ಡಿ.೨ಕ್ಕೆ ‘ದಿ ಡರ್ಟಿ ಪಿಕ್ಚರ್‌’

ದಕ್ಷಿಣ ಭಾರತದ ಅಂದಕಾಲತ್ತಿಲ್‌ ನಟಿ ಸಿಲ್ಕ್‌ ಸ್ಮಿತಾ ಜೀವನ ಕಥೆಯನ್ನಾಧರಿಸಿ ‘ದಿ ಡರ್ಟಿ ಪಿಕ್ಚರ್‌’ ಬಾಲಿವುಡ್‌ ಸಿನಿಮಾ ಇನ್ನೇನು ತೆರೆ ಕಾಣಲಿದೆ. ಈ ಮಧ್ಯೆ, ಸಿಲ್ಕ್‌ ಸ್ಮಿತಾ ಅಂತಹ ಖ್ಯಾತ ನಟಿಯ ಕರುಣಾಜನಕ ಕಥೆಯನ್ನು ತೆರೆಯ ಮೇಲೆ ಕರಾರುವಕ್ಕಾಗಿ ತರುವ ಕಾಯಕದಲ್ಲಿ ಬಸವಳಿದಿರುವ ಬಾಲಿವುಡ್‌ ಬೆಡಗಿ ವಿದ್ಯಾ ಬಾಲನ್‌ ಈಗ ಹಾಸಿಗೆ ಹಿಡಿದಿದ್ದಾರೆ. ಆದರೂ ಶೀಘ್ರ ಗುಣಮುಖರಾಗಿ ಸಿಲ್ಕ್‌ ಸ್ಮಿತಾ ಖ್ಯಾತಿಗೆ ಅಪಚ್ಯುತಿ ಬಾರದಂತೆ ‘ಡರ್ಟಿ ಪಿಕ್ಚರ್‌’ ಬಿಡುಗಡೆಯಾಗಲಿದೆ ಎಂದು ತುಂಬುಚೆಲುವೆ ವಿದ್ಯಾ ತುಂಬು ಭರವಸೆ ನೀಡಿದ್ದಾರೆ. ಅಂದಹಾಗೆ ಇದೇ ಡಿಸೆಂಬರ್‌ ೨ರಂದು ಸಿಲ್ಕ್‌ ಸ್ಮಿತಾರ ಹುಟ್ಟು ಹಬ್ಬ. ಅಂದೇ, ‘ದಿ ಡರ್ಟಿ ಪಿಕ್ಚರ್‌’ ಬಿಡುಗಡೆಯ ಭಾಗ್ಯ ಕಾಣಲಿದೆ.

No Comments to “ಡಿ.೨ಕ್ಕೆ ‘ದಿ ಡರ್ಟಿ ಪಿಕ್ಚರ್‌’”

add a comment.

Leave a Reply