‘ಅಣ್ಣಾಬಾಂಡ್‌’ ಗೆ ಮುಹೂರ್ತ

ಪವರ್‌ಸ್ಟಾರ್‌ ಪುನೀತ್‌ ಕನ್ನಡ ಚಿತ್ರರಂಗದ ನಂ&೧ ಸ್ಥಾನದಲ್ಲಿರುವ ನಾಯಕ ನಟ. ಅವರು ಇದುವರೆಗೂ ನಾಯಕ ನಟರಾಗಿ ನಟಿಸಿರುವ ಎಲ್ಲ ಚಿತ್ರಗಳು ಸೂಪರ್‌ಹಿಟ್‌ ಆಗಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆಯಾಗಿದೆ. ಪವರ್‌ಸ್ಟಾರ್‌ ಪುನೀತ್‌ ಇದೀಗ ಸ್ಟಾರ್‌ ನಿರ್ದೇಶಕ ಸೂರಿ ನಿರ್ದೇಶಿಸುತ್ತಿರುವ ಹೊಸ ಚಿತ್ರ ‘ಅಣ್ಣಾಬಾಂಡ್‌’ನಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಈ ಚಿತ್ರ ವಿಭಿನ್ನ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಬಜೆಟ್‌ ಇರುವ ಚಿತ್ರವನ್ನು ೨ನೇ ಬಾರಿಗೆ ಸೂರಿ ನಿರ್ದೇಶಿಸುತ್ತಿರುವುದು ಮತ್ತು ಕನ್ನಡದ ನಾಯಕಿಯರು ನಟಿಸುತ್ತಿರುವುದು ಸ್ಯಾಂಡಲ್‌ವುಡ್‌ನಲ್ಲಿ ಕೌತುಕತೆ ಉಂಟುಮಾಡಿದೆ. ಪ್ರತಿಯೊಬ್ಬರಲ್ಲೂ ಬಾಂಡ್‌ ಪರ್ವ ಇರುತ್ತೆ. ಅದೇ ರೀತಿ ನಾಯಕ ಸ್ಥಳೀಯ ಹುಡುಗನಾಗಿದ್ದು ಕರ್ನಾಟಕ ಮುಳುಗುವಾಗ ರಿಪೇರಿ ಮಾಡುತ್ತಾನೆ ಎಂದಷ್ಟೇ ಹೇಳಿ ಚಿತ್ರದ ಕಥೆಯನ್ನು ಬಿಟ್ಟುಕೊಡಲಿಲ್ಲ ಸೂರಿ. ವಜ್ರೇಶ್ವರಿ ಬ್ಯಾನರ್‌ನಲ್ಲಿ ೮೦ ನೇ ಚಿತ್ರವಾಗಿದ್ದು ಇಲ್ಲಿಯವರೆವಿಗೂ ಯಾರು ಮಾಡದ ಕರ್ನಾಟಕ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಇದಕ್ಕೆಂದೇ ಸೂರಿ ಮತ್ತು ಸತ್ಯಹೆಗಡೆ ಟೀಂ ಮಾಡಿ ಎಲ್ಲ ಕಡೆ ಸುತ್ತಾಡಿ ಒಂದಷ್ಟು ಸ್ಥಳಗಳಲ್ಲೂ ಹುಡುಕಿದ್ದಾರೆ. ಚಿತ್ರವು ಪುನೀತ್‌ರ ಎಲ್ಲ ರೀತಿಯ ಸಿನಿಮಾಗಿಂತ ಭಿನ್ನ ಹಾಗು ಒಂದು ಪ್ರಯತ್ನ ಎಂದು ಚಿತ್ರದ ಬಗ್ಗೆ ಮಾತು ಹಂಚಿಕೊಂಡರು ರಾಘವೇಂದ್ರರಾಜ್‌ಕುಮಾರ್‌. ಪ್ರಿಯಾಮಣಿ ಮಾತನಾಡುತ್ತಾ ನಾನು ಪುನೀತ್‌ ಜೊತೆ ಮಾಡುತ್ತಿರುವುದು ೨ನೇ ಸಿನಿಮಾ, ಇದರಲ್ಲೂ ಅವರ ಜೊತೆ ಡ್ಯಾನ್ಸ್‌ ಮಾಡಲು ಅವಕಾಶವಿದೆ ಹರಿಕೃಷ್ಣ ಒಳ್ಳೆಯ ಟ್ಯೂನ್‌ ಕೊಡುತ್ತಾರೆ ಎಂದು ಅವರನ್ನು ನೋಡುತ್ತಾ ಹೇಳಿದರು. ನಿಧಿಸುಬ್ಬಯ್ಯಗೆ ಅಭಿಮಾನಿ ಪುನೀತ್‌ ಆಗಿದ್ದು ಅವರ ಜೊತೆ ಅಭಿನಯಿಸುತ್ತಿರುವುದು ಸಂತಸವಾಗಿದೆ ಎಂಬ ವಿಶ್ವಾಸ ಹೊರಹಾಕಿದರು. ಛಾಯಗ್ರಾಹಕ ಸತ್ಯಹೆಗಡೆಗೆ ಸೂರಿ ಜೊತೆ ೫ನೇ ಸಿನಿಮಾ ಹಾಗೂ ರಾಜ್‌ ಬ್ಯಾನರ್‌ನಲ್ಲಿ ೩ನೇ ಸಿನಿಮಾವಾಗಿದ್ದು ಉತ್ತಮ ಕೆಲಸಮಾಡಲು ಅವಕಾಶವಿದೆ ಎಂದರು. ಸೂರಿರವರು ಯಾರಿಗೂ ಪಾತ್ರದ ಬಗ್ಗೆ ಹೇಳದ ಕಾರಣ ಪುನೀತ್‌, ನಿಧಿಸುಬ್ಬಯ್ಯ ಹಾಗೂ ಪ್ರಿಯಾಮಣಿ ಅಂದು ಬ್ಲಾಂಕ್‌ಆಗಿ ಬಂದಿದ್ದ ಕಾರಣ ಹೆಚ್ಚಿನ ವಿವರ ಸಿಗಲಿಲ್ಲ. ಈಗಾಗಲೇ ಹರಿಕೃಷ್ಣ ೩ ಹಾಡುಗಳಿಗೆ ಟ್ಯೂನ್‌ ಮಾಡಿದ್ದು ಇದು ಜಾಕಿ ಹಾಡುಗಳಷ್ಟೆ ಹಿಟ್‌ ಆಗುತ್ತದೆಂದು ಸೂರಿ ಉವಾಚವಾಗಿತ್ತು. ಮಹೂರ್ತ ಸಮಾರಂಭಕ್ಕೆ ಛೆಂಬರ್‌ ಅಧ್ಯಕ್ಷ ಚಂದ್ರಶೇಖರ್‌, ನಿರ್ಮಾಪಕರ ಸಂಘದ ಅದ್ಯಕ್ಷ ಮುನಿರತ್ನಂ, ಹಿರಿಯ ನಟ ಚಂದ್ರಶೇಖರ್‌ ಆಗಮಿಸಿ ಎಂದಿನಂತೆ ಅಪ್ಪು ಚಿತ್ರದಿಂದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುತ್ತಿರುವ ರವಿಚಂದ್ರನ್‌ ಅಣ್ಣಾಬಾಂಡ್‌ಗೂ ಕ್ಲಾಪ್‌ ಮಾಡಿ ಶುಭಕೋರಿದರು. ಒಟ್ಟು ೯೮ ದಿನಗಳ ಶೂಟಿಂಗ್‌ ಮಾಡುವ ಯೋಜನೆ ಹಾಕಿಕೊಂಡಿದ್ದು ಏಪ್ರಿಲ್‌ ತಿಂಗಳಲ್ಲಿ ಚಿತ್ರವು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬುದಾಗಿ ವಿವರ ಒಪ್ಪಿಸಿದರು ರಾಘವೇಂದ್ರರಾಜ್‌ ಕುಮಾರ್‌. ಚಿತ್ರ ಬಿಡುಗಡೆಯಾಗುವ ತನಕ ಎಲ್ಲರ ಬಾಯಿನಲ್ಲೂ ಅಣ್ಣಾಬಾಂಡ್‌ ಹೆಸರು ರಾರಾಜಿಸುತ್ತಲೆ ಇರುತ್ತದೆ ಎಂಬುದಾಗಿ ಗಾಂಧಿನಗರವು ಹೇಳುತ್ತಿರುವುದು ಪರಮಾತ್ಮ ಹಿಟ್‌ ಚಿತ್ರವು ಸಾಕ್ಷಿಯಾಗಿದೆ.

No Comments to “‘ಅಣ್ಣಾಬಾಂಡ್‌’ ಗೆ ಮುಹೂರ್ತ”

add a comment.

Leave a Reply

You must be logged in to post a comment.