ಎತ್ತಿನಹೊಳೆ ಯೋಜನೆ : ಕೈಬಿಡುವ ಪ್ರಶ್ನೆಯೇ ಇಲ್ಲ

ಸಕಲೇಶಪುರ : ಎರಡು ಜಿಲ್ಲೆಯ ಜನರ ಕುಡಿಯುವ ನೀರಿನ ಯೋಜನೆ ಯಾದ ಎತ್ತಿನಹೊಳೆ ಯೋಜನೆ ಯನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಈ ಯೋಜನೆಯಿಂದ ಸಂತ್ರಸ್ತರಾಗುವ ಮಲೆನಾಡು ಜನರ ಬೇಡಿಕೆಗಳನ್ನು ಈಡೇರಿಸಲು ಅತಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳು ವುದಾಗಿ ರಾಜ್ಯ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ… ತಿಳಿಸಿದ್ದಾರೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಕುರಿತಾಗಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಸೋಮ ವಾರ ಪಟ್ಟಣದ ಪುರಭವನದ ಸಭಾಂಗಣ ದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಾರ್ವ ಜನಿಕರು, ಸಂತ್ರಸ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಅಭಿ ಪ್ರಾಯ, ಸಲಹೆ ಸೂಚನೆಗಳನ್ನು ಆಲಿಸಿದ ನಂತರ ಉತ್ತರಿಸಿದ ಸಚಿವರು, ಸದರಿ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರ ಪ್ರಾರಂಭಿಸಿದ್ದರೂ ಕೂಡ ಇದೊಂದು ಮಾನವೀಯ ಪರಿ ಕಲ್ಪನೆಯ ಯೋಜನೆ. ಈಗಿನ ಕಾಂಗ್ರೆಸ… ಸರ್ಕಾರವೂ ಕೂಡ ಯೋಜನೆ ಕೈಗೆತ್ತಿ ಕೊಂಡಿದೆ ಎಂದರು. ಸುಮಾರು ೧೪ ಸಾವಿರ ಕೋಟಿ ರೂ. ವೆಚ್ಚ ತಗುಲುವ ಈ ಯೋಜನೆಯಿಂದ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರಿಗೆ ಅನುಕೂಲ ವಾಗುತ್ತದೆ ಎಂದರು. ಯಾವುದೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂದರ್ಭ ದಲ್ಲಿ ಸ್ವಲ್ಪ ಮಟ್ಟದ

ತೊಂದರೆ ಎದು ರಾಗುವುದು ಸಹಜ. ಸರ್ವೋಚ್ಛ ನ್ಯಾಯಾಲಯ ಘೊಷಿಸಿದ ಹೊಸ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ಭೂಮಿಯನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದು https://www.acheterviagrafr24.com/achat-viagra-en-ligne-sans-ordonnance/ ಹಾಗೂ ಸೂಕ್ತ ಪರಿಹಾರ, ಪುನ ರ್ವಸತಿ ಸೌಲಭ್ಯ

ಕಲ್ಪಿಸಲಾಗುವುದು ಎಂದರು. ಈ ಭಾಗದ ಸಂತ್ರಸ್ತರ ಬೇಡಿಕೆ ಗಳನ್ನು ಆದ್ಯತೆ ಮೇರೆಗೆ ಬಗೆಹರಿ ಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ಯಾಕೇಜ… ಘೊಷಿಸು ವುದಾಗಿ ತಿಳಿಸಿದರು. ಯೋಜನೆಯ ಸಮಗ್ರ ವರದಿ ಯಲ್ಲಿ ಹಲವಾರು ಅವೈಜ್ಞಾನಿಕ ಮತ್ತು ದ್ವಂದ್ವ ಮಾಹಿತಿ ಇವೆ ಎಂದು ದೂರಿ ಯೋಜನೆ ಕುರಿತು ಸರ್ಕಾರ ಸ್ಥಳೀಯ ರಿಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ… ಆಕ್ಷೇಪಿಸಿ ದರು.

No Comments to “ಎತ್ತಿನಹೊಳೆ ಯೋಜನೆ : ಕೈಬಿಡುವ ಪ್ರಶ್ನೆಯೇ ಇಲ್ಲ”

add a comment.

Leave a Reply

You must be logged in to post a comment.