ÖÝÓÜ®Ü: PÜáÊæí±Üâ AÊÜÃÜ ÓÝ×ñÜ ÓÜÊÜìPÝÆPÜãR ±ÜÅÓÜá¤ñÜ Gí¨Üá ÖÝÓÜ®Ü ÊÜá×ÙÝ ±ÜÅ¥ÜÊÜá ¨Ühæì PÝÇæài®Ü ÓÜÖÜ ±ÝūݱÜPÜ vÝ>>w.ÎÅà¯ÊÝÓ… A¼±ÝÅ¿á ÊÜÂPܤ±ÜwԨݪÃæ. iÇÝÉ PܮܰvÜ ÓÝ×ñÜ ±ÜÄÐÜñ… ÊÜ£ Àáí¨Ü viagra sans ordonnance ÃÝÐÜóPÜË PÜáÊæí±Üâ g®Ü¾ ©®Ý aÜÃÜOæ AíWÜÊÝX que viagra recomiendan ÍܯÊÝÃÜ H±Üì wԨܪ "ËaÝÃÜ«ÝÃæ ÖÝWÜã PÜáÊæí±Üâ XàñæWÜÙÜá' WÝ¿á®Ü PÝ¿áìPÜÅÊÜá ÊÜ®Üá°...

hÝWÜ£àPÜÃÜ| ÊÜáñÜᤠTÝÓÜXà PÜÃÜ|©í¨Ü g®Ü ñæãí¨ÜÃæ WæãÙÜ WÝX¨ÝªÃæ. PÝËáìPÜ ËÃæãà— ¯à£Àáí¨Ü PÝËáìPÜÃÜá ÓÜíPÜÐÜrPæR ÔÆáQ¨ÝªÃæ. PܯÐÜr ÊæàñÜ®Ü ÓèƻܠPÜãvÜ AÊÜÄWæ ¨æãÃæ¿áᣤÆÉ™ Gí¨Üá «ÜÊæáìàÍ… ËÊÜÄÔ¨ÜÃÜá.

hÝWÜ£àPÜÃÜ| ÊÜáñÜᤠTÝÓÜXà PÜÃÜ|©í¨Ü g®Ü ñæãí¨ÜÃæ cialisfrance24.com WæãÙÜ WÝX¨ÝªÃæ.  PÝËáìPÜ ËÃæãà— ¯à£Àáí¨Ü PÝËáìPÜÃÜá ÓÜíPÜÐÜrPæR  ÔÆáQ¨ÝªÃæ. PܯÐÜr  ÊæàñÜ®Ü ÓèƻܠPÜãvÜ AÊÜÄWæ ¨æãÃæ¿áᣤÆÉ™ Gí¨Üá «ÜÊæáìàÍ… ËÊÜÄÔ¨ÜÃÜá.

ಘೋರ ಆರ್ಥಿಕ ಸಮಸ್ಯೆಯಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರ ಅಮೇರಿಕ

ಕಳೆದ ಕೆಲವು ತಿಂಗಳಲ್ಲಿ ಆಮೆರಿಕದ ಹಲವಾರು ದೊಡ್ಡ ಬ್ಯಾಂಕುಗಳು ಮುಳುಗಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ತನ್ನ ಆರ್ಥಿಕ ಶ್ರೇಷ್ಠತೆ ಹಾಗು ಸ್ಥಿರತೆಯಿಂದ, ಜಗತ್ತಿನಲ್ಲೆ ಅತೀ ಬಲಿಷ್ಠ ರಾಷ್ಟ್ರ ಎಂಬ ಖ್ಯಾತಿಯೇರಿದ ಆಮೆರಿಕಾದ ಈ ಸ್ಥಿತಿ ನೊಡಿ ಆಶ್ಚರ್ಯವಾಗಿದೆ. ಈ ಧಿಢೀರ್ ಕುಸಿತಕ್ಕೆ ಏನು ಕಾರಣ ಎಂದು ವಿಷೇಶಗ್ನರಲ್ಲಿ ಪ್ರಶ್ನೆಗಳು ಮೂಡುತ್ತಿರುವಾಗ, ಸಾಮಾನ್ಯ ಜನರೂ ಕೂಡ ಅದೇ ಪ್ರಶ್ನೆಗಳನ್ನು ಕೆಳುತ್ತಿದ್ದಾರೆ. ಈ ಜಠಿಲ ಸಮಸ್ಯೆಯ...

೭೫ ಕೋಟಿ ರೂ. ಆಲೂ ಪರಿಹಾರಕ್ಕೆ ದೇವೇಗೌಡ ಒತ್ತಡ

ಹಾಸನ : ನಷ್ಟಕ್ಕೊಳಗಾಗಿ ರುವ ಜಿಲ್ಲೆಯ ಆಲೂಗೆಡ್ಡೆ ರೈತ ರಿಗೆ ೭೫ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕೆಂದು ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ ಅವರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ನೆರೆ ಹಾಗೂ ಬೆಳೆ ಹಾನಿ ಸಮೀಕ್ಷೆ ನಡೆಸಿದ ದೇವೇ ಗೌಡರು, ಪ್ರವಾಸಿ ಮಂದಿರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡುತ್ತಾ, ರೋಗಕ್ಕೀಡಾಗಿರುವ ಆಲೂಗೆಡ್ಡೆ ಗಿಡ ವನ್ನು ಪ್ರದರ್ಶಿಸಿದರು. ಅಮೇರಿಕಾದಲ್ಲಿರುವ ಮುಖ್ಯ ಮಂತ್ರಿ ಸೆಪ್ಟೆಂಬರ್ ೬ರಂದು...

ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆ

ಹಾಸನ : ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ಹಿಂತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿ ಡಿ.ವೈ.ಎಫ್.ಐ. ಕಾರ್ಯಕರ್ತರು ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಿಲ್ದಾಣದಲ್ಲಿ ಜಮಾಯಿಸಿದ್ದ ಪ್ರತಿ ಭಟನಾಕಾರರು, ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಾ, ಬೆಲೆ ಏರಿಕೆ ಯನ್ನು ಖಂಡಿಸಿದರು. ಸಂಸ್ಥೆಯ ಸಂಪನ್ಮೂಲ ಕ್ರೋಢೀ ಕರಣಕ್ಕೆ ದರ ಹೆಚ್ಚಳ ಮಾಡಲಾಗಿದೆ ಎಂಬುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ಪ್ರತಿಭಟನಾಕಾರರು ಟೀಕಿಸಿ...

ನಡುರಾತ್ರಿಯಲ್ಲೇ ಪ್ರತಿಭಟನೆ

ಹಾಸನ : ಗುರುವಾರ ರಾತ್ರಿ ಸತತ ನಾಲ್ಕು ಗಂಟೆಗಳ ಸುರಿದ ಭಾರೀ ಮಳೆಯಿಂದ ಕುವೆಂಪುನಗರದ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿ ಉಂಟು ಮಾಡಿದ್ದು, ಇದರಿಂದ ರೊಚ್ಚಿಗೆದ್ದ ನಿವಾಸಿಗಳು ನಗರಸಭೆಯ ನಿರ್ಲಕ್ಷ್ಯತೆಯನ್ನು ಖಂಡಿಸಿ ನಡು ರಾತ್ರಿಯಲ್ಲೇ ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅರ್ಧ ರಾತ್ರಿಯಲ್ಲೂ ಜನರ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್, ಚರಂಡಿ...

ಕುಳುವಾರು ಪಟ್ಟಿಯಂತೆ ಅಂದಾಜಿಗೆ ಆದೇಶ

ಹಾಸನ : ನೆರೆ ಹಾಗೂ ಅಂಗ ಮಾರಿ ರೋಗಕ್ಕೆ ತುತ್ತಾದ ಆಲೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಸದಸ್ಯ ಹೆಚ್.ಡಿ.ದೇವೇ ಗೌಡ ಪ್ರವಾಸ ನಡೆಸಿ, ಹಾನಿ ವೀಕ್ಷಿಸಿದರು. ಹಳೆ ಆಲೂರು ಸಮೀಪದ ವಾಟೆ ಹೊಳೆ ನಾಲೆಯ ೩೬ನೇ ಕಿಲೋ ಮೀಟರ್ನಲ್ಲಿ ನಾಲೆ ಒಡೆದು ಕಿಗ್ಗಟ್ಟದ ಕೆರೆವರೆಗೂ ಸುಮಾರು ೫೦೦ ಎಕರೆ ಗದ್ದೆಗಳಿಗೆ ನೀರು ನುಗ್ಗಿ ಭತ್ತ ಹಾಗೂ ಶುಂಠಿ ಬೆಳೆಯನ್ನು ನಿರ್ನಾಮ ಮಾಡಿದ್ದು,...

೧೭೯೦ ತೆರೆದ ಬಾವಿ ಪುನಶ್ಚೇತನಕ್ಕೆ ೭೪ ಲಕ್ಷ ರೂ. ನೆರವು

ಹಾಸನ : ಕೇಂದ್ರ ಸರ್ಕಾರದ ನೂತನ ತೆರೆದ ಬಾವಿಗಳ ಕೃತಕ ಮರುಜಲ ಪೂರಣೆ ಯೋಜನೆಯ ಅಡಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ೧೭೯೦ ತೆರೆದ ಬಾವಿಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ೭೪ ಲಕ್ಷ ರೂ.ಗಳ ನೆರವು ನೀಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಪಂಚಾ ಯತ್ ಹಾಸನ ಮತ್ತು ನಬಾಡ್ರ್, ಹಾಸನ ಇವುಗಳ...

ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ರ್ಯಾಲಿ

ಹಾಸನ : ಅಂಗನವಾಡಿ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಗುರು ವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಎರಡು ದಿವಸ ನಡೆಯುವ ಅಂಗನ ವಾಡಿ ನೌಕರರ ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧ ಭಾಗ ಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು, ಬಸ್ ನಿಲ್ದಾಣ ಸನಿಹದ ಹೇಮಾವತಿ ಪ್ರತಿಮೆಯ ಮುಂದೆ ಜಮಾಯಿಸಿದರು. ಮಧ್ಯಾಹ್ನ ೧೨-೩೦ರ ವೇಳೆಯಲ್ಲಿ ಮೆರವಣಿಗೆ ಆರಂಭಿಸಿದರು. ಮೆರವಣಿ ಗೆಯು...

ಅಂಗನವಾಡಿ ನೌಕರರ ಅರಣ್ಯರೋದನ…

ಹಾಸನ : ನರಿ ಕೂಗು ಗಿರಿ ಮುಟ್ಟೀತೇ? ಎಂಬ ಗಾದೆ ಮಾತಿದೆ. ಅಕ್ಷರಶಃ ಈ ಗಾದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ವಯಿಸುತ್ತದೆ. ಕಾರ್ಯಕರ್ತೆಯರ ಅರಣ್ಯ ರೋದನ ಈವರೆವಿಗೂ ಆಡಳಿತ ನಡೆಸಿದ ರಾಜಕೀಯ ಪಕ್ಷಗಳ ಅದಕ್ಷತೆಯನ್ನು ತೋರ್ಪಡಿಸುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಇವೊತ್ತಿನದೇನಲ್ಲ. ಕಳೆದ ಮೂರು ದಶಕಗಳಿಂದಲೂ ತಮ್ಮ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ. ಬೀದಿಗಿಳಿದು ಚಳುವಳಿ ರೂಪಿಸಿದ್ದಾರೆ. ಸರ್ಕಾರಗಳ ಮೇಲೆ ಒತ್ತಡವನ್ನೂ ಹೇರಿದ್ದಾರೆ. ಸಮಸ್ಯೆಗೆ ಸ್ಪಂದಿಸದ...

ಮಣ್ಣಿನ ಗಣಪತಿ ತಯಾರಿಗೆ ಸಿದ್ಧ ಹಸ್ತರು..

ಅರಸೀಕೆರೆ: ಗಣೇಶ ಚತುರ್ಥಿ ಹಬ್ಬ ಬಂತೆಂದರೆ ಮಣ್ಣಿನ ಗಣಪತಿ ಮೂರ್ತಿಗೆ ಬೇಡಿಕೆ ಹೆಚ್ಚು. ಇಂತಹ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಗೆ ಹೆಸರು ವಾಸಿಯಾದವರು ಹಾರನಹಳ್ಳಿ ಗಣಪತಿ ಮಹಾ ದೇವ್. ಇವರು ಸುಮಾರು ೫ ದಶಕಗಳಿಂದಲೂ ಇವರ ತಂದೆ ಬಸಪ್ಪನವರು ಅರಸೀಕೆರೆ ಗಣಪತಿ ಹಾಗೂ ನಾಡಿನ ವಿವಿಧ ಭಾಗಗಳಿಗೂ ಇವರೇ ಗಣಪತಿ ನಿರ್ಮಿಸಿ ಕೊಡುತ್ತಿದ್ದರು. ಬಸಪ್ಪನವರ ನಿಧನದ ನಂತರ ಅವರ ಮಗ ಮಹಾದೇವ್ ಅವರು...

ಸುಧಾರಣೆಯ ನೆಪದಲ್ಲಿ ಖಾಸಗೀಕರಣ – ನಯ ವಂಚನೆಯ ಕ್ರಮ

ಹಾಸನ : ದೇಶದ ಆರ್ಥಿಕತೆ ಯನ್ನು ಸುಧಾರಿಸುವ ನೆಪದಿಂದ ಉದಾರೀಕತೆಯನ್ನು ಜಾರಿಗೊಳಿಸಿ ಸಾವಿರಾರು ರೈತರ ಆತ್ಮಹತ್ಯೆಗೆ ಕಾರಣವಾದಂತೆ ಅಂಗನವಾಡಿ ಗಳನ್ನು ಸುಧಾರಿಸುವ ನೆಪದಲ್ಲಿ ಖಾಸಗೀಕರಿಸಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐ.ಸಿ. ಡಿ.ಎಸ್.) ಹಾಳು ಮಾಡುವ ನಯವಂಚಕತನವನ್ನು ಜನ ಚಳವಳಿಗಳ ಮೂಲಕ ಬಯಲು ಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಕಾಂ. ಎಸ್. ವರಲಕ್ಷ್ಮಿ...

ಕನ್ನಡ ಭಾಷಾ ಬಳಕೆ ಕಾರ್ಯಾಗಾರ

ಹಾಸನ : ಕನ್ನಡ ಅಭಿವೃದ್ಧಿ ಪ್ರಾಧಿ ಕಾರ, ಹಾಸನ ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ನೌಕರರ ಸಂಘ, ಜಿಲ್ಲಾ ವಕೀಲರ ಸಂಘ ಹಾಗು ಹಾಸನ ಜಿಲ್ಲಾ ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತಾ ಶ್ರಯದಲ್ಲಿ ಗುರುವಾರ ನಗರದ ಕಲಾಭವನ ದಲ್ಲಿ ಕನ್ನಡ ಭಾಷಾ ಬಳಕೆ ಕಾರ್ಯಾಗಾರ ಏರ್ಪಡಿಸ ಲಾಗಿತ್ತು. ಜಿಲ್ಲಾಧಿಕಾರಿ ನವೀರ್ನರಾಜ್ ಸಿಂಗ್ ಕಾರ್ಯಾಗಾರವನ್ನು ಜ್ಯೋತಿ...

ಕನ್ನಡ ಭಾಷಾ ಬಳಕೆ ಕಾರ್ಯಾಗಾರ

ಹಾಸನ : ಕನ್ನಡ ಅಭಿವೃದ್ಧಿ ಪ್ರಾಧಿ ಕಾರ, ಹಾಸನ ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ನೌಕರರ ಸಂಘ, ಜಿಲ್ಲಾ ವಕೀಲರ ಸಂಘ ಹಾಗು ಹಾಸನ ಜಿಲ್ಲಾ ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತಾ ಶ್ರಯದಲ್ಲಿ ಗುರುವಾರ ನಗರದ ಕಲಾಭವನ ದಲ್ಲಿ ಕನ್ನಡ ಭಾಷಾ ಬಳಕೆ ಕಾರ್ಯಾಗಾರ ಏರ್ಪಡಿಸ ಲಾಗಿತ್ತು. ಜಿಲ್ಲಾಧಿಕಾರಿ ನವೀರ್ನರಾಜ್ ಸಿಂಗ್ ಕಾರ್ಯಾಗಾರವನ್ನು ಜ್ಯೋತಿ...

ಸಕಲೇಶಪುರದಲ್ಲಿ ಕೋಮು ಸೌಹಾರ್ದ ಸಭೆ

ಸಕಲೇಶಪುರ : ಕೋಮು ಸೌಹಾರ್ದ ಸಭೆಯಲ್ಲಿ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಪಾಕಿಸ್ತಾನ, ಇಸ್ಲಾಂ ಹಾಗೂ ಭಗವತ್ ಧ್ವಜಗಳನ್ನು ಪ್ರದರ್ಶಿಸಿ ದರೆ, ಮತ್ತೊಬ್ಬ ಶಾಸಕ ಬಿ.ಬಿ. ಶಿವಪ್ಪ ಹಿಂದಿನ ಘಟನೆಯೊಂದನ್ನು ಬಿಚ್ಚಿ ತನ್ನದೇ ಆದ ರೀತಿಯಲ್ಲಿ ಸೌಹಾರ್ದ ಸಭೆಗೆ ಮೆರುಗು ನೀಡಿದರು. ತಮ್ಮ ಭಾಷಣದ ಮಧ್ಯೆ ಪಾಕಿಸ್ತಾನದ ಧ್ವಜವನ್ನು ತೆಗೆದು ಪ್ರದರ್ಶಿಸಿ ಪೊಲೀಸರು, ಸಾರ್ವ ಜನಿಕರು ಮತ್ತು ಸಂಘ-ಸಂಸ್ಥೆ ಯವರು ಮೊದಲು ಧ್ವಜಗಳನ್ನು...

ಶಿಕ್ಷಣ ಕ್ಷೇತ್ರದ ಸಮಸ್ಯೆ ಹತ್ತು ದಿವಸ ಗಡುವು

ಹಾಸನ : ಶಿಕ್ಷಣ ಕ್ಷೇತ್ರದ ಸಮಸ್ಯೆಗೆ ಸಂಬಂಧಿಸಿದಂತೆ ಹತ್ತು ದಿನದಲ್ಲಿ ಸಭೆ ಕರೆಯದಿದ್ದರೆ ಪ್ರಾಥಮಿಕ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವರ ಕಛೇರಿಯ ಮುಂದೆ ಧರಣಿ ನಡೆಸಲಾಗುವುದು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಎಚ್ಚರಿಕೆ ನೀಡಿದರು. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರ, ವಿಧಾನ ಪರಿಷತ್ ಸದಸ್ಯರು ನೀಡಿ ರುವ ೩೨ ಸಮಸ್ಯೆಗಳ ಪಟ್ಟಿಗೆ ಬಿ.ಜೆ.ಪಿ. ಶಾಸಕರು...

ಮಳೆಯ ಆರ್ಭಟಕ್ಕೆ ೨ ಬಲಿ: ಕೋಟ್ಯಾಂತರ ರೂ. ಬೆಳೆ ನಷ್ಟ

ಹಾಸನ : ನಗರವೂ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ಇಬ್ಬರು ವ್ಯಕ್ತಿ ಗಳು ಬಲಿಯಾಗಿದ್ದಾರೆ. ೬ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಹತ್ತಕ್ಕೂ ಹೆಚ್ಚು ಕೆರೆಗಳು ಒಡೆದಿವೆ. ಹಲವು ಗ್ರಾಮ ಗಳು ಸಂಪರ್ಕವನ್ನು ಕಡಿದು ಕೊಂಡಿವೆ. ನೂರಾರು ಎಕರೆ ಜಮೀನು ಗಳು ಜಲಾವೃತಗೊಂಡಿವೆ. ಮಳೆಯ ರುದ್ರನರ್ತನಕ್ಕೆ ಜನ ಜೀವನ ಬೆಚ್ಚಿ ಬಿದ್ದಿದೆ. ಜನ-ಜಾನು ವಾರುಗಳಿಗೆ ಪ್ರಾಣಹಾನಿಯಾಗಿದೆ. ಕೋಟ್ಯಾಂತರ ರೂ. ಬೆಳೆ...

ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ

ಹಾಸನ : ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆ.ಡಿ.ಎಸ್.ನ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದರು. ಲೋಕಸಭೆ ಅಧಿವೇಶನವು ಸೆ.೧೭ರಿಂದ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಮುಂದಿನ ವರ್ಷ ಫೆಬ್ರವರಿ ಅಥವಾ ಮಾಚ್ರ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಬುಧವಾರ ಪತ್ರಕರ್ತರಿಗೆ ತಿಳಿಸಿದರು. ತೃತೀಯ ರಂಗವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖಂಡರು ಈಗಾಗಲೇ ಚಿಂತನೆ ನಡೆಸಿದ್ದಾರೆ. ಕೇಂದ್ರದ ವೈಫಲ್ಯಗಳನ್ನು ಜನರ...

ಅಕ್ರಮ ಮರಳು ಸಾಗಣೆ ಲಾರಿ ವಶ

ಹಾಸನ : ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಲಾರಿ ಯೊಂದನ್ನು ಆಲೂರು ತಹಸೀಲ್ದಾರ್ ಮುಟ್ಟುಗೋಲು ಹಾಕಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಮರಳು ತುಂಬಿಕೊಂಡು ಹೋಗುತ್ತಿದ್ದ ಕೆ.ಎ.೦೨-ಎ.೭೩೫೧ ನಂಬರಿನ ಲಾರಿಯನ್ನು ತಹಸೀಲ್ದಾರ್ ಪ್ರಸಾದ್ಅವರು ಮಂಚೇನಹಳ್ಳಿ ಬಳಿ ತಡೆದು ಪರಿಶೀಲಿಸಿದಾಗ, ಯಾವುದೇ ಪರವಾನಗಿ ಹಾಗೂ ದಾಖಲಾತಿಗಳು ಇರಲಿಲ್ಲ. ಲಾರಿಯನ್ನು ವಶಕ್ಕೆ ತೆಗೆದು ಕೊಂಡ ಅವರು, ಚಾಲಕ ಮುಕುಂದೂರು ಹೊಸಳ್ಳಿಯ ದಿನೇಶ್ ಎಂಬಾತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದರು.

ಸ್ಥಳ ಪರಿಶೀಲಿಸಿದ ಸಚಿವ

ಹಾಸನ : ಪಶು ವೈದ್ಯಕೀಯ ಕಾಲೇಜು ನಿರ್ಮಿಸುವ ಸಂಬಂಧ ಬುಧವಾರ ರಾಜ್ಯದ ಪಶು ಸಂಗೋಪನಾ ಸಚಿವ ರೇವು ನಾಯಕ ಬೆಳಮಗಿ ಸ್ಥಳ ಪರಿಶೀಲನೆ ನಡೆಸಿದರು. ಮಧ್ಯಾಹ್ನ ೩ ಗಂಟೆಯ ವೇಳೆಯಲ್ಲಿ ಚಿಕ್ಕಹೊನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾಲೇಜು ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಲಾಗಿರುವ ಜಮೀನನ್ನು ಖುದ್ದುಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಭೂ ಸ್ವಾಧಿ ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಂತರ ಸಚಿವರು ಕೋರವಂಗಲಕ್ಕೆ...

ಅಮೃತ ಯೋಜನೆ : ಚಾಲನೆಗೆ ಚಿಂತನೆ

ಹಾಸನ : ರೈತಾಪಿ ವರ್ಗದ ಹೈನುಗಾರಿಕೆಗೆ ಉತ್ತೇಜನ ನೀಡುವ ಸಂಬಂಧ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಅಮೃತ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ಬಜೆಟ್ನಲ್ಲಿ ಅಮೃತ ಯೋಜನೆಗೆ ಚಾಲ್ತಿ ಒದಗಿಸಲಾಗುವುದು. ಇದಕ್ಕಾಗಿಹಣ ಕಾಯ್ದಿರಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ಬುಧವಾರ ತಿಳಿಸಿದರು. ಕೆ.ಎಂ.ಎಫ್.ಅನ್ನು ರಾಷ್ಟ್ರೀಕರಣ ಮಾಡಬೇಕೆಂಬ ಆಲೋಚನೆ ಹೊಂದಿಲ್ಲ. ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ...

ಭಾರತಕ್ಕೆ ಸರಣಿ ಜಯ

ಕೊಲಂಬೊ : ಶ್ರೀಲಂಕಾ ವಿರುದ್ಧ ೪ನೇ ಏಕದಿನ ಕ್ರಿಕೆಟ್ ಪಂದ್ಯವನ್ನು ೪೬ ರನ್ಗಳಿಂದ ಜಯಿಸುವ ಮೂಲಕ ಭಾರತವು ಲಂಕಾ ನೆಲದಲ್ಲಿ ಮೊಟ್ಟ ಮೊದಲ ಸರಣಿ ಗೆಲುವು ಪಡೆದದೆ. ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತವು ೩-೧ ಮುನ್ನಡೆ ಸಾಧಿಸಿದೆ. ಇಲ್ಲಿನ ಪ್ರೇಮದಾಸ ಸ್ಟೇಡಿಯಂ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಧೋನಿ ಪಡೆದ, ಸುರೇಶ ರೈನಾ (೭೬), ಮಹೇಂದ್ರ ಸಿಂಗ್ ಧೋನಿ (೭೧)...

ಅಂಗನವಾಡಿ ನೌಕರರ ಸಭೆ

ಹಾಸನ : ಅಂಗನವಾಡಿ ಕೇಂದ್ರ ಗಳ ಖಾಸಗೀಕರಣ ವಿರೋಧಿಸಿ ಖಾಯಮಾತಿ, ಪೆನ್ಷನ್ಗಾಗಿ ಒತ್ತಾ ಯಿಸಿ ಅಂಗನವಾಡಿ ನೌಕರರ ಸಮ್ಮೇ ಳನದ ಬಹಿರಂಗ ಸಭೆಯು ನಗರದ ವಸ್ತು ಪ್ರದರ್ಶನ ಮೈದಾನದ ಹರ್ಕಿಶನ್ ಸುರ್ಜಿತ್ ವೇದಿಕೆಯಲ್ಲಿ ಆ.೨೮ರಂದು ನಡೆಯಲಿದೆ. ಕರ್ನಾಟಕ ರಾಜ್ಯ ಅಂಗನವಾಡಿ ನೌರ್ಕರ ಸಂಘದ ಪ್ರಧಾನ ಕಾರ್ಯ ದರ್ಶಿ ವರಲಕ್ಷ್ಮಿ ಉದ್ಘಾಟನೆ ನೆರ ವೇರಿಸಲಿದ್ದು, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಂಚಾಲಕ ವೈ. ಆರ್.ಮಂಜಮ್ಮ...

ನಾಗರಿಕ ಸೇವಾ ಕಾಯ್ದೆಗೆ ತಿದ್ದುಪಡಿ ಲೋಕಾಯುಕ್ತಕ್ಕೆ ಅಮಾನತ್ತು ಅಧಿಕಾರ

ಬೆಂಗಳೂರು : ಕರ್ನಾಟಕ ನಾಗ ರಿಕ ಸೇವಾ ಕಾಯ್ದೆಗೆ ಸರ್ಕಾರ ತಿದ್ದು ಪಡಿ ತಂದಿದ್ದು, ಅಕ್ರಮ ಆಸ್ತಿ ಹೊಂದಿದ ಭ್ರಷ್ಟಾಚಾರ ಅಧಿಕಾರಿ ಗಳನ್ನು ಅಮಾನತ್ತಿನಲ್ಲಿಡುವ ಅಧಿ ಕಾರವನ್ನು ಲೋಕಾಯುಕ್ತಕ್ಕೆ ನೀಡ ಲಾಗಿದೆ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ದಲ್ಲಿ ಹಣ ಸಮೇತ ಸಿಕ್ಕಿ ಬೀಳುವ ಅಧಿ ಕಾರಿಗಳನ್ನು ಅಮಾನತ್ತು ಗೊಳಿಸುವ ಅಧಿಕಾರ ಮಾತ್ರ ಲೋಕಾಯುಕ್ತಕ್ಕೆ ಇತ್ತು. ಆದರೆ ಅಕ್ರಮ ಆಸ್ತಿ ಹೊಂದಿದ ಭ್ರಷ್ಟ ಅಧಿಕಾರಿಗಳ...

ಶಿಕ್ಷಕನ ವಿರುದ್ಧ ಅತ್ಯಾಚಾರ ಆರೋಪ

ಹೊಳೆನರಸೀಪುರ : ೬ನೇ ತರಗತಿ ವಿದ್ಯಾರ್ಥಿ ಮೇಲೆ ಆಕೆ ಶಿಕ್ಷಕರೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತು ವಿವರಣೆ ನೀಡುವಂತೆ ತಾಲ್ಲೂಕು ಶಿಕ್ಷಣಾಧಿಕಾರಿಗಳು ಆರೋಪಿ ಶಿಕ್ಷಕ ನಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಇದು ಹುಸಿ ಆರೋಪ ವಾಗಿದ್ದು, ಶಾಲಾ ಶಿಕ್ಷಕರ ನಡುವಿನ ಹಗೆತನ ಈ ಪ್ರಕರಣ ಸೃಷ್ಟಿಗೆ ಕಾರಣ ಎನ್ನಲಾಗಿದೆ. ಚಿಕ್ಕಬ್ಯಾಗತವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕ ಕೆ.ಪಿ.ಕುಮಾರ್...

ಅರಕಲಗೂಡು : ಅಪರಿಚಿತ ವ್ಯಕ್ತಿ ಶವ ಪತ್ತೆ

ಅರಕಲಗೂಡು : ಇಲ್ಲಿನ ಕಣಿವೆ ಬಸಪ್ಪ ಅರಣ್ಯದ ಬಳಿ ಇರುವ ಬಾವಿಯೊಂದರಲ್ಲಿ ಅಪರಿಚಿತ ಗಂಡಸಿಯ ಶವ ಪತ್ತೆಯಾಗಿದ್ದು , ಕೊಲೆ ಶಂಕೆ ವ್ಯಕ್ತವಾಗಿದೆ. ಸುಮಾರು ೪೦ ವರ್ಷ ವಯಸ್ಸಿನ ಮೃತ ವ್ಯಕ್ತಿ, ಖಾಕಿ ಫ್ಯಾಂಟ್ ಧರಿಸಿದ್ದು, ಬಿಳಿ-ನೀಲಿಗೆರ ಶರ್ಟು ತೊಟ್ಟಿದ್ದಾರೆ. ಶವದ ಸೊಂಟದಲ್ಲಿ ಸುತ್ತಲಿ ದಾರದಿಂದ ಬಿಗಿಯಲ್ಪಟ್ಟಿರುವುದು ಕಂಡು ಬಂದಿದೆ. ೩ ತಿಂಗಳ ಹಿಂದೆ ಶವವಾಗಿರುವ ಲಕ್ಷಣ ಇದ್ದು, ವಿರೂಪಗೊಂಡಿದೆ. ಅರಕಲಗೂಡು ಠಾಣೆ...

ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ : ಬೆಳಮಗಿ

ಹಾಸನ : ನಗರದಲ್ಲಿ ಪಶು ವೈದ್ಯಕೀಯ ಮಹಾ ಕಾಲೇಜು ಕಟ್ಟಡ ನಿರ್ಮಾಣ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಿ, ನಂತರ ನಿರ್ಣಯ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ತಿಳಿಸಿದರು. ಸ್ಥಳ ಪರಿಶೀಲನೆ ನಡೆಸಲಾಗು ತ್ತಿದ್ದು, ಚಿಕ್ಕ ಹೊನ್ನೇನಹಳ್ಳಿ ಗ್ರಾಮ ಸ್ಥರು ಪ್ರತಿ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ಸ್ಥಳ ಆಯ್ಕೆ ಮಾಡಿಕೊಳ್ಳ ಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು...

ನಗರದಲ್ಲಿ ದಿಢೀರ್ ಮಳೆ

ಹಾಸನ : ದಿನಪೂರ್ತಿ ಧಗೆ ವಾತಾ ವರಣವಿತ್ತಾದರೂ ರಾತ್ರಿ ೮ ಗಂಟೆ ಸಮಯದಲ್ಲಿ ದಿಢೀರನೇ ಮಳೆ ಆರಂಭಗೊಂಡು ಸತತ ಮೂರು ಗಂಟೆಗಳ ಕಾಲ ಧೋ ಎಂದು ಸುರಿ ಯಿತಲ್ಲದೆ, ನಗರದ ತಗ್ಗು ಪ್ರದೇಶ ಗಳಿಗೆ ನೀರು ನುಗ್ಗಿ ನಾಗರಿಕರನ್ನು ಪರದಾಡುವಂತೆ ಮಾಡಿತು. ನಗರದ ಸಾರಿಗೆ ಬಸ್ ನಿಲ್ದಾಣ ದಲ್ಲಿ ಮಳೆ ನೀರು ನುಗ್ಗಿ ಕೆರೆಯಂತೆ ನಿಂತಿದ್ದರಿಂದ ಪ್ರಯಾಣಿಕರು ಕಷ್ಟಪಡ ಬೇಕಾಯಿತು. ಕುವೆಂಪುನಗರ, ಹೊಯ್ಸಳ...

ತಾ।ಮಟ್ಟದ ಯುವ ಸಮ್ಮೇಳನ ತರಬೇತಿ ಕಾರ್ಯಾಗಾರ

ಹಾಸನ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತ್ ಆಶ್ರಯದಲ್ಲಿ ಆ-೩೦ ರಂದು ಬೆಳಿಗ್ಗೆ ೧೧ ಗಂಟೆಗೆ ಕಂಚು ಮಾರನಹಳ್ಳಿ ಗ್ರಾಮದ ರಂಗನಾಥ ಪ್ರೌಢಶಾಲಾ ಆವರಣ ದಲ್ಲಿ ತಾಲ್ಲೂಕು ಮಟ್ಟದ ಯುವಸಮ್ಮೇಳನ ತರಬೇತಿ ಹಾಗೂ ಕಾರ್ಯಾಗಾರ ಸಂಘಟಿಸಲಾಗಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಯಾಗಿರುವ ಮತ್ತು ನವೀಕರಣ ಹೊಂದಿರುವ ತಾಲ್ಲೂಕಿನ ಯುವಕ-ಯುವತಿ ಮಂಡಳಿಗಳ ೧೫ ರಿಂದ...

ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ

ಹಾಸನ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಸಿ.ಎಸ್.ಐ. ಮಿಷನ್ ಆಸ್ಪತ್ರೆ, ದಿ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇವರ ಸಂಯುಕ್ತಾಶ್ರಯ ದಲ್ಲಿ ಆ-೩೧ ರಂದು ಬೆಳಿಗ್ಗೆ ೯ ಗಂಟೆಗೆ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಸಿ.ಎಸ್.ಐ. ಮಿಷನ್ ಆಸ್ಪತ್ರೆಯ ನುರಿತ ನೇತ್ರ...

ಹೈನುಗಾರಿಕೆಯಿಂದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಿ

ಉಚ್ಚಂಗಿ: ಕಾವೇರಿ ಗ್ರಾಮೀಣ ಬ್ಯಾಂಕ್ನಿಂದ ಮಲೆನಾಡಿನಲ್ಲಿ ಹೈನುಗಾರಿಕೆಗೆ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತಿದ್ದು, ಇದರ ಉಪಯೋಗ ವನ್ನು ಪಡೆದುಕೊಂಡು ನಿರಂತರ ಆದಾಯದ ಜೊತೆಗೆ ತಮ್ಮ ಜೀವನ ಮಟ್ಟವನ್ನು ಸುಧಾರಣೆ ಮಾಡಿಕೊಳ್ಳ ಬೇಕು ಎಂದು ಕಾವೇರಿ ಗ್ರಾಮೀಣ ಬ್ಯಾಂಕ್ನ ವಲಯ ವ್ಯವಸ್ಥಾಪಕ ಉದಯ ಕುಮಾರ್ ಸಲಹೆ ನೀಡಿ ದರು. ಅವರು ಇತ್ತೀಚೆಗೆ ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ನಾಗ ದೇವತಾ ರೈತಕೂಟ ಇವರ ಸಂಯುಕ್ತಾ...

ಜಿಮ್ ನಿರ್ವಹಣೆಗೆ ಪ್ರಸ್ತಾವನೆ

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಹೊಸದಾಗಿ ಮಲ್ಟಿ ಜಿಮ್ ಹಾಗೂ ಇತರೆ ಸುಧಾರಿತ ಉಪಕರಣಗಳನ್ನು ಅಳವಡಿಸಲಾಗಿದ್ದು, ಇದನ್ನು ದೈನಂದಿನ ನಿರ್ವಹಣೆ ಮಾಡಲು ಹಾಗೂ ಸುಸ್ಥಿತಿ ಯಲ್ಲಿ ಕಾಪಾಡಲು ಆಸಕ್ತಿ ಇರುವ ವ್ಯಕ್ತಿಗಳು, ಸಂಸ್ಥೆಗಳು ತಮ್ಮ ಪ್ರಸ್ತಾವನೆ ಯೊಂದಿಗೆ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಇವರನ್ನು ಸಂಜೆ ೪ರಿಂದ ಸಂಪರ್ಕಿ ಸಲು ಕೋರಲಾಗಿದೆ. ಹೆಚ್ಚಿನ ವಿವರ ಗಳಿಗೆ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಇವರನ್ನು...

ಪ್ರತಿಭಾ ಕಾರಂಜಿ: ಮಾನಸಿಕ ಬೆಳವಣಿಗೆ ವೃದ್ಧಿ

ಬೇಲೂರು: ಮಕ್ಕಳಲ್ಲಿ ಅಡಗಿರುವ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಹೊರಹೊಮ್ಮಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉತ್ತಮ ವೇದಿಕೆ ಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಅಣ್ಣಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲ್ಲೂಕು ಕಡೇಗರ್ಜೆ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಬಿಕ್ಕೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಮಟ್ಟದಲ್ಲಿ ಪ್ರತಿಭಾ...

ಕೃಷಿ ಪ್ರಶಸ್ತಿಗೆ ಆಹ್ವಾನ

ಹಾಸನ : ಅಧಿಕ ಇಳುವರಿಗೆ ನೀಡ ಲಾಗುವ ಕೃಷಿ ಪ್ರಶಸ್ತಿಗೆ ರೈತರಿಂದ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆ-೩೧ ಕೊನೆ ದಿನ. ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಸಲಿದ್ದು, ಬೆಳೆ ಯೊಂದರಲ್ಲಿ ಹೆಚ್ಚು ಇಳುವರಿ ಪಡೆದ ವರಿಗೆ ಬಹುಮಾನ ನೀಡಲಾಗುವುದು. ರಾಜ್ಯಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ ೩೦೦ ರೂ, ಪರಿಶಿಷ್ಟ ರೈತರಿಗೆ ೭೫ ರೂ,ಜಿಲ್ಲಾ ಮಟ್ಟದ ಸ್ಪರ್ಧೆಗೆ...

ಬೆಳೆ ನಷ್ಟ : ವಿಮಾ ಕಂಪನಿ ಗಮನಕ್ಕೆ ತರಲು ಸೂಚನೆ

ಹಾಸನ : ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ೨೦೦೮ರ ಮುಂಗಾರು ಹಂಗಾಮಿನಲ್ಲಿ ೧೬ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸ ಲಾಗಿದೆ. ಈ ಬೆಳೆಗಳು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಪ್ರವಾಹ, ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಚಂಡಮಾರುತ ಇವುಗಳಿಂದ ನಾಶವಾದಲ್ಲಿ ವೈಯಕ್ತಿಕ ನಷ್ಟ ನಿರ್ಧರಣೆ ಗಾಗಿ ಒಳಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ...

ಹೊಸ ಅವಕಾಶಗಳ ಸಂತಸದಲ್ಲಿ ಸಂಜನ

ನಾನು ತಮಾಷೆಗೆಂದು ಅಭಿನಯಿಸಲು ಬಂದವಳು. ಆದರೆ ಈಗ ಎಲ್ಲವೂ ಅರ್ಥ ಆಗುತ್ತಿದೆ. ನಟನೆಯನ್ನು ಸೀರಿಯಸ್ ಆಗಿ ಪರಿಗಣಿಸಿದ್ದೀನಿ, ಇಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತರಿದ್ದಾರೆ. ಸ್ಪರ್ಧೆಯಿದೆ, ಹೊಸತನವಿದೆ ಇದನ್ನೆಲ್ಲ ಎದುರಿಸಿ ಉಳಿಯೋದು ಸುಲಭಸಾಧ್ಯ ಏನಲ್ಲ ಎಂಬುದು ತಿಳಿದೆಫಫಂಜನ, ಗಂಡ ಹೆಂಡತಿ ಚಿತ್ರದ ಮೂಲಕಸ ಕನ್ನಡ ಚಿತ್ರ ರಸಿಕರಿಗೆ ಪರಿಚಯವಾದ ಅಭಿನೇತ್ರಿ. ತನ್ನ ೧೬-೧೭ ನೇ ವಯಸ್ಸಿಗೆ ಬಿಂದಾಸ್ ಬೆಡಗಿಯಾಗಿ, ಸೆಕ್ಸಿಯಾಗಿ ನಟಿಸುವ ಮೂಲಕ ಹದಿಹರೆಯದ...

ಸ್ನೇಹ ಗೀತೆಯಲ್ಲಿ ನ್ಯಾನೋ ಪುರಾಣ

ಇದು ನ್ಯಾನೋ ಕಾರುಗಳ ಯುಗ, ನ್ಯಾನೋ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಎರಡನ್ನು ಬಳಸಿಕೊಂಡು ಚಿತ್ರ ಮೊದಲು ಹೊರಟವರು ನಿರ್ಮಾಪಕ ಆರ್.ಆರ್. ಬಾಬು. ಸ್ನೇಹಗೀತೆ ಶೀರ್ಷಿಕೆಯ ಚಿತ್ರದಲ್ಲಿ ಆಕ್ಷನ್, ರೋಮಾನ್್ಸ ಎಲ್ಲವೂ ಇರುತ್ತದಂತೆ. ಆರ್.ಆರ್. ಬಾಬು ಈಗಾಗಲೇ ಎರಡು ತೆಲುಗು ಚಿತ್ರಗಳನ್ನು ನಿರ್ದೇಶಿಸಿದವರು ಮತ್ತು ಪ್ರತಿಷ್ಟಿತ ನಂದಿ ಪ್ರಶಸ್ತಿ ಪುರಸ್ಕೃತರು ಕನ್ನಡದಲ್ಲಿ ಸ್ನೇಹಗೀತೆ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಚಿತ್ರದ ಕಥೆ ಏನಪ್ಪಾ ಅಂದ್ರೆ.ಸ್ನೇಹ...

ರಜನಿ ಪುತ್ರಿಯ ಕಥಾನಾಯಕುಡು

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಹೆಸರಿನಲ್ಲೇ ಮಾಯಾಮೋಡಿ ಇದೆ. ಅಷ್ಟೇ ಅಲ್ಲ ಅವರ ಹೆಸರು ಯಾರೇ ಇಟ್ಟುಕೊಂಡರು ಅಲ್ಲೊಂದು ಗೌರವ ಸಿಕ್ಕೆ ಸಿಗುತ್ತೆ. ಇದೆಲ್ಲ ಯಾಕ್ ಹೇಳ್ತಿದೀನಂದ್ರೆ ರಜನೀಕಾಂತ್ರ ಪುತ್ರಿ ಸೌಂದರ್ಯ ರಜನೀಕಾಂತ್ ತಾವು ನಿರ್ದೇಶಿಸುತ್ತಿರುವ ಘಿಫಕಥಾನಾಯಕುಡುಫ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ತೆರಳಿದೆಡೆಯಲ್ಲೆಲ್ಲ ಭಾರೀ ಗೌರವಾದರಗಳೇ ಸಮರ್ಪಣೆಯಾಗುತ್ತಿದೆ ಯಂತೆ. ಕಂಪ್ಯೂಟರ್ ಚಾಲಿತ ಇಮೇಜಸ್ ಸುಡಿಯೋ ಓಚರ್ ಸಂಸ್ಥೆಯನ್ನು ನಿರ್ವಹಿಸುವ ಸೌಂದರ್ಯ ತಮ್ಮ...

ಶೆರ್ಲಿನ್ಳ ದದ್ರ್ಫಏನೂಂತಾ ?

ಬಾಲಿವುಡ್ ಹಾಟ್ ಬಾಂಬ್ ಶೆರ್ಲಿನ್ ಛೋಪ್ರಾಳ ದದ್ರ್-ಇ-ಶೆರ್ಲಿನ್ ಎಂಬ ವೀಡಿಯೋ ಆಲ್ಬಂ ಬಿಡುಗಡೆಯಾಗಿದ್ದು ಪಡ್ಡೆಗಳ ಎದೆಯಲ್ಲಿ ಸಂಚಲನ ಹುಟ್ಟಿಹಾಕಿದೆ. ಜೊತೆಯಲ್ಲೆ ಅನಗತ್ಯ ವಿವಾದಕ್ಕೂ ದಾರಿಮಾಡಿದೆ. ವಿಷ್ಯ ಏನಪಾ ಅಂದ್ರೆ, ಬಾಲಿವುಡ್ನ ಕನಸಿನ ಕನ್ಯೆ ಎಂದೇ ಹೆಸರಾಗಿರುವ ಹೇಮಾಮಾಲಿನಿಯವರಿಗೆ ಈ ವೀಡಿಯೋ ಆಲ್ಬಂನ್ನು ಅರ್ಪಿಸಲಾಗಿದೆ. ಆದರೆ ಈ ವಿಚಾರ ಹೇಮಾಮಾಲಿನಿ ಗಮನಕ್ಕೆ ಬಂದಂತಿಲ್ಲ . ಬೆತ್ತಲಾಗಿ, ಬಿಂದಾಸ್ ಆಗಿ ಮೈಕುಣಿಸಿರುವ ಶೆರ್ಲಿನ್ ಸದರಿ ಆಲ್ಬಂನ್ನು...

ಸರ್ವ ಶಿಕ್ಷಣ ಅಭಿಯಾನಕ್ಕೆ ೨೩.೧೧ ಕೋ. ರೂ.

ಹಾಸನ : ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿ ಸರ್ವ ಶಿಕ್ಷ ಅಭಿಯಾನ ಯೋಜನೆಯಡಿ ವಿವಿಧ ಕಾರ್ಯ ಕ್ರಮ ಅನುಷ್ಠಾನಗೊಳಿಸಲು ಒಟ್ಟು ೨೩.೧೧ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಅನುಷ್ಟಾನ ಸಮಿತಿ ಸಭೆಯಲ್ಲಿ ಯೋಜನೆ ಪರಿಶೀಲಿಸಿ ಜಿಲ್ಲೆಯಲ್ಲಿ ವಿವಿಧ...