ದರ್ಶನ್‌ ಪತ್ನಿ ಕ್ಷಮೆ ಕೇಳಬೇಕಂತೆ !!

ಗಂಡ&ಹೆಂಡತಿ ಜಗಳ ಉಂಡು ಮಲಗುವವರೆಗೆ ಅಂತ ಹೇಳಲಾಗದೇ ಇದ್ದರೂ, ಮುಗಿದಿರುವುದಂತೂ ಹೌದು. ಇಲ್ಲಿ ಬಡವಾಗಿರುವುದು ಇನ್ಯಾರದೋ ಕೂಸು. ಅದರ ಮುನಿಸು ಇನ್ನೂ ಮುಗಿದಿಲ್ಲ. ಈಗ ಮಾಡಿರುವ ಕೆಲಸವನ್ನು ಇದಕ್ಕೂ ಮೊದಲು ಮಾಡಿರುತ್ತಿದ್ದರೆ, ಕನಿಷ್ಠ ತಾನಾದರೂ ಬಚಾವ್‌ ಆಗುತ್ತಿದ್ದೆನಲ್ಲ ಅಂತ ಹೇಳುತ್ತಿದೆ. ಇದು ಅಡ್ಡಕತ್ತರಿಯಲ್ಲಿ ಬಿದ್ದಿದ್ದ ನಿಖಿತಾ ಮಾತು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿರುವುದೇನೋ ಹೌದು, ಆದರೆ ನನ್ನಲ್ಲಿ ವೈಯಕ್ತಿಕವಾಗಿ ಯಾರೂ ಕ್ಷಮೆ ಕೇಳಿಲ್ಲ. ಅಷ್ಟಕ್ಕೂ ಈ ಕೆಲಸವನ್ನು ವಿಜಯಲಕ್ಷ್ಮಿಗೆ ಮೊದಲೇ ಮಾಡಬಹುದಿತ್ತು, ಇಷ್ಟು ಕಾಯಬೇಕಾಗಿರಲಿಲ್ಲ ಅನ್ನೋದು ಅವರ ನೋವು. ಹೀಗಿರುವ ನಿಖಿತಾ ಈಗಲೂ ದರ್ಶನ್‌ ಅಥವಾ ವಿಜಯಲಕ್ಷ್ಮಿ ಸ್ವತಃ ಕರೆ ಮಾಡಿ ಮಾತನಾಡುತ್ತಾರೆ, ಕ್ಷಮೆ ಯಾಚಿಸುತ್ತಾರೆ ಅಂತ ಕಾಯುತ್ತಿದ್ದಾರೆ. ಇವೆಲ್ಲದರ ನಡುವೆಯೂ, ದಂಪತಿ ಮತ್ತೆ ಒಂದಾಗಿರುವುದು ನಿಖಿತಾಗೆ ಖುಷಿ ತಂದಿದೆ. ಅವರ ಮುಂದಿನ ಜೀವನ ಶುಭವಾಗಿರಲಿ ಎಂದು ಹಾರೈಸಿದ್ದಾರೆ. ಆದರೂ ವಿಜಯಲಕ್ಷ್ಮಿ ಈಗ ಮಾಡಿರುವ ಕೆಲಸವನ್ನು ಈ ಹಿಂದೆಯೇ ಮಾಡಿರುತ್ತಿದ್ದರೆ… ಇದು ಮೌನದ ಕಟ್ಟೆಯೊಡೆದಾಗ ಮೂಡುವ ಭಾವನೆ. ವಿಜಯಲಕ್ಷ್ಮಿಯೂ ಒಬ್ಬ ಹೆಣ್ಣು, ಹಾಗಾಗಿ ಇನ್ನೊಬ್ಬ ಹೆಣ್ಣಿನ ಕಷ್ಟ ಏನೆಂಬುದು ಅವರಿಗೆ ಬಿಡಿಸಿ ಹೇಳಬೇಕಾಗಿಲ್ಲ. ವಿವಾದ ಎದ್ದಾಗಲೇ, ನನ್ನ ಮೇಲೆ ನಿಷೇಧ ಹೇರುವ ಸಂದರ್ಭದಲ್ಲೇ ಮುಂದೆ ಬಂದು ಮಾತನಾಡಬಹುದಿತ್ತು. ನನಗೆ ಬೆಂಬಲ ನೀಡಬಹುದಿತ್ತುಗಂಡ&ಹೆಂಡತಿಯ ವಿವಾದದಲ್ಲಿ ನನ್ನ ಹೆಸರು ಬಂದಾಗ, ಆಕೆ ಎಲ್ಲಿದ್ದರು? ನನ್ನ ಮೇಲೆ ನಿಷೇಧ ಹೇರಿದಾಗಲೂ ಯಾಕೆ ಸುಮ್ಮನಿದ್ದರು? ಆಗ ಅವರು ಒಂದೇ ಒಂದು ಮಾತನಾಡಲಿಲ್ಲ. ಇದು ನನಗೆ ತುಂಬಾ ನೋವು ತಂದಿದೆ. ಆದರೂ ಆಕೆಯ ವಿರುದಟಛಿ ನಾನೀಗ ಸೇಡು ತೀರಿಸಿಕೊಳ್ಳಲು ಹೋಗುತ್ತಿಲ್ಲ. ನನ್ನನ್ನು ಬಚಾವ್‌ ಮಾಡಲು ಅವರಿಗೆ ಸಾಧ್ಯವಿತ್ತು ಅನ್ನೋದಷ್ಟೇ ನನಗೆ ಕಾಡುತ್ತಿದೆ ಹೀಗೆನ್ನುವ ನಿಖಿತಾ ಪ್ರಸಕ್ತ ಬೆಳವಣಿಗೆ ಕೊಂಚ ಸಮಾಧಾನಗೊಂಡಿರುವುದಂತೂ ನಿಜ. ಎದ್ದಿದ್ದ ವಿವಾದದಲ್ಲಿ ತನ್ನ ಪಾತ್ರವಿಲ್ಲ ಅನ್ನೋದು ಜಗತ್ತಿಗೇ ಗೊತ್ತಾಗಿದೆ. ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿಲು ಸಿದಟಛಿತೆ ನಡೆಸುತ್ತಿದ್ದಾರೆ. ಬಾಕಿ ಉಳಿದಿರುವ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗವಹಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.

No Comments to “ದರ್ಶನ್‌ ಪತ್ನಿ ಕ್ಷಮೆ ಕೇಳಬೇಕಂತೆ !!”

add a comment.

Leave a Reply

You must be logged in to post a comment.