ಕಸ್ತೂರಿ ರಂಗನ್‌ ವರದಿ : ಜನರ ಹಿತ ಕಾಯಲು ಸರ್ಕಾರ ಬದ

ಹಾಸನ : ಪಶ್ಚಿಮ ಘಟ್ಟಗಳ ಸಂರ ಕ್ಷಣೆಗೆ ಕಸ್ತೂರಿ ರಂಗನ್‌ ವರದಿ ಜಾರಿ ಸಂದರ್ಭ ಈ ಭಾಗದ ಜನರ ಹಿತವನ್ನು ಕಾಯುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಲಿದೆ ಎಂದು ಅರಣ್ಯ ಸಚಿವ ವಿ.ರಮಾ ನಾಥ ರೈ ತಿಳಿಸಿದ್ದಾರೆ. ಗುರುವಾರ ಗುಂಡ್ಯ ಬಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಸ್ತೂರಿ ರಂಗನ್‌ ವರದಿಯಲ್ಲಿ ಶೇ.೨೦ರಷ್ಟು ಕಾಡಿನ ಸ್ವರೂಪ ಹೊಂದಿರುವ ಪ್ರದೇಶಗಳನ್ನು ಅರಣ್ಯವೆಂದು ಗುರು ತಿಸಲಾಗಿದೆ ಅದನ್ನು ಶೇ.೫೦.ರಷ್ಟು ಪ್ರಮಾಣಕ್ಕೆ ವಿಸ್ತರಿಸಲು ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಇದರಿಂದ ಹಲವು ಗ್ರಾಮಗಳು ಬಿಟ್ಟು ಹೋಗುವ ಸಾಧ್ಯತೆಗಳಿವೆ ಎಂದು ಸಚಿವರು ಹೇಳಿದರು. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಗೋವಾ, ಗುಜರಾತ್‌ ರಾಜ್ಯಗಳು ಕಸ್ತೂರಿ ರಂಗನ್‌ ವರದಿಯ ವ್ಯಾಪ್ತಿಗೆ ಬರುತ್ತವೆ. ಕೇರಳ ರಾಜ್ಯವೊಂದೇ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿ ಸಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ರಾಜ್ಯ ಸರ್ಕಾರವು ವರದಿಯನ್ನು ಸಲ್ಲಿಸಬೇಕಾಗಿದೆ. ಆದ್ದರಿಂದ ಈ ವೇಳೆ ಈ ವರದಿ ವ್ಯಾಪ್ತಿಗೆ ಸೇರ್ಪಡೆ ಯಾಗಿರುವ ಗ್ರಾಮಗಳ ಹಿತ ಚಿಂತನೆಯೂ ಸರ್ಕಾ achat viagra generique inde ರಕ್ಕೆ ಇದೆ ಎಂದು ಸಚಿವರು ಹೇಳಿದರು. ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಕಾರಿಡಾರ್‌ ನಿರ್ಮಾ ಣಕ್ಕೆ ಗ್ರಾಮಸ್ಥರಿಂದಲೂ ಮನವಿ ಬರುತ್ತಿದೆ. ಇದೊಂದು ಸೂಕ್ಷ್ಮ ವಿಷಯ. ಸರ್ಕಾರಕೆ ಈ ಬಗ್ಗೆ ತಾತ್ವಿಕ ಒಪ್ಪಿಗೆ ಇದೆ. ಆದರೆ ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದರು. ಹಣಕಾಸಿನ ಲಭ್ಯತೆ, ಸಾಧ್ಯ ಸಾಧ್ಯತೆಗಳನ್ನು ಪರಿ ಶೀಲಿಸಿ ಮುಂದಿನ

ಹೆಜ್ಜೆ ಇಡಬೇಕಾ ಗಿದೆ ಎಂದರು. ಆನೆ ಹಾವಳಿ ನಿಯಂತ್ರಣಕ್ಕೆ ಆನೆ ಕಂದಕಗಳನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ನಿರ್ಮಿಸಿ ನಿರ್ವಹಿಸಲು ೨೧೨ ಕೋಟಿ ರೂ. ಮೀಸಲಿರಿಸ ಲಾಗಿದೆ. ಈ ವರ್ಷ ೫೦ ಕೋಟಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಸೋಲಾರ್‌ ಬೇಲಿಗಳ ನಿರ್ವಹಣೆ ಸಮಸ್ಯೆ ನಿವಾರಿಸಲು ಕೃಷಿಕರಿಗೆ ಶೇ. ೫೦ ರಷ್ಟು ಸಬ್ಸಿಡಿ ಹಣ ನೀಡಿ ತಮ್ಮ ಜಮೀನುಗಳಲ್ಲಿ ಅವರೇ ಸೋಲಾರ್‌ ಬೇಲಿ ಅಳವಡಿಸಿ ನಿರ್ವಹಿಸಿಕೊಳ್ಳಲು ಪ್ರೋತ್ಸಾಹ

ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟ ಪರಿಹಾರ ಗರಿಷ್ಠ ಮೊತ್ತವನ್ನು ಓಂದು ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಮನುಷ್ಯನ ಪ್ರಾಣಹಾನಿಗೆ ತಲಾ ೫ ಲಕ್ಷ ರೂ., ದನಕರುಗಳ ಸಾವಿಗೆ ೧೦ ಸಾವಿರ ರೂ, ಕುರಿ ಮೇಕೆಗಳ ಸಾವಿಗೆ ೫೦೦೦ ರೂ. ಪರಿಹಾರ ನಿಗದಿಪಡಿಸಲಾಗಿದೆ ಎಂದ ಸಚಿವರು, ಅರಣ್ಯ ಒತ್ತುವರಿ ಬಗ್ಗೆ ಸರ್ವೆಸ್ಥಿತಿಯ ಬಗ್ಗೆ ಕಾರ್ಯ ನಡೆಯುತ್ತಿದ್ದು, ಅಲ್ಲಿನ ಪರಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದರು.

No Comments to “ಕಸ್ತೂರಿ ರಂಗನ್‌ ವರದಿ : ಜನರ ಹಿತ ಕಾಯಲು ಸರ್ಕಾರ ಬದ”

add a comment.

Leave a Reply

You must be logged in to post a comment.