ಜೋರು ಮಳೆ : ಮಗು ಸಾವು

ಹಾಸನ : ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಬೆಳಗಿನ ಜಾವ ಭಾರೀ ಮಳೆ ಬಿದ್ದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಗರದ ಹುಣಸಿನಕೆರೆ ಬಡಾವಣೆಯಲ್ಲಿ ಮಳೆ ನೀರಿನಿಂದ ತುಂಬಿದ್ದ ನಿರ್ಮಾಣ ಹಂತದ ಮ್ಯಾನ್‌ಹೋಲ್‌ಗೆ ಮಗುವೊಂದು ಬಿದ್ದು ಸಾವನ್ನಪ್ಪಿದೆ. ಬೆಳಗಿನ ಜಾವ ಸುಮಾರು ೩ ಗಂಟೆಯಿಂದ ಆರಂಭಗೊಂಡ ಮಳೆ ಬೆಳಿಗ್ಗೆ ೬ ಗಂಟೆಯವರೆಗೂ ಧೋ ಎಂದು ಸುರಿಯಿತು. ತಗ್ಗಿನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಮಲಗಿದ್ದವರನ್ನು ಒದ್ದೆ

ಮಾಡಿತು. ಪತ್ರಿಕೆಯೊಂದರ ಕಾರ್ಯಾಲಯಕ್ಕೂ ಮಳೆ ನೀರು ನುಗ್ಗಿ ಅಲ್ಲಿದ್ದ ಸಾಮಗ್ರಿಗಳು ಹಾಳಾಗಿದೆ. ಜಿಲ್ಲೆಯ ವಿವಿಧೆಡೆ ಕೂಡ ಮಳೆ ಬಿದ್ದಿದ್ದು, ಕೆರೆ& ಕಟ್ಟೆಗಳಿಗೆ ನೀರಾಗಿದೆ. ಮಳೆ ಇಲ್ಲದೆ ಒಣಗಿದ್ದ ಬೆಳೆ ಗಳು ಚೇತರಿಸಿಕೊಳ್ಳುತ್ತಿವೆ. ನಗರದ ಹುಣಸಿನಕೆರೆ ಬಡಾವಣೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ಒಳ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಮ್ಯಾನ್‌ಹೋಲ್‌ ನಿರ್ಮಾಣಕ್ಕೆ ತೋಡಿದ್ದ ಗುಂಡಿಗಳಿಗೂ ಮಳೆ ನೀರು ತುಂಬಿತು. ಬುಧವಾರ ಬೆಳಿಗ್ಗೆ ಜೋಳದ ಮೇತೆ ಕೈಯಲ್ಲಿಟ್ಟುಕೊಂಡು ಆಟ ವಾಡುತ್ತಿದ್ದ ಬಡಾವಣೆಯ ದೇವರಾಜ್‌ ಎಂಬುವವರ ಮೂರೂವರೆ ವರ್ಷದ ಮಗು ಲೋಕೇಶ್‌ ನೀರು ತುಂಬಿದ್ದ ಮ್ಯಾನ್‌ಹೋಲ್‌ ಬಳಿ https://www.acheterviagrafr24.com/achat-viagra/ ಬಂದಾಗ, ಕೈಯಲ್ಲಿದ್ದ ಜೋಳದ ಮೇತೆ ನೀರಿಗೆ ಬಿದ್ದಿತು. ಆಳದ ಅರಿವಿಲ್ಲದ ಮಗು ಮೇತೆಯನ್ನು ತೆಗೆದುಕೊಳ್ಳಲು ಬಗ್ಗಿದಾಗ ಮ್ಯಾನ್‌ಹೋಲ್‌ಗೆ ಬಿದ್ದು ಮುಳುಗಿ ಹೋಯಿತು.

No Comments to “ಜೋರು ಮಳೆ : ಮಗು ಸಾವು”

add a comment.

Leave a Reply

You must be logged in to post a comment.