ಅರಕಲಗೂಡು : ಜ.೫ಕ್ಕೆ ಪರಂಪರಾ ಉತ್ಸವ

ಅರಕಲಗೂಡು : ಹೊಯ್ಸಳ ಮಹೋ ತ್ಸವದ ಅಂಗವಾಗಿ ತಾಲ್ಲೂಕಿನಲ್ಲಿ ಜನವರಿ ೫,೨೦೧೫ರಂದು ಸಂಭ್ರಮದ ಅರಕಲ ಗೂಡು ಪರಂಪರಾ ಉತ್ಸವ ಆಯೋಜಿಸ ಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದ್ದಾರೆ. ಪಟ್ಟಣದಲ್ಲಿ ಸೋಮವಾರ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಿದ ಅವರು, ಇದೇ ಪ್ರಥಮ ಬಾರಿಗೆ ಹೊಯ್ಸಳ ಮಹೋತ್ಸವದ ಅಂಗವಾಗಿ ತಾಲ್ಲೂಕಿನಲ್ಲಿ ಅರಕಲಗೂಡು ತಾಲ್ಲೂಕಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆ ಯನ್ನು ವರ್ತಮಾನದ ಜನರಿಗೆ ಪರಿಚಯಿ ಸುವ ಸಲುವಾಗಿ ಅರಕಲಗೂಡು ಪರಂಪರಾ ಉತ್ಸವ ನಡೆಯುತ್ತಿದೆ ಎಂದರು. ಬೆಳಿಗ್ಗೆ ೮ ಗಂಟೆಗೆ ಅರಕಲಗೂಡು ಪಟ್ಟಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಆರಂಭಿಸಲಾಗುವ ಪರಂಪರಾ ಉತ್ಸವ ರಾಮನಾಥಪುರಕ್ಕೆ ತೆರಳಲಿದೆ. ಮೆರ ವಣಿಗೆಯಲ್ಲಿ ಆಕರ್ಷಕ ಸ್ತಬ್ದ ಚಿತ್ರಗಳು, ವಿವಿಧ ಜಾನಪದ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು ಹೆಜ್ಜೆ ಹಾಕುವರು. ವಿವಿಧ ವಾದ್ಯ ಪರಿಕರಗಳ ವಾದನ ಇರ ಲಿದೆ. ರಾಮನಾಥಪುರ ಸರ್ಕಲ…ನಿಂದ ರಾಮೇಶ್ವರ ದೇಗುಲದ ತನಕ ಮೆರವಣಿಗೆ ಸಾಗಲಿದೆ. ಅಲ್ಲಿ ವಿವಿಧ ಇಲಾಖೆಗಳ ಮಾಹಿತಿ ಒದಗಿಸುವ ವಸ್ತು ಪ್ರದರ್ಶನ, ಪುಸ್ತಕ ಮಾರಾಟ ಪ್ರದರ್ಶನ ಮತ್ತು ಆಹಾರ ಮೇಳಕ್ಕೆ ಚಾಲನೆ ನೀಡಲಾಗು ವುದು ಎಂದರು. ವೇದಿಕೆ ಕಾರ್ಯಕ್ರಮದಲ್ಲಿ ಉದ್ಘಾ ಟನೆ, ಗಣ್ಯರ ಸನ್ಮಾನ ಆದ ನಂತರ ಅರ ಕಲಗೂಡು ಸಾಹಿತ್ಯ, ಸಾಂಸ್ಕೃತಿಕ& ಐತಿ ಹಾಸಿಕ ಅವಲೋಕನ, ಕೃಷಿ ಬದುಕು ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಮಧ್ಯಾಹ್ನ ೭ ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ನಂತರ ಸಾರ್ವಜನಿಕರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ೩&೩೦ಕ್ಕೆ ನಡೆಯುವ ಯುವ ಜನೋತ್ಸವದಲ್ಲಿ ವಿವಿಧ ಶಾಲಾ&ಕಾಲೇಜು dr.ed ಮಕ್ಕಳಿಂದ ನೃತ್ಯ, ಹಾಡುಗಾರಿಕೆ, ನೃತ್ಯ ರೂಪಕ, ಸಾಹಸ ಪ್ರದರ್ಶನ ಜರುಗಲಿದೆ. ಈ ನಡುವೆ ಛಾಯಾಚಿತ್ರಕಾರರ ಸಂಘ ದಿಂದ ಛಾಯಾಚಿತ್ರ ಪ್ರದರ್ಶನ, ಅರ ಕಲಗೂಡು ಐತಿಹಾಸಿಕ ಪರಂಪರೆ ಪರಿ ಚಯಿಸುವ ಸ್ಮರಣ ಸಂಚಿಕೆ ಬಿಡುಗಡೆ ಯಾಗಲಿದೆ. ಸಂಜೆ ಸಮಾರೋಪ ಕಾರ್ಯಕ್ರಮ, ನಂತರ ರುದ್ರಪಟ್ಟಣ ಸಂಗೀತಗಾರರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ೮ ರಿಂದ ೧೧ರವರೆಗೆ ಆಹ್ವಾನಿತ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ತಾಲ್ಲೂಕಿನ ಸಮಸ್ತ ಜನತೆ ಪರಂಪರಾ ಉತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.

No Comments to “ಅರಕಲಗೂಡು : ಜ.೫ಕ್ಕೆ ಪರಂಪರಾ ಉತ್ಸವ”

add a comment.

Leave a Reply

You must be logged in to post a comment.