ಹಳೇಬೀಡು : ಅಪರಿಚಿತ ಶವ ಪತ್ತೆ

ಹಳೇಬೀಡು :   ಸಮೀಪದ ಪುಷ್ಪಗಿರಿ ಬೆಟ್ಟದ ಹಿಂಭಾಗದ ತಪ್ಪಲಿನಲ್ಲಿ ಅಪರಿಚಿತ ಪುರುಷನ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ಸುಮಾರು ಒಂದು ವಾರದ ಹಿಂದೆ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯನ್ನು ಗುರುತಿಸಲು ಯಾವುದೇ ಆಧಾರಗಳು ಲಭ್ಯವಾಗಿಲ್ಲ. ಪ್ರಾಣಿಗಳು ಶವವನ್ನು ಎಲ್ಲೆಂದರಲ್ಲಿ ಎಳೆದಾಡಿದ್ದಲ್ಲದೆ, ಕೀಟಗಳು ಗುರುತಿಸಲಾರದಂತೆ ಮುಖದ ಭಾಗವನ್ನು ತಿಂದು ಹಾಕಿವೆ. ದುರ್ವಾಸನೆ ಆಧಾರದ ಮೇಲೆ ಹತ್ತಿರಕ್ಕೆ ಸುತ್ತಮುತ್ತಲಿನ ಗ್ರಾಮದ ಜಾನುವಾರು ಮೇಯಿಸಲು...

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ

ಹಾಸನ : ಬೆಂಗಳೂರಿನಲ್ಲಿ  ಉದ್ಘಾಟನೆಗೊಂಡ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರ ಹೆಸರನ್ನು ನಾಮಕರಣ ಮಾಡುವಂತೆ ಹೆಚ್‌.ಡಿ. ಕುಮಾರ ಸ್ವಾಮಿ ಅಭಿಮಾನಿಗಳ ವೇದಿಕೆ ಒತ್ತಾಯಿಸಿದೆ. ವೇದಿಕೆಯ ಜಿಲ್ಲಾಧ್ಯಕ್ಷ ಗೋಪಿ ನಾಥ್‌ ಪತ್ರಿಕಾ ಹೇಳಿಕೆ ನೀಡಿ, ರಾಷ್ಟ್ರದಲ್ಲಿರುವ ೧೦ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಲವು ಮಾಜಿ ಪ್ರಧಾನಿಗಳ ಹೆಸರನ್ನು ಇಟ್ಟಿದ್ದು, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್‌.ಡಿ. ದೇವೇಗೌಡರ...

ಘಿಫಸಮಾಜದ ಪ್ರಗತಿಗೆ ಸಾಕ್ಷರರಾಗಬೇಕುಘಿಫ

ಕುಂದೂರು : ಪ್ರಗತಿ ಶೀಲ ಭಾರತ ದಲ್ಲಿಪ್ರತಿಯೊಬ್ಬ ಪ್ರಜೆಯೂ ಶಿಕ್ಷಣ ಪಡೆದು ಸಾಕ್ಷರರಾದಾಗ ಮಾತ್ರ ಸಮಾಜದ ಪ್ರಗತಿಯಾಗುತ್ತದೆ ಎಂದು ಕುಂದೂರು ವಲಯ ಸಹಾಯಕ ಶಿಕ್ಷಣಾಧಿಕಾರಿ ಕೆ.ಎನ್‌. ಶಿವನಂಜೇ ಗೌಡ ಅವರು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಆಲೂರು ತಾಲ್ಲೂಕು ಕುಂದೂರು ಪ್ರೌಢಶಾಲೆ ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಆಯೋಜಿಸಿದ್ದ ಚೈತ್ರದ ಚಿಗುರು ಚಿಣ್ಣರ ಅಂಗಳ ಬೇಸಿಗೆ ಶಿಬಿರದ ಕಾರ್ಯ...

ತರಬೇತಿ ಶಿಬಿರ

ಇತ್ತೀಚೆಗೆ ಬಿ.ಜಿ.ಎಸ್‌. ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಉಚಿತ ಸಿ.ಇಟಿ. ತರಬೇತಿ ಶಿಬಿರದ ಸಮಾರೋಪ  ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿದರು. ಡಾ।। ಸೌಮ್ಯಮಣಿ, ಪರಿಸರವಾದಿ ಅಶೋಕ್‌, ಪತ್ರಕರ್ತ ಆರ್‌.ಪಿ.ವೆಂಕಟೇಶ್‌ಮೂರ್ತಿ, ಶಿಬಿರದ ಸಂಚಾಲಕ ಡಾ।। ಹೆಚ್‌.ಕೆ. ಕುಶಾಲಪ್ಪ ಚಿತ್ರದಲ್ಲಿದ್ದಾರೆ

ಬಸ್‌ ಚಾಲಕ,

ಹಾಸನ : ಮುಂದೆ ಹೋಗುತ್ತಿದ್ದ ಬಸ್ಸು ದಾರಿ ಬಿಡಲಿಲ್ಲ ಎಂಬ ಕಾರಣಕ್ಕಾಗಿ ಕಾರಲ್ಲಿದ್ದವರು ಬಸ್ಸನ್ನು ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಬಾಣಾವರ ಹೋಬಳಿ ಕೋಳಗುಂದ ಗೇಟ್‌ ಬಳಿ ನಡೆದಿದೆ. ಬೆಂಗಳೂರಿನಿಂದ ಜಾವಗಲ್‌ನ ದರ್ಗಾಕ್ಕೆ  ಐಕಾನ್‌ ಕಾರ್‌ನಲ್ಲಿ ಹೋಗುತ್ತಿದ್ದ   ಬೆಂಗಳೂರಿನ ಬಿ.ಟಿ.ಎಂ. ಬಡಾವಣೆಯ ಫರ್ಹಾಜ್‌   ಶೇರಿಜಿಲ್‌, ಸಮೀರ್‌ಪಾಷಾ ಎಂಬುವವರು ಈ ಹಲ್ಲೆ ನಡೆಸಿದರು. ಇದನ್ನು ಖಂಡಿಸಿ ಸ್ಥಳೀಯ ಗ್ರಾಮಸ್ಥರು...

ಅಂತರರಾಷ್ಟ್ರೀಯ ಥ್ರೋಬಾಲ್‌:

ಹಾಸನ : ಚನ್ನೈನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಏ. ೨೦  ರಿಂದ ೨೪ ರವರೆಗೆ  ನಡೆಯುವ  ಅಂತರ ರಾಷ್ಟ್ರೀಯ ಮಟ್ಟದ  ಕಿರಿಯ ಹಾಗು ಹಿರಿಯರ ಘಿಫಥ್ರೋಬಾಲ್‌  ಪಂದ್ಯಾವಳಿ ಘಿಫ ಗೆ  ನಗರದ ಅರವಿಂದ ಶಾಲೆಯ ವಿದ್ಯಾರ್ಥಿ  ಸಂಕಲ್ಪ್‌. ಎನ್‌.  ಆಯ್ಕೆಯಾಗಿದ್ದಾರೆ. ಇವರೊಂದಿಗೆ ರಾಜ್ಯದ ಪ್ರವೀಣ್‌, ನೇತ್ರಾವತಿ, ಉಷಾ ಭಾರತದ ತಂಡವನ್ನು ಪ್ರತಿನಿಧಿಸಲಿದ್ದಾರೆ.

ನಾಡ ರಥೋತ್ಸವ

ಬೇಲೂರು ಚನ್ನಕೇಶವ ಸ್ವಾಮಿ ನಾಡ ರಥೋತ್ಸವವು ಶುಕ್ರವಾರ ನಡೆಯಿತು. ೮ ಗ್ರಾಮಗಳ ನಾಡಗೌಡರು ಪೂಜೆ ಸಲ್ಲಿಸಿದ ನಂತರ ರಥವು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿತು.

೭೨ಲಕ್ಷ ರೂ. ಕ್ರಿಯಾ ಯೋಜನೆ

ಹಾಸನ : ೧೨ನೇ ಹಣಕಾಸು ಯೋಜನೆಯಡಿ ೭೨ ಲಕ್ಷ  ರೂ. ಕ್ರಿಯಾ ಯೋಜನೆಗಳನ್ನು  ತಯಾರಿಸಿ, ರಂಗಮಂದಿರ, ಶಾಲಾ ಕಟ್ಟಡ  ಮತ್ತಿತರ ಅಗತ್ಯ ಕಾಮಗಾರಿಗಳನ್ನು  ಪೂರೈಸ ಲಾಗಿದೆ ಎಂದು ಜಿಲ್ಲಾ  ಪಂಚಾಯಿತಿ ಅಧ್ಯಕ್ಷ   ಸಿ.ಎನ್‌.ಬಾಲಕೃಷ್ಣ  ತಿಳಿಸಿದರು. ಸುವರ್ಣ ಗ್ರಾಮ ಯೋಜನೆಯಡಿ ೧೩ ಕೋಟಿ ರೂ. ಅನುದಾನ ದೊರೆತಿದ್ದು , ಮಾರ್ಚ್‌ ಅಂತ್ಯಕ್ಕೆ  ಈ ಹಣ ಬಳಸಿಕೊಳ್ಳಲಾಗಿದೆ ಎಂದು ಶುಕ್ರವಾರ ಪತ್ರಕರ್ತರಿಗೆ ವಿವರಿಸಿದರು. ಲೋಕಶಿಕ್ಷಣ ಮತ್ತು ...

ರಾಜಕಾರಣ ಶುದ್ಧೀಕರಣಗೊಳಿಸಲು ಪ್ರಜಾವೇದಿಕೆ ಚಿಂತನೆ

ಹಾಸನ : ರಾಜಕೀಯ ವ್ಯವಸ್ಥೆ  ಭ್ರಷ್ಟಗೊಳಿಸಲು ರಾಜಕೀಯ ಪಕ್ಷಗಳು ನಿರಂತರವಾಗಿ ಸಹಕಾರ ನೀಡುತ್ತಿವೆ. ಈ ಹಿನ್ನಲೆಯಲ್ಲಿ  ಜನಸಾಮಾನ್ಯರು, ಸಜ್ಜನರು, ಜನಪರ ಕಾಳಜಿಯಿರುವವರು ರಾಜಕಾರಣವನ್ನು  ಶುದ್ಧೀಕರಣಗೊಳಿಸ ಬೇಕೆಂದು ಪ್ರಜಾ ವೇದಿಕೆ ಪ್ರಮುಖ, ಸಂಚಾಲಕ ಹಾಗೂ ಪ್ರಗತಿಪರ ಚಿಂತಕ ಆರ್‌.ಪಿ.ವೆಂಕಟೇಶಮೂರ್ತಿ ತಿಳಿಸಿ ದ್ದಾರೆ. ರಾಜಕೀಯವನ್ನು  ಪವಿತ್ರ  ಕ್ಷೇತ್ರ ವೆಂದು ಯಾರೂ  ಕೂಡ ಪರಿಗಣಿಸಲಿಲ್ಲ. ಹಾಗಾಗಿಯೇ ಈ ಕ್ಷೇತ್ರ ಭ್ರಷ್ಟಗೊಂಡು ಸರ್ವನಾಶದತ್ತ  ಸಾಗುತ್ತಿದೆ. ರಾಜಕೀಯ ಶುದ್ಧೀಕರಣ ಎಲ್ಲರ...

ಮೈಸೂರಿನಲ್ಲಿ ಓಶೋ ಧ್ಯಾನ ಶಿಬಿರ

ಹಾಸನ : ಓಶೋ ಧ್ಯಾನ ಶಿಬಿರವನ್ನು ಏ.೧೦ ರಿಂದ ೧೩ ರವರೆಗೆ ಮೈಸೂರು ತಾಲ್ಲೂಕು  ಉತ್ತನಹಳ್ಳಿ, ಓಶೋ ಇನ್‌ಸೈಟ್‌ ಕೋಕೋನಟ್‌ ಫಾರ್ಮ್‌ನಲ್ಲಿ ನಡೆಯಲಿದೆ. ಶಿಬಿರ ಸ್ಥಳವು ಮೈಸೂರು ನಗರದಿಂದ ೧೦ ಕಿ.ಮೀ.ದೂರವಿದ್ದು, ನಿಸರ್ಗದ ನಡುವೆ ಪ್ರಶಾಂತವದ ವಾತಾವರಣದಿಂದ ಕೂಡಿದೆ. ಶಿಬಿರ ಸ್ಥಳವು ತೆಂಗು- ಬಾಳೆ ಮರಗಳ ತೋಟವಾಗಿದ್ದು, ಶಿಬಿರಾನುಕೂಲಕ್ಕಾಗಿ ಸರಳವಾದ ವಸತಿ ಸೌಕರ್ಯ, ಧ್ಯಾನ ಮಂದಿರ ಹೊಂದಿದೆ. ಚಾಮುಂಡಿ ಬೆಟ್ಟದ ರಮಣೀಯ ಹಿನ್ನಲೆಯಲ್ಲಿ...

ಟಿಕೆಟ್‌ಗೆ ಕಿಲುಬು ಕಾಸೂ ಕೊಟ್ಟಿಲ್ಲ : ಹುಲ್ಲೇನಹಳ್ಳಿ ಸುರೇಶ್‌

ಹಾಸನ : ಜಿಲ್ಲಾ ಬಿ.ಜೆ.ಪಿ. ಯಲ್ಲಿ ಟಿಕೆಟ್‌ ತಗಾದೆ ರೊಚ್ಚಿ ಗೆದ್ದಿದ್ದು , ಟಿಕೆಟ್‌ ವಂಚಿತರು ಟಿಕೆಟ್‌ ಗಿಟ್ಟಿಸಿದವರನ್ನು ವಾಚಾಮ ಗೋಚರವಾಗಿ ನಿಂದಿಸುತ್ತಿದ್ದಾ ರಲ್ಲದೆ, ಹಣ ಕೊಟ್ಟು ಖರೀದಿಸಿ ದ್ದಾರೆ ಎಂದು ನೇರ ಆರೋಪವನ್ನೂ ಮಾಡುತ್ತಿದ್ದಾರೆ. ಇಷ್ಟಕ್ಕೂ ತೃಪ್ತ ರಾಗದ ಅವರು, ತಮ್ಮ ಬೆಂಬಲಿಗ ರೊಂದಿಗೆ ಪ್ರತಿಭಟನೆ, ಗಲಾಟೆಗಳನ್ನು ಎಬ್ಬಿಸಿ, ಜನರಿಗೆ ಬಿಟ್ಟಿ ಮನರಂಜನೆ ಒದಗಿಸುತ್ತಾ , ಪಕ್ಷದಲ್ಲಿನ ಒಡಕನ್ನು ಬಟಾ ಬಯಲು...

ಪಟೇಲರಿಗಿನ್ನೂ ಟಿಕೆಟ್‌ ಆಸೆ

ಪಟೇಲರಿಗಿನ್ನೂ ಟಿಕೆಟ್‌ ಆಸೆ ಹಾಸನ : ಜೆ.ಡಿ.ಎಸ್‌. ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡದಿರುವುದರಿಂದ ಸ್ಪರ್ಧಾಕಾಂಕ್ಷಿಯಾಗಿರುವ ತಾವು, ಇನ್ನೂ ಆಶಾವಾದಿಯಾಗಿದ್ದು , ಟಿಕೆಟ್‌ಗಾಗಿ ಗಂಭೀರ ಪ್ರಯತ್ನ ನಡೆಸುತ್ತಿರುವುದಾಗಿ ಪಟೇಲ್‌ ಶಿವರಾಂ ಹೇಳಿದ್ದಾರೆ. ದೇವೇಗೌಡರು ತಮ್ಮೊಂದಿಗೆ ನಕರಾತ್ಮಕವಾಗೇನೂ ಸ್ಪಂದಿಸಿಲ್ಲ . ಈ ಬಾರಿ ಹೊಸಬರಿಗೆ ಅವಕಾಶ ಕೊಡುವುದಾಗಿ ಕಳೆದ ಬಾರಿಯೇ ಅವರು ಭರವಸೆ ಕೊಟ್ಟ ಮೇರೆಗೆ ತಾವು ಸ್ಪರ್ಧಿಸುವ ಬೇಡಿಕೆ ಇಟ್ಟಿರುವುದಾಗಿ ಶಿವರಾಂ...

ಬೆಲೆ ಏರಿಕೆ

ಬೆಲೆ ಏರಿಕೆ ವಿರೋಧಿಸಿ ಇಂದು ಪ್ರತಿಭಟನೆ ಹಾಸನ : ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ವು ಏ.೧೭ರಂದು ಬೆಲೆ ಏರಿಕೆ ವಿರೋಧಿಸಿ ಮೆರವಣಿಗೆ ನಡೆಸಲಿದೆ. ಬೆಳಿಗ್ಗೆ ೧೧ ಗಂಟೆಗೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ತನಕ ಮೆರವಣಿಗೆ ನಡೆಯಲಿದೆ ಎಂದು ವಿ.ಸುಕುಮಾರ್‌ ಹಾಗೂ ಧರ್ಮೇಶ್‌ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಆರೋಪ

ಬೇಲೂರು : ಕಳೆದ ಐದು ವರ್ಷಗಳಿಂದ  ಯಾವುದೇ ಸಮಿತಿ ಇಲ್ಲದೆ ಬೇಲೂರಿನ ಜಾತ್ರೆ, ಉತ್ಸವ ಗಳು ನಡೆಯುತ್ತಿದ್ದವು. ಆದರೆ  ಈ ಬಾರಿ  ತರಾತುರಿಯಲ್ಲಿ   ಕಾಂಗ್ರೆಸ್‌ ಪಕ್ಷದ ಮುಖಂಡರನ್ನೊಳಗೊಂಡ  ಉಸ್ತುವಾರಿ ಸಮಿತಿಯನ್ನು  ರಚಿಸುವ ಮೂಲಕ ದತ್ತಿ  ಆಯುಕ್ತರು ಚುನಾವಣೆಯ ನೀತಿ ಸಂಹಿತೆಯನ್ನು  ಉಲ್ಲಂಘಿಘಿಸಿದ್ದಾರೆಂದು ಬೇಲೂರು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ  ಪ್ರಸನ್ನಕುಮಾರ್‌  ಹಾಗೂ ಮಾಜಿ ಧರ್ಮದರ್ಶಿ  ಸಿ.ಎಸ್‌.ಪ್ರಕಾಶ್‌ ಅವರುಗಳು ಜಂಟಿ ಹೇಳಿಕೆಯಲ್ಲಿ   ಆರೋಪಿಸಿದ್ದಾರೆ. ಸ್ಥಳೀಯ...

೨೨೪ ಕ್ಷೇತ್ರದ ಅಭ್ಯರ್ಥಿ ಪಟ್ಟಿ ಒಂದೇ ಬಾರಿ ಬಿಡುಗಡೆ ಮಾಡಲಿ

ಹೊಳೆನರಸೀಪುರ – ಪ್ರಸ್ತುತ ಸನ್ನಿವೇಶದಲ್ಲಿ  ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎಣೆಗಾಡುತ್ತಿರುವ ಜೆ.ಡಿ.ಎಸ್‌. ವರಿಷ್ಟ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ತಾಕತ್ತಿದ್ದರೆ ಚುನಾವಣೆಯಲ್ಲಿ  ೨೨೪ ವಿಧಾನ ಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿಯನ್ನು  ಒಂದೇ ಬಾರಿ ಬಿಡುಗಡೆ ಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎ.ಮಂಜು ಸಾವಲು ಹಾಕಿದರು. ಅವರು ಹಳ್ಳಿ ಮೈಸೂರಿನಲ್ಲಿ  ಏರ್ಪಡಿಸಿದ್ದ ಹೋಬಳಿ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು  ಉದ್ಘಾಟಿಸಿ ಮಾತನಾಡುತ್ತಿದ್ದ...

ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನ

ಹಾಸನ :  ಹಾಸನ ಮತ್ತು  ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ  ಅಕ್ರಮವಾಗಿ ಗಣಿಗಾರಿಕೆ ನಡೆಸು         ತ್ತಿದ್ದು, ತಕ್ಷಣವೇ ಗಣಿಗಾರಿಕೆ ನಡೆಸು ತ್ತಿರುವವರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ಪಡೆ, ನಮ್ಮೂರ ಸೇವೆ ಹಾಗೂ ಪರಿಸರಾಸಕ್ತರು ಮಂಗಳವಾರ  ನಗರದಲ್ಲಿ    ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಿದರು. ಬೆಳಿಗ್ಗೆ  ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ  ನೂರಾರು ಸಂಖ್ಯೆಯಲ್ಲಿ  ನೆರೆದಿದ್ದ ...

ಬದಲಾವಣೆ ಸಾಧ್ಯವಿಲ್ಲ

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್‌ ಹಂಚಿಕೆ ಪಟ್ಟಿ  ಪ್ರಕಟವಾಗಿರುವುದು ಮುಗಿದಿರುವ ಅಧ್ಯಾಯ.  ಇನ್ನೂ  ಬದ ಲಾವಣೆ  ಸಾಧ್ಯವಿಲ್ಲವೆಂದು ಬಿ.ಜೆ.ಪಿ. ನಾಯಕಿ ಸುಷ್ಮಾ  ಸ್ವರಾಜ್‌ ಹೇಳಿದ್ದಾರೆ. ಕರ್ನಾಟಕದಲ್ಲಿ   ಟಿಕೆಟ್‌ ಹಂಚಿಕೆ ಕುರಿತಂತೆ ಎದ್ದಿರುವ ವಿವಾದದ ಬಗ್ಗೆ  ಸ್ಪಷ್ಟನೆ ನೀಡಿದ ಆವರು, ಚುನಾವಣಾ ಸಂದರ್ಭದಲ್ಲಿ  ಇಂತಹ ವಿವಾದಗಳು ಸರ್ವೇ  ಸಾಮಾನ್ಯ ಎಂದಿದ್ದಾರೆ.

ಚುನಾವಣಾ ರಣಾಂಗಣಕ್ಕೆ ಹೊಸ ರಂಗು

ಬೆಂಗಳೂರು : ಮೊದಲ ಹಂತದ ಚುನಾವಣೆಗೆ ಬುಧವಾರ ದಿಂದ ನಾಮಪತ್ರ ಸ್ವೀಕಾರ ಆರಂಭಗೊಳ್ಳಲಿದ್ದು, ಚುನಾವಣೆ ರಣಾಂಗಣಕ್ಕೆ ಹೊಸ ರಂಗು ಸೃಷ್ಟಿಯಾಗಿದ್ದು , ರಾಜಕೀಯ ಪಾಳಯದಲ್ಲಿ ಬಿರುಸಿನ ಚಟು ವಟಿಕೆ ಆರಂಭಗೊಂಡಿದೆ. ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ೧೧ ಜಿಲ್ಲೆಗಳ ೮೯ ಕ್ಷೇತ್ರಗಳಲ್ಲಿ ಮೊದಲ ಹಂತಕ್ಕೆ ಮೇ.೧೦ರಂದು ಚುನಾವಣೆ ನಡೆಯಲಿದೆ. ಬುಧವಾರ ಅಧಿಸೂಚನೆ ಪ್ರಕಟಿಸಲಾಗುವುದು. ನಾಮಪತ್ರ ಸ್ವೀಕಾರವು ಆರಂಭಗೊಳ್ಳಲಿದೆ. ಏ.೨೩ರಂದು ನಾಮಪತ್ರ ಸಲ್ಲಿಸಲು ಕೊನೆಯ...

ಟಿಕೆಟ್‌ ಹಂಚಿಕೆ ವಿವಾದ : ಬಿ.ಜೆ.ಪಿ. ಕಾರ್ಯಕರ್ತರ ಮಧ್ಯೆ ಮಾರಾ ಮಾರಿ

ಸಕಲೇಶಪುರ : ಪಟ್ಟಣದ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಸೋಮವಾರ ಸಮಾವೇಶಗೊಂಡಿದ್ದ ಅಂಬೇಡ್ಕರ್‌ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಕ್ಷದ ಟಿಕೆಟ್‌ ಹಂಚಿಕೆ ಪ್ರಸ್ತಾಪವಾಗಿ ಗೊಂದಲ- ಗಲಾಟೆ ಸೃಷ್ಟಿಯಾಯಿತಲ್ಲದೆ, ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿದರು. ಮಾಜಿ ಶಾಸಕ ಬಿ.ಬಿ.ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ಆರಂಭಗೊಂಡಿತು. ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ದಯಾನಂದ ಮಾತ ನಾಡುತ್ತಿದ್ದಂತೆ, ಬಾಳ್ಳುಪೇಟೆ ಲಕ್ಷ್ಮಣ್‌ ಬೆಂಬಲಿಗರು, ತಮ್ಮ ನಾಯಕನ ಪರ ಘೊಷಣೆ...

ದಲಿತ ಸಂಘಟನೆಗಳು ಒಗ್ಗೂಡಲು ಡಿ.ಸಿ. ಕರೆ

ಹಾಸನ : ದಲಿತರಲ್ಲಿ ಎರಡು ಗುಂಪುಗಳಿದ್ದು , ಅವು ನಿರ್ಮೂಲನ ವಾಗಬೇಕು. ಹಾಗೆಯೇ ೧೨೫ ದಲಿತ ಸಂಘಟನೆಗಳಿದ್ದು , ಅವುಗಳು ಒಗ್ಗೂಡಿ ಶೋಷಿತರ ಏಳಿಗೆಗೆ ಶಾಂತಿಯುತ ಹೋರಾಟ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅಂಜುಮ್‌ ಪರ್ವೇಜ್‌ ಹೇಳಿದ್ದಾರೆ. ನಗರದ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ನಡೆದ ಡಾ. ಅಂಬೇಡ್ಕರ್‌ ಅವರ ೧೧೭ನೇ ಜನ್ಮ ದಿನಾಚರಣೆಯನ್ನು ಅವರು ಉದ್ಘಾ ಟಿಸಿ ಮಾತನಾಡುತ್ತಿದ್ದರು. ಸಂವಿಧಾನದ ಲಾಭ ಪಡೆದು ಮೇಲೆ...

ತಾಮ್ರ ತಂತಿ ಕಳ್ಳನ ಬಂಧನ

ಹೊಳೆನರಸೀಪುರ : ತಾಮ್ರ ತಂತಿ ಕಳ್ಳನೊಬ್ಬನನ್ನು ಬಂಧಿಸಿ, ಅತನಿಂದ ಸುಮಾರು ೧.೫ ಲಕ್ಷ ರ. ಬೆಲೆಯ ತಾಮ್ರದ ಪ್ಲೇಟ್‌ ಹಾಗೂ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಹಾಸನದ ಬಸ್‌ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಆಲೂರಿನ ಗೋಪಾಲ್‌ ಅಲಿಯಾಸ್‌ ಗೋಪಿ (೩೨) ಎಂಬಾತನನ್ನು ಪಟ್ಟಣ ಪೊಲೀಸರು ಬಂಧಿಸಿ ವಿಚಾರಣೆಗೊಳ ಪಡಿಸಿದಾಗ ವಿದ್ಯುತ್‌ ನಿಗಮದ ಕಂಬಗಳಿಂದ ತಂತಿ ಕಳವು ಮಾಡಿ ಮಾಡಿದ್ದನ್ನು ಬಹಿರಂಗಪಡಿಸಿದನು. ಕದ್ದ ತಂತಿಯನ್ನು ಹಾಸನದ ಮುನ್ನಾ...

ಬಿ.ಜೆ.ಪಿ.-ಕಾಂಗ್ರೆಸ್‌ನಲ್ಲಿ ಹೆಚ್ಚಿದ ಭಿನ್ನಮತ

ಹಾಸನ : ಚುನಾವಣೆ ಸಮೀಪಿಸುತ್ತಿರುವಂತೆ ಬಿ.ಜೆ.ಪಿ. ಹಾಗೂ ಕಾಂಗ್ರೆಸ್‌ನಲ್ಲಿ ಭಿನ್ನಮತಗಳು ಹೆಚ್ಚುತ್ತಿವೆ. ಬಿ.ಜೆ.ಪಿ. ಪಕ್ಷದಿಂದ ಟಿಕೆಟ್‌ ದೊರೆಯದ ಅತೃಪ್ತರು ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಪಕ್ಷದ ಮುಖಂಡರಿಗೆ ತಲೆ ನೋವಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಏ.೧೮ರಂದು ಬಿ.ಫಾರಂ ವಿತರಣೆಯಾಗಲಿದೆ. ಈ ಪಕ್ಷದಲ್ಲಿಯೂ ಟಿಕೆಟ್‌ ಸಿಗದಿದ್ದವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ತಿಳಿದು ಬಂದಿದೆ.

ರೇವಣ್ಣ ನಿವಾಸದಲ್ಲಿ

ಹಾಸನ : ತೀವ್ರ ಕುತೂಹಲ ಮೂಡಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ಹೆಚ್‌.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಪಟೇಲ್‌ ಶಿವರಾಂ ಹಾಗೂ ಮಾಜಿ ಶಾಸಕ ಹೆಚ್‌.ಎಸ್‌.ಪ್ರಕಾಶ್‌ ಹೊಳೆ ನರಸೀಪುರದ ರೇವಣ್ಣ ಅವರ ನಿವಾಸ ದಲ್ಲಿ ಸೋಮವಾರ ಪ್ರತ್ಯಕ್ಷ ರಾದರು. ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಸೋಮವಾರ ಬೆಳಿಗ್ಗೆ ಹಾಸನಕ್ಕೆ ಬರಬೇಕಿತ್ತು. ಕಾರ್ಯಕ್ರಮದ ರದ್ದಾದ ಕಾರಣ ಇಬ್ಬರನ್ನು ಹೊಳೆ ನರಸೀಪುರಕ್ಕೆ ಕರೆಸಿಕೊಂಡು ಪ್ರತ್ಯೇಕ ವಾಗಿ...

ಹೆಬ್ಬಾಳು ಗ್ರಾಮದಲ್ಲಿ ಪ್ರತಿಭಟನೆ

ಹಾಸನ : ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸದಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾ.ಪಂ. ಕಛೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಬೇಕಿತ್ತು. ಆದರೆ ಮಧ್ಯಾಹ್ನದ ವೇಳೆಯಾದರೂ ಕಾರ್ಯಕ್ರಮ ಆರಂಭಗೊಳ್ಳದಿದ್ದರಿಂದ ಗ್ರಾಮಸ್ಥರು ಪ್ರತಿಭಟಿಸಿದರು.

ಅಗಿಲೆ ಯೋಗೀಶ್‌ ಬಂಡಾಯ

ಹಾಸನ : ಬಿ.ಜೆ.ಪಿ. ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಹಾಗೂ ಭಜರಂಗದಳದ ಜಿಲ್ಲಾ ಸಂಚಾಲಕ ಅಗಿಲೆ ಯೋಗೀಶ್‌ ಹಾಸನ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿ ಸಲು ನಿರ್ಧರಿಸಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ಪರಿಗಣಿಸದೆ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಪಕ್ಷಕ್ಕೆ ಸೇರ್ಪಡೆಯಾದ ಸಿರಿವಂತ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟಿರುವುದನ್ನು ವಿರೋಧಿಸಿ ಬಂಡಾಯವಾಗಿ ಸ್ಪರ್ಧಿಸುತ್ತಿರು ವುದಾಗಿ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ. ಕಳೆದ ವಿಧಾನಸಭೆ ಚುನಾ ವಣೆಯಲ್ಲಿ ಜೆ.ಡಿ.ಎಸ್‌.ನಿಂದ...

ಹುಣಸೂರಿನಿಂದ ಸ್ಪರ್ಧೆ ಇಲ್ಲ

ಹುಣಸೂರಿನಿಂದ ಸ್ಪರ್ಧೆ ಇಲ್ಲ ಹಾಸನ : ಮೈಸೂರು ಜಿಲ್ಲೆಯ ಹುಣಸೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆ ಹೊಂದಿಲ್ಲ ವೆಂದು ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಹೇಳಿದ್ದಾರೆ. ಸೋಮವಾರ ಹೊಳೆನರಸೀ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲಾ ಕೇವಲ ವದಂತಿಯಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ. ಹುಣಸೂರಿನಿಂದ ಸ್ಪರ್ಧಿಸಲು ಪಕ್ಷದ ಕಾರ್ಯಕರ್ತರಿದ್ದಾರೆ. ನನ್ನ ಜೀವಿತಾವಧಿವಿರುವ ತನಕವೂ ಹೊಳೆನರಸೀಪುರದಿಂದಲೇ ಸ್ಪರ್ಧಿಸು ವುದಾಗಿ ಅವರು ಘೊಷಿಸಿದ್ದಾರೆ.

ಪುತ್ರ ವ್ಯಾಮೋಹಿಯಲ್ಲ

ಅರಕಲಗೂಡು : ಮಕ್ಕಳನ್ನು ರಾಜಕೀಯಕ್ಕೆ ತರುವ ವ್ಯಾಮೋಹ ನನಗಿರಲಿಲ್ಲ. ೯೪ರಲ್ಲಿ ನಾನು ಚುನಾವಣೆಗೆ ನಿಲ್ಲಲು ಅಡ್ಡಿಯಾದಾಗ ರಾಮನಗರಕ್ಕೆ ಹೋದೆ. ಆಗ ಹೊಳೆನರಸೀಪುರದಲ್ಲಿ ಯಾರು ಅಭ್ಯರ್ಥಿಯಾಗಬೇಕೆನ್ನುವ ಪ್ರಶ್ನೆಯಾಗಿತ್ತು. ಜನ ನನ್ನ ಪತ್ನಿಯನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಪೊಪೋಸಲ್‌ ತಂದರು. ಆದರೆ ನನ್ನ ಹೆಂಡತಿ ದೇವರ ಪೂಜೆ ಮಾಡಿಕೊಂಡು ಮನೇಲಿ ಇರುವವರು. ಅವರನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸಲು ನಾನು ಸಿದ್ಧನಿರಲಿಲ್ಲ ಎಂದು ದೇವೇಗೌಡ ಅವರು ಹೇಳಿದ್ದಾರೆ. ಅರೇಮಾದನಹಳ್ಳಿಯಲ್ಲಿ...

ಒಳಮೀಸಲಾತಿ ಜೆ.ಡಿ.ಎಸ್‌. ಪ್ರಣಾಳಿಕೆ : ದೇವೇಗೌಡ

ಅರಕಲಗೂಡು : ಒಳ ಮೀಸ ಲಾತಿಯ ಮೂಲಕ ಎಲ್ಲ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಜೆ.ಡಿ.ಎಸ್‌. ಪ್ರಣಾ ಳಿಕೆಯ ಪ್ರಮುಖ ಅಂಶವಾಗಲಿದೆ ಎಂದು ಜೆ.ಡಿ.ಎಸ್‌. ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ. ತಾಲ್ಲೂಕಿನ ಅರೇಮಾದನಹಳ್ಳಿ ಯಲ್ಲಿ ನಡೆದ ವಿಶ್ವಕರ್ಮ ಸ್ವಾಮಿ ಪ್ರತಿ ಷ್ಠಾಪನ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಶ್ರೀಗುರು ಶಿವಸುಜ್ಞಾನ ಮೂರ್ತಿ ಮಹಾಸ್ವಾಮಿಯವರ ಪೀಠಾ ರೋಹಣ ಪಟ್ಟಾಭೀಷೇಕೋತ್ಸವದ ರಜತ...

ಮುಂದುವರೆದ ಗೊಂದಲ : ಸ್ಪರ್ಧಾಕಾಂಕ್ಷಿಗಳಲ್ಲಿ ತಳಮಳ

ಹಾಸನ : ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಗೊಂದಲ ಮುಂದುವರೆದಿದೆ. ಹಾಗಾಗಿ ಸ್ಪರ್ಧಾಕಾಂಕ್ಷಿಗಳಲ್ಲಿ ತಳಮಳ ಆರಂಭ ಗೊಂಡಿದೆ. ಬಿ.ಜೆ.ಪಿ. ಹಾಗೂ ಕಾಂಗ್ರೆಸ್‌ ಪಕ್ಷ ದಲ್ಲಿ ವ್ಯಾಪಕ ಗೊಂದಲವಿದೆ. ಜೆ.ಡಿ.ಎಸ್‌. ಕೂಡ ಇದಕ್ಕೇನೂ ಹೊರ ತಾಗಿಲ್ಲ . ಟಿಕೆಟ್‌ ತಮಗೆ ಸಿಗುವುದು ಖಚಿತವೆಂದು ಭಾವಿಸಿದ್ದವರು ಈಗ ಅತೃಪ್ತಗೊಂಡಿದ್ದಾರೆ. ಬಿ.ಜೆ.ಪಿ. ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ ದೊರೆಯದ ಅತೃಪ್ತರು, ಬಂಡಾಯವೇಳುವ ಸಾಧ್ಯತೆಯೂ...

ಚ.ರಾ.ಪಟ್ಟಣ ಜೆ.ಡಿ.ಎಸ್‌. ಸಭೆಯಲ್ಲಿ ಗೊಂದಲ-ಗಲಾಟೆ : ಲಾಠಿ ಪ್ರಹಾರ

ಚನ್ನರಾಯಪಟ್ಟಣ : ಜಿಲ್ಲೆಯಲ್ಲಿ ಜೆ.ಡಿ.ಎಸ್‌. ಟಿಕೆಟ್‌ಗಾಗಿ ತೀವ್ರ ಜಿದ್ದಾ ಜಿದ್ದಿ ನಡೆಯುತ್ತಿರುವ ಶ್ರವಣ ಬೆಳಗೊಳ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಯಾರು? ಎಂಬುದನ್ನು ದೇವೇ ಗೌಡರು ಭಾನುವಾರ ಪ್ರಕಟಿಸು ತ್ತಾರೆಂಬ ನಿರೀಕ್ಷೆ ಸುಳ್ಳಾಗಿದ್ದು, ಇಂದು ಸಮಾವೇಶಗೊಂಡ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸಿ.ಎಸ್‌. ಪುಟ್ಟೇಗೌಡ ಹಾಗೂ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ಬಾಲಕೃಷ್ಣ ಅವರ ಬಲಾಬಲ ಮಾತ್ರ ಪ್ರದರ್ಶನ ಗೊಂಡು ಗದ್ದಲ, ಗಲಾಟೆಗೆ ಕಾರಣವಾಯಿ...

ಭೀಕರ ರಸ್ತೆ ಅಪಘಾತ : ೧೨ ಮಂದಿ ಸಾವು

ಹಾಸನ : ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ೧೨ ಜನರು ಸಾವಿಗೀಡಾಗಿದ್ದು , ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ ವಾಗಿರುವ ಹೃದಯ ವಿದ್ರಾವಕ ನಡೆದಿದೆ. ಭಾನುವಾರ ಬೆಳಗಿನ ಜಾವ ಚನ್ನರಾಯಪಟ್ಟಣ ಸಮೀಪದ ಹೊಂಬಾಳೆಕೊಪ್ಪಲು ಗೇಟ್‌ ಹತ್ತಿರ ರಾಜ್ಯ ರಸ್ತೆ ಸಾರಿಗೆ ಬಸ್‌ ಹಾಗೂ ಟಾಟಾ ಮೊಬೈಲ್‌ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದರಿಂದ ಸ್ಥಳ ದಲ್ಲಿಯೇ ಆರು ಜನರು ಸಾವಿಗೀಡಾ ದರು....