕೆ ತುಂಬು ತ್ತಿದ್ದಾಗ, ಪುರಸಭೆ ನಾಮಕರಣ ಸದಸ್ಯ ವೆಂಕಟೇಶ್‌ ಹಾಗೂ ಇಂಜಿನಿಯರ್‌

ಜಯ

ರಾಂ ಸ್ಥಳಕ್ಕೆ ಬಂದು ಅಡ್ಡಿಪಡಿಸಿದರು. ಪ್ರತಿಯಾಗಿ ಪಾಪಣ್ಣಿ ಹಾಗೂ ಮಂಜು ನಾಥ್‌ ಬೆದರಿಕೆ ಹಾಕಿದರು. ಇದರ ವಿರುದಟಛಿ ವೆಂಕಟೇಶ್‌ ಅವರು ಪುರಸಭಾ ಮುಖ್ಯಾಧಿ ಕಾರಿಗೆ ದೂರು ನೀಡಿದ್ದಾರೆ. ಈವರೆಗೂ ಸುಮಾರು ಐದರಿಂದ ಆರು ಲಕ್ಷ ರೂ. ನಷ್ಟು ನೀರಿನ ಪೈಪ್‌ಗಳು ಹಾಗೂ ಛೇಂಬರ್‌ಗಳ ಮುಚ್ಚಳಗಳನ್ನು ಕದ್ದು ಮಾರಾಟ ಮಾಡಲಾಗಿದೆ ಎಂದು ದೂರಿದ್ದಾರೆ. https://www.acheterviagrafr24.com/prix-du-viagra/ ಅಚ್ಚರಿ ಎಂದರೆ ಈ ಕಳುವಿನ ವಿರುದಟಛಿ ಪೊಲೀಸರಿಗೆ ದೂರು ನೀಡಲು ಪುರಸಭಾ ಮುಖ್ಯಾಧಿಕಾರಿ ಮುಂದಾಗುತ್ತಿಲ್ಲ. ಸದಸ್ಯರ ಸಭೆ ಕರೆದು ಪ್ರಕರಣದ ಬಗ್ಗೆ ಚರ್ಚಿಸು ವುದಾಗಿ ಹೇಳುತ್ತಿದ್ದಾರೆ. ಮುಖ್ಯಾಧಿ ಕಾರಿಗಳು ಕಳುವು ನಡೆಸಿದ ಆರೋಪಿ ಗಳನ್ನು ರಕ್ಷಿಸಲು ಯತ್ನಿಸುತ್ತಿರುವುದನ್ನು ನೋಡಿದರೆ ಈ ಪ್ರಕರಣದಲ್ಲಿ ಅಧಿಕಾರಿ ಗಳು ಕೂಡ ಶಾಮೀಲಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

No Comments to “ಲಕ್ಷಾಂತರ ರೂ. ಪೈಪ್‌ ನೌಕರರಿಂದಲೇ ಲೂಟಿ”

add a comment.

Leave a Reply

You must be logged in to post a comment.