ನಿರ್ಮಾಪಕರು ಬರಬೇಕು, ಕಾರ್ಮಿಕರು ಉಳಿಬೇಕು ಕೆ.ಮಂಜು

ಎರಡು ವರ್ಷದ ಹಿಂದೆ ಪ್ರಾರಂಭಗೊಂಡ ಗೋಲ್ಡನ್‌ಸ್ಟಾರ್‌ ನಾಯಕತ್ವದ ಘಿ‘ಮದುವೆಮನೆಘಿ’ ಚಿತ್ರವು ತಡವಾಗಿ ಪೂರ್ಣಗೊಂಡು ತೆರೆಗೆ ಬರಲು ಸಿದ್ದವಿರುವುದರಿಂದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಶಿಲ್ಪಗಣೇಶ್‌ ನಿರ್ಮಾಪಕರ ರೆಹಮಾನ್‌ಗೆ ಸಹಾಯಮಾಡುವ ದೃಷ್ಟಿಯಿಂದ ನನ್ನ ಸಂಸ್ಥೆಯಿಂದ ಬಿಡುಗಡೆ ಮಾಡಲು ಕೋರಿಕೊಂಡರು. ಅಲ್ಲದೆ ನಿರ್ಮಾಪಕರು ನನಗೆ ಸ್ನೇಹಿತರಾಗಿದ್ದು ಹಿಂದೆ ಯಜಮಾನದಂತಹ ಚಿತ್ರ ನಿರ್ಮಿಸಿದ್ದು ಇಂತಹ ನಿರ್ಮಾಪಕರುಗಳು ಚಿತ್ರರಂಗದಲ್ಲಿ ಉಳಿದರೆ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಇದೇ ಮೊದಲಬಾರಿಗೆ ಹೊರಗಿನ ಚಿತ್ರವನ್ನು ನನ್ನ ಸಂಸ್ಥೆ ಮೂಲಕ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು ಸ್ಟಾರ್‌ ನಿರ್ಮಾಪಕ ಕೆ.ಮಂಜು. ಪ್ರೇಕ್ಷಕರು ದೇವರು, ಕಲಾವಿದರು ತಪಸ್ವಿಗಳು ಎನ್ನುತ್ತಾ, ಚಿತ್ರವು ಹಿಂದಿಯ ದಿಲ್‌ವಾಲೇ ದುಲ್ಹನಿಯ ಚಿತ್ರದ ರಿಮೇಕ್‌ ಆಗಿರದೆ ಕಥೆ, ನಿರ್ಮಾಪಕರು ಬರಬೇಕು, ಕಾರ್ಮಿಕರು ಉಳಿಬೇಕು ಕೆ.ಮಂಜು ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿದ್ದು ಗಣೇಶ್‌ ಇಮೇಜ್‌ಗೆ ತಕ್ಕಂತೆ ಕಥೆ ಹಣೆಯಲಾಗಿದ್ದು ಕಿರುತೆರೆಯಿಂದ ಹಿರಿತೆರೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಗಣೇಶ್‌ ಮತ್ತು ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಣಿಕಾಂತ್‌ಕದ್ರಿರವರ ಸಂಗೀತ ಇಂಪಾಗಿದ್ದು, ತಾಂತ್ರಿಕವರ್ಗದವರ ಕೆಲಸವನ್ನು ಗುಣಗಾನ ಮಾಡಿ ನಿರಂತರವಾಗಿ ಚಿತ್ರದ ಬಗ್ಗೆ ಮಾತು ಹಂಚಿಕೊಂಡರು ಸುನೀಲ್‌ಕುಮಾರ್‌ಸಿಂಗ್‌ ಹೇಳಿದ ಕಥೆ ಇಷ್ಟವಾಗಿ ಗಣೇಶ್‌ ಕಾಲ್‌ಶೀಟ್‌ ಪಡೆದು ಚಿತ್ರ ನಿರ್ಮಿಸಿದೆ. ಸುರೇಶ್‌ಗೌಡ್ರು ಮತ್ತು ಮಂಜು ಸಹಾಯದಿಂದ ಚಿತ್ರ ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾಧ್ಯಮದವರ ಸಹಕಾರಬೇಕೆಂದರು ನಿರ್ಮಾಪಕ ರೆಹಮಾನ್‌. ಚಿತ್ರದಲ್ಲಿ ನಟಿಸಿರುವುದು ನನಗೆ ತೃಪ್ತಿ ಇದೆ. ಸುನೀಲ್‌ ಹೇಳಿದ ಕಥೆ ಇಷ್ವವಾಯಿತು. ಸಂಭಾಷಣೆಯಲ್ಲಿ ಸಿಂಗ್‌ರವರು ನಮ್ಮ ಸಂಸ್ಕೃತಿ ಉಳಿಸಿದ್ದಾರೆ. ಚಿತ್ರ ಸಕ್ಸಸ್‌ ಆದಲ್ಲಿ ಪೂರ್ಣ ಕ್ರೆಡಿಟ್‌ ನಿರ್ಮಾಪಕ ನಿರ್ದೇಶಕರಿಗೆ ಸಲ್ಲಬೇಕು, ಚಿತ್ರ ಖಂಡಿತ ಹಿಟ್‌ ಆಗುತ್ತದೆಂದು ಮನಸಾರೆ ಗಣೇಶ್‌ ಹೇಳುವುದರೊಂದಿಗೆ ಅಂದಿನ ಗೋಷ್ಟಿ ಮುಕ್ತಾಯಗೊಂಡಿತು. ಎಂದಿನಂತೆ ಆಮದು ನಾಯಕಿ ಶ್ರದ್ದಾಆರ್ಯ ಗೈರು ಹಾಜರಾಗಿದ್ದರು.

No Comments to “ನಿರ್ಮಾಪಕರು ಬರಬೇಕು, ಕಾರ್ಮಿಕರು ಉಳಿಬೇಕು ಕೆ.ಮಂಜು”

add a comment.

Leave a Reply

You must be logged in to post a comment.