ರಾಮನಾಥಪುರ : ಸೆ. ೧೦ ರಿಂದ ತಂಬಾಕು ಹರಾಜು ಆರಂಭ

ರಾಮನಾಥಪುರ : ಇಲ್ಲಿಯ ತಂಬಾಕು ಹರಾಜು ಮಾರುಕಟ್ಟೆ ಯ ಪ್ಲಾಟ್ ಫಾರಂ ೭ರ ಹಾಗೂ ೬೩ ರಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಸೆ. ೧೦ ರಂದು ಬೆಳಿಗ್ಗೆ ೮ ಗಂಟೆಗೆ ಪ್ರಾರಂಭವಾಗಲಿದೆ ಎಂದು ತಂಬಾಕು ಮಂಡಳಿ ಅಧೀಕ್ಷಕ ಎ.ಎನ್. ಶಿವರುದ್ರಯ್ಯ ತಿಳಿಸಿದರು. ಈ ಪ್ಲಾಟ್ ಫಾರಂಗಳ ವ್ಯಾಪ್ತಿ ಯಲ್ಲಿರುವ ತಂಬಾಕು ಬೆಳೆಗಾರರು ಹರಾಜು ಪ್ರಾರಂಭ ವಾಗುವ ದಿನಾಂಕದವರೆಗೂ ಯಾವುದೇ ತರಹದ ದಳ್ಳಾಳಿಗಳಿಗೆ ತಂಬಾಕನ್ನು...

ಜನತೆಯ ಆರೋಗ್ಯ ದೇಶದ ಆಸ್ತಿ : ಲಿಂಬಾವಳಿ

ಹಾಸನ : ಗ್ರಾಮೀಣ ಹಾಗೂ ನಗರ ಪ್ರದೇಶದ ಜನತೆ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡರೆ ಅದೇ ದೇಶದ ಆಸ್ತಿ ಎಂದು ರಾಜ್ಯ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. ನಗರದ ಪೆನ್ಷನ್ ಮೊಹಲ್ಲಾ ದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಪ್ರಾರಂಭಿಸಿರುವ ನಗರ ಆರೋಗ್ಯ ಕೇಂದ್ರವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳು...

ಕೃತಕ ಮರುಜಲ ಪೂರಣೆ ಯೋಜನೆ ಕಾರ್ಯಾಗಾರ

ಹಾಸನ : ಜಿಲ್ಲಾ ಪಂಚಾಯತ್ ಮತ್ತು ನಬಾಡ್ರ್ ಆಶ್ರಯದಲ್ಲಿ ಆ. ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಪಂಚಾಯಿತಿ ಹೊಯ್ಸಳ ಸಭಾಂ ಗಣದಲ್ಲಿ ಬ್ಯಾಂಕು ಮತ್ತು ಅನುಷ್ಟಾನ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಪುರಸ್ಕೃತ ತೆರೆದ ಬಾವಿ ಕೃತಕ ಮರುಜಲ ಪೂರಣೆ ಯೋಜನೆಯ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಉದ್ಘಾಟಿಸು ವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಉಪಾಧ್ಯಕ್ಷ...

ವನಮಹೋತ್ಸವ

ಹಾಸನ : ಭಾರತ್ ಸ್ಕೌಟ್್ಸ ಮತ್ತು ಗೈಡ್್ಸ, ಲಯನ್್ಸ ಸಂಸ್ಥೆ ಹಾಗೂ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ವನಮಹೋತ್ಸವ ಕಾರ್ಯಕ್ರಮವನ್ನು ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. ನಗರದ ಸಿ.ಕೆ.ಎಸ್. ಹಿರಿಯ ಪ್ರಾಥಮಿಕ ಶಾಲೆ, ಆದಿಚುಂಚನಗಿರಿ ಪ್ರೌಢಶಾಲೆ, ಸಂತ ಫಿಲೋಮಿನಾ ಬಾಲಿಕಾ ಪ್ರೌಢಶಾಲೆ, ಅರವಿಂದ ವಿದ್ಯಾ ಸಂಸ್ಥೆಯ ಸ್ಕೌಟ್್ಸ ಮತ್ತು ಗೈಡ್್ಸ ಮಕ್ಕಳು ಭಾಗವಹಿಸಿ...

ಅತ್ಯಾಚಾರಕ್ಕೀಡಾದ ಬಾಲಕಿ ಆತ್ಮಹತ್ಯೆ

ಅರಕಲಗೂಡು : ಅತ್ಯಾಚಾರ ಕ್ಕೀಡಾದ ಬಾಲಕಿಯೊಬ್ಬಳು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ತಿಮ್ಮಮ್ಮ (೧೪) ಎಂಬ ಬಾಲಕಿಯೇ ಮೃತಪಟ್ಟ ದುರ್ದೈವಿ ಯಾಗಿದ್ದು, ಬುಧವಾರ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಇಬ್ಬಡಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿ ದ್ದಾಳೆ. ಬಾಲಕಿ ತಿಮ್ಮಮ್ಮಳಿಗೆ ತಂದೆ- ತಾಯಿ ಇರಲಿಲ್ಲ. ಒಬ್ಬನೇ ಅಣ್ಣ ಸೋಮಶೇಖರ ಬೆಂಗಳೂರಿನ ಕ...

ಕುಟುಕಮರಟಿ ಕಾವಲ್ : ಭೂಮಿ ಸಾಗುವಳಿಗೆ ಅವಕಾಶ ರಾಮನಾಥಪುರ :

ರಾಮನಾಥಪುರ : ಸುಮಾರು ೩೫ ವರ್ಷಗಳಿಂದ ಭೂ ವಿವಾದದಲ್ಲಿ ಇದ್ದ ರಾಮನಾಥ ಪುರ ಹೋಬಳಿ ಲಕ್ಕೂರು ಗ್ರಾಮ ಪಂಚಾಯಿತಿಗೆ ಸೇರಿದ ಕುಟುಕ ಮರಟಿ ಕಾವಲು ಬುಡಬುಡಿಕೆ ಹಾಗೂ ಅಲೆಮಾರಿ ಜನಾಂಗದ ವರಿಗೆ ಸಾಗುವಳಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಕ್ಷೇತ್ರದ ಶಾಸಕ ಎ. ಮಂಜು ಅವರಿಗೆ ತಾಲ್ಲೂಕು ಹಿಂದುಳಿದ ಮುಖಂಡ ಹಾಗೂ ತಾಲ್ಲೂಕು ವೀರಶೈವ ಸಂಘದ ಪ್ರಧಾನ ಕಾರ್ಯದರ್ಶಿ ಸಿಬಳಿ ಕುಮಾರ ಸ್ವಾಮಿ...

ಆಲೂಗೆಡ್ಡೆ ಪರಿಹಾರ : ಸರ್ಕಾರಕ್ಕೆ ಪ್ರಸ್ತಾವನೆ

ಹಾಸನ : ಅಂಗಮಾರಿ ರೋಗ ದಿಂದ ಆಲೂಗೆಡ್ಡೆ ಬೆಳೆ ಸಂಪೂರ್ಣ ವಾಗಿ ನಷ್ಟವಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆ.ಡಿ.ಪಿ. ಸಭೆ ನಿರ್ಣಯ ಕೈಗೊಂಡಿತು. ಮಂಗಳವಾರ ಜಿಲ್ಲಾ ಪಂಚಾ ಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ಒಕ್ಕೊರಲಿನ ಅಭಿಪ್ರಾಯ ದಂತೆ ನಿರ್ಣಯ ಕೈಗೊಳ್ಳಲು ಸಭೆ ತೀರ್ಮಾನಿಸಿತು. ಈ ಕುರಿತು ಪ್ರತಿಕ್ರಿಯಿಸಿದ...

ಪ್ರಜಾ ರಾಜ್ಯಂ ಹೊಸ ಪಕ್ಷ ಅಸ್ತಿತ್ವಕ್ಕೆ

ತಿರುಪತಿ : ತೆಲುಗಿನ ಅತ್ಯಂತ ಜನಪ್ರಿಯ ನಟ ಚಿರಂಜೀವಿ ಅವರು ರಾಜಕೀಯ ರಂಗ ಪ್ರವೇಶ ಮಾಡಿ ದ್ದಾರೆ. ಇದರಿಂದ ಚಿರಂಜೀವಿ ಅಭಿ ಮಾನಿಗಳ ಹಲವು ವರ್ಷಗಳ ಕನಸು ನನಸಾಗಿದೆ. ತಿರುಪತಿಯಲ್ಲಿ ನಡೆದ ಬೃಹತ್ ರಾಜಕೀಯ ಸಮಾವೇಶದಲ್ಲಿ ಚಿರಂಜೀವಿ ಘಿಫಪ್ರಜಾ ರಾಜ್ಯಂಫ ಎಂಬ ತಮ್ಮ ಹೊಸ ಪಕ್ಷವನ್ನು ಪ್ರಕಟಿಸಿದರು. ಇದಕ್ಕೆ ಸಮಾವೇಶದಲ್ಲಿ ಹಾಜರಿದ್ದ ಲಕ್ಷಾಂತರ ಜನತೆ ಸಾಕ್ಷೀಕರಿಸಿದರು. ಚಿರಂಜೀವಿ ತಮ್ಮ ಹೊಸ ಪಕ್ಷದ ಹೆಸರನ್ನು...

ಪ್ರತ್ಯೇಕ ಅಪಘಾತ ಇಬ್ಬರ ಸಾವು

ಹಾಸನ : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ ಹಡವನಹಳ್ಳಿ ಗೇಟ್ ಬಳಿ ಆಟೋ ವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟರೆ, ಚನ್ನರಾಯ ಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದ ಮೇಟಿ ಸರ್ಕಲ್ ಬಳಿ ಮತ್ತೊಂದು ಅಪಘಾತ ನಡೆದು ವ್ಯಕ್ತಿ ಸಾವನ್ನಪಿದ್ದಾನೆ. ಸಾರಿಗೆ ಸಂಸ್ಥೆ ಬಸ್ ಯಾಳೇನ ಹಳ್ಳಿಯ ಸಿದ್ದೇಗೌಡ ಎಂಬುವವರಿಗೆ ಡಿಕ್ಕಿ ಹೊಡೆದ ಈ ಅವಘಡ ಸಂಭ ವಿಸಿದೆ.

ವಿ.ವಿ. ಕಾಯ್ದೆ ಶೀಘ್ರ ಪರಿಷ್ಕರಣೆ : ಲಿಂಬಾವಳಿ

ಹಾಸನ : ವಿ.ವಿ. ಕಾಯ್ದೆಯನ್ನು ಶೀಘ್ರವೇ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. ವಿ.ವಿ. ಅಧಿನಿಯಮದಲ್ಲಿ ಲೋಪ ದೋಷ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು. ಶೈಕ್ಷಣಿಕ ವಾತಾವರಣ ನಿರ್ಮಿಸಲು ಪ್ರಯತ್ನ ನಡೆಸ ಲಾಗುವುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಿಂಡಿಕೇಟ್ಗೆ...

ಕನಸಿನಲ್ಲೂ ಬಿ.ಜೆ.ಪಿ. ಸೇರೆನು : ಶಿವಲಿಂಗೇಗೌಡ

ಹಾಸನ : ತಮ್ಮ ಜೀವಮಾನ ದಲ್ಲಿರಲೀ, ಕನಸಿನಲ್ಲೂ ಬಿ.ಜೆ.ಪಿ.ಗೆ ಹೋಗೆನು ಎಂದು ಅರಸೀಕೆರೆ ಜೆ.ಡಿ.ಎಸ್. ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಹೇಳಿ, ತಾವು ಬಿ.ಜೆ.ಪಿ. ಸೇರುವ ಗುಸು ಗುಸುಗೆ ತೆರೆ ಎಳೆದಿದ್ದಾರೆ. ಘಿಫಜನತಾಮಾಧ್ಯಮಫದೊಂದಿಗೆ ಮಾತನಾಡುತ್ತಿದ್ದ ಅವರು, ಜೆ.ಡಿ.ಎಸ್. ತಮ್ಮ ಉಸಿರಾಗಿದ್ದು, ತಮ್ಮ ನಿಷ್ಠೆ ಎಂದೆಂದಿಗೂ ದೇವೇಗೌಡರ ಕುಟುಂಬಕ್ಕಿರುತ್ತದೆ ಎಂದು ಘೊಷಿಸಿ ದರು.ಬಿ.ಜೆ.ಪಿ.ಯ ಗುಡಿ ಸಂಸ್ಕೃತಿ ತಮಗೆ ಹಿಡಿಸದು. ಆರ್.ಎಸ್.ಎಸ್. ಮುಖ ವಾಣಿಯಾಗಿರುವ ಆ ಪಕ್ಷ,...

ನಷ್ಟ ತಗ್ಗಿಸಲು ಡೀಸೆಲ್ ಕೃತಕ ಅಭಾವ

ಹಾಸನ : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ದುಬಾರಿ ಯಾಗಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಅದರ ದರ ಏರಿಸದ ಹಿನ್ನಲೆಯಲ್ಲಿ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ತೈಲ ಕಂಪೆನಿಗಳು ಮಾರುಕಟ್ಟೆಗೆ ಬೇಡಿಕೆಯ ಅರ್ಧ ದಷ್ಟನ್ನು ಮಾತ್ರ ಸರಬರಾಜು ಮಾಡು ತ್ತಿರುವುದರಿಂದ ಡೀಸೆಲ್ಗೆ ಹಾಹಾ ಕಾರವೆದ್ದಿದೆ. ಕಳೆದ ವರ್ಷದ ಆಯಾ ತಿಂಗ ಳುಗಳಲ್ಲಿ ಪ್ರತಿ ಪೆಟ್ರೋಲ್ ಬಂಕ್ ಗಳು ನಡೆಸಿದ ವಹಿವಾಟನ್ನು ಆಧಾರ ವಾಗಿಟ್ಟುಕೊಂಡು ಅದರ ಅರ್ಧದಷ್ಟು...

ಕಟ್ಟಾಯ ಹೋಬಳಿಯಲ್ಲಿ ಹಂದಿ ಕಾಟ

ಹಾಸನ : ಕಟ್ಟಾಯ ಹೋಬ ಳಿಯ ಕಟ್ಟಾಯ ಬೆಟ್ಟದ ಸುತ್ತ ಮುತ್ತಲ ಹಳ್ಳಿಗಳಾದ ಕಬ್ಬತ್ತಿ, ಚನ್ನಂಗಿಹಳ್ಳಿ, ಹ್ಯಾರಾನೆ, ಬಾಚೀ ಹಳ್ಳಿ, ದೊಡ್ಡ ಬೀಕನಹಳ್ಳಿ, ಬಾಡರಹಳ್ಳಿ, ಅಂಕನ ಹಳ್ಳಿಗಳಲ್ಲಿ ಕಾಡುಹಂದಿ ಕಾಟ ಹೆಚ್ಚಾಗಿದ್ದು, ಬೆಳೆದಿರುವ ಮೆಕ್ಕೆಜೋಳವನ್ನು ಲೂಟಿ ಮಾಡುತ್ತಿವೆ.ಜೋಳದ ಮೇತೆಯನ್ನು ಹಂದಿಗಳು ಹಲ್ಲಿನಿಂದ ಜಗಿದು ತುಂಡು-ತುಂಡು ಮಾಡಿ ತುಳಿದು ಹಾಕುತ್ತಿವೆ. ಈಗಾಗಲೇ ಅಂಗಮಾರಿ ರೋಗಕ್ಕೆ ನಷ್ಟಕ್ಕೀಡಾಗಿರುವುದರ ಜೊತೆಗೆ ಹಂದಿಗಳ ಉಪಟಳದಿಂದ ರೈತರು ಕಂಗಾಲಾಗಿದ್ದಾರೆ. ಕಾಡು...

ಕ್ಷಯ : ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆಗೆ ಸಲಹೆ

ಹಾಸನ : ನಗರದ ಸ್ವಾಮಿ ವಿವೇಕಾ ನಂದ ಯೂತ್ ಮೂವ್ಮೆಂಟ್ನ ವಿವೇಕ ಆರೋಗ್ಯ ಕೇಂದ್ರ, ಚಿಕ್ಕಮಗಳೂರು ವಿವಿದ್ದೋದ್ದೇಶ ಸಮಾಜ ಸೇವಾ ಕೇಂದ್ರ ಮತ್ತು ಜೀವನಾಶ್ರಯ ಹೆಚ್.ಐ.ವಿ. ಸೋಂಕಿತರ ಸಂಘದ ಸಂಯುಕ್ತಾಶ್ರಯ ದಲ್ಲಿ ಎಸ್.ವಿ.ವೈ.ಎಂ.ನ ವಿವೇಕ ಆರೋಗ್ಯ ಕೇಂದ್ರದಲ್ಲಿ ಹೆಚ್.ಐ.ವಿ. ಸೋಂಕಿತರಿಗೆ ಟಿಬಿ ರೋಗದ ಬಗ್ಗೆ ಒಂದು ದಿನದ ತರಬೇತಿ ಏರ್ಪಡಿಸ ಲಾಗಿತ್ತು. ಹಾಸನದ ಸರ್ಕಾರಿ ಆಸ್ಪತ್ರೆಯ ಟಿಬಿ ಕೇಂದ್ರದ ಸಿಬ್ಬಂದಿ ಮತ್ತು ಸಂಪನ್ಮೂಲ...

ದೇಶದಲ್ಲಿ ರೇಷ್ಮೆ ಅಭಾವ :ಬೆಲೆ ಕುಸಿತ ಇಲ್ಲ

ಹಳೇಬೀಡು: ರೇಷ್ಮೆ ಉದ್ದಿಮೆ ನಡೆಸುವ ರೈತರಿಗೆ ಕನಿಷ್ಟ ಬೆಲೆ ಸಿಕ್ಕಿದರೂ ನಷ್ಟವಾಗುವುದಿಲ್ಲ. ಸ್ವಚ್ಛತೆ ಯಿಂದ ರೇಷ್ಮೆ ಕೃಷಿ ನಡೆಸಿದರೆ ಅತ್ಯಂತ ಹೆಚ್ಚಿನ ಆದಾಯ ಪಡೆಯಲು ಅವಕಾಶವಿದೆ ಎಂದು ರೇಷ್ಮೆ ಉಪ ನಿರ್ದೇಶಕ ಶಿವನಾಗೇಂದ್ರ ಬಾಬು ಹೇಳಿದರು. ಮಲ್ಲಾಪುರದಲ್ಲಿ ಇತ್ತೀಚೆಗೆ ನಡೆದ ರೇಷ್ಮೆ ವಿಚಾರ ಸಂಕಿರಣ ದಲ್ಲಿ ಅವರು ಮಾತನಾಡಿ ರೇಷ್ಮೆ ಕೃಷಿಕರಿಗೆ ಸರ್ಕಾರ ಮನೆ ನಿರ್ಮಾಣ, ಉಪಕರಣ ಖರೀದಿ, ಜಮೀನಿನಲ್ಲಿ ಹನಿ ನೀರಾವರಿ...

ಪ್ರತಿಭಾವಂತರಿಗೆ ಉದ್ಯೋಗಾವಕಾಶ ಹೆಚ್ಚು

ಹಳೇಬೀಡು: ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗೆ ಉದ್ಯೋಗದ ತೊಂದರೆಯಾಗುವ ಸಾಧ್ಯವಿಲ್ಲ. ಪ್ರತಿಭಾವಂತರಿಗೆ ಉದ್ಯೋಗಾವಕಾಶ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಕಡೆ ಗಮನ ಹರಿಸಬೇಕು ಎಂದು ಶಾಸಕ ವೈ.ಎನ್. ರುದ್ರೇಶ್ ಗೌಡ ಅವರು ಹೇಳಿದರು. ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಎಸ್.ಜಿ.ಆರ್. ಕಾಲೇಜು ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನೂತನ ವಿದ್ಯಾರ್ಥಿ ಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಬೆಂಗಳೂರು ಮಹಾನಗರದಲ್ಲಿ ೨ ಲಕ್ಷ ಕೆಲಸಗಾರರ...

ಭಾರತ ಜಾಗೃತಿ ಯಾತ್ರಾ

ಹಾಸನ : ಮಹಿಳಾ ಸಬಲೀಕರಣ ಸಾಕ್ಷರತಾ ಉದ್ಯೋಗ ಹಾಗೂ ಪರಿಸರ ಸಮಸ್ಯೆಗಳ ನಿರ್ಮೂಲನೆ ಗುರಿ ಹೊಂದಿರುವ ಅಖಿಲ ಭಾರತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘಗಳ ಒಕ್ಕೂಟವು ಪಾಗ್ಸಿ ಭಾರತ ಜಾಗೃತಿ ಯಾತ್ರಾ ಹಮ್ಮಿ ಕೊಂಡಿದೆ. ನಾಲ್ಕು ತಂಡಗಳಲ್ಲಿರುವ ಈ ಯಾತ್ರೆಯು ಸೆ-೧ ರಿಂದ ಕನ್ಯಾ ಕುಮಾರಿಯಿಂದ ಹೊರಟು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಅಕ್ಟೋಬರ್-೧ ರಂದು ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಯಾತ್ರೆಯ...

ಹಳೇಬೀಡು ದೇವಾಲಯ ಪಾಕ್ರ್ನಲ್ಲಿ ಮಾವು ಕೃಷಿ : ಅಸಮಾಧಾನ

ಹಳೇಬೀಡು : ಹೊಯ್ಸಳೇಶ್ವರ ದೇಗುಲದ ಉದ್ಯಾನವನದಲ್ಲಿ ನೆರಳು ನೀಡುವ ಸುಂದರ ಮರಗಳು ಕಣ್ಮರೆ ಯಾಗಿ ಅಂದಗೆಡಿಸುವ ಮಾವಿನ ಗಿಡ ಗಳನ್ನು ನಡೆಸಲಾಗಿದೆ. ಪುರತಾತ್ವವು ಇಲಾಖೆಯ ಉದ್ಯಾನವನ ವಿಭಾಗ ಉದ್ಯಾನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಹಚ್ಚ ಹಸಿರಾದ ಹುಲ್ಲು ಹಾಸಿನ ಮೇಲೆ ನೂರಾರು ಮಾವಿ ಗಿಡ ಬೆಳೆಯಲಾರಂಭಿಸಿವೆ. ಪ್ರವಾಸಿಗರಿಗೆ ಆಕರ್ಷಣೆ ನೀಡುವ ಸುಂದರವಾದ ಹೂಗಿಡ ಹಾಗೂ ನೆರಳು...

ಖಾಸಗಿ ಪದವಿ ಶಿಕ್ಷಣ ಪ್ರವೇಶಕ್ಕೆ ಸೂಚನೆ

ಹಾಸನ : ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಕುವೆಂಪು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯದ ಪ್ರಥಮ ಬಿ.ಎ. ತರಗತಿಗೆ ಅರ್ಜಿಗಳನ್ನು ಆಹ್ವಾನಿಸಾಗಿದೆ. ದೈನಂದಿನ ತರಗತಿಗಳಿಗೆ ಹಾಜರಾಗಲು ತೊಂದರೆಯಿರುವ ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ಹೆಸರು ನೊಂದಾಯಿಸಿ ಖಾಸಗಿಯಾಗಿ ಅಭ್ಯಾಸ ಮಾಡಿ ಪರೀಕ್ಷೆ ಬರೆಯಲು ಅವಕಾಶವಿದೆ. ರೆಗ್ಯುಲರ್ ಕಾಲೇಜಿ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಗಳಿಗಿರುವ ಎಲ್ಲಾ ಸೌಲಭ್ಯಗಳಿದ್ದು, ಉನ್ನತ ವ್ಯಾಸಂಗಕ್ಕೂ ಅವಕಾಶವಿದೆ. ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರಿಂದ...

ದೆಹಲಿ ಕಲಾ ಪ್ರದರ್ಶನಕ್ಕೆ ಬಿ.ಎಸ್. ದೇಸಾಯಿ

ಹಾಸನ : ಕರ್ನಾಟಕ ಚಿತ್ರಕಲಾವಿದರ ಬಳಗವು ದೆಹಲಿ ಕರ್ನಾಟಕದ ಸಂಘದ ಸಹಯೋಗದಲ್ಲಿ ೬೧ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯದ ಕಲಾವಿದರ ಚಿತ್ರಕಲಾ ಪ್ರದರ್ಶನ ಘಿಫವರ್ಣ ಸಂಗಮಫ ಕಾರ್ಯಕ್ರಮ ಆ-೨೪ ರಿಂದ ನವದೆಹಲಿಯ ಕರ್ನಾಟಕ ಸಂಘದ ಭವನದಲ್ಲಿ ಆರಂಭಗೊಂಡಿದ್ದು, ಆ-೩೧ರ ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಕಲಾವಿದ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಚಿತ್ರಕಲಾ ಶಿಕ್ಷಕ ಬಿ.ಎಸ್. ದೇಸಾಯಿ ಅವರ ತೈಲವರ್ಣದ ಕಲಾಕೃತಿಗಳ ಪ್ರದರ್ಶನಗೊಂಡಿವೆ...

ಅನುದಾನ ರಹಿತ ಕಾಲೇಜುಗಳ ಒಕ್ಕೂಟದ ಸಭೆ

ಹಾಸನ : ಜಿಲ್ಲಾ ಅನುದಾನ ರಹಿತ ಶಾಲಾ ಕಾಲೇಜುಗಳ ಒಕ್ಕೂಟದ ಸಭೆಯನ್ನು ಆ. ೨೮ ರಂದು ಬೆಳಿಗ್ಗೆ ೧೧ ಗಂಟೆಗೆ ಸಾಲಗಾಮೆ ರಸ್ತೆಯಲ್ಲಿರುವ ಭಾರತಿ ವಿದ್ಯಾ ಮಂದಿರದಲ್ಲಿ ಕರೆಯಲಾಗಿದೆ. ಈ ಸಭೆಗೆ ರಾಜ್ಯ ಅಧ್ಯಕ್ಷರಾ ದಂತಹ ಜಾಲಮಂಗಲ ನಾಗರಾಜ ಮತ್ತು ರಾಜ್ಯ ಕೋಶಾಧ್ಯಕ್ಷ ಪ್ರೊ।। ಡಿ. ಚಂದ್ರಪ್ಪ ಆಗಮಿಸಲಿದ್ದು, ಶಾಲಾ ಕಾಲೇಜುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿರುವುದರಿಂದ ಜಿಲ್ಲೆಯ ಎಲ್ಲ ಅನುದಾನ ರಹಿತ ಶಾಲಾ...

ಗಾಂಧೀಜಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

ಹಾಸನ : ಭಾರತ ಸ್ವಾತಂತ್ರ್ಯ ಗಳಿಸುವಲ್ಲಿ ಕ್ರಾಂತಿಕಾರಿಗಳಿಗಿಂತಲೂ ಅಹಿಂಸಾವಾದಿ ಗಾಂಧೀಜಿಯವರ ಪಾತ್ರವೇ ಪ್ರಮುಖವಾಗಿತ್ತು. ಹಿಂಸೆಯಿಂದ ಸಾಧಿಸಲಾಗದ್ದನ್ನು ಅಹಿಂಸೆಯಿಂದ ಸಾಧಿಸಿದ ಮಹಾನ್ ವ್ಯಕ್ತಿ. ಇವರ ಆದರ್ಶಗಳನ್ನು ಎಲ್ಲರೂ ಮೈಗೂಢಿಸಿಕೊಳ್ಳಬೇಕೆಂದು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ।। ಎ.ಎಂ. ಮೋಹನ್ ಕರೆ ನೀಡಿದರು. ಅವರು ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಸ್ವಾತಂತ್ರ್ಯ ಹೋರಾಟ...

ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ದನಿ ಎತ್ತಬೇಕಿದೆ

ಹಾಸನ : ಜಾಗತಿ ಕರ ಣ ದ ಬಿರು ಗಾಳಿಗ ೆಸಿಕ್ಕಿ ನಮ್ಮ ಸಂಸ್ಕೃತಿ, ನಾಗರಿಕತೆ, ಜನಜೀವನವೆಲ್ಲ ತತ್ತರಿಸುತ್ತಿರುವ ವಿಷಯ ಸಂದರ್ಭದಲ್ಲಿ ಇಂತಹ ಸಾಂಸ್ಕೃತಿಕ ವೇದಿಕೆಗಳು ಯುವಕರಲ್ಲಿ ದೇಶೀಯ ಅಂತಃಶಕ್ತಿಯನ್ನು ಬೆಳೆಸಬೇಕಾದ ತುರ್ತು ಜವಾಬ್ದಾರಿಯನ್ನು ಹೊರಬೇಕಾಗಿದೆ. ವೈಚಾರಿಕ ನೆಲೆಗಳಲ್ಲಿ ಯೋಚಿಸುವ ಯುವಕರನ್ನು ತಯಾರಿಸಿ ಅವರಲ್ಲಿ ನಾಯಕತ್ವದ ಗುಣವನ್ನು ಬೆಳೆಸಬೇಕು. ನಮ್ಮ ಸುತ್ತಮುತ್ತ ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಎದೆಗಾರಿಕೆಯನ್ನು ವಿದ್ಯಾರ್ಥಿದೆಸೆಯಿಂದಲೇ...

ಗಣಪತಿ ಮಂಡಳಿ ಸಭೆ : ತಪ್ಪು ಲೆಕ್ಕದ ಬಗ್ಗೆ ಆರೋಪ

ಅರಸೀಕೆರೆ : ಪಟ್ಟಣದ ಪ್ರಸನ್ನ ಗಣಪತಿ ಭಕ್ತ ಮಂಡಳಿ ಟ್ರಸ್್ಟ ವತಿ ಯಿಂದ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕಾರ್ಯದರ್ಶಿ ಮಂಡಿಸಿದ ಜಮಾ-ಖರ್ಚು ಲೆಕ್ಕಕ್ಕೆ ಆಡಿಟ್ ವರದಿ ನೀಡದಿರುವ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿ ಸಿದರು. ಟ್ರಸ್್ಟ ಕಾರ್ಯದರ್ಶಿ ಶಾಂತವೀರಯ್ಯ ಅವರು ಮಂಡಿಸಿದ ಲೆಕ್ಕಪತ್ರಗಳಲ್ಲಿ ಹುರುಳಿಲ್ಲ ಎಂದು ಮಲ್ಲಿಗಮ್ಮ ದೇವಾಲಯ ಸಮಿತಿ ಕಾರ್ಯದರ್ಶಿ ಜಯಣ್ಣ, ಮಂಡಳಿಯ ಮಾಜಿ ಕಾರ್ಯದರ್ಶಿ ಎಸ್.ಬಿ.ಟಿ. ಬಾಬು,...

ಆ. ೨೮, ೨೯ ಅಂಗನವಾಡಿ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನ

 ಹಾಸನ : ಅಂಗನವಾಡಿ ನೌಕರರ ಕಾಯಂಗೆ ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಮಾಡ ದಂತೆ ಒತ್ತಾಯಿಸಲು ಹಾಗೂ ಐ.ಸಿ.ಡಿ.ಎಸ್. ಅನ್ನು ಬಲಗೊಳಿಸಿ ಸಾರ್ವತ್ರೀಕರಿಸುವಂತೆ ಮನವಿ ಮಾಡಲು ಅಂಗನವಾಡಿ ನೌಕರರ ಪ್ರಥಮ ಜಿಲ್ಲಾ ಸಮ್ಮೇಳನವು ಆ. ೨೮ ಮತ್ತು ೨೯ ರಂದು ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಶಾಲಾ ಪೂರ್ವ ಶಿಕ್ಷಣ ನೀಡಿಕೆ, ಪೂರಕ ಪೌಷ್ಠಿಕ ಆಹಾ ಪೂರೈಕೆ, ಶಾಲೆಗೆ ದಾಖಲಾತಿ ಹೆಚ್ಚಳ,...

೫೧೩ ಜನರ ನೇತ್ರ ತಪಾಸಣೆ

ಹಾಸನ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ, ದಿ. ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ. ಬ್ಲೈಂಡ್ ಸಂಸ್ಥೆ ಹಾಸನ ಘಟ, ನಗರ ಸಿ.ಎಸ್.ಐ. ಮಿಷನ್ ಆಸ್ಪತ್ರೆ ಹಾಗೂ ಕೊಣನೂರು ಮತ್ತು ಲಯನ್್ಸ ಕ್ಲಬ್ – ಇವುಗಳ ಸ ಂ ¿ ು ು ಕ ಾ ್ತ ಶ ್ರ ¿ ು ದ...

ಮರಣಾನಂತರ ಕಣ್ಣು ದಾನ ಮಾಡಲು ಡಾ. ಸುರೇಶ್ ಲಂಕೇಶ್ವರ್ ಮನವಿ

ಹಾಸನ : ಮನುಷ್ಯನ ಪಂಚೇಂದ್ರಿಯಗಳಲ್ಲಿ ಅತಿ ಮುಖ್ಯ ವಾದ ಅಂಗವಾಗಿರುವ ಕಣ್ಣುಗಳು ಸಮಾಜದಲ್ಲಿನ ಅಂಧರಿಗೆ ಅತ್ಯ ವಶ್ಯಕವಾಗಿ ಬೇಕಾಗಿರುವುದರಿಂದ ಮರಣಾನಂತರ ಕಣ್ಣುಗಳನ್ನು ಸುಡದೆ ಅಥವಾ ಮಣ್ಣು ಮಾಡದೆ ಸಮೀಪದ ನೇತ್ರ ಬ್ಯಾಂಕುಗಳಿಗೆ ದಾನ ಮಾಡಲು ಮುಂದೆ ಬರಬೇಕೆಂದು ಸಿ.ಎಸ್.ಐ. ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್ ಲಂಕೇಶ್ವರ್ ಮನವಿ ಮಾಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಮಬ ಕಲ್ಯಾಣ ಇಲಾಖೆ, ಸಿ.ಎಸ್.ಐ. ಮಿಷನ್ ಆಸ್ಪತ್ರೆ, ಚಾಮರಾಜೇಂದ್ರ...

ಅಧಿಕಾರಿಗಳ ವರ್ಗಾವಣೆಗೆ ಪ್ರಯತ್ನ : ವ್ಯಾಪಕ ಟೀಕೆ

ಹಾಸನ : ಬದಲಾಗಿರುವ ರಾಜಕೀಯ ಪರಿಸ್ಥಿತಿಯ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ನೌಕರರನ್ನು ವರ್ಗಾವಣೆ ಮಾಡಿಸಲು ಕೆಲವು ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಹೆಚ್ಚಾಗುತ್ತಿದೆ. ಹಿಂದಿನ ಬಿ.ಜೆ.ಪಿ.-ಜೆ.ಡಿ.ಎಸ್. ಸಮ್ಮಿಶ್ರ ಸರ್ಕಾರವಧಿಯಲ್ಲಿ ಇದ್ದ ಅಧಿಕಾರಿಗಳ ಬದಲಾವಣೆಗೆ ಪಕ್ಷದ ಮುಖಂಡರು ಹಾಗೂ ಸಚಿವರ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದಾರೆ. ಈ ಕಾರ್ಯತಂತ್ರದಿಂದ ಅಧಿ ಕಾರಿಗಳು ಹಾಗೂ ನೌಕರರು ಕರ್ತವ್ಯ ನಿರ್ವಹಿಸಲು ಕೂಡ ಆಗದೆ...

ಬೇರೆ ಶಾಸಕರನ್ನು ಸೆಳೆಯುವುದಿಲ್ಲ : ಸಿ.ಎಂ.

ಸಂಪುಟದಿಂದ ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಉಮೇಶ್ ಕತ್ತಿ ಅವರನ್ನು ಆ.೨೭ರಂದು ಅಧಿ ಕಾರ ಸಚಿವರಾಗಿ ಅಧಿಕಾರ ಸ್ವೀಕರಿಸಲು ಆಹ್ವಾನ ನೀಡಲಾಗಿದೆ ಎಂದರು. ಮಾಜಿ ಸಚಿವ ಎಸ್.ಕೆ.ಬೆಳ್ಳುಬಿ ಪ್ರಕರಣವೊಂದರಿಂದಲೇ ಜರ್ಜರಿತ ವಾಗಿರುವ ಬಿ.ಜೆ.ಪಿ.ಗೆ ಆಪರೇಷನ್ ಕಮಲ ಮುಂದುವರೆಸುವ ಧೈರ್ಯ ಬರುತ್ತಿಲ್ಲ. ಜೊತೆಗೆ ಹುಕ್ಕೇರಿ ಮಾಜಿ ಶಾಸಕ ಉಮೇಶ್ ಕತ್ತಿ ದೆಸೆಯಿಂದ ಬಿ.ಜೆ.ಪಿ.ಯಲ್ಲಿ ಆಂತರಿಕ ಕಲಹ ಆಸೊ–ಟಗೊಂಡ ಕಾರಣದಿಂದಮುಖ್ಯಮಂತ್ರಿಗೆ ಕಾರ್ಯಾಚರಣೆ ನಿಲ್ಲಿಸದೇ ಬೇರೆ...

೭೦೦ಕ್ಕೂ ಹೆಚ್ಚು ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡವಿಲ್ಲ

ಹಾಸನ : ರಾಜ್ಯದಲ್ಲಿ ೭೦೦ಕ್ಕೂ ಹೆಚ್ಚು ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ವಿಲ್ಲ ಎಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಭರತ್ಲಾಲ್ ಮೀನಾ ಹೇಳಿದರು. ಪ್ರಸ್ತುತ ನಾಲ್ಕೂವರೆ ಸಾವಿರ ಹಾಸ್ಟೆಲ್ಗಳಿದ್ದು, ಈ ಪೈಕಿ ೭೦೦ ಹಾಸ್ಟೆಲ್ಗಳಿಗೆ ಕಟ್ಟಡವಿಲ್ಲ. ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಸೋಮವಾರ ಪತ್ರಕರ್ತರಿಗೆ ತಿಳಿಸಿ ದರು. ಹಾಸ್ಟೆಲ್ಗಳ ನಿರ್ವಹಣೆ ಸರಿ ಯಿಲ್ಲದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಮೂಲಭೂತ ಸೌಕರ್ಯ ಒದಗಿಸಲು...

ಡಿ.ಕಾಳೇನಹಳ್ಳಿ ಸಮೀಪ ಬೀಡು ಬಿಟ್ಟ ಕಾಡಾನೆ

ಚನ್ನರಾಯಪಟ್ಟಣ: ಅರಸೀಕೆರೆ ತಾಲ್ಲೂಕಿನ ಲಾಳನಕೆರೆ ಹಾಗೂ ಹೊಳೆನರಸೀಪುರ ತಾಲ್ಲೂಕಿನಲ್ಲಿ ಕಾಣ ಸಿಕ್ಕಿದ್ದ ಎರಡು ಕಾಡಾನೆಗಳು ಸೋಮವಾರ ಚನ್ನರಾಯಪಟ್ಟಣ ತಾಲ್ಲೂಕಿನ ಡಿ.ಕಾಳೇನಹಳ್ಳಿಯ ಗುಡ್ಡದ ರಾಮೇಶ್ವರ ದೇವಸ್ಥಾನದ ಹತ್ತಿರ ಕಂಡು ಬಂದವು. ಇಲ್ಲಿಗೆ ಸಮೀಪದ ಅಡಗೂರು ಕೆರೆಯಲ್ಲಿ ದಾವು ತಣಿಸಿಕೊಂಡ ನಂತರ ಗದ್ದೆಸಾತನಹಳ್ಳಿಯ ಬಾಳೆ ತೋಟದಲ್ಲಿ ಬೀಡು ಬಿಟ್ಟಿವೆ. ಇಲ್ಲಿನ ಸುತ್ತಮುತ್ತಲ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ತಿಂದು ಬಾಳೆ ತೋಟಕ್ಕೂ ಲಗ್ಗೆ ಇಟ್ಟಿವೆ. ಕಾಡಾನೆ ದಾಳಿ...

ವೃದ್ಧೆಯ ಧರಣಿ : ಜಿಲ್ಲಾಧಿಕಾರಿ ಭರವಸೆ

ಹಾಸನ : ತಮ್ಮ ನಿವೇಶನವನ್ನು ಅಕ್ರಮವಾಗಿ ಕಬಳಿಸಲಾಗಿದ್ದು, ಈ ಸಂಬಂಧ ನಿವೇಶನ ಮರು ವಶಪಡಿಸಿ ಕೊಡಿಸಿಕೊಡಬೇಕೆಂದು ಒತ್ತಾಯಿಸಿ ಶೆಟ್ಟಿಹಳ್ಳಿ ಗ್ರಾಮದ ವಯೋವೃದ್ಧೆ ಲೂರ್ದಮ್ಮ ಸೋಮವಾರ ಜಿಲ್ಲಾಧಿ ಕಾರಿ ಕಛೇರಿ ಆವರಣದಲ್ಲಿ ಧರಣಿ ನಡೆಸಿದರು. ಬೆಳಿಗ್ಗೆ ೧೧-೩೦ರ ವೇಳೆಯಲ್ಲಿ ಗ್ರಾಮದ ಹಲವರೊಂದಿಗೆ ಜಿಲ್ಲಾಧಿ ಕಾರಿಗಳ ಕಛೇರಿಗೆ ಆಗಮಿಸಿ ಧರಣಿ ಆರಂಭಿಸಿದರು. ಧರಣಿಯು ಮಧ್ಯಾಹ್ನ ೩ ಗಂಟೆಯವರೆವಿಗೂ ಮುಂದುವರೆ ಯಿತು. ಈ ಸಂದರ್ಭದಲ್ಲಿ ಮಾತ ನಾಡಿದ...

ನಗರಕ್ಕೆ ಇಂದು ಸಚಿವ ಲಿಂಬಾವಳಿ

ಹಾಸನ : ಜಿಲ್ಲೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಆಗಮಿಸಲಿದ್ದಾರೆ. ಅವರು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣ ದಲ್ಲಿ ಕೆ.ಡಿ.ಪಿ. ಸಭೆಯಲ್ಲಿ ಪಾಲ್ಗೊಳ್ಳು ವರು ಮಧ್ಯಾಹ್ನ ೩ ಗಂಟೆಗೆ ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ರಾಷ್ಟ್ರೀಯ ಗ್ರಾಮೀಣ ಅಭಿಯಾನ ಯೋಜನೆಯಡಿ ಹಾಸನದ ಪೆನ್ಷನ್ಮೊಹಲ್ಲಾ ಬಡಾವಣೆಯಲ್ಲಿರುವ ನಗರ ಆರೋಗ್ಯ ಕೇಂದ್ರವನ್ನು...

ಅಶ್ಲೀಲ ರಾಜಕಾರಣದ ಜನಕ ದೇವೇಗೌಡ : ಟೀಕ

ಹೊಳೆನರಸೀಪುರ : ರಾಜ್ಯದಲ್ಲಿ ಅಶ್ಲೀಲ ರಾಜಕಾರಣವನ್ನು ಹುಟ್ಟು ಹಾಕಿದವರೇ ದೇವೇಗೌಡರು. ಆದರೂ ಬಿ.ಜೆ.ಪಿ. ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಬಿ.ಜೆ.ಪಿ. ನಾಯಕ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ.ಶ್ರೀನಿವಾಸ್ ಟೀಕಿಸಿ ದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದ ಅವರು, ರಾಜಕಾರಣದಲ್ಲಿ ಜಾತಿ ವಿಂಗಡಿಸಿ ಒಡೆದಾಳುವ ಕುತಂತ್ರ ನಡೆಸಿದ ದೇವೇಗೌಡ, ಯಡಿ ಯೂರಪ್ಪ ಮತ್ತು ಬಿ.ಜೆ.ಪಿ. ವಿರುದ್ಧ ಪದೇ ಪದೇ ಅವಹೇಳನಕಾರಿ...

ಅಪ್ನಾದೇಶ್ ಕನಸುಗಾರ ಭರತ್ಲಾಲ್ ಮೀನಾ

ಭೂತಕಾಲದ ಬಗ್ಗೆ ಚಿಂತಿಸುತ್ತಾ, ವರ್ತ ಮಾನ ಮರೆತರೆ ಅಂಗಳದಿ ಅರಳುವ ತಾರೆ ಗಳನ್ನು, ಬೆಳದಿಂಗಳ ಜಲಪಾತವನ್ನು ನೋಡಿ ಸವಿಯುವ ಸೌಭಾಗ್ಯ ಕಳೆದುಕೊಳ್ಳಬೇಕಾಗು ತ್ತದೆ. ಈ ಮಾತನ್ನು ಹೇಳಿದವರು ಮತ್ತಾರು ಅಲ್ಲ, ರಾಷ್ಟ್ರದಲ್ಲಿನ ಶ್ರೇಷ್ಠ, ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಬೆರಳೆಣಿಕೆಯಷ್ಟು ಮಂದಿಯಲ್ಲಿ ಒಬ್ಬರಾದ ಭರತ್ಲಾಲ್ ಮೀನಾ. ನಗರದಲ್ಲಿ ಸೋಮವಾರ ಇವರು ಘಿಫಅಪ್ನಾ ದೇಶ್ಫ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ಸಂದರ್ಭದಲ್ಲಿ ಜನತಾಮಾಧ್ಯಮ ವಿಶೇಷ ಸಂದರ್ಶನ ಮಾಡಿದಾಗ...

ಪುರಸಭೆ ನೌಕರರು ಗೌರವ ನೀಡುತ್ತಿಲ್ಲ

ಚನ್ನರಾಯಪಟ್ಟಣ : ಪುರಸಭೆಯ ಅಧಿಕಾರಿಗಳು ಹಾಗೂ ನೌಕರರು ಪುರಸಭಾ ಸದಸ್ಯರಿಗೆ ಗೌರವ ನೀಡುತ್ತಿಲ್ಲವೆಂಬ ದೂರು ಸೋಮ ವಾರ ನಡೆದ ವಿಶೇಷ ಸಭೆಯಲ್ಲಿ ಪ್ರತಿಧ್ವನಿಸಿತು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ನಾಗರಾಜ್, ಈ ಕುರಿತು ಪ್ರತಿಕ್ರಿಯಿಸಿ, ಸದಸ್ಯರಿಗೆ ಗೌರವ ನೀಡುತ್ತಿಲ್ಲವೆಂದು ಸಭೆಯಲ್ಲಿ ಹಾಜರಿದ್ದ ಶಾಸಕ ಸಿ.ಎಸ್.ಪುಟ್ಟೇ ಗೌಡರ ಮುಂದೆ ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಹಲವು ಸದಸ್ಯರು ಸಹಮತ ವ್ಯಕ್ತಪಡಿಸಿದರು. ಬೀದಿ ದೀಪ ಗುತ್ತಿಗೆ ಸಂಬಂಧಿ...

ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲು ಶಾಸಕ ಮಂಜು ಸಲಹೆ

ಅರಕಲಗೂಡು : ಪಟ್ಟಣ ಪಂಚಾಯತ್ನ ೨ ಕೋಟಿ ರೂ. ಅನು ದಾನದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳನ್ನು ಗುರುತಿಸಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವಂತೆ ಶಾಸಕ ಎ.ಮಂಜು ತಿಳಿಸಿದ್ದಾರೆ. ಪ.ಪಂ.ನಲ್ಲಿ ನಡೆದ ವಿಶೇಷ ತುರ್ತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ವಿವಿಧ ವಾಡ್ರ್ಗಳಲ್ಲಿರುವ ಸಮಸ್ಯೆ ಗಳನ್ನು ಗುರುತಿಸಿ, ಪಟ್ಟಿಗೆ ಸೇರಿಸಿ, ಈ ಸಂದರ್ಭ ಸ್ವಚ್ಛತೆಗೆ ಆದ್ಯತೆ ನೀಡುವ ಕಾಮಗಾರಿ ಇರಲಿ...

ರಿಲೇ ಓಟ: ದ್ವಿತೀಯ ಸ್ಥಾನ

ಹಾಸನ : ಹಾಸನ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಗಳ ಕ್ರೀಡಾಕೂಟದಲ್ಲಿ ನಗರದ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಾದ ಹೆಚ್.ಆರ್. ಮಲ್ಲೇಶ್, ಕೆ.ಎನ್. ಚೇತನ, ಜಿ.ಎನ್. ರಾಕೇಶ್, ನವೀನ್ ಕುಮಾರ್ ಅವರು೪್ಡ೪೦೦ ಮೀ. ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲ ದಿವಾಕರ್ ಅವರು ತಿಳಿಸಿದ್ದಾರೆ.

ಸಮಾಜ ಸೇವೆಗೆ ಬಿಡುವಿನ ಅಗತ್ಯವಿಲ್ಲ

ಹಾಸನ : ಸಮಾಜ ಸೇವೆಗೆ ಬಿಡುವಿನ ಅವಶ್ಯಕತೆಯಿಲ್ಲ. ಯಾವುದೇ ವೃತ್ತಿಯ ಏಕತಾನತೆ ಯಿಂದ ಹೊರಬರಲು ಅನೇಕರು ವಿವಿಧ ಮಾರ್ಗಗಳನ್ನು ಕಂಡುಕೊಂಡಿ ದ್ದಾರೆ. ಆದರೆ ತಾವು ಕಂಡುಕೊಂಡಿದ್ದು ಸಮಾಜ ಸೇವೆಯ ಮಾರ್ಗ ಎಂದು ನಗರದ ವೈದ್ಯ ಡಾ।। ಗುರುರಾಜ್ ಹೆಬ್ಬಾರ್ ಅವರು ಹೇಳಿದರು. ಅವರು ನಗರದ ಮಹಾರಾಜ ಪಾರ್ಕಿನಲ್ಲಿರುವ ಶ್ರೀ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಈ ಬಾರಿ ರಾಜ್ಯ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಪಡೆದ...

ಸೋರುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ

ಜಾವಗಲ್: ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಪೂರ್ಣ ಮಟ್ಟದಲ್ಲಿ ಸೋರುತ್ತಿದ್ದು ಕೂಡಲೇ ರಿಪೇರಿ ಮಾಡಿಸುವಂತೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಸಿದ್ದೇಶ್, ಜಿಲ್ಲಾ ಪಂಚಾಯಿತಿಯನ್ನು ಕೋರಿದ್ದಾರೆ. ಅಲ್ಲದೆ ಇರುವ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಯವರ ವಸತಿಗೃಹಗಳು ಹಳೆಯ ಕಾಲದಾಗಿದ್ದು, ಪೂರ್ಣ ವಾಗಿ ಸೋರುತ್ತಿವೆ. ಇದನ್ನು ತಕ್ಷಣ ರಿಪೇರಿ ಮಾಡಿಸಬೇಕು ಮತ್ತು ಈ ಆಸ್ಪತ್ರೆಗೆ ಅತಿ ಅವಶ್ಯಕವಾಗಿ ಇಬ್ಬರು ಘಿಫಡಿಫ...