ಮತದಾರರಪಟ್ಟಿಲೋಪ ಸರಿಪಡಿಸಲುಆಗ್ರಹ

ಹಾಸನ : ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ… ೨೭ರಂದು ಚುನಾವಣೆ ನಡೆಯಲಿದೆ. ಆದರೆ ಮತ ದಾರರ ಪಟ್ಟಿಯಲ್ಲಿ ಭಾರೀ ಲೋಪ ಇದೆ. ಈ ಲೋಪ ಸರಿಪಡಿಸುವಂತೆ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಮಾಜಿ ಕಾರ್ಯದರ್ಶಿ ಬಿ.ಕೆ.ಮಂಜು ನಾಥ…

ಒತ್ತಾಯಿಸಿದರು. ಈ ಸಂಬಂಧ ಚುನಾವಣಾಧಿಕಾರಿ ವಿ.ಎಸ….ಮುರುಗೇಂದ್ರಯ್ಯ ಅವರಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದು ಸೋಮವಾರ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಲೋಪ ಸರಿಪಡಿಸದಿದ್ದರೆ ಕಾನೂ ನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರಲ್ಲದೆ, ತಕ್ಷಣವೇ ಚುನಾವಣಾಧಿಕಾರಿಗಳು ಇತ್ತ ಗಮನ ಹರಿಸುವಂತೆ ಆಗ್ರಹಿಸಿದರು. ಕೇವಲ ರಾಜಕೀಯ ದುರುದ್ದೇಶ ಕ್ಕಾಗಿ ಕೆಲವರನ್ನು ಪಟ್ಟಿಯಿಂದ ಕೈಬಿಡ ಲಾಗಿದೆ ಹಾಗೂ ಮೃತಪಟ್ಟ ಸದಸ್ಯರ ಜಾಗಕ್ಕೆ ಅನಧಿಕೃತವಾಗಿ ಅದೇ ಹೆಸರು ಳ್ಳವರನ್ನು ಸೇರಿಸಿರುವುದು ಮಹಾ ಪರಾಧ ಎಂದು ಹೇಳಿದರು. ೫೧೬ ಆಜೀವ ಸದಸ್ಯರಲ್ಲಿ ಕೇವಲ ೧೫೧ ಜನರಿಗೆ ಮತದಾನದ ಹಕ್ಕು ನೀಡಲಾಗಿದ್ದು, ಅದರಲ್ಲಿ ೧೦ ರಿಂದ ೧೫ ಜನ ನಕಲಿ ಮತದಾರರಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿ ವಿ.ಎಸ….ಮುರುಗೇಂದ್ರ ಅವರು ಇದಕ್ಕೆ ಸಂಬಂಧಿಸಿದಂತೆ ಸದಸ್ಯರಿಗೆ ಪತ್ರ ವೊಂದನ್ನು ಕಳುಹಿಸಿಕೊಡುವಂತೆ ಆಗ್ರಹಿಸಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸದಸ್ಯರುಗಳಾದ ಬಸವರಾಜ…, ರಮೇಶ…, ಮೂರ್ತಿ, ಕೃಷ್ಣೇ ಗೌಡ, ತಮ್ಮಣ್ಣಗೌಡ ಹಾಜರಿದ್ದರು.

No Comments to “ಮತದಾರರಪಟ್ಟಿಲೋಪ ಸರಿಪಡಿಸಲುಆಗ್ರಹ”

add a comment.

Leave a Reply

You must be logged in to post a comment.