೨೦೨೦ರ ವೇಳೆಗೆ ತಂಬಾಕು ಬೆಳೆ ಪೂರ್ಣ ನಿಷೇಧ

ರಾಮನಾಥಪುರ: ಕರ್ನಾಟಕದಲ್ಲಿ ತಂಬಾಕು ಬೆಳೆ ನಿಷೇಧ ಆದೇಶ ೨೦೨೦ರ ಅಂತ್ಯದೊಳಗೆ ಸಂಪೂರ್ಣ ವಾಗಿ ಜಾರಿಗೆ ಬರಲಿದೆ ಎಂದು ತಂಬಾಕು ಮಂಡಳಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ।। ಸುಬ್ರಹ್ಮಣ್ಯ ಅವರು ತಿಳಿಸಿದರು. ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದಲ್ಲಿ ಹೊಗೆ ಸೊಪ್ಪು ಗಿಡದ ಕಂಕುಳ ಕುಡಿ ಕಟಾವು ಮತ್ತು ಹದ ಮಾಡುವ ನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಬಗೆಯ ಕ್ಯಾನ್ಸರ್...

ಪೂರ್ಣಗೊಳ್ಳದ ಸುವರ್ಣ ಗ್ರಾಮ ಯೋಜನೆ : ದೂರು

ಜಾವಗಲ್: ಗ್ರಾಮದ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡುವುದಕ್ಕಾಗಿ ಇರುವ ಸುವರ್ಣ ಗ್ರಾಮ ಯೋಜನೆ ಸರಿಯಾದ ರೀತಿಯಲ್ಲಿ ಪೂರ್ಣ ಗೊಂಡಿಲ್ಲ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜನಪ್ರತಿ ನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಗ್ರಾಮದ ಜನತೆ ದೂಷಿಸಿ ದ್ದಾರೆ. ಯೋಜನೆಯಲ್ಲಿ ಪ್ರಥಮ ಹಂತ ವಾಗಿ ಕಾಂಕ್ರೀಟ್ ರಸ್ತೆಗೆ ೨೦ ಲಕ್ಷ ರೂ. ವೆಚ್ಚ ಮಾಡಿರುವುದು ಹಾಗೂ ಸಮುದಾಯ ಭವನ ನಿರ್ಮಾಣ ಕಾರ್ಯ ಬಿಟ್ಟರೆ ಯಾವುದೇ...

ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಪಕ್ಷಿನೋಟ

(ರಾಮೇಗೌಡ) ಚನ್ನರಾಯಪಟ್ಟಣ ತಾಲ್ಲೂಕು ಶ್ರೀನಿವಾಸಪುರದ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯು ಕಬ್ಬು ನುರಿಸುವ ಕಾರ್ಯವನ್ನು ೧೯೮೪ರ ನವೆಂಬರ್ ಮಾಹೆಯಿಂದ ಆರಂಭಿ ಸಿತು. ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕುಗಳು ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ, ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರು, ಚಿಕ್ಕ ನಾಯಕನಹಳ್ಳಿ ಮತ್ತು ಗುಬ್ಬಿ ತಾಲ್ಲೂಕುಗಳ ಗ್ರಾಮ ಗಳು ಕಾರ್ಖಾನೆಯ ಕಾರ್ಯವ್ಯಾಪ್ತಿ ಗೊಳಪಟ್ಟಿವೆ. ೨೦೦೮ರ ಮಾಚ್ರ್ ಅಂತ್ಯದಲ್ಲಿ ದ್ದಂತೆ ಕಾರ್ಖಾನೆಯ ರೂ. ೮೮೭.೧೮...

ಸಂತೆ ಜಾಗ ಅತಿಕ್ರಮಣ : ಆರೋಪ

ರಾಮನಾಥಪುರ: ಸಂತೆ ನಡೆಯುವ ಬಸವಾಪಟ್ಟಣದ ಅರೇಕಲ್ಲು ಪ್ರದೇಶದ ಸರ್ಕಾರಿ ಜಾಗ ವನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಲು ಮುಂದಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಚಪ್ಪ ಶೆಟ್ಟಿ ಅವರು ಆರೋಪಿಸಿದ್ದಾರೆ. ಗ್ರಾಮದ ಮೈಸೂರು ರಸ್ತೆಯಲ್ಲಿ ಹಳೇ ಸಂತೆ ಜಾಗ ವಾಹನಗಳ ಸಂಚಾರ ಹಾಗೂ ಜನದಟ್ಟಣೆಯಿಂದ ಕೂಡಿತ್ತು. ಇದರಿಂದ ಸಂತೆ ನಡೆಯಲು ತೊಂದರೆಯಾಗಿದ್ದರಿಂದ ಕಳೆದ ಒಂದು ವರ್ಷದಿಂದ ಅರೇಕಲ್ಲು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ವತಿಯಿಂದ...

ಹೆಣ್ಣಿನ ಮೌಲ್ಯ ಅಪಮೌಲ್ಯವಾಗುತ್ತಿದೆ : ವಿಷಾದ

ಹಾಸನ : ಜನತೆ ಹೆಣ್ಣು ಭ್ರೂಣ ಹತ್ಯೆಯಂತಹ ಹೀನ ಕೃತ್ಯಗಳನ್ನು ತಡೆ ಗಟ್ಟುವುದರ ಮೂಲಕ ಹೆಣ್ಣು ಮಗುವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕ್ಷೇತ್ರ ಪ್ರಚಾರ ನಿರ್ದೇಶ ನಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಟಿ.ಬಿ. ನಂಜುಂಡಸ್ವಾಮಿ ತಿಳಿಸಿದರು. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ನೆಹರು ಯುವ ಕೇಂದ್ರ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಹಿಳಾ ಸರ್ಕಾರಿ...

೩೪೫ ಹೆಕ್ಟೇರ್ಗೆ ಹನಿ ನೀರಾವರಿ

ಹಾಸನ : ಜಿಲ್ಲಾ ಕೋಟಗಾರಿಕೆ ಇಲಾಖಾ ವತಿಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಕಾರ್ಯಕ್ರಮದಡಿ ಪ್ರಸಕ್ತ ಸಾಲಿನ ಜುಲೈ ಅಂತ್ಯದವರೆಗೆ ೨೫೦ ಹೆಕ್ಟೇರ್ಗೆ ಶುಂಠಿ ಬಿತ್ತನೆ ಬೀಜ, ೧೦ ಹೆಕ್ಟೇರ್ ಪ್ರದೇಶಕ್ಕೆ ಕಾಳು ಮೆಣಸು ಬಳ್ಳಿ ವಿತರಣೆ, ೫೫ ಹೆಕ್ಟೇರ್ ಬಾಳೆ ಪ್ರದೇಶ ವಿಸ್ತರಣೆ, ೩೮ ಹೆಕ್ಟೇರ್ ಮಾವು ಪ್ರದೇಶ ವಿಸ್ತರಣೆ, ೫೨ ಹೆಕ್ಟೇರ್ ಸಪೋಟ ಪ್ರದೇಶ ವಿಸ್ತರಣೆ, ೫೮ ಹೆಕ್ಟೇರ್ ಪುಷ್ಪಾಭಿವೃದ್ಧಿ ಪ್ರದೇಶ...

ನಗರಸಭೆ ಎಚ್ಚರಗೊಳ್ಳಬೇಕಿದೆ

ಮಾನ್ಯರೆ, ಹಾಸನ ನಗರಸಭೆಯು ಕೆಲಸ ನಿರ್ವಹಿಸದೆ ಆರಾಮವಾಗಿ ಇದೆ ಎಂದು ಅನ್ನಿಸುತ್ತಿದೆ. ಹಾಸನದ ಮುಖ್ಯ ರಸ್ತೆಗಳಲ್ಲಿರುವ, ಗುಂಡಿಗಳು, ಕೆಟ್ಟು ವಾಸನೆ ಬರುತ್ತಿರುವ ಚರಂಡಿಗಳು, ಕೆಟ್ಟು ಹೋಗಿರುವ ಬೀದಿ ದೀಪಗಳು, ಎಲ್ಲೆಲ್ಲಿ ನೋಡಿದರೂ ಗೊಚ್ಚೆ, ಕಸ ತುಂಬಿ ತುಳುಕುತ್ತಿರುವ ತೊಟ್ಟಿಗಳು ಈ ಎಲ್ಲಾ ಅವ್ಯವಸ್ಥೆಗಳನ್ನು ಮೊದಲು ಸರಿ ಮಾಡಬೇಕಿದೆ. ನಿಂತ ನೀರಿನಲ್ಲಿ ಅನೇಕ ರೋಗಗಳು ಹರಡುತ್ತವೆ. ಇದಕ್ಕೆ ಮೊನ್ನೆ ಮೊನ್ನೆ ತಾನೆ, ಮಂಗಳೂರಿನಲ್ಲಿ ಸಾರ್ವಜನಿಕರು...

ಪರಿಶಿಷ್ಟರ ಸಭೆ ನಡೆಸಿ

ಮಾನ್ಯರೆ, ಜಿಲ್ಲೆಗೆ ಹೊಸದಾಗಿ ಜಿಲ್ಲಾಧಿಕಾರಿಗಳಾಗಿ ಬಂದಿರುವ ನವೀನ್ರಾಜ್ ಸಿಂಗ್ಅವರು ಅತ್ಯಲ್ಪ ಅವಧಿಯಲ್ಲಿ ಜಡ್ಡುಗಟ್ಟಿ ಹೋಗಿದ್ದ ಆಡಳಿತಕ್ಕೆ ಚುರುಕು ಮುಟ್ಟಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳ ಪರಿಹಾರದ ಭರವಸೆಯನ್ನು ಮೂಡಿಸಿರುವುದು ಮತ್ತು ಅಧಿಕಾರಶಾಹಿ ವರ್ಗದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ವಾತಾವರಣವನ್ನು ಸೃಷ್ಟಿಪಸಿರುವುದು ಸ್ವಾಗತಾರ್ಹವಾದರೂ ದಲಿತ ಸಮುದಾಯದ ವಿವಿಧ ಬಗೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಹಿತರಕ್ಷಣಾ ಸಮಿತಿಯ ಸಭೆಯನ್ನು...

ರಸ್ತೆ ಸರಿಪಡಿಸಿ

ಮಾನ್ಯರೆ, ಹಾಸನ ನಗರದ ೨ ನೇ ಹಂತ ಕುವೆಂಪುನಗರ ಬಡಾವಣೆಯ ಮುಖ್ಯ ರಸ್ತೆ ತೀವ್ರ ಹದಗೆಟ್ಟಿದ್ದು ನಡೆದಾಡಲು ಹಾಗೂ ದ್ವಿಚಕ್ರವಾಹನಗಳಲ್ಲಿ ಓಡಾಡಲು ಸರ್ಕಸ್ ಮಾಡಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಓಡಾಡಿ ಸೊಂಟ ಉಳುಕಿಸಿಕೊಂಡು ಮಂಗಳೂರಿನ ಆಸ್ಪತ್ರೆಗೆ ಸೇರಿ ಸರಿ ಮಾಡಿಸಿಕೊಂಡ ಪ್ರಸಂಗಗಳಿವೆ. ಈ ಬಡಾವಣೆಯಲ್ಲಿ ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜಿದ್ದು, ವಿದ್ಯಾರ್ಥಿಗಳು ದೂರದ ಊರುಗಳಿಂದ ಓದಲು ಬರುತ್ತಿದ್ದಾರೆ. ಆದರೆ ರಸ್ತೆಗಳು ತೀವ್ರ ಹದಗೆಟ್ಟಿದ್ದು...

ಎಚ್ಚರಿಕೆ ! ಆಫ್ರಿಕನ್ ಕ್ಯಾಟ್ಫಿಶ್ ಸಾಕುವಂತಿಲ್ಲ

ಹಾಸನ : ನಿಷೇದಿತ ಆಫ್ರಿಕನ್ ಕ್ಯಾಟ್ ಫಿಶ್ (ಆನೆ ಮೀನು) ಇದನ್ನು ಅಲ್ಲಲ್ಲಿ ಗೌಪ್ಯವಾಗಿ ಬೆಳೆಯಲಾಗು ತ್ತಿದ್ದು, ಇದು ಮತ್ಸ್ಯ ಕೃಷಿಗೆ ಮಾರಕ ವಾಗಿ ಪರಿಣಮಿಸಿದೆ. ಈ ತಳಿಯ ಸಂವರ್ಧನೆಯು (ಪಾಲನೆ), ಕಾನೂನಿನಂತೆ ಅಪರಾಧ, ಭಾರತ ದಲ್ಲೆಲ್ಲೂ ಮೀನಿನ ತಳಿಯನ್ನು ಬೆಳೆಯ ಬಾರದು ಎಂದು ಸುಪ್ರೀಂ ಕೋಟ್ರ್ ಆದೇಶ ನೀಡಿದೆ ಎಂದು ಜಿಲ್ಲಾ ಮೀನು ಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಆರೋಗ್ಯಕ್ಕೆ...

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಕಾಯ್ದೆ ರೂಪ

ಜನಸಾಮಾನ್ಯರ ಅಭಿಪ್ರಾಯ ಕ್ರೋಢೀಕರಿಸಿ ರೂಪುಗೊಂಡ ಉದ್ಯೋಗ ಖಾತರಿ ಕಾಯ್ದೆಯನ್ನು ಘಿಫಘಿಫರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿ ನಿಯಮ -೨೦೦೫ಫಫ ಎಂದೆ ಹೆಸರಿಸಲಾಗಿದೆ. ಆಯಾ ರಾಜ್ಯಗಳು ಪ್ರಾದೇಶಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಧಿನಿಯಮಕ್ಕೆ ಪೂರಕವಾಗಿ ಸ್ಥಳೀಯವಾಗಿ ನಿಯಮಗಳನ್ನು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದರನ್ವಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ- ಕರ್ನಾಟಕ ಜಾರಿಯಲ್ಲಿದೆ. ಸದರಿ ಯೋಜನೆ ಗುರಿ ನಿಗದಿತವಲ್ಲ. ಹಾಗೆಂದು ಪ್ರಯತ್ನವಿಲ್ಲದೆ ತಟಸ್ಥ ನಿಲುವು...

ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ : ಭರವಸೆ

ಹಾಸನ : ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕರ್ನಾಟಕ ಪ್ಲಾಂಟರ್್ಸ ಒಕ್ಕೂಟಗಳು (ಕೆ.ಪಿ.ಎ.) ವಿಧಾನಪರಿಷತ್ ಸದಸ್ಯ ರಾದ ಮೋಟಮ್ಮ, ಅರಕಲಗೂಡು ಶಾಸಕ ಎ. ಮಂಜು, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎನ್. ಕೆ. ಪ್ರದೀಪ್, ಮಾಜಿ ಅಧ್ಯಕ್ಷರುಗಳಾದ ಹೆಚ್.ಆರ್. ಲಕ್ಷ್ಮಣಗೌಡ, ಬಿ.ಎ. ಜಗನ್ನಾಥ್, ಉಪಾಧ್ಯಕ್ಷ ಎಂ.ಎಸ್. ಲಿಂಗಪ್ಪ ಗೌಡ, ಜಿಲ್ಲಾ ಪ್ಲಾಂಟರ್್ಸ ಸಂಘದ ಅಧ್ಯಕ್ಷ ಹೆಚ್.ಹೆಚ್. ಉದಯ, ಕೆ.ಪಿ.ಎ. ಅಧ್ಯಕ್ಷ ಸಿ.ಎಂ....

ಹಾಸನ ಜಿಲ್ಲೆ ಅಭಿವೃದ್ಧಿ : ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಸೂಚನೆ

ಹಾಸನ : ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಭರತ್ಲಾಲ್ ಮೀನಾ ಅವರು ಮಂಗಳವಾರ ದಂದು ನಗರಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು. ಪ್ರಗತಿ ಪರಿಶೀಲಿಸುವಂತೆ ಪ್ರಗತಿಯ ಅಂಕಿ-ಅಂಶಗಳ ತುಲನಾತ್ಮಕ ಅಂಶ ಮಾತ್ರ ವಾಗಿರದೆ ಸಮಾಜದ ಕೆಳಸ್ತರ ದಲ್ಲಿರುವ...

ಕೋಮು ಸೌಹಾರ್ದ ಸಭೆ

ಸಕಲೇಶಪುರ : ಪಟ್ಟಣದಲ್ಲಿ ಹಸಿರು ಬಣ್ಣದ ಧ್ವಜಕ್ಕೆ ಸಂಬಂಧ ಉಂಟಾಗಿದ್ದು ಕಹಿ ವಾತಾ ವರಣವು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಮಂಗಳ ವಾರ ಸಂಜೆ ೪ ಗಂಟೆಗೆ ಕೋಮು ಸೌಹಾರ್ದ ಸಭೆ ಏರ್ಪಡಿಸ ಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಸೀನಪ್ಪ ಶೆಟ್ಟಿ ಕಲ್ಯಾಣ ಮಂದಿರದಲ್ಲಿ ನಡೆಯ ಲಿರುವ ಈ ಸಭೆಯಲ್ಲಿ ವಲಯ ಪೊಲೀಸ್ ವರಿಷ್ಠಾಧಿಕಾರಿ ಗಳು, ರಾಜಕೀಯ ಮುಖಂಡರು ಗಳು ಪತ್ರಕರ್ತರು...

ಗಣೇಶ ಹಬ್ಬಕ್ಕೆ ಚಂದಾ ವಸೂಲಿ ನಿಷೇಧ

ಹಾಸನ : ಗೌರಿ-ಗಣೇಶ ಹಬ್ಬಗಳಿಗೆ ಸಂಘಸಂಸ್ಥೆಗಳು, ಸಾರ್ವಜನಿಕರಿಂದ ಚಂದಾ ಹಣ ವಸೂಲಿ ಮಾಡದಂತೆ ಹಾಗು ಚಂದಾ ಹಣ ಒತ್ತಡ ಹೇರದಂತೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಶರತ್ಚಂದ್ರ ಎಚ್ಚರಿಸಿದ್ದು, ಈ ಬಗ್ಗೆ ದೂರು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಣ ನೀಡುವಂತೆ ಒತ್ತಾಯ ಮಾಡುವವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅವರು ಕೋರಿದ್ದಾರೆ.

ಸಮುದಾಯ ಸಹಭಾಗಿತ್ವದಲ್ಲಿ ಸಮೃದ್ಧಿ

ಹಾಸನ : ಅಪ್ನಾದೇಶ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಹಾಗು ಹಾಸನ ಲಯನ್್ಸ ಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳ ವಾರ ಸಮಾಜದ ಉನ್ನತಿ ಕುರಿತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಭರತ್ ಲಾಲ್ ಮೀನರವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಾಂತರ ಜನತೆಯ ಸರ್ವಾಂ ಗೀಣ ಅಭಿವೃದ್ಧಿಗಾಗಿ ಅಪ್ನಾದೇಶ್ ಮತ್ತು ಸಮುದಾಯ...

ಕೇಂದ್ರ ಪರಿಷತ್ಗೆ ನಲ್ಲೂರು ಪ್ರಸಾದ್

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಅಧ್ಯಕ್ಷ ಚುನಾವಣೆ ಯಲ್ಲಿ ನಲ್ಲೂರು ಪ್ರಸಾದ್ ಅವರು ಜಯ ಭೇರಿ ಬಾರಿಸಿದ್ದು, ತಮ್ಮ ಪ್ರತಿಸ್ಪರ್ಧಿ ಸಿ.ವೀರಣ್ಣ ಅವರನ್ನು ೧೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳು ವಿಶೇಷವಾಗಿ ಉತ್ತರ ಕರ್ನಾಟಕದ ಭಾಗಗಳು ಅವರನ್ನು ಬೆಂಬಲಿಸಿವೆ. ಆಯ್ಕೆಯ ಅಧಿಕೃತ ಪ್ರಕಟಣೆ ಸೋಮ ವಾರ ಹೊರ ಬೀಳಲಿದೆ. ಚನ್ನ ರಾಯಪಟ್ಟಣ ತಾಲ್ಲೂಕು ನಲ್ಲೂರು...

ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ ಉದಯರವಿ ಆಯ್ಕೆ

ಹಾಸನ : ತೀವ್ರ ಕುತೂ ಹಲ ಮೂಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆಯಲ್ಲಿ ಉದಯರವಿ ಚುನಾಯಿತ ರಾದರು. ಭಾನುವಾರ ನಡೆದ ಮತದಾನ ದಲ್ಲಿ ಅವರು ತಮ್ಮ ಸಮೀಪ ಪ್ರತಿ ಸ್ಪರ್ಧಿ ಡಾ।। ವೈ.ಎಸ್.ವೀರಭದ್ರಪ್ಪ ಅವರಿಗಿಂತ ೩೨೬ ಅಧಿಕ ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ. ಉದಯರವಿ (೭೩೦), ವೈ.ಎಸ್. ವೀರಭದ್ರಪ್ಪ (೪೦೪), ದಿನೇಶ್(೩೭೮) ಹಾಗೂ ಧರ್ಮರಾಜ್ ಕಡಗ ೩೫ ಮತಗಳನ್ನು ಪಡೆದಿದ್ದಾರೆ.೧೯೮೯ ಒಟ್ಟು...

ಬೆಳ್ಳುಬ್ಬಿ ಇಂದು ರಾಜಿನಾಮೆ

ಬೆಂಗಳೂರು : ರಾಜಿನಾಮೆ ನೀಡಲು ತೋಟಗಾರಿಕಾ ಸಚಿವ ಬೆಳ್ಳುಬ್ಬಿ ಒಪ್ಪಿಗೆ ಸೂಚಿಸಿದ್ದು, ಭಾನು ವಾರ ಸಂಜೆ ಮುಖ್ಯಮಂತ್ರಿಗಳಿಗೆ ರಾಜಿನಾಮೆ ಸಲ್ಲಿಸುವ ನಿರೀಕ್ಷೆಯಿದೆ. ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರೊಂದಿಗೆ ಶನಿ ವಾರ ತೀವ್ರ ಸಮಾಲೋಚನೆ ನಡೆಸಿದ ನಂತರ ಅವರು ಈ ನಿರ್ಧಾರ ಪ್ರಕಟಿಸಿ ದರು. ಭಾನುವಾರ ಸಂಜೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿ ರಾಜಿ ನಾಮೆ ಪ್ರಕಟಿಸುವುದಾಗಿ ಬೆಳ್ಳುಬ್ಬಿ ಹೇಳಿ ದರ

ಕಟ್ಟಡ ಕಾರ್ಮಿಕರ ಮಾನವ ಸರಪಳಿ

ಹಾಸನ : ವಿವಿಧ ಬೇಡಿಕೆಗೆ ಒತ್ತಾ ಯಿಸಿ ಶನಿವಾರ ಹಾಸನದಲ್ಲಿ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಾರ್ಮಿಕರು ರಸ್ತೆತಡೆ ನಡೆಸಿದರು. ಬೆಳಿಗ್ಗೆ ೧೧ ಗಂಟೆಯ ವೇಳೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗ ಮಿಸಿದ್ದ ನೂರಾರು ಸಂಖ್ಯೆಯ ಕಾರ್ಮಿಕರು ಹೇಮಾವತಿ ಪ್ರತಿಮೆಯ ಮುಂದೆ ಜಮಾಯಿಸಿದರು. ನಂತರ ಬಸ್ ನಿಲ್ದಾಣ ರಸ್ತೆಯ ಮೂಲಕ ಮೆರ ವಣಿಗೆಯು ಎನ್.ಆರ್. ಸರ್ಕಲ್ನ್ನು ಪ್ರವೇಶಿಸಿತು. ಎನ್.ಆರ್. ಸರ್ಕಲ್ನಲ್ಲಿ...

ನೆಪ ಮಾತ್ರದ ಅಭ್ಯರ್ಥಿ ಅಲ್ಲ

ಹಾಸನ : ನೆಪ ಮಾತ್ರಕ್ಕೆ ಅಭ್ಯರ್ಥಿ ಅಲ್ಲವೆಂದು ಸ್ಪಷ್ಟಪಡಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಾಂಕ್ಷಿ ಧರ್ಮರಾಜ ಕಡಗ ತೀವ್ರ ಸ್ಪರ್ಧೆ ವೊಡ್ಡಿರು ವುದಾಗಿ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾನುವಾರ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾ ವಣೆಯಲ್ಲಿ ತಮ್ಮನ್ನೂ ಬೆಂಬಲಿಸ ಬೇಕೆಂದು ಕೋರಿದರು. ಪರಿಷತ್ ಚುನಾವಣೆ ನೋವು ತಂದಿದೆ ಎಂದರಲ್ಲದೆ, ಜಾತಿ ಸೋಕು ತಗುಲುವುದು ಒಳಿತಲ್ಲ ಎಂದರು. ಸಾಹಿತ್ಯ...

ಬಿ.ಜೆ.ಪಿ. ರಾಜಕಾರಣ ಅಶ್ಲೀಲ : ದೇವೇಗೌಡ ಆಕ್ರೋಶ

ಚನ್ನರಾಯಪಟ್ಟಣ : ಅಧಿಕಾರದ ಉಳಿವಿಗಾಗಿ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯುತ್ತಿರುವ ಬಿ.ಜೆ.ಪಿ., ಅಶ್ಲೀಲ ರಾಜ ಕಾರಣದಲ್ಲಿ ತೊಡಗಿದೆ. ಈ ಹೇಸಿಗೆ ರಾಜಕಾರಣವನ್ನು ಅದು ಜೀರ್ಣಿಸಿ ಕೊಳ್ಳಲಾಗದು ಎಂದು ಮಾಜಿ ಪ್ರಧಾನಿ ಹಾಗೂ ಸಂಸತ್ ಸದಸ್ಯ ಹೆಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ತಾಲ್ಲೂಕಿನ ದಿಡಗದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿ.ಜೆ.ಪಿ. ವಿರುದ್ಧ ಕೆಂಡಾಮಂಡಲ ವಾದರು. ಬಿ.ಜೆ.ಪಿ. ವಿರುದ್ಧ ಇಂತಹ ಕೆಟ್ಟ ಪದ ಪ್ರಯೋಗ...

ಮಣ್ಣು ಮುಟ್ಟಿದವ ಕೊಬ್ಬರು ಇಬ್ಬರು ಸಾಲ ತೀರಿಸಲಾರದೆ ಸಾಯ್ತ

ಮಳೆ ಧೋ ಅಂತ ಸುರಿಯುತ್ತಿತ್ತು. ಆಕಾಶವೇ ಕಳಚಿ ಬೀಳುವುದೇನೋ ಎನ್ನುವಂತೆ ಮಳೆ ಆರ್ಭಟಿಸುತ್ತಿತ್ತು. ಬಿಡುವು ಕೊಡದೆ ಸುರಿಯುತ್ತಿರುವ ಮಳೆ, ಮೈ ನಡುಗಿಸುತ್ತಿರುವ ಚಳಿಯಿಂದಾಗಿ ಸದಾನಂದ ಬಸ್ಸು ಎಷ್ಟು ಹೊತ್ತಿಗೆ ಹೊರಡುವುದೋ ಎಂದು ಕಾಯುತ್ತಿದ್ದ. ಬೆಳಿಗ್ಗೆ ಹೊರಡುವಾಗ ಮಳೆ ಬರುವ ಸೂಚನೆಯೇ ಇರಲಿಲ್ಲ. ಹಾಗೆಂದುಕೊಂಡೇ ಪೇಟೆಗೆ ಹೊರಟಿದ್ದ. ಅಂಗಡಿಯ ಸಾಮಾನುಗಳು ಮುಗಿದು ಹೋಗಿದ್ದು, ಇವತ್ತು ಮಳೆ ಬಾರದೆಂಬ ಧೈರ್ಯದಿಂದ ಇವತ್ತು ಸಾಮಾನು ತಂದೇ ಬಿಡ...

ಹೆಚ್.ಐ.ವಿ.ಪೀಡಿತ ವ್ಯಕ್ತಿ ಅಮೆರಿಕಾದ ಅಧ್ಯಕ್ಷನಾಗಬಹುದೆ ?

ಇತ್ತೀಚೆಗೆ ಮೆಕ್ಸಿಗೋ ನಗರದಲ್ಲಿ ೧೭ ನೇ ಅಂತರರಾಷ್ಟ್ರೀಯ ಏಡ್್ಸ ಸಮ್ಮೇಳನ ಜರುಗಿತು. ವರುಷಗಳಿಂದ ಏಡ್್ಸಗೆ ಔಷಧ ಕಂಡು ಹಿಡಿಯಲು ಶ್ರಮಿಸುತ್ತಿ ರುವ ವೈದ್ಯ ವಿಜ್ಞಾನಿಗಳು, ಏಡ್್ಸ ಬಗ್ಗೆ ಅರಿವು ಮೂಡಿಸಲು ದುಡಿಯುತ್ತಿರುವ ಕಾರ್ಯ ಕರ್ತರು, ಸರ್ಕಾರೇತರ ಸಂಸ್ಥೆಗಳು ಮತ್ತು ಸರ್ಕಾರಗಳ ಪ್ರತಿನಿಧಿಗಳು ಹೀಗೆ ಅನೇಕರು ನೂರಾರು ದೇಶ ಗಳಿಂದ ಆಗಮಿಸಿ ಈ ಸಮ್ಮೇಳ ದನಲ್ಲಿ ಭಾಗವಹಿಸಿ ಏಡ್್ಸಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ನಡೆಸಿದರು....

ತೆನಾಲಿರಾಮನು ಜಗಜಟ್ಟಿಯನ್ನು ಸೋಲಿಸಿದ್ದು

ಒಂದು ಬಾರಿ ತುಂಬಾ ಬಲಿಷ್ಟ ನಂತೆ ಕಾಣುತ್ತಿದ್ದ ಒಬ್ಬ ಜಟ್ಟಿ ಆಸ್ಥಾನಕ್ಕೆ ಬಂದ. ರಾಜನಾದ ಕೃಷ್ಣದೇವರಾಯನನ್ನು ಶ್ರದ್ಧೆ, ಭಕ್ತಿಯಿಂದ ನಮಸ್ಕರಿಸುತ್ತಾ ಹೇಳಿದ,ಘಿಫಘಿಫ ಮಹಾ ರಾಜರೇ, ನಾನು ದೆಹಲಿಯಿಂದ ಬರುತ್ತಿದ್ದೇನೆ. ಸಾಕಷ್ಟು ಕಡೆ ಕುಸ್ತಿ ಮಾಡಿ, ಎಲ್ಲರನ್ನೂ ಸೋಲಿಸಿ, ಪದಕ-ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಿಮ್ಮ ರಾಜ್ಯದಲ್ಲಿಯೂ ಬಹು ಮಂದಿ ಮಲ್ಲರು ಇರುವರೆಂಬ ವಿಷಯ ತಿಳಿದು, ಅವರನ್ನೂ ಒಂದು ಕೈ ನೋಡಿ ಕೊಂಡು ಹೋಗೋಣ ಅಂದು ಕೊಂಡು...

ಜಿಲ್ಲೆಗೆ ಭರತ್ಲಾಲ್ ಮೀನಾ

ಹಾಸನ : ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್ಲಾಲ್ ಮೀನಾ ಅವರು ಜಿಲ್ಲೆಯಲ್ಲಿ ಆ. ೨೫ರಂದು ಪ್ರವಾಸ ಹಮ್ಮಿ ಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ ಮತ್ತು ಡಾ।। ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಸಂವಾದ ಕಾರ್ಯಕ್ರಮ ವನ್ನು ಮಧ್ಯಾಹ್ನ ೧೨ ಗಂಟೆಗೆ ಲಯನ್್ಸ ಕ್ಲಬ್, ಕೆ.ಜಿ.ಐ.ಡಿ....

ಆನೆಮಹಲ್ ಶಾಲೆಗೆ ಕೊಡುಗೆ

ಸಕಲೇಶಪುರ : ಲಯನ್್ಸ ಮತ್ತು ಲಯನೆಸ್್ಸ ಸಂಸ್ಥೆ ವತಿಯಿಂದ ಅಕ್ಷರ ದಾಸೋಹಕ್ಕೆ ತಟ್ಟೆ ಮತ್ತು ಲೋಟಗಳನ್ನು ವಿತರಿಸಲಾಯಿತು. ತಾಲ್ಲೂಕಿನ ಆನೆಮಹಲ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ವಿತರಿಸುವ ಸಲುವಾಗಿ ೧೮೦ ತಟ್ಟೆ ಮತ್ತು ಲೋಟಗಳನ್ನು ಸ್ವಾತಂತ್ರ್ಯೋತ್ಸವ ದಿನದಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಭಾಷ್ಚಂದ್ರ ಬೋಸ್ ಅವರಿಗೆ ಸಂಸ್ಥೆ ಅಧ್ಯಕ್ಷ ಪ್ರಭಾಕರ್ ನೀಡಿದರು. ಇದಕ್ಕೂ ಮುನ್ನ ಕ್ರಾಫಡ್ರ್ ಆಸ್ಪತ್ರೆ ಆವರಣದಲ್ಲಿ ಧ್ವಜಾ ರೋಹಣ ನೆರವೇರಿಸಿ, ಆಸ್ಪತ್ರೆಯ...

ಹೋಲಿ ಚಿಲ್ಡನ್ ಶಾಲೆಯಲ್ಲಿ ವಿಶ್ವ ಹದಿ ಹರೆಯ ದಿನಾಚರಣೆ

ಹಾಸನ : ನಗರದ ಹೋಲಿ ಚಿಲ್ಡ†ನ್ ಪ್ರೌಢಶಾಲೆಯಲ್ಲಿ ವಿಶ್ವ ಹದಿ ಹರೆಯದ ದಿನಾಚರಣೆಯನ್ನು ಮಕ್ಕಳ ತಜ್ಞರು ಶಾಖೆ ಆಯೋಜಿ ಸಿತ್ತು. ಶಕುಂತಲಾರಾಮೇಗೌಡ ಉದ್ಘಾಟಿ ಸಿದರು. ಮುಖ್ಯ ಅತಿಥಿಗಳಾಗಿ ರಾಮೇ ಗೌಡ ಉಪಸ್ಥಿತರಿದ್ದರು. ಡಾ।। ದೊಡ್ಡೇಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ।। ದಿನೇಶ್ ಬಿ. ಹಾಗೂ ಡಾ।। ಶಿವು ಅವರು ಹದಿಹರೆಯದ ಆರೋಗ್ಯ, ಜೀವನ ಶೈಲಿ, ತೊಂದರೆ ಗಳು ಹಾಗೂ ಏಡ್್ಸ ರೋಗದ ಬಗ್ಗೆ ತಿಳುವಳಿಕೆ...

ಸಂಸ್ಕೃತಮ್ ಕಾಲೇಜಿನಲ್ಲಿ ನಾಯಕತ್ವ ತರಬೇತಿ

ಹಾಸನ : ನಗರದ ಪ್ರತಿಷ್ಟಿತ ಸಂಸ್ಕೃತಮ್ ಕಾಲೇಜಿನಲ್ಲಿ ಆ. ೧೬ ರಿಂದ ೧೮ ರವರೆಗೆ ವಿದ್ಯಾರ್ಥಿಗಳಿಗಾಗಿ ನಾಯಕತ್ವ ತರಬೇತಿ ಶಿಬಿರ ನಡೆಸ ಲಾಯಿತು. ನಗರದ ವಿವಿಧ ಕಾಲೇಜು ಗಳಿಂದ ಆಗಮಿಸಿದ್ದ ೮೦ ವಿದ್ಯಾರ್ಥಿ ಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಆ. ೧೮ ರಂದು ಪ್ರತ್ಯೇಕವಾಗಿ ಗ್ರಾಮೀಣ ಪ್ರದೇಶದ ಕಾಲೇಕುಗಳಿಂದ ಆಗಮಿ ಸಿದ್ದ ೫೦ ವಿದ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಯಿತು. ಮುಂಬೈನ...

ಎಸ್.ಎಸ್.ಎಲ್.ಸಿ. ವಕ್ರ್ ಬುಕ್

ಹಾಸನ : ಸ್ಥಳೀಯ ರಾವ್್ಸ ಮತ್ತು ಮೂರ್ತೀಸ್ ಸಂಸ್ಥೆ ಎಸ್.ಎಸ್. ಎಲ್.ಸಿ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಐಚ್ಚಿಕ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರಗಳ ವಕ್ರ್ ಬುಕ್ಗಳನ್ನು ಹೊರ ತಂದಿದೆ. ನುರಿತ ಮತ್ತು ಸಂಪನ್ಮೂಲ ಹಿರಿಯ ಪ್ರಾಧ್ಯಾಪಕರುಗಳು ತಯಾರಿ ಸಿರುವ ಈ ಮೂರು ಪುಸ್ತಕಗಳಲ್ಲಿ ವಿದ್ಯಾರ್ಥಿಗಳಿಗೆ ೩೩೦೦ ಕ್ಕೂ ಹೆಚ್ಚಿನ ಪ್ರಶ್ನೆಗಳು ಲಭ್ಯವಿದ್ದು ಸದರಿ ಪುಸ್ತಕ ಗಳಲ್ಲಿಯೇ ಅಭ್ಯಾಸ ನಡೆಸಲು ಸ್ಥಳಾವಕಾಶ...

ರಾಘವೇಂದ್ರ ಸ್ವಾಮಿ ಆರಾಧನೆ

ಹಾಸನ : ನಗರದ ರಾಘವೇಂದ್ರ ಮಠದಲ್ಲಿ ೩೩೭ನೇ ಆರಾಧನಾ ಮಹೋತ್ಸವ ನಡಗರ, ಸಂಭ್ರಮ ದಿಂದ ನೆರವೇರಿತು. ಚಿತ್ರಾಪುರ ಗೋಪಾಲ ಕೃಷ್ಟಾಚಾರ್ಯರ ಮಾರ್ಗ ದರ್ಶನದಲ್ಲಿ ಪೂಜಾದಿಗಳು ನಡೆದವು. ಬೃಂದಾ ವನಕ್ಕೆ ಮಾಡಿದ್ದ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು. ಪಲ್ಲವಿ ಪ್ರಸನ್ನ ಅವರಿಂದ ಭಕ್ತಿಸುಧಾ ಗಾಯನ ಕಛೇರಿ ವಿನಯಶರ್ಮ ಅವರಿಂದ ಭಕ್ತಿಗಾನ ಸುಧಾ ಮಲ್ಲಿಕಾ ಸಂಗೀತ ಕಛೇರಿ ಹಾಗೂ ಕೆ.ವಿ. ಕೃಷ್ಣಪ್ರಸಾದ್ ಹಾಗೂ ಎಸ್.ಆರ್. ವಿನಯ್...

ನಿಖರ ವಿಶ್ಲೇಷಣೆ

ಹಾಸನ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಫಜನತಾಮಾಧ್ಯಮಫ ಪತ್ರಿಕೆಯ ವಿಶ್ಲೇಷಣೆ ನಿಜವಾಯಿತು. ಮೊದಲೇ ಹೇಳಿದಂತೆ ಅರಸೀಕೆರೆ ತಾಲ್ಲೂಕನ್ನು ಹೊರತು ಪಡಿಸಿ ಉದಯ ರವಿ ಹೆಚ್ಚು ಮತಗಳನ್ನು ಪಡೆದುಕೊಂಡಿ ದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಯಂತೆ ಕಂಡು ಬಂದರೂ ಅಂತಿಮವಾಗಿ ಉದಯರವಿ ಹಾಗೂ ಡಾ।। ವೀರಭದ್ರಪ್ಪ ಅವರನ್ನು ಮತದಾರರು ಹೆಚ್ಚು ಪರಿ ಗಣಿಸಿರುವಂತಿದೆ ಎಂಬ ಭವಿಷ್ಯವು ವಸ್ತು...

೬.೫ ಲಕ್ಷ ರೂ. ಅಕ್ರಮ ತಂಬಾಕು ವಶ

ರಾಮನಾಥಪುರ : ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ೬.೫ ಲಕ್ಷ ರೂ. ಬೆಲೆಯ ತಂಬಾಕನ್ನು ತಂಬಾಕು ಮಂಡಳಿಯ ವಿಚಕ್ಷಣಾ ದಳ ಪತ್ತೆ ಹಚ್ಚಿ ವಶಪಡಿಸಿ ಕೊಂಡಿದೆ. ಉತ್ಕೃಷ್ಟ ದರ್ಜೆಯ ೬೦ ಬೇಲ್ ಗಳ ೭೦೭೪ ಕೆ.ಜಿ. ತಂಬಾಕನ್ನು ಎ.ಪಿ. ೧೬-೨೦೭೨ ನಂಬರಿನ ಆಂಧ್ರ ಲಾರಿಯಲ್ಲಿ ತುಂಬಿಕೊಂಡು ಗುಂಟೂರಿಗೆ ಭಾನುವಾರ ಬೆಳಿಗ್ಗೆ ೪ ಗಂಟೆಯಲ್ಲಿ ಸಾಗಿಸುತ್ತಿದ್ದಾಗ ಚನ್ನರಾಯಪಟ್ಟಣ ತಾಲ್ಲೂಕು ಹಿರೀ ಸಾವೆ ಬಳಿ...

ವಿಹಾರ ಮಂದುವರೆಸಿದ ಕಾಡಾನೆಗಳು

ಹಾಸನ : ಬನ್ನೇರುಘಟ್ಟ ಅರಣ್ಯ ದಿಂದ ಹಾದಿ ತಪ್ಪಿ ಬಂದಿರುವ ಸಲಗ ಹಾಗೂ ಹೆಣ್ಣಾನೆ ಕಳೆದ ಮೂರು ದಿನಗಳಿಂದಲೂ ಜಿಲ್ಲೆಯಲ್ಲಿ ವಿಹರಿಸು ತ್ತಿದ್ದು, ಭಾನುವಾರ ಹೊಳೆನರಸೀಪುರ ತಾಲ್ಲೂಕು ಭೀಮನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡವು. ಮಲೆನಾಡು ಭಾಗಗಳನ್ನಷ್ಟೇ ನೆಲೆ ಯಾಗಿ ಮಾಡಿಕೊಂಡಿದ್ದ ಕಾಡಾನೆ ಗಳು, ಈಗ ಬಯಲು ಸೀಮೆಗೂ ಲಗ್ಗೆ ಹಾಕು ತ್ತಿವೆ. ಶುಕ್ರವಾರ ಗಂಡಸಿ ಹೋಬಳಿ ಲಾಳನಕೆರೆಯಲ್ಲಿ ಇವು ಮೊದಲ ಬಾರಿಗೆ ಪತ್ತೆಯಾಗಿ ಶನಿವಾರ...

ಪಾರದರ್ಶಕ ಆಡಳಿತಕ್ಕೆ ಚಿಂತನೆ

ಹಾಸನ : ಸಾಹಿತ್ಯ ಪರಿಷತ್ನ ಆಡಳಿತವನ್ನು ಪಾರದರ್ಶಕವಾಗಿ ನಡೆಸಿಕೊಂಡು ಹೋಗಲಾಗುವುದು ಎಂದು ನೂತನ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಉದಯರವಿ ತಿಳಿಸಿದರು. ಚುನಾಯಿತಗೊಂಡ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಾಹಿತಿಗಳು ಕನ್ನಡಾಭಿಮಾನಿಗಳು ಹಾಗೂ ಹಿರಿಯರ ಸಲಹೆಯಂತೆ ಕೆಲಸ ಮಾಡುವುದಾಗಿಯೂ ಹೇಳಿದರು. ಪರಿಷತ್ನಲ್ಲಿ ಹತ್ತು ಹಲವು ಕೆಲಸಗಳಿವೆ. ಸದ್ಯಕ್ಕೆ ಯಾವುದಕ್ಕೆ ಆದ್ಯತೆ ನೀಡಬೇಕೆಂಬುದನ್ನು ಇನ್ನೂ ನಿರ್ಧರಿಸಿಲ್ಲ. ಈ ಸಂಬಂಧ ಹಲವರ ಸಲಹೆ...

ಆ.೨೬ರಂದು ನಗರಕ್ಕೆ ಲಿಂಬಾವಳಿ

ಹಾಸನ : ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅವರು ಆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿರುವ ಮೊದಲನೇ ತ್ರೆೃಮಾ ಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸುವರು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಶಂಕರ ನಾರಾಯಣ ಅವರು ತಿಳಿಸಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಸರ್ವ...

ಬಾಂಧವ್ಯದಿಂದ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ

ಹಾಸನ : ಜಿಲ್ಲೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ವಿವಿಧ ಸಹಕಾರ ಸಂಘಗಳ ವ್ಯವ ಸ್ಥಾಪಕರುಗಳು ಹಾಗೂ ಆಡಳಿತ ಮಂಡಳಿ ಯವರ ನಡುವಿನ ಬಾಂಧವ್ಯ ವೃದ್ಧಿಗೊಂಡಲ್ಲಿ ಅಂತಹ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಪಟೇಲ್ ಶಿವರಾಂ ಅವರು ಹೇಳಿ ದ್ದಾರೆ. ಅವರು ಆ.೨೨ರಂದು ಜಿಲ್ಲಾ ಸಹಕಾರ ಯೂನಿಯನ್ನಿನ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಯೂನಿಯನ್, ಕರ್ನಾಟಕ ರಾಜ್ಯ...

ನರ್ಸರಿ ಚಟುವಟಿಕೆ ಪುಸ್ತಕ ಬಿಡುಗಡೆ ಸಮಾರಂಭ

ಹಾಸನ : ಮಾತೃಭಾಷೆಯ ಕಲಿಕೆ ಯೊಂದಿಗೆ ಅಂತರರಾಷ್ಟ್ರೀಯ ಭಾಷೆ ಯಾದ ಆಂಗ್ಲ ಭಾಷೆಯ ಕಲಿಕೆಯ ಅವಶ್ಯಕತೆಯನ್ನೂ ಹಾಗೂ ನರ್ಸರಿ ಮಕ್ಕಳಲ್ಲೂ ಇಂಗ್ಲಿಷ್ ಮತ್ತು ಗಣಿತ ದಲ್ಲಿ ಕೌಶಲಗಳನ್ನು ಬೆಳೆಸಲು ಬೇಕಾ ಗಿರುವ ಎಲ್ಲಾ ಚಟುವಟಿಕೆಗಳು ಇರುವ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ವಿಲ್ಲದಿರುವುದರಿಂದ ಶಾಲೆಯ ವತಿ ಯಿಂದ ೫ ಪುಸ್ತಕಗಳನ್ನು ಹೊರತರ ಲಾಗುತ್ತಿದ್ದು, ಈಗ ವಿಜಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳು ದೊರೆಯಲಿದ್ದು,...

ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆ ಕಾಪಾಡಲು ಯತ್ನ

ಹಾಸನ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆ ಹಾಗೂ ಸಾಂದ್ರತೆ ಕಾಪಾಡಲು ಗಮನ ಹರಿಸ ಲಾಗುವುದೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ।। ವೈ.ಎಸ್.ವೀರಭದ್ರಪ್ಪ ತಿಳಿಸಿ ದರು. ಸಾಹಿತ್ಯ ಪರಿಷತ್ನಲ್ಲಿ ಪಾರ ದರ್ಶಕತೆ ಆಡಳಿತ ನಡೆಸಲು ಪ್ರಯತ್ನ ನಡೆಸಲಾಗುವುದೆಂದು ಅವರು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿ ದರು. ಭಾನುವಾರ ನಡೆಯುವ ಚುನಾ ವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ೪...

ಕಿರುಕುಳ : ಮಹಿಳೆ ಆತ್ಮಹತ್ಯೆ

ಅರಸೀಕೆರೆ : ಗಂಡನ ಮನೆಯವ ಕಿರುಕುಳ ಸಹಿಸಲಾರದೆ ಮಹಿಳೆ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಪಟ್ಟಣದ ಬಟ್ಟೆ ವ್ಯಾಪಾರಿ ಅಕ್ಬರ್ ಖಾನ್ ಅವರ ಪತ್ನಿ ಸಿರಿನಾ ತಾಜ್ (೨೧) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದು, ದಾವಣಗೆರೆ ವಾಸಿ ಶೇಕ್ ಮೆಹಬೂಬ್ ಅವರ ಮಗಳಾದ ಸಿರಿನಾತಾಜ್ ಅವರನ್ನು ೩ ವರ್ಷಗಳ ಹಿಂದೆ ಪಟ್ಟಣದ ವಜೀಲ್ ಖಾನ್ ಅವರ ಮಗ...