ಭೂ ಸ್ವಾಧೀನ : ಕಾಯ್ದೆ ಏನು ಹೇಳುತ್ತದೆ?

ಹಾಸನ : ದೇಶಾದ್ಯಂತ ಭೂ ಸ್ವಾಧೀನದ ವಿಚಾರ ಭಾರೀ ವಿವಾದಾಸ್ಪದ ವಿಷಯ ವಾಗಿದೆ. ಎಲ್ಲ ವಿವಾದಗಳ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಘಿ‘ರಾಷ್ಟ್ರೀಯ ಭೂ ಸ್ವಾಧೀನ ಮತ್ತು ಪುನರ…ವಸತಿ ಮತ್ತು ರಿಸೆಟ…್ಲಮೆಂಟ… ಬಿಲ… ೨೦೧೧ಘಿ’ ಎಂಬ ಹೊಸ ಮಸೂದೆಯನ್ನು ಸಿದ್ದಗೊಳಿಸಿ, ಸಂಸತ… ಮುಂದೆ ಮಂಡಿಸಿದೆ. ಬೆಂಗಳೂರು&ಮಂಗಳೂರು ರಾಷ್ಟೀಯ ಹೆದ್ದಾರಿ (ಎನ….ಹೆಚ….&೪೮) ಅಗ ಲೀಕರಣ ಕಾರ್ಯಕ್ಕಾಗಿ ಹಾಸನದಿಂದ ಬೆಳ್ಳೂರು ಕ್ರಾಸ… ತನಕ ಹೆದ್ದಾರಿಯ ಎರಡೂ ಬದಿಯಲ್ಲಿ ಜಮೀನು ವಶ ಪಡಿಸಿಕೊಳ್ಳಲು ಸರ್ಕಾರ ಪ್ರಕ್ರಿಯೆ ನಡೆ ಸಿದ್ದು, ಸಂಬಂಧಿಸಿದ ಭೂ ಸ್ವಾಧೀನಾಧಿ ಕಾರಿ, ರೈತರ ಜಮೀನಿಗೆ ನಿಗದಿಪಡಿಸಿ ರುವ ಪರಿಹಾರ ಹಣದ ಮೊತ್ತವು ಬಹಳ ಕಡಿಮೆ ಎಂದು ರೈತರು ಆಕ್ರೋಶಗೊಂಡಿದ್ದಾರೆ. ವಿವಾದವು ಈಗ ಆರ್ಬಿಟ್ರೇಟರ… ಆಗಿರುವ ಜಿಲ್ಲಾಧಿಕಾರಿಗಳ ಮುಂದೆ ಬಂದಿದೆ. ಜಿಲ್ಲಾಧಿಕಾರಿ ಕೆ.ಜಿ.ಜಗದೀಶ… ಅವರು ಚನ್ನರಾಯಪಟ್ಟಣ ತಾಲ್ಲೂಕಿನ ಸಂಬಂಧಪಟ್ಟ ರೈತರನ್ನು ಕಲಾಭವನಕ್ಕೆ ಆಹ್ವಾನಿಸಿ, ರೈತರ ವಾದವನ್ನು ಕೇಳಿ ದ್ದಾರೆ. ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಜಿಲ್ಲಾಧಿಕಾರಿಗಳು, ನ್ಯಾಯಯುತ ತೀರ್ಮಾನ ಕೈಗೊಳ್ಳು ತ್ತಾರೆಂಬುದು ರೈತರ ನಿರೀಕ್ಷೆಯಾಗಿದೆ. ಪರಿಹಾರಕ್ಕೆ ಸಂಬಂಧಿಸಿದಂತೆ ಕಾಯ್ದೆ , ಸರ್ಕಾರಿ ಸುತ್ತೋಲೆಗಳು ಹಾಗೂ ನ್ಯಾಯಾಲಯದ ತೀರ್ಪಿನ ಹಿನ್ನಲೆಯಲ್ಲಿ ಕೆಲವು ಮುಖ್ಯ ಸಂಗತಿ ಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ೧.ಘಿ‘ಎಲ್ಲಾ ಐ ತೀರ್ಪು ಪ್ರಕರಣಗಳಲ್ಲಿ ಜಮೀನಿನ ಮೌಲ್ಯಮಾಪನ ಮಾಡ ಬೇಕಾದಲ್ಲಿ ಯಾವುದೇ ಕಾರಣಕ್ಕೂ ಮಾರ್ಗಸೂಚಿ ದರವನ್ನು ಅಳವಡಿಸ ಕೂಡದೆಂದೂ, ಮಾರುಕಟ್ಟೆಯ ಮೌಲ್ಯ ವನ್ನೇ ಆಧಾರವಾಗಿಟ್ಟುಕೊಂಡು ಐ ತೀರ್ಪನ್ನು ರಚಿಸಬೇಕೆಂದು ಎಲ್ಲಾ ಭೂ ಸ್ವಾಧೀನಾಧಿಕಾರಿಗಳು/ಉಪ ವಿಭಾಗಾ ಧಿಕಾರಿಗಳು/ವಿಶೇಷ ಭೂ ಸ್ವಾಧೀನಾಧಿ ಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನುಘಿ’ ರಾಜ್ಯ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ವೆಂಕಟೇಶಮೂರ್ತಿ ಅವರು ೨೬&೧೨&೨೦೦೭ರ ಸುತ್ತೋಲೆ ಯಲ್ಲಿ ನೀಡಿದ್ದಾರೆ. ೨) ಹೈಕೋಟ…ರ್ ತೀರ್ಪನ್ನು ಆಧರಿಸಿ ಕಂದಾಯ ಇಲಾಖೆಯು ಅಧೀನ ಕಾರ್ಯ ದರ್ಶಿ ಎಂ.ಪ್ರಭಾಕರನ… ಅವರು ೧೪&೨&೨೦೦೧ರಂದು ಮಂಡ್ಯ ಜಿಲ್ಲಾಧಿ ಕಾರಿಗಳಿಗೆ ಬರೆದ ಪತ್ರದಲ್ಲಿ, ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ, ಜಾಹೀರಾತು ನೀಡಿದ ದಿನಾಂಕದ ಮಾರುಕಟ್ಟೆ ದರವನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಕೆಂದು ಆದೇಶ ನೀಡಿದ್ದಾರೆ. ೩.ರಾಷ್ಟ್ರೀಯ ಹೆದ್ದಾರಿ&೪೮ಕ್ಕೆ ಸಂಬಂಧಿಸಿದಂತೆ ಮಾಗಡಿ ತಾಲ್ಲೂಕಿನ ರೈತ ಭೂ ಸ್ವಾಧೀನ https://www.acheterviagrafr24.com/ ಪ್ರಕರಣ ಒಂದರಲ್ಲಿ ಆರ್ಬಿಟ್ರೇಟರ… ಆಗಿದ್ದ ರಾಮನಗರ ಜಿಲ್ಲಾಧಿಕಾರಿಗಳು ೨೧&೧೦&೨೦೧೦ ರಂದು ಭೂ ಸ್ವಾಧೀನಾಧಿಕಾರಿಗಳು ಒಂದು ಚದರ ಅಡಿಗೆ ನಿಗದಿಪಡಿಸಿದ್ದ ಪರಿಹಾರದ ಮೊತ್ತವನ್ನು ೧೨ ರೂ. ಗಳಿಂದ ೨೦೦ ರೂ.ಗಳಿಗೆ ಹೆಚ್ಚಿಸಿ ಆದೇಶ ನೀಡಿದ್ದಾರೆ. ೪.ಇದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲಾ ಧಿಕಾರಿಗಳು ಮತ್ತೊಂದು ಪ್ರಕರಣದಲ್ಲಿ ಪರಿಹಾರದ ಮೊತ್ತವನ್ನು ೧ ಎಕರೆಗೆ ೧ ಲಕ್ಷ ೨೫ ಸಾವಿರ ರೂಪಾಯಿಗಳಿಂದ ೨೦ ಲಕ್ಷ ರೂ.ಗೆ ಹೆಚ್ಚಿಸಿ ಆದೇಶ ನೀಡಿದ್ದಾರೆ. ೫. ಮಾರುಕಟ್ಟೆ ದರದ ಮೂರು ಪಟ್ಟು ದರವನ್ನು ರೈತರಿಗೆ ನೀಡಬೇಕೆಂದು ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಮಸೂದೆ ಹೇಳುತ್ತದೆ. ಕಾನೂನು, ನಿಯಮಗಳು, ಸುತ್ತೋಲೆ ಗಳು ಹಾಗೂ ನ್ಯಾಯಾಲಯಗಳ ತೀರ್ಪು ಗಳ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಜಮೀನುಗಳೆಂದು ಕೊಳ್ಳುವವರಿಗೆ ಮಾರುಕಟ್ಟೆ ದರ ಆಧರಿಸಿ ಪರಿಹಾರ ನೀಡಬೇಕೆಂಬುದು ಇಲ್ಲಿಯ ರೈತರ ಆಗ್ರಹವಾಗಿದೆ.

No Comments to “ಭೂ ಸ್ವಾಧೀನ : ಕಾಯ್ದೆ ಏನು ಹೇಳುತ್ತದೆ?”

add a comment.

Leave a Reply

You must be logged in to post a comment.