ರೈತರನ್ನು ಬೀದಿಪಾಲು ಮಾಡುವ ಸರ್ಕಾರ

ಹಾಸನ : ರೈತರಿಗೆ ನಿಜವಾಗಲೂ ಶನಿ ಕಾಟ ಶುರುವಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ರೈತರನ್ನು ಅವಮಾನ ಮಾಡುವ, ಬೀದಿಗೆ ದೂಡುವ ಕೆಲಸ ಮಾತ್ರ ನಿಂತಿಲ್ಲ. ಹಸಿವನ್ನು ಇಂಗಿಸುವವ ದೇವರಿಗೆ ಸಮಾನ. ಅವನಿಗೆ ವಿಶೇಷ ಸ್ಥಾನಮಾನ ಕೊಡದಿದ್ದರೂ ಚಿಂತೆ ಇಲ್ಲ, ಅವನನ್ನು ಎತ್ತಂಗಡಿ ಮಾಡುವ ಹೀನ ಕೃತ್ಯಕ್ಕೆ ಮುಂದಾಗುವುದು ಅಕ್ಷಮ್ಯ ಆಪರಾಧ. ರೈತರ ಬದುಕು ಹಸನಾಗುವ ದಿಕ್ಕಿನತ್ತ ಕಾರ್ಯ ಪ್ರವೃತ್ತವಾಗದ ಸರ್ಕಾರ ಗಳಿಗೆ ಅವರ ಬದುಕಿನ ನೆಮ್ಮದಿಯನ್ನು ಹಾಳುವ ಮಾಡುವ ಅಧಿಕಾರ ಕೊಟ್ಟ ವರಾರು? ಅಭಿವೃದ್ದಿಯ ಹೆಸರಿನಲ್ಲಿ ಮನೆ, ಮಠ, ಹೊಲ, https://www.acheterviagrafr24.com/achat-viagra-en-ligne-suisse/ ಗದ್ದೆಗಳನ್ನು ನಿರ್ದಾಕ್ಷಿಣ್ಯವಾಗಿ ಕದುಕೊಳ್ಳುವ ಸರ್ಕಾರಗಳು ಇದ್ದರೆಷ್ಟು? ಸತ್ತರೆಷ್ಟು? ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಾಲ, ಬೆಳೆ ವಿಮೆ, ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು ಯೋಗ್ಯತೆ ಇಲ್ಲದ ನಮ್ಮನ್ನಾಳುವ ಮಂದಿಗೆ ರೈತರ ಬದುಕಿನ ಅಡಿಪಾಯವಾದ ಜಮೀನನ್ನು ಕಿತ್ತುಕೊಳ್ಳಲು ಯಾವ ಹಕ್ಕಿದೆ? ರೈತರ ಪಾಲಿಗಂತೂ ಪ್ರಜಾ ಪ್ರಭುತ್ವದ ವ್ಯವಸ್ಥೆ ಆನ್ವಯವಾಗುತ್ತಲೇ ಇಲ್ಲ. ಧಿಕ್ಕಾರವಿರಲಿ ನಿರ್ದಯಿ ಸರ್ಕಾರ ಗಳಿಗೆ. ಧಿಕ್ಕಾರವಿರಲಿ ಷಂಡ ಜನಪ್ರತಿನಿಧಿಗಳಿಗೆ. ಬಾಗೂರು ನವಿಲೆ ಸುರಂಗ ಸಂತ್ರಸ್ತರ https://www.acheterviagrafr24.com/acheter-du-viagra/ ಮೇಲೆ ಎಸಗಿದ ದೌರ್ಜನ್ಯ ಮಾಗದ ಗಾಯ ಮಾಡಿದ್ದು, ಇನ್ನು ನೆನಪಿನಲ್ಲಿರುವಾಗಲೇ ಈಗ ಪುನಃ ಅದೇ ಚನ್ನರಾಯಪಟ್ಟಣ ತಾಲ್ಲೂಕಿನ ರೈತರ ಮನೆ, ಜಮೀನಿನ ಮೇಲೆ ತನ್ನ ವಕ್ರದೃಷ್ಟಿ ಬೀರಿರುವ ಸರ್ಕಾರ, ಮನೆಗಳನ್ನು ಏಕಾಎಕಿ ತೆರವು ಮಾಡುವಂತೆ ಬೆದರಿಕೆ ಹಾಕುತ್ತಿದೆ. ಬೆಂಗಳೂರು, ಮಂಗ ಳೂರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ತಮ್ಮ ಮನೆ, ಜಮೀನುಗಳನ್ನು ಕಳೆದು ಕೊಳ್ಳುವ ಆತಂಕದಲ್ಲಿರುವ ರೈತರಿಗೆ ಸರ್ಕಾರ ನೀಡಲು ಮುಂದಾಗಿರುವ ಪರಿಹಾರ ಏನೇನೂ ಅಲ್ಲ. ಅವರು ವ್ಯಕ್ತಪಡಿಸಿದ ನೋವು, ಹತಾಶೆ ಹೊರ ಹಾಕಿದ ನಿಟ್ಟುಸಿರುಗಳಿಗೆ ಇಲ್ಲಿ ಅಕ್ಷರ ರೂಪ ಕೊಡಲಾಗಿದೆ ಓದಿ.

No Comments to “ರೈತರನ್ನು ಬೀದಿಪಾಲು ಮಾಡುವ ಸರ್ಕಾರ”

add a comment.

Leave a Reply

You must be logged in to post a comment.