ಆಕಸ್ಮಿಕ ಬೆಂಕಿ :ಗುಡಿಸಲು ಭಸ್ಮ

ಹಳೇಬೀಡು:ಬೆಂಕಿ ಆಕಸ್ಮಿಕದಿಂದ ಗುಡಿ ಸಲು ಸುಟ್ಟು ಭಸ್ಮವಾಗಿರುವ ಘಟನೆ ಸೋಮ ವಾರ ಸಂಜೆ ನಡೆದಿದೆ. ಸುಮಾರು ೭೦೦೦ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಬೆಂಕಿಗೆ ಆಹುತಿಯಾದ ಗುಡಿಸಲು ರವಿ ನಾಯ್ಕ ಎಂಬುವರಿಗೆ ಸೇರಿದ್ದು ಎಂದು ತಿಳಿದು https://www.viagrasansordonnancefr.com/viagra-en-pharmacie/ ಬಂದಿದೆ. ಜಮೀನು, ಮನೆ ಇಲ್ಲದ ರವಿನಾಯ್ಕ ಹಾಗೂ ಇವರ ಪತ್ನಿ ಆಶಾ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಎರಡು ಗಂಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ತುಂಡು ಭೂಮಿಯೂ ಇಲ್ಲದ ಇವರು ಗಟ್ಟಿಮುಟ್ಟಾದ ಸೂರು ಹೊಂದಲು ಸಾಧ್ಯ ವಾಗದೆ ಕಿತ್ತು ತಿನ್ನುವ ಬಡತನದಲ್ಲಿ ಜೋಪಡಿಯಲ್ಲಿ ವಾಸವಾಗಿದ್ದರು. ಇರುವ ಗುಡಿಸಲೊಂದು ಬೆಂಕಿಗೆ ತುತ್ತಾಗಿರುವುದ ರಿಂದ ಕುಟುಂಬ ಬೀದಿಗೆ ಬಂದಿದೆ. ಮನೆಯಲ್ಲಿದ್ದ ಪಾತ್ರೆ, ಬಟ್ಟೆ ಆಹಾರ ಪದಾರ್ಥಗಳು ಕೈಗೆ ಸಿಗದಂತೆ ನಾಶವಾಗಿವೆ. ರೇಷನ… ಕಾಡ…ರ್, ಮತದಾರ ಚೀಟಿ ಮೊದ ಲಾದ ದಾಖಲಾತಿ ಸುಟ್ಟು ಬೂದಿಯಾಗಿರು ವುದಲ್ಲದೆ, ಮನೆ ನಿರ್ಮಿಸಿಕೊಳ್ಳುವುದಕ್ಕಾಗಿ ಸಂಗ್ರಹಿಸುತ್ತಿದ್ದ ರೂ.೧೦೦೦೦ ನಗದು ಸಹ ಸುಟ್ಟು

ಹೋಗಿದೆ. ಓದುವ ಪುಸ್ತಕ ಹಾಗೂ ಬಟ್ಟೆ ಸುಟ್ಟು ಹೋಗಿರುವುದರಿಂದ ನಾಳೆ ಶಾಲೆಗೆ ಹೇಗೆ ಹೋಗುವುದು ಎಂದು ಮಕ್ಕಳು ಚಿಂತಾಕ್ರಾಂತರಾಗಿದ್ದ ದೃಶ್ಯ ಕಂಡು ಬಂತು. ಕುಟುಂಬ ಸದಸ್ಯರ ಬಳಿ ತೊಟ್ಟ ಬಟ್ಟೆ ಹೊರತು ಪಡಿಸಿ ಮುಂದಿನ ಜೀವನಕ್ಕೆ ಬಿಡಿಗಾಸು ಇಲ್ಲದಂತಾಗಿದೆ. ಪತಿ ರವಿನಾಯ್ಕ ಬೇರೆ ಊರಿಗೆ ತೆರಳಿದ್ದರಿಂದ ರಾತ್ರಿ ಕಳೆಯುವುದ ಕ್ಕಾಗಿ ಪುಟ್ಟ ಮಕ್ಕಳೊಂದಿಗೆ ಪತ್ನಿ ಆಶಾ ಪರ ದಾಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

No Comments to “ಆಕಸ್ಮಿಕ ಬೆಂಕಿ :ಗುಡಿಸಲು ಭಸ್ಮ”

add a comment.

Leave a Reply