ಯಾಂತ್ರೀಕರಣಕ್ಕೆ ಬೆಂಬಲ ಯೋಜನೆ ಅನುಷ್ಠಾನ

ಹಾಸನ : ಕಾಫಿ ಮಂಡಳಿಯಿಂದ ೨೦೧೧&೧೨ರಲ್ಲಿ acheter viagra ಕಾಫಿ cialis pas cher a nice ವ್ಯವಸಾಯದಲ್ಲಿ ಯಾಂತ್ರೀಕರಣಕ್ಕೆ ಬೆಂಬಲ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಮಂಡಳಿಯ ಜಂಟಿ ನಿರ್ದೇಶಕ ಎಂ.ಸಿ.ಪೊನ್ನಣ್ಣ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ವ್ಯವ ಸಾಯದಲ್ಲಿ ಯಾಂತ್ರೀಕರಣಕ್ಕೆ ಬೆಂಬಲ ಯೋಜನೆಯು ಕಾರ್ಮಿಕರ ಕೊರತೆ ಇರುವ ಇಂದಿನ ದಿನದಲ್ಲಿ ಉಪಯುಕ್ತ ವಾಗಲಿದೆ ಎಂದು ವಿವರಿಸಿದರು. ಬೆಳೆಗಾರರಿಗೆ ಅನ್ವಯಿಸುವ ಸಹಾಯಧನದ ಪ್ರಮಾಣವು ೨೦ ಹೆಕ್ಟೇರ…ವರೆಗಿನ ವಿಸ್ತೀರ್ಣದವರಿಗೆ ಶೇ.೫೦ರಂತೆ ೨ ಲಕ್ಷ ರೂ. ಮಿತಿಗೊಳ ಪಟ್ಟು, ೨೦ ಹೆಕ್ಟೇರ… ಮೀರಿದ ಬೆಳೆಗಾರ ರಿಗೆ ಶೇ.೨೫ರಂತೆ ೪.೫ ಲಕ್ಷ ರೂ. ಮಿತಿಗೊಳಪಟ್ಟು ಮತ್ತು ಸ್ವಸಹಾಯ ತಂಡಗಳು, ಸಣ್ಣ ಬೆಳೆಗಾರರ ಒಕ್ಕೂಟ ಗಳಿಗೆ ಶೇ.೫೦ರಂತೆ ೫ ಲಕ್ಷ ರೂ. ಮಿತಿ ಗೊಳಪಟ್ಟಿರುತ್ತದೆ ಎಂದು ವಿವರಿಸಿದರು. ಸಹಾಯಧನಕ್ಕೆ ಅರ್ಹತೆ ಇರುವ ಯಂತ್ರೋಪಕರಣಗಳೆಂದರೆ ಕಳೆ ತೆಗೆಯುವ ಯಂತ್ರ, ಬ್ಯಾಟರಿ ಚಾಲಿತ ಹಗುರ ತೂಕದ ಕೊಯ್ಲಿನ ಯಂತ್ರ, ಟೆಲಿ ಸ್ಕೋಪಿಕ… ಕಸಿ ಮಾಡುವ ಯಂತ್ರ, ಸಿಂಪ ರಣಾ ಯಂತ್ರ, ಗುಂಡಿ ತೆಗೆಯುವ ಯಂತ್ರ, ಪವರ… ಚೈನ… ಸಾ, ಪವರ… ಟಿಲ್ಲರ…, ಮಿನಿ ಟ್ರ್ಯಾಕ್ಟರ… ಮತ್ತು ಮಿನಿ ಟ್ರಾನ…್ಸ ಪೋರ್ಟರ… ಇವೆ ಎಂದು ವಿವರಿಸಿದರು. ಯೋಜನೆ ಅನುಷ್ಠಾನಗೊಳಿಸಲು ಮಾರ್ಗದರ್ಶಿ ಸೂತ್ರ, ಅನುಮೋದಿತ ಸರಬರಾಜುದಾರರ ಮತ್ತು ವಿತರಕರ ಪಟ್ಟಿಯನ್ನು ಕಾಫಿ ಮಂಡಳಿ ವೆಬ…ಸೈಟ… ನಲ್ಲಿ ಪ್ರಕಟಿಸಲಾಗಿದೆ ಎಂದರು. ಕಾಫಿ ಕೊಯ್ಲು ಮುಂತಾದವುಗಳನ್ನು ನಿಗದಿತ ಸಮಯಕ್ಕೆ ನಿರ್ವಹಿಸಲು ಹೆಚ್ಚಿನ ಕಾರ್ಮಿಕರ ಅಗತ್ಯ ಇದೆ. ಯಂತ್ರೋ ಪಕರಣಗಳ ಬಳಕೆಯಿಂದ ಕ್ಲಿಷ್ಟಕರ ತೋಟದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗುವುದಲ್ಲದೆ, ತೋಟದ ಕೆಲಸಗಳ ಗುಣಮಟ್ಟ ಸುಧಾರಿಸಲು ಸಹಕರಿಸುತ್ತದೆ ಎಂದು ಹೇಳಿದರು.

No Comments to “ಯಾಂತ್ರೀಕರಣಕ್ಕೆ ಬೆಂಬಲ ಯೋಜನೆ ಅನುಷ್ಠಾನ”

add a comment.

Leave a Reply

You must be logged in to post a comment.