ಶಿರಾಡಿಘಾಟ್‌ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭ

ಹಾಸನ : ಅಗತ್ಯ ಪ್ರಮಾಣದ ಸಾಮಗ್ರಿ ಸಂಗ್ರಹ ಕಾರ್ಯ ಮುಗಿದ https://www.viagrasansordonnancefr.com/viagra-cialis/ ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್‌ನ ವಾಹನ ಸಂಚಾರ ಸ್ಥಗಿತಗೊಳಿಸಿ ಸಿಮೆಂಟ್‌ ರಸ್ತೆ ಕಾಮಗಾರಿ ಪ್ರಾರಂಭಿಸ ಲಾಗುವುದು ಎಂದು ಜಿಲ್ಲಾ ಉಸ್ತು ವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಡಾ:ಹೆಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ. ಶಿರಾಡಿ ಘಾಟ್‌ ರಸ್ತೆ ಕಾಮಗಾರಿಗೆ ಸಂಗ್ರಹಿಸಲಾಗಿರುವ ಸಾಮಗ್ರಿ ಮತ್ತು ಹಾಲಿ ನಡೆಯುತ್ತಿರುವ ಮೋರಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ನಂತರ ಸಕಲೇಶಪುರದಲ್ಲಿ ಅರಣ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾ ನಾಥ ರೈ ಮತ್ತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಯವರು ಮತ್ತು ಇತರೆ ಹಿರಿಯ ಅಧಿಕಾರಿಗಳೊಂದಿಗೆ ಗುರು ವಾರ ಸಭೆಯನ್ನು ನಡೆಸಿದ ಸಚಿವರು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗುವ ಸೂಚನೆ ನೀಡಿ, ಬದಲಿ ರಸ್ತೆಗಳನ್ನು ಸಂಚಾರ ಯೋಗ್ಯವನ್ನಾಗಿಸಿ ಸಿದ್ಧಪಡಿಸಿ ಕೊಳ್ಳಲು ನಿರ್ದೇಶನ ನೀಡಿದರು. ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ, ಮಡಿಕೇರಿ ಮಾರ್ಗದ ರಸ್ತೆ ಸಹ ದುರಸ್ತಿಯಲ್ಲಿದೆ. ಬಿಸಿಲೆ&ಸುಬ್ರಹ್ಮಣ್ಯ ರಸ್ತೆ ಶೀಘ್ರವಾಗಿ ಸಂಚಾರ ಯೋಗ್ಯ ವನ್ನಾಗಿಸಬೇಕಿದೆ ಅಲ್ಲದೆ ಚಾರ್ಮುಡಿ ಘಾಟ್‌ ಬಲಪಡಿಸಬೇಕಾಗಿದೆ. ಮೂಡಿಗೆರೆ ಸಂಪರ್ಕ ರಸ್ತೆಗಳ ಜಾಲವನ್ನು ಉತ್ತಮಗೊಳಿಸಬೇಕು. ಒಟ್ಟಿನಲ್ಲಿ ಈ ಕಾಮಗಾರಿ ಗುಣಮಟ್ಟದಿದ ನಡೆಯಬೇಕು ಶೀಘ್ರವಾಗಿ ಮುಗಿಸಬೇಕು ಎಂದರು. ಹಾಸನ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸ್ಥಳೀಯ ಸಮಸ್ಯೆಗಳು ಹಾಗೂ ಪರಿಹಾರ ಮಾರ್ಗಗಳ ಬಗ್ಗೆ ನಕ್ಷೆ ಮೂಲಕ ಸಲಹೆ ನೀಡಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ರೆಡ್ಡಿ ಹಾಗೂ ಮುಖ್ಯ ಇಂಜಿನಿಯರ್‌ ಮೃತ್ಯುಂಜಯ ಸ್ವಾಮಿ ಅವರು ಈವರೆಗೆ ಕಾಮಗಾರಿ ಅನುಷ್ಠಾನವಾಗಿರುವ ಪ್ರಗತಿ, ಬದಲಿ ಮಾರ್ಗಗಳ ಸ್ಥಿತಿಗತಿ ಸುಧಾರಣೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪ್‌ಸಿಂಗ್‌ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

No Comments to “ಶಿರಾಡಿಘಾಟ್‌ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭ”

add a comment.

Leave a Reply