ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಇದ್ದಾರೆಯೇ?…

ಹಾಸನ : ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ. ದೇವೇಗೌಡ ಬೆಂಬಲ ಬೆಲೆಯಲ್ಲಿ ಮೆಕ್ಕೆ ಜೋಳ ಖರೀದಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶುಕ್ರವಾರ ಜೆ.ಡಿ.ಎಸ್. ಕಾರ್ಯಕರ್ತರೊಂದಿಗೆ ಸತ್ಯಾಗ್ರಹ ನಡೆಸಲಿದ್ದಾರೆ. ಈ ವೇಳೆ ಜಿಲ್ಲೆಯ ಮುಖ್ಯಸ್ಥರಾದ ಜಿಲ್ಲಾಧಿ ಕಾರಿಗಳು ಇರಲೇಬೇಕು. ಆದರೆ ಅವರು ಕರ್ತವ್ಯ ನಿಮಿತ್ತ ಕೊಪ್ಪಳಕ್ಕೆ ಹೋಗುತ್ತಿದ್ದಾರೆಂದು ತಿಳಿದು ಬಂದಿದೆ. ಇದು ಒಳ್ಳೆಯ ನಡವಳಿಕೆ ಅಲ್ಲವೇ ಅಲ್ಲ. ಜಿಲ್ಲಾಧಿಕಾರಿಗಳು ತಮ್ಮನ್ನು ಏನೆಂದುಕೊಂಡಿದ್ದಾರೆ ?...

ದೇವೇಗೌಡ ಇಂದು ಸತ್ಯಾಗ್ರಹ

ಹಾಸನ : ರೈತರು ಬೆಳೆದ ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರ ನೇತೃತ್ವ ದಲ್ಲಿ ದಳ (ಎಸ್) ಕಾರ್ಯಕರ್ತರು ನ. ೧೩ ರಂದು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸತ್ಯಾಗ್ರಹ ನಡೆಸಲಿದ್ದಾರೆ. ಜೆ.ಡಿ.ಎಸ್.ನ ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು,...

ಚನ್ನಕೇಶವಸ್ವಾಮಿದೇವಸ್ಥಾನಆಸ್ತಿಅಕ್ರಮಮಾರಾಟ:ವನಸಿರಿಬಳಗದಿಂದಪ್ರತಿಕೃತಿದಹನ

ಹಾಸನ: ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ದೇವಸ್ಥಾನದ ಆಸ್ತಿಯ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿ ಸಿದಂತೆ ವನಸಿರಿ ಬಳಗವು ನಗರದಲ್ಲಿ ಮಂಗಳವಾರ ಬೊಬ್ಬೆ ಹೊಡೆದು ಪ್ರತಿ ಭಟನೆ ನಡೆಸಿ, ಪ್ರತಿಕೃತಿಯನ್ನು ದಹಿಸಿ ದರು. ಬೆಳಿಗ್ಗೆ ನಗರದ ಹೇಮಾವತಿ ಪ್ರತಿಮೆಯ ಮುಂದೆ ಜಮಾಯಿಸಿದ ವನಸಿರಿ ಬಳಗದ ಸದಸ್ಯರು, ಮೆರವಣಿಗೆ ನಡೆಸಿದರು. ಮೆರವಣಿಗೆಯ ವೇಳೆ ಘೊಷಣೆ ಗಳು ಕೇಳಿ ಬಂದವು. ಭೂ ಕಬಳಿಕೆ ಮಾಡಿದವರ ಪ್ರತಿಕೃತಿಗೆ...

೪ ತಿಂಗಳ ಅವಧಿ ಪೂರೈಸಿದ ನೇತ್ರಾವತಿ ಗಿರೀಶ್

ಹಾಸನ :ನಗರಸಭೆ ಅಧ್ಯಕ್ಷೆ ನೇತ್ರಾವತಿ ಗಿರೀಶ್ ನಾಲ್ಕು ತಿಂಗಳು ಅಧಿಕಾರ ಪೂರೈಸಿದ್ದು, ಮುಂದಿನ ಅವಧಿಯ ಅಧ್ಯಕ್ಷರ ಆಯ್ಕೆಗೆ ತಮ್ಮ ಸ್ಥಾನವನ್ನು ತೆರವುಗೊಳಿಸಬೇಕಾಗಿದೆ. ನಗರಸಭೆ ಅಧ್ಯಕ್ಷರ ಅವಧಿ ೧೩ ತಿಂಗಳು ಬಾಕಿಯಿದ್ದು, ಮೊದಲ ಅವಧಿ ಯ ನಾಲ್ಕೂವರೆ ತಿಂಗಳಿಗೆ ನೇತ್ರಾವತಿ ಗಿರೀಶ್ ಹಾಗೂ ಉಳಿದ ಅವಧಿಗೆ ಅಂಬಿಕಾ ರವಿಶಂಕರ್ ಅವರನ್ನು ಆಯ್ಕೆ ಮಾಡಲು ಜಿಲ್ಲಾ ಜೆ.ಡಿ.ಎಸ್. ಮುಖಂಡರು ನಿರ್ಧರಿಸಿದ್ದರು. ಈಗ ನೇತ್ರಾವತಿ ಗಿರೀಶ್ ಅವರ...

ಶ್ರೀಕಂಠಯ್ಯಮರುಸೇರ್ಪಡೆ:ಲಾಭವೂಇಲ್ಲ-ನಷ್ಟವೂಇಲ್ಲ

ಹಾಸನ: ಮಾಜಿ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದರೆ, ಅದರಿಂದ ಪಕ್ಷಕ್ಕೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂದು ಪಕ್ಷದ ಮುಖಂಡ ಬಿ.ಶಿವರಾಂ ಪ್ರತಿ ಕ್ರಿಯಿಸಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆಯಾದರೂ ಸ್ವಾಗತ ಅಥವಾ ಬರದಿದ್ದರೂ ಸ್ವಾಗ ತಿಸುವುದಾಗಿಮಾರ್ಮಿಕವಾಗಿಹೇಳಿದರು. ಕಾಂಗ್ರೆಸ್ ತೊರೆದು ಬಿ.ಜೆ.ಪಿ.ಗೆ ಸೇರ್ಪಡೆಯಾಗಿರುವ ಹೆಚ್.ಸಿ. ಶ್ರೀಕಂಠಯ್ಯ ಅವರಿಗೆ ರಾಜಕೀಯ ಶಕ್ತಿ ಇದ್ದಿದ್ದರೆ ಬಿ.ಜೆ.ಪಿ.ಯಲ್ಲಿಯೇ ಇದನ್ನು ತೋರಿಸುತ್ತಿದ್ದರು ಎಂದಿದ್ದಾರೆ. ಅವರನ್ನು ಎಂ.ಎಲ್.ಸಿ....

ರೆಡ್ಡಿಗಳಿಗೆ ಶರಣಾದ ಯಡ್ಡಿ: ಪ್ರಜೆಗಳ ಗೌರವಕ್ಕೆ ಚ್ಯುತಿ

ಯಡಿಯೂರಪ್ಪನವರು ಬಿ.ಜೆ.ಪಿ.ಯ ಹೈಕಮಾಂಡ್ಗೆ ತಲೆ ಬಾಗಿದರೋ? ರೆಡ್ಡಿಗಳಿಗೆ ಶರಣಾದರೋ? ಜ್ಯೋತಿಷಿ ಗಳ ಭವಿಷ್ಯ ವಾಣಿಗೆ ಅಂಜಿದರೋ? ಒಟ್ಟಾರೆ ರಾಜ್ಯ ಬಿ.ಜೆ.ಪಿ.ಯ ವಿದ್ಯ ಮಾನಗಳು ರಾಜ್ಯದ ರಾಜಕಾರಣವು ಅಪಾಯದ ಅಂಚಿಗೆ ಬಂದು ತಲುಪಿರು ವುದನ್ನು ಬಯಲುಗೊಳಿಸಿದೆ. ಹಣದ ಶಕ್ತಿಯ ಮುಂದೆ ರಾಜ್ಯ ಶಕ್ತಿ ಹರಾ ಜಾಗಿದೆ. ಪ್ರಜಾಪ್ರಭುತ್ವ ಎಂದರೆ ಜನ ಶಕ್ತಿ ಎಂದು ಇಲ್ಲಿನ ತನಕ ನಾವೆಲ್ಲ ತಿಳಿದು ಕೊಂಡಿದ್ದೆವು. ಆದರೆ ಅದೆಲ್ಲ ಸುಳ್ಳು...

ಫಕೃಷಿ-ಗೋ ರಕ್ಷಣೆ ನಡೆಯದೆ ಜಗತ್ತು ಉಳಿಯದುಫ

ಅರಸೀಕೆರೆ : ಜಗತ್ತು ಉಳಿಯಬೇಕಾ ದರೆ ಭಾರತ ಉಳಿಯಬೇಕು. ಭಾರತ ಉಳಿಯಬೇಕಾದರೆ ಗ್ರಾಮಗಳ ಅಭಿ ವೃದ್ಧಿಯಾಗಬೇಕು. ಗ್ರಾಮಗಳು ಅಭಿವೃದ್ಧಿ ಯಾಗಲು ಕೃಷಿ ಮತ್ತು ಗೋ ಸಂರಕ್ಷಣೆಗೆ ಗಮನ ಕೊಡಬೇಕೆಂದು ವಿಶ್ವ ಗೋ- ಧರ್ಮ ಜಾಗರಣಾ ಪ್ರಾಂತ್ಯ ಸಂಚಾಲಕ ಮುನಿಯಪ್ಪ ಹೇಳಿದ್ದಾರೆ. ಪಟ್ಟಣದ ಸಮೀಪದ ಮಾಲೇಕಲ್ಲು ತಿರುಪತಿಯಲ್ಲಿ ನಡೆದ ಗೋ-ರಥ ಯಾತ್ರೆಯ ಉದ್ಘಾಟನಾ ಸಮಾರಂಭ ದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ನಮ್ಮ ರಾಷ್ಟ್ರದ...

ಜಗದೀಶ್ಶೆಟ್ಟರ್ಗೆಮಖ್ಯಮಂತ್ರಿಸ್ಥಾನಬಿಟ್ಟುಕೊಡಲುಒತ್ತಾಯ

ಹಾಸನ : ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಠಮಾರಿತನ ಧೋರಣೆ ಬಿಟ್ಟು ಜಗ ದೀಶ್ ಶೆಟ್ಟರ್ ಅವರಿಗೆ ಈ ಸ್ಥಾನ ಬಿಟ್ಟು ಕೊಡಬೇಕೆಂದು ರಾಜ್ಯ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಬಿ.ಬಿ.ಶಿವಪ್ಪ ಒತ್ತಾಯಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯಡಿಯೂರಪ್ಪ ಅವರು ಭಿನ್ನಮತ ಅಳಿಸಿ, ಪಕ್ಷದ ಉಳಿವಿಗೆ ಸಹ ಕಾರ ನೀಡಬೇಕೆಂದು ಸಲಹೆ ನೀಡಿದರು. ಈಗ ಬಿ.ಜೆ.ಪಿ.ಯಲ್ಲಿ ಗೊಂದಲ ಸೃಷ್ಟಿ ಆಗಿದೆ. ಮನೆಯ...

ದೇವಸ್ಥಾನದವಿವಾದ೧೫ದಿನಗಳಲ್ಲಿಬಗೆಹರಿಸದಿದ್ದಲ್ಲಿ ಕಾಲ್ನಡಿಗೆಜಾಥಾ:ಜೆ.ಡಿ.ಎಸ್.ಬೆದರಿಕೆ

ಬೇಲೂರು:ಚನ್ನಕೇಶವಸ್ವಾಮಿ ದೇವಾಲಯದ ಆಸ್ತಿ ವಿವಾದವನ್ನು ೧೫ ದಿನದೊಳಗೆ ಬಗೆಹರಿಸದಿದ್ದಲ್ಲಿ ಬೇಲೂರಿ ನಿಂದ ಹಾಸನಕ್ಕೆ ಕಾಲ್ನಡಿಗೆ ಜಾಥಾ ಹಮ್ಮಿ ಕೊಳ್ಳಲಾಗುವುದು ಎಂದು ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಕೆ. ಜವರೇ ಗೌಡ ಬೆದರಿಕೆ ಹಾಕಿದ್ದಾರೆ. ದೇವಾಲಯದ ಆಸ್ತಿ ಉಳಿಸುವಂತೆ ಒತ್ತಾಯಿಸಿ ದೇವಸ್ಥಾನದ ಹಿತರಕ್ಷಣಾ ಸಮಿತಿಯು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಎಂಟನೇ ದಿನಕ್ಕೆ ಕಾಲಿ ಟ್ಟಿದ್ದು, ಜೆ.ಡಿ.ಎಸ್.ಕಾರ್ಯಕರ್ತರೊಂದಿಗೆ ಅದರಲ್ಲಿ ಪಾಲ್ಗೊಂಡಿದ್ದ ಅವರು,ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು. ವಿವಾದವನ್ನು ಕೂಡಲೇ...

ರೆಸಾರ್ಟ್ಸಂಸ್ಕೃತಿವಿರುದ್ಧವಿನೂತನಪ್ರತಿಭಟನೆ

ಹಾಸನ : ನೆರೆಯಿಂದ ಉತ್ತರ ಕರ್ನಾಟಕದವರು ತತ್ತರಿಸಿ ಹೋಗಿ ದ್ದಾರೆ. ಆದರೆ ಚುನಾಯಿತ ಪ್ರತಿನಿಧಿ ಗಳು ರೆಸಾರ್ಟ್ನಲ್ಲಿ ಮೋಜು ಮಾಡು ತ್ತಿರುವುದನ್ನು ಖಂಡಿಸಿ ಮಲೆನಾಡು ಜನಪರ ವೇದಿಕೆ, ನಮ್ಮೂರ ಸೇವೆ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಸಾರ್ವಜನಿಕರಿಂದ ಚಿಲ್ಲರೆ ಸಂಗ್ರಹಿಸುವ ಮೂಲಕ ವಿನೂತನವಾಗಿ ಪ್ರತಿ ಭಟಿಸಲಾಯಿತು. ಸಂಜೆ ೫ ಗಂಟೆ ವೇಳೆಯಲ್ಲಿ ಹೇಮಾವತಿ ಪ್ರತಿಮೆಯ ಮುಂದೆ ಜಮಾಯಿಸಿದ ಕಾರ್ಯಕರ್ತರು ಸಾರ್ವಜನಿಕರಿಂದ ಬಸ್ ನಿಲ್ದಾಣದ ರಸ್ತೆಯಲ್ಲಿ...

ಮನೆಯೊಳಗೆ ಚಿರತೆ ಪ್ರತ್ಯಕ್ಷ !

ಅರಸೀಕೆರೆ : ಕಾಡಿನ ಹಾದಿ ತಪ್ಪಿ ನಾಡಿಗೆ ಬಂದ ಹೆಣ್ಣು ಚಿರತೆಯ ಮರಿ ಯೊಂದು ಪಟ್ಟಣದ ಮಟನ್ ಮಾರು ಕಟ್ಟೆ ಬಳಿಯ ಮನೆಯೊಂದರಲ್ಲಿ ಕಾಣಿಸಿ ಕೊಂಡು ಭಯದ ವಾತಾವರಣ ಸೃಷ್ಟಿ ಸಿದ ಘಟನೆ ಬುಧವಾರ ನಡೆದಿದೆ. ಸರ್ದಾರ್ ಪಾಷಾ ಎಂಬುವವರ ಮನೆಯಲ್ಲಿ ದಿಢೀರನೇ ಪ್ರತ್ಯಕ್ಷಗೊಂಡ ಚಿರತೆಯನ್ನು ಕಂಡ ಮನೆಯವರು ಭೀತಿ ಯಿಂದ ಸಹಾಯಕ್ಕಾಗಿ ಕೂಗಿದರು. ಈ ಸಂದರ್ಭದಲ್ಲಿ ಜಾಣತನ ಪ್ರದರ್ಶಿಸಿದ ಅವರು, ಚಿರತೆಯು...

ಕೃಷಿ ಜಮೀನು ಸ್ವಾಧೀನ : ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರಸ್ತೆತಡೆ-ಧರಣಿ

ಹಾಸನ : ತಾಲ್ಲೂಕಿನ ಚಿಕ್ಕಕೊಂಡ ಗುಳ, ಮಾವಿನಹಳ್ಳಿ, ದಾಸರಕೊಪ್ಪಲು, ಬಾಗಡೇರಕೊಪ್ಪಲು, ದ್ಯಾವಪ್ಪನಕೊಪ್ಪಲು, ಮಾವಿನಹಳ್ಳಿ ಸುತ್ತಮುತ್ತ ೫೨‡೧ ಎಕರೆ ಕೃಷಿ ಜಮೀನನ್ನು ಕರ್ನಾಟಕ ಗೃಹಮಂಡಳಿ ಸ್ವಾಧೀನಪಡಿಸಿಕೊಳ್ಳುವುದರ ಕ್ರಮ ವಿರೋಧಿಸಿ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ರಸ್ತೆತಡೆ ನಡೆಸಿ, ಧರಣಿ ನಡೆಸಿದರು. ಮಂಗಳವಾರ ಬೆಳಿಗ್ಗೆ ೧೧-೩೦ರ ವೇಳೆಯಲ್ಲಿ ಸಂತ್ರಸ್ಥ ರೈತರು ತಮ್ಮ ಗ್ರಾಮಗಳಿಂದ ಆಗಮಿಸಿ, ಹೇಮಾವತಿ ಪ್ರತಿಮೆಯ ಮುಂದೆ ಜಮಾಯಿಸಿದರು. ನಂತರ ಬಸ್ ನಿಲ್ದಾಣದ...

ಬೇಡಿಕೆಈಡೇರಿಕೆಗೆಒತ್ತಾಯಿಸಿಮಾದಿಗದಂಡೋರಪ್ರತಿಭಟನೆ

ಹಾಸನ : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಮಾದಿಗ ದಂಡೋರ ಸಮಿತಿ ಕಾರ್ಯ ಕರ್ತರು ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಗುರುವಾರ ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ನೂರಾರು ಸಂಖ್ಯೆಯ ಮಾದಿಗ ದಂಡೋರ ಕಾರ್ಯಕರ್ತರು ಧರಣಿನಡೆಸಿದರು. ಈಸಂದರ್ಭದಲ್ಲಿ ಮಾತನಾಡಿದಧರಣಿ ನಿರತರು, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸ ಲಾತಿಅಗತ್ಯವಿದೆ ಎಂದು...

ಸರ್ಕಾರಉಳಿಸಿಕೊಳ್ಳಲುವೀರಶೈವಮಹಾಸಭಾಚಿಂತನೆ

ಹಾಸನ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾಗ ಬಾರದು. ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೀರಶೈವ ಮಹಾಸಭಾ ಚಿಂತನೆ ನಡೆಸುತ್ತಿದೆ ಎಂದು ಮಹಾ ಸಭಾದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವಎಸ್.ಎಸ್.ಪಾಟೀಲ್ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿ ಯೂರಪ್ಪ ನಾಯಕತ್ವ ಬದಲಾದರೆ ಬೇರೊಬ್ಬ ವೀರಶೈವ ಮುಖಂಡರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಬೇಕು ಎಂದು ಸ್ಪಷ್ಟಪಡಿಸಿದರು. ನಾಯಕತ್ವ ಬದಲಾದರೆ ವೀರ ಶೈವ ಸಮಾಜದ ಮೇಲೆ ದುಷ್ಪರಿಣಾಮ...

ಕುಡಿಯವ ನೀರಿನ ಪೈಪ್ ಸನಿಹವೇ ಒಳಚರಂಡಿ ಸಂಪರ್ಕ

ಹಾಸನ : ಕುಡಿಯುವ ನೀರಿನ ಪೈಪ್ ಹಾದು ಹೋಗಿರುವ ಸಮೀಪವೇ ಒಳಚರಂಡಿ ಸಂಪರ್ಕಕ್ಕೆ ಕಾಮಗಾರಿ ನಡೆಯುತ್ತಿರುವ ಪ್ರಕರಣ ಬಯಲಾಗಿದೆ. ಹೌಸಿಂಗ್ ಬೋರ್ಡ್ಗೆ ಹೋಗುವ ಕೆ.ಆರ್.ಪುರಂ ಬಳಿ ಈ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಪೈಪ್ ಸಮೀಪ ಒಳಚರಂಡಿ ಸಂಪರ್ಕ ಆದರೆ ಮುಂದೊಂದು ದಿನ ಭಾರೀ ಗಂಡಾಂತರವಾಗಲಿದೆ. ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಅಧಿ ಕಾರಿಗಳು ಹೇಗೆ...

ಇಬ್ಬರಜಗಳದಲ್ಲಿ ಸೊರಗಿದಗಜೇಂದ್ರ

ಹಾಸನ : ಇಬ್ಬರ ಜಗಳದಲ್ಲಿ ಕೂಡು ಬಡವಾಯಿತು ಎಂಬ ಗಾದೆ ಮಾತು ಇದೆ. ಆದರೆ ಇಬ್ಬರ ನಡುವಿನ ವ್ಯವ ಹಾರದಲ್ಲಿ ಸಲಗವೊಂದು ಬಲಹೀನ ವಾಗಿರುವ ಪ್ರಸಂಗ ಎಲ್ಲಿಯೂ ನಡೆದಿಲ್ಲ. ಆದರೆ ಹಾಸನ ತಾಲ್ಲೂಕಿನ ಕುಪ್ಪಳ್ಳಿ ಬಳಿ ಇಂತಹದೊಂದುಘಟನೆನಡೆದಿದೆ. ಗ್ರಾಮದ ವಾಸುದೇವ ಅವರಿಗೆ ಎಂಟು ಎಕರೆ ತೋಟವಿದೆ. ಇದನ್ನು ಅವರು ಮೂಡಿಗೆರೆಯ ಅಬ್ಬಾಸ್ ಎಂಬ ವ್ಯಕ್ತಿಗೆ ೧.೮ ಕೋಟಿ ರೂ.ಗೆ ಮಾರಾಟ ಮಾಡಿದರು. ಒಪ್ಪಂದದ...

ದೊರಕದ ಉಪಧನ : ಹೀಗೊಂದು ತಬರನ ಕಥೆ…

ಹಾಸನ: ಸಿನಿಮಾದಲ್ಲಿ ತಬರನ ಕಥೆ ಕಂಡು ಮಮ್ಮುಲ ಮರುಗದೇ ಇರುವವರು ಯಾರೂ ಇರಲಾರರು. ನಿಜ ಜೀವನದಲ್ಲಿ ಇಂತಹ ಎಷ್ಟೋ ನೈಜ ಘಟನೆಗಳು ನಡೆದಿರುತ್ತವೆ. ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದ ನಿವೃತ್ತ ಗ್ಯಾಂಗ್ಮನ್ ರಾಮಶೆಟ್ಟಿ ಪ್ರಕರಣವೂ ಕೂಡ ತಬರನ ಕಥೆಯಂತಾಗಿದೆ. ನಿವೃತ್ತಿಯಾಗಿ ೧೨ ವರ್ಷ ಕಳೆದರೂ ಇವರಿಗೆ ಉಪಧನ ದೊರಕಿಲ್ಲ. ಹಾಗಾಗಿ ಕಛೇರಿಯಿಂದ ಕಛೇರಿಗೆ ಎಡತಾಕುತ್ತಾ, ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸೋಮವಾರ ಜಿಲ್ಲಾ ಪತ್ರಕರ್ತರ ಸಂಘದ...

ರಾಜಕೀಯ ಬಿಕ್ಕಟ್ಟು : ಜೆ.ಡಿ.ಎಸ್. ಲಾಭ ಪಡೆಯುವುದಿಲ್ಲ

ಹಾಸನ : ಭಾರತೀಯ ಜನತಾಪಕ್ಷ ದಲ್ಲಿ ಆಂತರಿಕ ಕಲಹ ಆರಂಭ ಗೊಂಡಿದೆ. ಈಗ ಬಿಕ್ಕಟ್ಟು ಸೃಷ್ಟಿಯಾಗಿದೆ. ಆದರೆ ಈ ಬಿಕ್ಕಟ್ಟಿನ ರಾಜಕೀಯ ಲಾಭ ಪಡೆಯ ದಿರಲು ಜೆ.ಡಿ.ಎಸ್. ನಿರ್ಧರಿಸಿದೆ. ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೂ ಆಗಿದೆ. ಇನ್ನು ಮುಂದೆ ಇಂತಹ ಸಾಹಸಕ್ಕೆ ಕೈ ಹಾಕು ವುದಿಲ್ಲ. ಹಿಂದಿನ ಕಹಿ ಅನುಭವದಿಂದ ಪಾಠ ಕಲಿಯಲಾಗಿದೆ ಎಂದು ಪಕ್ಷದ ರಾಷ್ಟ್ರೀಯ...

ಕೃಷಿ ಸಾಲ ನೀತಿ : ಇನ್ನಷ್ಟು ಸವಲತ್ತಿಗೆ ಪ್ರಧಾನಿಗೆ ಪತ್ರ ಕೊಂಡಿಲ್ಲ ಎಂದರು.

ಹಾಸನ :ಕೃಷಿ ಸಾಲ ನೀತಿಗೆ ಸಂಬಂಧಿಸಿದಂತೆ ರೈತರಿಗೆ ಇನ್ನಷ್ಟು ಸವಲತ್ತು ಅಗತ್ಯವಿದ್ದು,ಈಹಿನ್ನಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆ ಯುವುದಾಗಿ ಮಾಜಿ ಪ್ರಧಾನಿ, ಸಂಸದ ಹೆಚ್.ಡಿ.ದೇವೇಗೌಡ ಹೇಳಿದರು. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ ಮೃತಪಟ್ಟಿರುವ ರೈತರಿಗೆ ಪರಿಹಾರ ನೀಡಿಲ್ಲ ಎಂದು...

ಸಿ.ಎಂ. ಕಣ್ಣೀರು : ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಲೇವಡಿ

ಹಾಸನ:ಮುಖ್ಯಮಂತ್ರಿಬಿ.ಎಸ್.ಯಡಿ ಯೂರಪ್ಪ ಬುಧವಾರ ಬಿ.ಜೆ.ಪಿ. ಯಲ್ಲಿನ ಬಂಡಾಯ ಕುರಿತಂತೆ ಗಳ ಗಳನೆ ಕಣ್ಣೀರು ಹಾಕಿದ ಪ್ರಸಂಗವನ್ನು ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು. ಅವರು ಬುಧವಾರ ಪಂಚಾಯತ್ ರಾಜ್ ಸಂಘಟನೆ ಸಮಾವೇಶದ ಕಾರ್ಯ ಕ್ರಮದಲ್ಲಿ ಭಾಗವಹಿಸಿಮಾತನಾಡುತ್ತಿದ್ದರು. ಮುಖ್ಯಮಂತ್ರಿಗಳು ಕಣ್ಣೀರು ಹಾಕು ತ್ತಾರೆಂದರೆ ಇದೇನು ಇವರ ಆಸ್ತಿಯೇ? ಎಂದು ಖಾರವಾಗಿ ಪ್ರಶ್ನಿಸಿದರಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಶಾಶ್ವತವಲ್ಲ. ಜನರ ತೀರ್ಪೇ ಅಂತಿಮ ಎಂಬುದನ್ನು ಅರ್ಥೈಸಿಕೊಳ್ಳಬೇಕು...

‘ದೇವೇಗೌಡರನ್ನು ಸೋಲಿಸಲು ಕೆಳಹಂತದಲ್ಲಿ ಕಾಂಗ್ರೆಸ್ ಸಂಘಟನೆ ಅಗತ್ಯ’

ಹಾಸನ : ಹಾಸನ ಜಿಲ್ಲೆಯಲ್ಲಿ ಜೆ.ಡಿ.ಎಸ್. ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಹೆಚ್.ಡಿ.ದೇವೇ ಗೌಡರನ್ನು ಎದುರಿಸಿ ಸೋಲಿಸಲು ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಮಣಿಶಂಕರ್ ಅಯ್ಯರ್ ಹೇಳಿದರು. ಬುಧವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾ ಯತ್ ರಾಜ್ ಸಂಘಟನೆ ಸಮಾವೇಶ ವನ್ನು...

ದ್ರೋಹಿಗಳವಿವರಬಹಿರಂಗಪಡಿಸಲುಉಗ್ರಪ್ಪಒತ್ತಾಯ

ಹಾಸನ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸುತ್ತಲೂ ಇರುವ ದ್ರೋಹಿಗಳ ವಿವರವನ್ನು ಬಹಿ ರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು. ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಸುತ್ತಲೂ ದ್ರೋಹಿಗಳು ಇರು ವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ದ್ರೋಹಿಗಳು ಯಾರೆಂಬುದನ್ನು ಸ್ಪಷ್ಟಪಡಿಸ ಬೇಕುಎಂದುಒತ್ತಾಯಿಸಿದರು. ಬಿ.ಜೆ.ಪಿ. ಆಂತರಿಕ...

ನಿರಾಶ್ರಿತರ ಆಕ್ರಂದನ : ಮನ ಕರಗಿಸಿದ ಛಾಯಾಚಿತ್ರ

ಹಾಸನ : ನೆರೆಯಿಂದ ಉತ್ತರ ಕರ್ನಾಟಕದಲ್ಲಿ ನಿರಾಶ್ರಿತರ ಆಕ್ರಂದನವು ಯಾರನ್ನೂ ದಿಗಿಲುಗೊಳಿಸದೆ ಇರದು. ರಾಜ್ಯದ ಜನ ಇದಕ್ಕೆ ಸಹಾಯಹಸ್ತ ಚಾಚಿದ್ದಾರೆ. ಮಂಗಳವಾರ ನಿರಾಶ್ರಿತರ ಬದುಕು, ಅವರ ಆಕ್ರಂದನ ಮತ್ತಿತರ ಛಾಯಾಚಿತ್ರ ಪ್ರದರ್ಶನವು ಮನ ಕರಗಿಸುವಂತಿತ್ತು. ವಾರ್ತಾ ಮತ್ತು ಪ್ರಚಾರ ಇಲಾಖೆ ಛಾಯಾಚಿತ್ರ ಪ್ರದರ್ಶನವನ್ನು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ದಲ್ಲಿ ಬೆಳಿಗ್ಗೆ ೯ರಿಂದ ಸಂಜೆ ೫ರವರೆಗೆ ಏರ್ಪಡಿಸಿತ್ತು. ಸಾವಿರಾರು ಜನರು ಈ ಛಾಯಾ...

ಸ್ತ್ರೀ ಹಂತಕ ಅಪರಾಧ ಪ್ರಜ್ಞೆ ಕಾಡುವುದಿಲ್ಲ : ವ್ಯಕ್ತಿತ್ವ ದೋಷ !

ಹಾಸನ : ಯುವತಿಯರ ಸರಣಿ ಹಂತಕ ಮೋಹನ್ಕುಮಾರ್ಆಕ್ರಮಣಕಾರಿ ವ್ಯಕ್ತಿ ಅಲ್ಲದಿದ್ದರೂ ಸಮಾಜ ವಿರೋಧಾ ಭಾಸದ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದಾನೆ. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ವ್ಯಕ್ತಿತ್ವ ದೋಷ ಆತನಿಗಿದೆ. ಬೆಂಗಳೂರಿನ ಪ್ರಸಿದ್ಧ ಮನೋ ವೈದ್ಯ ಡಾ।। ಸಿ.ಆರ್.ಚಂದ್ರಶೇಖರ್ ಅವರ ಸ್ಪಷ್ಟ ಅಭಿಪ್ರಾಯ ಇದು. ಡಾ।। ಸಿ.ಆರ್.ಚಂದ್ರಶೇಖರ್ ಮಾತುಗಳಲ್ಲೇ ಕೇಳಬಹುದಾದರೆ, ಆತ ಹೆಚ್ಚು ಸ್ವಾರ್ಥಿ. ಈ ಸ್ವಾರ್ಥತನವನ್ನೇ ಮುಂದುವರೆಸಿಕೊಂಡಿದ್ದಾನೆ. ಇದನ್ನೇ ಅಭ್ಯಾಸ ಮಾಡಿಕೊಂಡಿದ್ದಾನೆ. ವ್ಯಕ್ತಿತ್ವ ದೋಷ ಇರುವ...

ತರಕಾರಿ ಕ್ಯಾಂಟರ್ ಅಪಘಾತ : ೧ ಸಾವು

ಹಾಸನ : ತರಕಾರಿ ಕ್ಯಾಂಟರ್ ಅಪಘಾತಕ್ಕೀಡಾಗಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಹಾಸನ ನಗರದ ಕಂದಲಿ ಸಮೀಪ ತರಕಾರಿ ತುಂಬಿದ್ದ ಕ್ಯಾಂಟರ್ ಅಪ ಘಾತಕ್ಕೀಡಾಗಿ ಮುದ್ದುಕೃಷ್ಣ ಎಂಬು ವವರು ಸಾವನ್ನಪ್ಪಿದ್ದಾರೆ. ನಗರದಿಂದ ತರಕಾರಿ ತುಂಬಿ ಕೊಂಡು ಈ ವಾಹನ ತೆರಳುತ್ತಿತ್ತು. ಅಣಚಿಹಳ್ಳಿ ಸೇತುವೆ ಬಳಿ ಹೋಗು ತ್ತಿದ್ದಾಗ ಮಗುಚಿ ಬಿದ್ದಿತು. ವಾಹನ ದಲ್ಲಿದ್ದ ಆಲೂರು ತಾಲ್ಲೂಕಿನ ರಾಯ ಸಮುದ್ರ ಗ್ರಾಮದ...

ಆಟದಲ್ಲೂ ನಿಪುಣ-ಹತ್ಯೆ ಮಾಡುವುದರಲ್ಲಿಯೂ ಜಾಣ!

ಹಾಸನ:ಮೋಹಿಸಿ, ಲೈಂಗಿಕವಾಗಿ ಬಳಸಿಕೊಂಡು ಸೈನೇಡ್ ನೀಡಿ, ೧೯ ಯುವತಿಯರನ್ನು ಕೊಲೆ ಮಾಡಿದ ಮಹಾ ಪಾತಕಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾ ಗ್ರಾಮದ ನಿವಾಸಿ ಮೋಹನ್ಕುಮಾರ್ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಆಟ-ಪಾಠಗಳಲ್ಲಿ ಮುಂದಿದ್ದನಂತೆ! ಈತ ಪಕ್ಕಾ ಕ್ರಿಮಿನಲ್. ಅಧಿಕೃತ ದಾಖಲೆಯ ಪ್ರಕಾರ ಈಗಲೂ ಶಿಕ್ಷಕನಾಗಿ ದ್ದಾನೆ. ಆದರೆ ಶಿಕ್ಷಕ ವೃತ್ತಿಯನ್ನು ತೊರೆದು ನಾಲ್ಕೈದು ವರ್ಷಗಳಾಗಿವೆ. ಬಹುಶಃ ೨೦೦೦ ಇಸವಿಯಿಂದಲೂ ಪಾತಕ ಲೋಕಕ್ಕೆ ಇಳಿದಿದ್ದಾನೆ ಎಂದರೆ...

ವಿಕೋಪಕ್ಕೆ ತಿರುಗಿರುವ ದಾಂಪತ್ಯದ ವಿರಸ

ಹಾಸನ : ಹುಡುಗಿಯ ಫೋಟೋ ಎಷ್ಟು ಚೆಂದ ಕಾಣುತ್ತದೆ ಅಲ್ಲವೇ? ಈಕೆ ಸುಂದರವಾಗಿದ್ದಾಳೆ, ಎಷ್ಟು ಸೌಮ್ಯ ವಾಗಿದ್ದಾಳೆ ಅನ್ನಿಸುವುದೂ ಸಹಜ. ಈಕೆಯ ಸೌಂದರ್ಯವೇ ಈಕೆಯ ಕುಟುಂಬಕ್ಕೆ ಕೊಳ್ಳಿ ಇಟ್ಟಿದೆ. ಈಕೆಯ ಗಂಡ, ಅತ್ತೆ, ಮಾವ ಎಲ್ಲರೂ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತೆಮಾಡಿದೆ. ಈಕೆಯ ಹೆಸರು ವೇದವಲ್ಲಿ. ಗಂಡಸಿಯ ಹೆಣ್ಣು ಮಗಳು. ಪಿ.ಯು.ಸಿ. ವರೆಗೆ ಓದಿದ್ದ ಏಳೆಂಟು ವರ್ಷಗಳ ಹಿಂದೆ ಹಾಸನದ ‘ಮೋಹನ್ ಮೆಲೋಡಿಸ್’ ಸುಗಮ...

ರೇವಣ್ಣ ಒತ್ತಡಕ್ಕೆ ಮಣಿದ ಗೃಹಮಂಡಳಿ: ಭೂ ಸ್ವಾಧೀನಕ್ಕೆ ಮರುಜೀವ

ಹಾಸನ : ಬಡಾವಣೆ ನಿರ್ಮಿಸಲು ನಗರ ಸಮೀಪದ ಚಿಕ್ಕಕೊಂಡಗುಳ ಹಾಗೂ ಮಾವಿನಹಳ್ಳಿಯ ೫೨೩ ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆಯು ರಾಜಕೀಯ ಒತ್ತಡದಿಂದಲೇ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಪತ್ರಿಕೆಗೆ ದೊರೆತಿದೆ. ಸದರಿ ಭೂಮಿಯ ಸ್ವಾಧೀನಕ್ಕೆ ಶಾಸಕ ಹೆಚ್.ಎಸ್.ಪ್ರಕಾಶ್ ಹಾಗೂ ರೈತರು ವಿರೋಧ ವ್ಯಕ್ತಪಡಿಸಿದ್ದರೂ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಭಾರೀ ಒತ್ತಡದಿಂದಾಗಿ ಸ್ವಾಧೀನ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ಮಂಡ ಳಿಯ ಅಧಿಕಾರಿಗಳೇ ಹೇಳುತ್ತಾರೆ....

ಆನೆಸಮಸ್ಯೆ:ಶೀಘ್ರದಲ್ಲಿಉನ್ನತಮಟ್ಟದಸಭೆ

ಹಾಸನ: ಆನೆ ಸಮಸ್ಯೆಗೆ ಸಂಬಂಧಿ ಸಿದಂತೆ ಶೀಘ್ರದಲ್ಲಿಯೇ ಉನ್ನತ ಮಟ್ಟದ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳ ಲಾಗುವುದು ಎಂದು ರಾಜ್ಯದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ)ಬಿ.ಕೆ.ಸಿಂಗ್ವಿಶ್ವಾಸವ್ಯಕ್ತಪಡಿಸಿದರು. ಬುಧವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜನಪ್ರತಿನಿಧಿಗಳು ಹಾಗೂ ಸರಣಿ ಸತ್ಯಾಗ್ರಹ ನಡೆಸುತ್ತಿರುವ ವಿವಿಧ ಸಂಘಟನೆಗಳ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ಹಾಸನ, ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು, ಪರಿಸರ ವಾದಿಗಳು,ಸಂಘ-ಸಂಸ್ಥೆಗಳಪ್ರಮುಖರ ಸಭೆ ಕರೆದು,...

ಕಾಡಾನೆಉಪಟಳ:ಶಾಶ್ವತಪರಿಹಾರಕ್ಕೆಒತ್ತಾಯ

ಹಾಸನ : ಆಲೂರು ತಾಲ್ಲೂಕಿನ ಕಾಡಾನೆ ಉಪಟಳಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡು ಹಿಡಿಯ ಬೇಕೆಂದು ಪರಿಸರವಾದಿ ಹೆಮ್ಮಿಗೆ ಮೋಹನ್ಒತ್ತಾಯಿಸಿದರು. ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಯಲ್ಲಿ ಜನಪ್ರತಿನಿಧಿಗಳು ಹಾಗೂ ಸರಣಿ ಸತ್ಯಾಗ್ರಹ ನಡೆಸುತ್ತಿರುವ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತ ನಾಡುತ್ತಿದ್ದರು. ಆನೆಧಾಮ ಮಾಡಿದರೆ ಆನೆ ಗಳನ್ನು ಸಂರಕ್ಷಿಸಬಹುದು. ಈ ಮೂಲಕ ಶಾಶ್ವತ ಪರಿಹಾರ ಸಾಧ್ಯ ಎಂದು ಅಭಿಪ್ರಾಯಿಸಿದರು. ಹಾಸನ...

ಸರಣಿ ಸತ್ಯಾಗ್ರಹ ತಾತ್ಕಾಲಿಕ ಹಿಂದಕ್ಕೆ : ನ.೫ರವರೆಗೆ ಗಡುವು

ಹಾಸನ: ಕಾಡಾನೆ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಮಲೆನಾಡು ಜನಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸಂತ್ರಸ್ತ ರೈತರು, ಪರಿ ಸರವಾದಿಗಳು ನಡೆಸುತ್ತಿದ್ದ ಸರಣಿ ಸತ್ಯಾ ಗ್ರಹವನ್ನು ತಾತ್ಕಾಲಿಕವಾಗಿ ಹಿಂತೆಗೆದು ಕೊಳ್ಳಲಾಗಿದೆ. ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ಎ.ಕಿಶೋರ್ ಕುಮಾರ್, ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯ...

ಕುಡಿಯವ ನೀರಿಗೆ ಒತ್ತಾಯಿಸಿ ಪಂಚಾಯಿತಿ ಕಛೇರಿಗೆ ಬೀಗ ಜಡಿದು ಪ್ರತಿಭಟನ

ಹಾಸನ:ಕುಡಿಯುವನೀರಿಗೆಒತ್ತಾಯಿಸಿ ಬೀರನಹಳ್ಳಿ ಕೆರೆ ಬಡಾವಣೆ ಹಾಗೂ ರಾಘ ವೇಂದ್ರಬಡಾವಣೆಯನಿವಾಸಿಗಳುಸತ್ಯವಂಗಲ ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಗುರುವಾರ ಪ್ರತಿಭಟಿಸಿದರು. ಬಡಾವಣೆಯಿಂದ ಖಾಲಿ ಕೊಡಗಳನ್ನು ತಲೆಯ ಮೇಲೆ ಹೊತ್ತೊಯ್ದು ಪಂಚಾಯಿತಿ ಕಛೇರಿ ಎದುರು ಧರಣಿ ನಡೆಸಿದರಲ್ಲದೆ, ಘೊಷಣೆಗಳನ್ನೂ ಕೂಗಿದರು.ಈಸಂದರ್ಭ ದಲ್ಲಿ ಮಾತನಾಡಿದ ಧರಣಿನಿರತಮಹಿಳೆಯರು, ಕುಡಿಯುವ ನೀರಿಗೆ ವಿಪರೀತ ತೊಂದರೆ ಯಾಗಿದೆ.ಆದರೆ ಗ್ರಾಮಪಂಚಾಯಿತಿಸದಸ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ಬಡಾವಣೆಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ...

ಗ್ರಾಮಸ್ಥರು-ಗುತ್ತಿಗೆದಾರರಬೆಂಬಲಿಗರನಡುವೆಮಾರಾಮಾರಿ

ಹಾಸನ: ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬುಧವಾರ ತಾಲ್ಲೂಕಿನ ಕೌಶಿಕ ಗ್ರಾಮ ದಲ್ಲಿ ಗ್ರಾಮಸ್ಥರು ಹಾಗೂ ಗುತ್ತಿಗೆ ದಾರರ ಬೆಂಬಲಿಗರ ನಡುವೆ ಮಾರಾ ಮಾರಿ ನಡೆದ ಘಟನೆ ನಡೆಯಿತು. ಗ್ರಾಮದಲ್ಲಿ ಈ ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತು ಗ್ರಾಮಸ್ಥರು ಪ್ರಶ್ನಿಸಿದ ವೇಳೆ, ಗುತ್ತಿಗೆದಾರರ ಬೆಂಬಲಿಗರು ಮಧ್ಯ ಪ್ರವೇಶಿಸಿದರು. ಈ ಹಂತದಲ್ಲಿ ಇಬ್ಬರ ನಡುವೆ ಹೊಡೆದಾಟ ನಡೆಯಿತು. ಜಿಲ್ಲಾ ಪಂಚಾಯಿತಿ...

ಕಾಡಾನೆ ಸಮಸ್ಯೆ:ನಾಲ್ಕನೇ ದಿನದಲ್ಲಿ ಸತ್ಯಾಗ್ರಹ

ಹಾಸನ : ಆನೆ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆ ಸುತ್ತಿರುವ ಸರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಗುರುವಾರ ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಸತ್ಯಾಗ್ರಹ ಮುಂದುವರೆಯಿತು. ಜೈವಿಕ ಪರಿಸರ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್, ಕಾಡಾನೆ ಹಾವಳಿಯ ಸಂತ್ರಸ್ತ ಗ್ರಾಮ ಸ್ಥರು ಹಾಗೂ ನಮ್ಮೂರ ಸೇವೆ ಸಂಘ ಟಕರು ಧರಣಿ ನಡೆಸಿದರು. ಬೆಳಿಗ್ಗೆ ೧೧-೩೦ರಿಂದ ಮಧ್ಯಾಹ್ನ ೨ ಗಂಟೆಯವರೆವಿಗೂ...

ಆನೆ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಸರಣಿ ಸತ್ಯಾಗ್ರಹ ಎರಡನೇ ದಿನಕ್ಕೆ

ಹಾಸನ : ಆಲೂರು-ಸಕಲೇಶಪುರ ಹಾಗೂ ಅರಕಲಗೂಡು ತಾಲ್ಲೂಕಿನಲ್ಲಿ ಆನೆ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ನಡೆಸುತ್ತಿರುವ ಸರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿರಿಸಿದೆ. ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಮಲೆನಾಡು ಜನಪರ ಹೋರಾಟ ಸಮಿತಿ ಆಶ್ರಯ ದಲ್ಲಿ ಆಲೂರು ತಾಲ್ಲೂಕಿನ ಹೆಮ್ಮಿಗೆ ಹಾಗೂ ಹೊನ್ನವಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಧರಣಿ ನಡೆಸಿದರು. ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆವಿಗೂ ಧರಣಿ ನಡೆಸಿದ ನಂತರ ಈ...

ನಗರದಲ್ಲಿ ಭಾರೀ ಮಳೆ : ಸಂಚಾರಕ್ಕೆ ಅಡಚಣ

ಹಾಸನ : ನಗರದಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಜೆ ೪-೧೫ರಿಂದ ೫-೧೫ರವರೆ ವಿಗೂ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಇದರಿಂದ ತಗ್ಗು ಪ್ರದೇಶದ ನಿವಾಸಿಗಳು ಬವಣೆ ಅನುಭವಿಸಿದರು. ದಿಢೀರ್ ಸುರಿದ ಮಳೆಯಿಂದ ನಗರದ ಕಸ್ತೂರ ಬಾ ರಸ್ತೆ, ಎಂ.ಜಿ.ರಸ್ತೆ, ಬಸ್ ನಿಲ್ದಾಣ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಯಿತು. ಈ ರಸ್ತೆಯ ಮಧ್ಯೆ ನೀರು...

ಆಲೂರುಸಮೀಪತೈಲಕಳವುಮಾಡುತ್ತಿದ್ದ ಜಾಲಪತ್ತೆ

ಆಲೂರು: ಮಂಗಳೂರಿನಿಂದ ಬೆಂಗಳೂರಿಗೆ ಹಾದು ಹೋಗಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆ ನಿಯ ಪೆಟ್ರೋಲ್-ಡೀಸೆಲ್ ಪೈಪ್ ಲೈನ್ ಅನ್ನು ತಾಲ್ಲೂಕಿನ ಕಾರ್ಜುವಳ್ಳಿ ಸಮೀಪದ ಬಾಳೆ ಕೊಪ್ಪಲು ಗ್ರಾಮದ ಬಳಿ ಅಕ್ರಮವಾಗಿ ಹೊಡೆದು, ತೈಲ ಕದಿಯುತ್ತಿದ್ದ ಜಾಲ ಪತ್ತೆಯಾಗಿದೆ. ಕಾರ್ಜುವಳ್ಳಿಯ ಪುಟ್ಟರಾಜು ಎಂಬುವವರ ೧೫ ಎಕರೆ ಜಮೀನು ಪಕ್ಕ ದಲ್ಲೇ ಹಾದು ಹೋಗಿದ್ದ ಪೈಪ್ಲೈನಿಗೆ ಸುಮಾರು ೧೩೦ ಮೀಟರ್ ಉದ್ದದ ಏರ್ಪೈಪ್ನಿಂದ ಅಕ್ರಮ ಸಂಪರ್ಕ ಪಡೆದು...

ಕಾಡಾನೆ ಸಮಸ್ಯೆ : ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ಧರಣಿ

ಹಾಸನ : ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾ ಯಿಸಿ ಆಲೂರು ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಕೆ. ಕುಮಾರ ಸ್ವಾಮಿ ನೇತೃತ್ವದಲ್ಲಿ ಸೋಮವಾರ ವಿವಿಧ ಸಂಘಟನೆಗಳು ಹಾಗೂ ಆಲೂರು-ಸಕಲೇಶಪುರ ಮತ್ತು ಅರ ಕಲಗೂಡು ತಾಲ್ಲೂಕಿನ ಆನೆ ಹಾವಳಿಗೆ ತುತ್ತಾದ ಗ್ರಾಮಸ್ಥರು ಧರಣಿ ನಡೆಸಿ ದರು. ಬೆಳಿಗ್ಗೆ ೧೧ ಗಂಟೆ ವೇಳೆಯಲ್ಲಿ ಮಲೆನಾಡು ಜನಪರ ಹೋರಾಟ ಸಮಿತಿ, ನಮ್ಮೂರ ಸೇವೆ,...

ನೆರೆಸಂತ್ರಸ್ತರಿಗೆ೫೦ಕೋಟಿರೂ.ವೆಚ್ಚದಲ್ಲಿ ೫ಸಾವಿರಮನೆನಿರ್ಮಾಣ

ಹಾಸನ : ನೆರೆ ಸಂತ್ರಸ್ತರಿಗೆ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠವು ೫ ಸಾವಿರ ಮನೆ ನಿರ್ಮಿಸಲು ಉದ್ದೇ ಶಿಸಿದೆ ಎಂದು ಶ್ರೀ ಬಾಲ ಗಂಗಾಧರ ನಾಥ ಸ್ವಾಮಿಗಳು ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ೫೦ ಕೋಟಿ ರೂ. ವೆಚ್ಚದಲ್ಲಿ ೫ ಸಾವಿರ ಮನೆ ನಿರ್ಮಿಸಲಾಗುವುದೆಂದು ಹೇಳಿದರು. ಮನೆ ನಿರ್ಮಾಣಕ್ಕೆ ಸಂಬಂಧಿ ಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಶ್ರೀಮಠವೇ ಮನೆ ನಿರ್ಮಿಸಬೇಕೋ...

ಕರ್ನಾಟಕ ‘ರಾಷ್ಟ್ರೀಯ ವಿಪತ್ತು ಪೀಡಿತ ’

ಹೈದರಾಬಾದ್ : ಜಲಪ್ರಳಯಕ್ಕೆ ತುತ್ತಾಗಿರುವ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳನ್ನು ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶಗಳೆಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಘೊಷಿಸಿದ್ದು, ಉಭಯ ರಾಜ್ಯಗಳಿಗೂ ಯಾವುದೇ ತಾರತಮ್ಯ ಇಲ್ಲದೆ ಪರಿಹಾರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ಆಂಧ್ರದ ಕೃಷ್ಣಾ ಹಾಗೂ ಕರ್ನೂಲ್ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಶುಕ್ರವಾರ ನಡೆಸಿದ ಪ್ರಧಾನ ಮಂತ್ರಿ, ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದರು. ಮೊದಲ ಹಂತವಾಗಿ...