ಈಚುನಾವಣೆಎಂ.ಸಿ.ಇ.ನಕುಟುಂಬಆಡಳಿತಕ್ಕೆಅಂತ್ಯಹಾಡುವುದೇ?

ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಚುನಾವಣೆ ಸಮೀಪಿಸುತ್ತಿರು ವಂತೆಯೇ ಈ ಹಿಂದಿನ ಚುನಾವಣೆಗಳಿ ಗಿಂತ ಹೆಚ್ಚಿನ ರಂಗು ಪಡೆದುಕೊಂಡಿದೆ. ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ದೋಷಪೂರಿತವಾಗಿದ್ದು, ಇದನ್ನು ರದ್ದುಪಡಿಸಿ ಹೊಸ ಮತದಾರರ ಪಟ್ಟಿ ಯೊಂದಿಗೆ ಚುನಾವಣೆ ನಡೆಸಬೇಕೆಂದು ನಗರದ ಪ್ರಧಾನ ಸಿವಿಲ… ನ್ಯಾಯಾಲಯದ ಕಿರಿಯ ವಿಭಾಗದಲ್ಲಿ ದಾವೆ ಹೂಡ ಲಾಗಿದೆ. ಆದರೆ ಇದು ಡಿಸೆಂಬರ… ೨೭ ರಂದು ನಡೆಯಲಿರುವ ಚುನಾವಣೆಗೆ ಯಾವುದೇ ರೀತಿಯ ತೊಡಕಾಗದು ಎಂದು ಹೇಳಲಾಗುತ್ತಿದೆ. ಹಾಗೆ ನೋಡಿದರೆ ಕಳೆದ ೩೦ ವರ್ಷ ದಿಂದ ಚುನಾವಣೆಯೇ ನಡೆದಿಲ್ಲ. ಇದಕ್ಕೆ ಹಾರನಹಳ್ಳಿ ರಾಮಸ್ವಾಮಿ ಅವರ ಕುಟುಂಬ ರಾಜಕಾರಣವೇ ಕಾರಣ ಎಂಬುದು ಸುಸ್ಪಷ್ಟ . ಚುನಾವಣೆ ದಿನವೇ ಮತದಾರರಿಗೆ ಹೊಡೆದು ಕಳುಹಿಸ ಲಾಗಿತ್ತು. ಈಗಲೂ ಈ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಎಂ.ಸಿ.ಇ.ನ ತಮ್ಮ

ಕುಟುಂಬ ರಾಜಕಾರಣದಿಂದಾಗಿ ಜನರ, ಆಡಳಿತ ಮಂಡಳಿಯವರ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದರೂ, ಹಾರನಹಳ್ಳಿ ರಾಮ ಸ್ವಾಮಿ ಅವರು ಮಾತ್ರ ಎಲ್ಲರನ್ನೂ ಸಮಾನ ವಾಗಿ ಕಾಣುತ್ತಿದ್ದರು ಎಂಬ ಮಾತಿಗೆ ಈಗ ಎಂ.ಸಿ.ಇ. ಆಡಳಿತ ಮಂಡಳಿ ಅಧ್ಯಕ್ಷರಾಗಿ ರುವ ಅಶೋಕ… ಹಾರ್ನಳ್ಳಿ ಅವರು ತಮ್ಮ ತಂದೆಯ ನಡವಳಿಕೆಗೆ ತದ್ವಿರುದ್ದವಾಗಿ ದ್ದಾರೆ. ಅವರ ನೇತೃತ್ವದಲ್ಲಿ ತುಘಲಕ… ದರ್ಬಾರ… ನಡೆಯುತ್ತಿದೆ ಎಂಬುದಕ್ಕೆ ಹಲ ವಾರು ಕಾರಣಗಳು ಸಿಗುತ್ತವೆ. ಅಷ್ಟಕ್ಕೂ ಅಶೋಕ… ಹಾರನಹಳ್ಳಿ ಅವರು ಬೆಂಗಳೂರಿನಲ್ಲೇ ವಾಸ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಸಂಸ್ಥೆಯ ಜವಾಬ್ದಾರಿಯನ್ನು ಸೀಟ… ಕುಮಾರ ಮತ್ತು ಶಿವರಾಂ ಎಂಬು ವವರಿಗೆ ವಹಿಸಿದ್ದು , ಇವರಿಬ್ಬರದೇ ದರ್ಬಾರ…. ನಿರ್ದೇಶಕರು ಇವರಿಗೆ ಲೆಕ್ಕಕ್ಕಿಲ್ಲ. ಸದಸ್ಯರ ಕಡೆಯವರಿಗೂ ಕಾಲೇಜಿನಲ್ಲಿ ಪ್ರವೇಶ ಸಿಗದಂತೆ ನೋಡಿಕೊಂಡಿರುವ ಇವರಿಬ್ಬರ ತೆರೆಮೆರೆ ಆಟ ಅಶೋಕ… ಹಾರನಹಳ್ಳಿ ಅವರ ಗಮನಕ್ಕೆ ಈವರೆಗೂ ಬಾರದಿರುವುದು ಸೋಜಿಗದ ವಿಷಯ. ಸರ್ಕಾರದ ಸ್ವಾಮ್ಯತೆಗೊಳಪಟ್ಟಿರುವ ಎಂ.ಸಿ.ಇ.ನಲ್ಲಿ ಈವರೆಗೂ ಕಾನೂನುಬದ್ದ ವಾಗಿ ಯಾರಿಗೂ ಬಡ್ತಿ ನೀಡಿಲ್ಲ . ಮನಸ್ಸಿಗೆ ಬಂದಂತೆ ಬಡ್ತಿ ನೀಡಲಾಗುತ್ತಿದ್ದರೂ, ಯಾರೊಬ್ಬರೂ ಚಕಾರ ಎತ್ತಿಲ್ಲ . ಪ್ರಶ್ನೆ ಮಾಡಿದರೆ ತಮಗೆ ಅಲ್ಲಿ ಜಾಗವಿಲ್ಲ ಎಂಬುದು ಅನುಭವಸ್ಥರ ಮಾತು. ಜ್ಯೇಷ್ಠತೆ ಆಧಾರದ ಮೇಲೆ ಪ್ರಾಂಶುಪಾಲರಾಗಿ ಮೋಹನ… ಕುಮಾರ… ಅವರನ್ನು ನೇಮಕ ಮಾಡದೆ ಜಯಂತ… ಅವರನ್ನು ತಾತ್ಕಾ ಲಿಕವಾಗಿ ಪ್ರಾಂಶುಪಾಲರನ್ನಾಗಿ ಕೂರಿಸುವ ‘ದರ್ದಾ’ದರೂ ಏನಿತ್ತು ಎಂಬುದು ಬಹು ತೇಕ ನಿರ್ದೇಶಕರ ಪ್ರಶ್ನೆಯಾಗಿದ್ದರೂ, ಅದಕ್ಕೆ ನ್ಯಾಯಬದ್ದ ಉತ್ತರ ಸಿಗುವುದಿಲ್ಲ ಎಂಬುದನ್ನು ಅರಿತು ಮಾತು ಬಂದರೂ ಮೂಕರಾಗಿದ್ದಾರೆ. ಅಷ್ಟಕ್ಕೂ ಎಂ.ಸಿ.ಇ. ಆಡಳಿತ ಮಂಡಳಿಗೆ ಅರ್ಥಾತ… ಅಶೋಕ… ಹಾರನಹಳ್ಳಿ ಅವರಿಗೆ ಬೇಕಿರು ವುದು ಇಂಥಾ ‘ಮೂಕರೇ’ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹೀಗೆ ತಾತ್ಕಾಲಿಕವಾಗಿ ತಾವು ಪ್ರಾಂಶುಪಾಲರ ಹುದ್ದೆಗೇರಿರುವುದು ಮುಂದೆ ತಮ್ಮ ಭವಿಷ್ಯದ ದೃಷ್ಟಿಯಿಂದ ತೊಡಕಾಗುತ್ತದೆ ಎಂಬುದರ ಬಗ್ಗೆ ಜಯಂತ… ಅವರು ಯೋಚನೆ ಮಾಡಲು ಹೋಗಿಲ್ಲವೋ ಅಥವಾ ಅವರಿಗೆ ಅಶೋಕ… ಹಾರನಹಳ್ಳಿ ಅವರು ಮತ್ತೇನು ಭರವಸೆ ನೀಡಿದ್ದಾರೋ? ಇರಲಿ, ಆದರೆ ಈ ವಿಷಯದಲ್ಲಂತೂ ಸಿಬ್ಬಂದಿ ವರ್ಗಕ್ಕೆ ತೀವ್ರ ಅಸಮಾಧಾನ ಇದ್ದೇ

ಇದೆ. ಪ್ರೊಫೆಸರ… ಹಾಗೂ ಸಹಾಯಕ ಪ್ರೊಫೆ ಸರ… ನೇಮಕದಲ್ಲೂ ತಾರತಮ್ಯ ಎಸಗ ಲಾಗಿದೆ. ಕೆಲವರು ಕಾಲೇಜಿನ ಸಂಬಳ ಪಡೆಯುತ್ತಾ ಹಾರನಹಳ್ಳಿಯಲ್ಲಿ ತೋಟ ನೋಡಿಕೊಂಡಿದ್ದಾರೆ.

No Comments to “ಈಚುನಾವಣೆಎಂ.ಸಿ.ಇ.ನಕುಟುಂಬಆಡಳಿತಕ್ಕೆಅಂತ್ಯಹಾಡುವುದೇ?”

add a comment.

Leave a Reply

You must be logged in to post a comment.