ಶಾಸಕರ ಬದಲಾದ ನಿಲುವು : ದಿವ್ಯ ದರ್ಶನ ಶುಲ್ಕ ಮತ್ತೆ ಚಾಲೂ

ಹಾಸನ : ನಗರದ ಗ್ರಾಮ ದೇವತೆ ಹಾಸನಾಂಬೆಯ ವಿಶೇಷ ದರ್ಶನಕ್ಕಾಗಿ ೨೫೦ ರೂ. ಶುಲ್ಕವನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶಾಸಕ ಹೆಚ್.ಎಸ್.ಪ್ರಕಾಶ್ ರದ್ದುಪಡಿಸಿದ ಬೆನ್ನಲ್ಲೇ ಶುಕ್ರವಾರ ೨೫೦ ರೂ. ಶುಲ್ಕ ಪಡೆದು ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ದೇವಸ್ಥಾನದಲ್ಲಿ ಕೆಲ ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿತ್ತು. ಶುಕ್ರವಾರ ಬೆಳಿಗ್ಗೆ ೨೫೦ ರೂ. ಪ್ರವೇಶ ಅವಕಾಶದ ಬ್ಯಾನರ್ ಅನ್ನು ಹಾಕಲಾಗಿತ್ತು. ದರ್ಶನಕ್ಕೆ...

ಕಂತು ಹೆಚ್ಚಿಸಲು ಮಂಜೂರಿದಾರರ ಒತ್ತಡ

ಹಾಸನ : ನಗರದ ಚನ್ನಪಟ್ಟಣ ಕೆರೆ ಅಂಗದಲ್ಲಿ ಗೃಹ ಮಂಡಳಿ ಅಭಿವೃದ್ಧಿ ಪಡಿಸಿರುವ ವಿವಿಧ ಅಳತೆಯ ೧೬೭೪ ನಿವೇಶನಗಳಲ್ಲಿ ೧೨೯೦ ನಿವೇಶನಗಳನ್ನು ಲಾಟರಿ ಮೂಲಕ ಈಗಾಗಲೇ ಹಂಚಿದ್ದು, ತಿಂಗಳಿಗೊಂದರಂತೆ ನಾಲ್ಕು ಕಂತುಗಳಲ್ಲಿ ನಿವೇಶನದ ಮೊತ್ತವನ್ನು ಕಡ್ಡಾಯವಾಗಿ ಪಾವತಿಸುವಂತೆ ನಿವೇಶನದಾರರಿಗೆ ನೋಟೀಸ್ ನೀಡಲಾಗಿದೆ. ಅಕ್ಟೋಬರ್ ೨೫ರಿಂದ ಹಂತ ಹಂತವಾಗಿ ಹಣ ಕಟ್ಟಲು ನೋಟಿಸ್ ಗಳನ್ನು ಜಾರಿಗೊಳಿಸಲಾಗಿದೆ. ಕಂತಿನಲ್ಲಿ ನೋಂದಣಿ ಶುಲ್ಕವನ್ನೂ ಸೇರಿಸಲಾಗಿದೆ. ೩೦್ಡ೪೦ ಅಡಿಗಳ...

ನಗರಕ್ಕೆ ‘ಮನಸಾರೆ’ ತಂಡ : ವಿದ್ಯಾರ್ಥಿಗಳೊಂದಿಗೆ ಸಂವಾದ

ಹಾಸನ : ನಗರದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ‘ಮನಸಾರೆ’ ಚಿತ್ರದ ಬಗ್ಗೆ ಯುವಜನರ ಅಭಿಪ್ರಾಯ ಸಂಗ್ರಹಿಸಲು ಆ ಚಿತ್ರದ ತಂಡವು ಶುಕ್ರವಾರ ಇಲ್ಲಿಗೆ ಭೇಟಿ ನೀಡಿತ್ತು. ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಾಯಕ ದಿಗಂತ್, ನಾಯಕಿ ಆಂದ್ರಿತಾ ರೇ, ಸತೀಶ್ ನೀನಾಸಂ, ಮಿತ್ರ, ರಾಜು ಹಾಗೂ ಪವನ್ ತಂಡದಲ್ಲಿ ದ್ದರು. ನಗರದ ಹಲವು ಕಾಲೇಜುಗಳಿಗೆ ಭೇಟಿ ಕೊಟ್ಟ ತಂಡ, ಚಿತ್ರದ ಬಗ್ಗೆ ವಿದ್ಯಾರ್ಥಿಗಳ ಅನಿಸಿಕೆಯನ್ನು...

ಹಾಸನ ತಾಲ್ಲೂಕಿನಲ್ಲಿ ಅತಿವೃಷ್ಟಿ ಮೂರು ಕೋಟಿ ರೂ. ನಷ್ಟ

ಹಾಸನ : ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಹಾಸನ ತಾಲ್ಲೂಕಿನಲ್ಲಿ ೩ ಕೋಟಿ ರೂ. ನಷ್ಟ ಸಂಭವಿಸಿದೆ. ತಾಲ್ಲೂಕು ಆಡಳಿತ ನಷ್ಟದ ಅಂದಾಜನ್ನು ತಯಾರಿಸಿದ್ದು, ಈ ಕುರಿತು ಜಿಲ್ಲಾಡಳಿತಕ್ಕೆ ವರದಿಯನ್ನು ನೀಡಿದೆ. ತಾಲ್ಲೂಕು ತಹಸೀಲ್ದಾರ್ ರುದ್ರ ಪ್ಪಾಜಿರಾವ್, ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿವರ ಒದಗಿಸಿ, ಮಳೆಗೆ ತಾಲ್ಲೂಕಿನಲ್ಲಿ ೧೩೦ ಮನೆಗಳು ಆಹುತಿಯಾಗಿವೆ. ಈ ಪೈಕಿ ೮೦ ಮನೆ ಗಳಿಗೆ ಪರಿಹಾರ ಒದಗಿಸಲಾಗಿದೆ...

ಅಪರೂಪದ ಮಳೆ :ಜಿಲ್ಲೆಯ ಕೆರೆಗಳ ಸ್ಥಿತಿಗತಿ ಹೇಗಿದೆ?

ಹಾಸನ : ಜಿಲ್ಲೆಯಲ್ಲಿ ಕಳೆದ ೧೫ ದಿನದ ಹಿಂದೆ ಬಿದ್ದ ಭಾರೀ ಮಳೆಗೆ ಹಲವು ಕೆರೆಗಳು ತುಂಬಿದ್ದು, ಕೋಡಿ ಬಿದ್ದಿದ್ದರೆ, ಮತ್ತೆ ಹಲವು ಕೆರೆಗಳಲ್ಲಿ ನೀರೇ ಇಲ್ಲದ ಪರಿಸ್ಥಿತಿ ಇದೆ. ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ ಯಮ ಸ್ವರೂಪಿ ಮಳೆಯು ಜನರ ಬದುಕನ್ನೇ ತಲ್ಲಣಗೊಳಿಸಿದೆ. ಹಾಸನ ದಲ್ಲಿ ಇಂತಹ ಭೀಕರ ಸನ್ನಿವೇಶ ಆಗಿಲ್ಲ. ಅಪರೂಪದ ಮಳೆಯಿಂದ ಕೆಲವು ಕೆರೆಗಳಲ್ಲಿ ಕಾಲುಭಾಗದ ನೀರಿದೆ. ಮತ್ತೆ...

ಕಾರಗೋಡು ಸಮೀಪ ವಿದ್ಯುತ್ ಸ್ಪರ್ಶಗೊಂಡು ಗಂಡಾನೆ ಸಾವು

ರಾಯರಕೊಪ್ಪಲು(ಆಲೂರು) : ಗಂಡಾನೆಯೊಂದು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿ ಸಾವನ್ನಪ್ಪಿರುವ ಘಟನೆ ಕಾರ ಗೋಡು ಸಮೀಪದ ಹುಸ್ಕೂರಿನಲ್ಲಿ ನಡೆದಿದೆ. ಇಲ್ಲಿಗೆ ತೋಟದ ಸಮೀಪದಲ್ಲಿ ೩೦ ರಿಂದ ೩೫ ವರ್ಷ ಪ್ರಾಯದ ಸಲಗ ಸಾವಿಗೀಡಾಗಿದೆ. ಶುಕ್ರವಾರ ರಾತ್ರಿ ೧-೩೦ರ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಳಿಗ್ಗೆ ಗ್ರಾಮಸ್ಥರಿಂದ ಮಾಹಿತಿ ದೊರೆತ ಕೂಡಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದರು. ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ...

ಪ.ಪಂ. ಭ್ರಷ್ಟಾಚಾರದ ಕತೆಯಿದು

ಅರಕಲಗೂಡು : ನಿವೇಶನದ ಕಂದಾಯ ೫೯ರೂಪಾಯಿ. ಅದರ ಫಾರಂಗೆ ೫೦ ರೂಪಾಯಿ ಕೊಡ್ಬೇಕು. ಹಾಗೇನೇ ಅದೇ ರೀತಿ ಬಡವರಿಗೆ ವಿತರಣೆಯಾಗುವ ಖಾಲಿ ನಿವೇ ಶನದ ಹಕ್ಕು ಪತ್ರ ಪಡೆಯಲು ೧೦೦೦ ದಿಂದ ೧೫೦೦ ರೂ.ವರೆಗೆ ಸಿಬ್ಬಂದಿಗೆ ಲಂಚ ಕೊಡ ಬೇಕು. ಇದು ಇಲ್ಲಿನ ಪಟ್ಟಣ ಪಂಚಾಯಿತಿಯ ಭ್ರಷ್ಟಾಚಾರದ ಕಥೆ. ಎರಡು ವರ್ಷಗಳ ಹಿಂದೆ ಪಟ್ಟಣ ಪಂಚಾ ಯಿತಿ ೧೭೫ ಮಂದಿ ಫಲಾನುಭವಿಗಳಿಗೆ ಉಚಿತ...

೧೮ ಕೋಟಿ ರೂ. ವೆಚ್ಚದಲ್ಲಿ ಹಾಸನ ಹಾಲು ಒಕ್ಕೂಟ ಮೇಲ್ದರ್ಜೆಗೆ :ಚಿಂತನ

ಹಾಸನ : ೧೮ ಕೋಟಿ ರೂ.ವೆಚ್ಚದಲ್ಲಿ ಹಾಸನ ಹಾಲು ಒಕ್ಕೂಟವನ್ನುಮೇಲ್ದರ್ಜೆಗೇರಿಸಲಾಗುವುದು ಎಂದುಹಾಸನ ಹಾಲು ಒಕ್ಕೂಟದ ಅಧ್ಯಕ್ಷಹೆಚ್.ಡಿ.ರೇವಣ್ಣ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಒಕ್ಕೂಟದಹಾಲಿನ ಶೇಖರಣೆಯಲ್ಲಿ ಬರುವ ಹೆಚ್ಚುವರಿ ಜಿಡ್ಡನ್ನು ಬೆಣ್ಣೆ ಹಾಗೂ ತುಪ್ಪವನ್ನಾಗಿ ಪರಿವರ್ತಿಸಲಾಗುವುದು ಎಂದುಹೇಳಿದರು.೧೦೦ ಮೆಟ್ರಿಕ್ ಟನ್ ಸಾಮರ್ಥ್ಯದಬೆಣ್ಣೆ ದಾಸ್ತಾನು ಶೈತ್ಯಾಗಾರ ನಿರ್ಮಾಣಹಾಗೂ ೧೫೦ ಮೆಟ್ರಿಕ್ ಟನ್ಸಾಮರ್ಥ್ಯದ ತುಪ್ಪ ಉತ್ಪಾದನಾ ಘಟಕಸ್ಥಾಪಿಸಲಾಗುವುದು. ಇದಕ್ಕೆ ಅವಶ್ಯಕವಾದ ಯಂತ್ರೋಪಕರಣಗಳನ್ನುಅಳವಡಿಸಲು ಯೋಜಿಸಲಾಗಿದೆ ಎಂದುವಿವರಿಸಿದರು.೨೦೦೯-೧೦ನೇ ಸಾಲಿನಲ್ಲಿ ೧೦೦ಮಹಿಳಾ ಡೈರಿ...

ಹೆರಗು ವಾರದ ಸಂತೆಗೆ ಅತ್ಯುತ್ತಮ ಆರಂಭ

ಹೆರಗು :ಗ್ರಾಮದ ಮೊಟ್ಟ ಮೊದಲ ವಾರದ ಸಂತೆಯು ಹಬ್ಬದ ವಾತಾವರಣ ದಲ್ಲಿ ಬುಧವಾರ ಆರಂಭಗೊಂಡಿತು. ಹೆರಗು ಹಾಗೂ ಅದರ ಸುತ್ತಮುತ್ತಲ ಸುಮಾರು ೩೦ ಹಳ್ಳಿಗಳ ಗ್ರಾಮಸ್ಥರು, ವರ್ತಕ ರಿಗೆ ಈ ಸಂದರ್ಭದಲ್ಲಿ ಹಬ್ಬದ ಅಡುಗೆ ಬೇಯಿಸಿ ಉಣಬಡಿಸಲಾಯಿತು. ಸುಮಾರು ೩ ಸಾವಿರಕ್ಕೂ ಹೆಚ್ಚು ಜನರು ಸಂತೆಯಲ್ಲಿ ಪಾಲ್ಗೊಂಡು ವಹಿವಾಟು ನಡೆಸಿದರು. ೩೧ ಜೊತೆ ಹೋರಿಗಳು ಮಾರಾಟಕ್ಕೆ ಬಂದಿದ್ದವು. ಅವುಗಳಲ್ಲಿ ಎಂಟು ಜೋಡಿ ೨೦...

ಗುಂಡ್ಯ ಜಲವಿದ್ಯುತ್ ಯೋಜನೆ :ಶಾಸಕ ಆನಂದ್ ಒಲವು

ಹಾಸನ : ವಿವಾದಿತ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಂ.ಆನಂದ್ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರಕ್ಕೆ ಹಾನಿ ಯಾಗದಂತೆ ಯೋಜನೆ ಕೈಗೆತ್ತಿಕೊಳ್ಳ ಬೇಕು. ಇದರಿಂದ ರೈತರಿಗೆ ತೊಂದರೆ ಯಾಗಬಾರದು ಎಂದು ಹೇಳಿದರು. ಪ್ರತಿ ಯೂನಿಟ್ ವಿದ್ಯುತ್ ಉತ್ಪಾ ದಿಸಲು ೪೦ ಪೈಸೆಯಿಂದ ೬೦ ಪೈಸೆ ವೆಚ್ಚ ತಗುಲುತ್ತದೆ. ಹಾಗಾಗಿ...

ಬಡತನ ನಿರ್ಮೂಲನೆಗಾಗಿ ೪೦೦ಕ್ಕೂ ಹೆಚ್ಚು ಕಾರ್ಯಕ್ರಮಗಳು!

ಹಾಸನ: ಸ್ವಾತಂತ್ರ್ಯಾನಂತರ ಇಲ್ಲಿಯ ತನಕ ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸೇರಿ ೪೦೦ಕ್ಕೂ ಹೆಚ್ಚು ಬಡತನ ನಿರ್ಮೂ ಲನಾ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿವೆ. ಆದರೆ ಭಾರತದಲ್ಲಿ ಇಂದೂ ಕೂಡ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಶೇ.೩೩ರಷ್ಟು ಜನರಿದ್ದಾರೆ ಎಂದು ಹಾಸನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರಸಿದ್ಧ ಅರ್ಥಶಾಸ್ತ್ರ ಲೇಖಕರೂ ಆದ ಡಾ।।ಹೆಚ್.ಆರ್.ಕೃಷ್ಣಯ್ಯಗೌಡ ಹೇಳಿದ್ದಾರೆ. ನಗರದ...

ಗುಂಡ್ಯಯೋಜನೆ:ಕೇಂದ್ರಸಚಿವರೊಂದಿಗೆಶೀಘ್ರಮಾತುಕತೆ

ಹಾಸನ : ವಿವಾದಿತ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜೈರಾಂ ರಮೇಶ್ ಅವ ರನ್ನು ಶೀಘ್ರವೇ ಭೇಟಿಯಾಗಿ ಮಾತು ಕತೆ ಮೂಲಕ ಗೊಂದಲ ಇತ್ಯರ್ಥ ಪಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಚಿಕ್ಕಮಗಳೂರಿನಿಂದ ಬೆಂಗ ಳೂರಿಗೆ ತೆರಳುವ ಮಾರ್ಗಮಧ್ಯೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಮನ ವರಿಕೆ...

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಸಿ.ಎಂ. ಚಿಂತನೆ

ಹಾಸನ : ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧ ರಿಸಿದ್ದಾರೆ. ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡುವ ವೇಳೆ, ಮುಖ್ಯಮಂತ್ರಿಗಳು ಈ ಒಲವು ವ್ಯಕ್ತ ಪಡಿಸಿದರು. ಸಚಿವ ಅರವಿಂದ ಲಿಂಬಾವಳಿ ಅವರು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ ಎಂಬ ವ್ಯಾಪಕ ದೂರುಗಳಿವೆ. ಹಾಗಾಗಿ ಬದ ಲಾವಣೆಯ ಬಗ್ಗೆಯೂ ತೀವ್ರವಾಗಿ ಪರಿ ಶೀಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿ ದರು. ಹಾಸನ ಜಿಲ್ಲೆಯನ್ನು ಸಂಪೂರ್ಣ...

ಹಗರಣಗಳ ಚರ್ಚೆ : ವಿಶೇಷ ಅಧಿವೇಶನಕ್ಕೆ ಒತ್ತಾಯ

ಹಾಸನ : ಹಗರಣಗಳ ಕುರಿತು ಚರ್ಚೆಗೆ ವಿಶೇಷ ವಿಧಾನಸಭೆ ಅಧಿ ವೇಶನ ಕರೆಯಬೇಕು ಎಂದು ಮುಖ್ಯ ಮಂತ್ರಿಗಳನ್ನು ಜೆ.ಡಿ.ಎಸ್. ಒತ್ತಾ ಯಿಸಿದೆ. ಪಕ್ಷದ ಮುಖಂಡ ಹೆಚ್.ಡಿ. ರೇವಣ್ಣ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ೧೯೦೨ ರಿಂದ ೨೦೦೯ರ ತನಕ ಆಗಿರುವ ನಿರ್ಣಯಗಳ ಬಗ್ಗೆ ತನಿಖೆ ನಡೆಸಲಿ ಎಂದರು. ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರೇ ಹಗರಣದ ರೂವಾರಿ ಗಳು, ಅವರು ಮೊದಲು ರಾಜಿನಾಮೆ ನೀಡಿ, ತನಿಖೆಗೊಳಪಡಬೇಕು....

ಡಿಸೆಂಬರ್ನಲ್ಲಿಬಿ.ಜೆ.ಪಿ.ಅಧ್ಯಕ್ಷಸ್ಥಾನಕ್ಕೆಚುನಾವಣೆ

ಹಾಸನ :ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಡಿಸೆಂಬರ್ ಮಾಸಾಂತ್ಯದಲ್ಲಿ ಚುನಾವಣೆ ನಡೆಯ ಲಿದೆ ಎಂದು ಬಿ.ಜೆ.ಪಿ. ಅಧ್ಯಕ್ಷ ಸದಾ ನಂದಗೌಡ ತಿಳಿಸಿದರು. ತಮ್ಮನ್ನು ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕೇಂದ್ರೀಯ ಬಿ.ಜೆ.ಪಿ. ಪಕ್ಷದ ಮುಖಂಡರು ಚುನಾವಣಾ ವೇಳಾಪಟ್ಟಿಯನ್ನು ಪ್ರಕ ಟಿಸಲಿದ್ದಾರೆ ಎಂದು ವಿವರಿಸಿದರು. ಬಿ.ಜೆ.ಪಿ. ಅಧ್ಯಕ್ಷರ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿಯೇ ನಡೆಯುತ್ತದೆ ಎಂದರಲ್ಲದೆ, ಕೇಂದ್ರ ವರಿಷ್ಠ ಮಂಡಳಿ ಅಧ್ಯಕ್ಷರ ಆಯ್ಕೆಗೆ...

ಹುಚ್ಚು ಮಳೆಯ ಆರ್ಭಟಕ್ಕೆ ಬೆಚ್ಚಿ ಬಿದ್ದ ರೈತಾಪಿ ವರ್ಗ

ಹಳೇಬೀಡು : ಹಳೇಬೀಡು ಸುತ್ತ ಮುತ್ತ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಭಾರೀ ಮಳೆ ಬಿದ್ದಿದ್ದ ರಿಂದ ರೈತಾಪಿ ವರ್ಗ ತತ್ತರಿಸಿ ಹೋಗಿದೆ. ಇತಿಹಾಸ ಪ್ರಸಿದ್ಧ ದ್ವಾರ ಸಮುದ್ರ ಕೆರೆ ಕೋಡಿ ಬಿದ್ದಿದೆ. ಅಡ ಗೂರು ಹಾಗೂ ಬೆಳವಾಡಿ ಕೆರೆಗಳು ಕೂಡ ಕೋಡಿ ಬಿದ್ದಿವೆ. ಕೆರೆ-ಕಟ್ಟೆಗಳೂ ಒಡೆದ ಪರಿಣಾಮ ಜಮೀನು ಜಲಾ ವೃತಗೊಂಡು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ದ್ವಾರಸಮುದ್ರ ಕೆರೆ ಉಕ್ಕಿ ಹರಿಯು...

ಎಸ್.ಡಿ.ಎಂ.ಕಾಲೇಜುಜಲಾವೃತ:ನಗರದತಗ್ಗು ಪ್ರದೇಶಕ್ಕೆನೀರು

ಹಾಸನ : ನಗರದಲ್ಲಿ ವಿಪರೀತ ಮಳೆ ಸುರಿದಿದ್ದರಿಂದ ತಣ್ಣೀರುಹಳ್ಳದಲ್ಲಿರುವ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಜಲಾವೃತಗೊಂಡಿತು. ಕಾಲೇಜಿನ ಮುಂಭಾಗದಲ್ಲಿರುವ ಬಿ.ಎಂ.ರಸ್ತೆಗೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿರುವುದರಿಂದ ನಗರದ ಮಳೆ ನೀರು, ಅಲ್ಲಿ ಹರಿಯಲಾಗದೆ ಕಾಲೇಜಿನ ಅಂಗಳಕ್ಕೆ ನುಗ್ಗಿತು. ಇದರಿಂದ ಹೊರ ರೋಗಿಗಳು, ವಿದ್ಯಾರ್ಥಿಗಳು ಹಾಗೂ ವೈದ್ಯರು ಕಾಲೇಜಿಗೆ ಬರಲಾಗದೆ ಪರದಾಡ ಬೇಕಾಯಿತು. ಕಾಲೇಜಿಗೆ ರಜೆ ಘೊಷಿಸ ಲಾಯಿತು. ಅಸ್ಪತ್ರೆಯ ಒಳರೋಗಿಗಳು ಕೂಡ ಹೊರ ಬರಲು ಅಡ್ಡಿಯಾಯಿತು....

ಅನಾಗರಿಕಸರ್ಕಾರ:ಸಿ.ಪಿ.ಐ(ಎಂ)ಕಟುಟೀಕೆ ಹಾಸನ :ಅಸಂಘಟಿತ ಕಾರ್ಮಿ

ಹಾಸನ :ಅಸಂಘಟಿತ ಕಾರ್ಮಿ ಕರು ಕೂಲಿ ಕೇಳಿದರೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ. ಇದಕ್ಕಿಂತ ಅಮಾನವೀಯ ಬೇರೆ ಇಲ್ಲ. ಬಿ.ಜೆ.ಪಿ. ಅಧಿಕಾರಕ್ಕೆ ಬಂದ ನಂತರ ದಬ್ಬಾಳಿಕೆ ಹಾಗೂ ದೌರ್ಜನ್ಯ ಮಿತಿ ಮೀರಿ ಹೋಗಿದೆ. ಇದೊಂದು ಅನಾಗ ರಿಕ ಸರ್ಕಾರ ಎಂದು ಸಿ.ಪಿ.ಐ.(ಎಂ) ಕಟು ವಾಗಿ ಟೀಕಿಸಿದೆ. ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನದಲ್ಲಿ...

ಜಿಲ್ಲಾಧಿಕಾರಿಗಳ ವಾಗ್ದಾನ :ಅಹೋರಾತ್ರಿ ಧರಣಿ ಅಂತ

ಹಾಸನ : ಅಸಂಘಟಿತ ಕಾರ್ಮಿಕರ ಬೇಡಿಕೆಯನ್ನು ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್ ಭರವಸೆ ನೀಡಿದ್ದರಿಂದ ಪೊಲೀಸರು ಹಾಗೂ ಸರ್ಕಾರದ ವಿರುದ್ಧ ನಡೆಸುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೊಂಡಿದೆ. ಬುಧವಾರ ಸಂಜೆ ೪-೩೦ರ ವೇಳೆ ಯಲ್ಲಿ ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಹಾಗೂ ಅಸಂಘಟಿತ ಕಾರ್ಮಿಕ ಮುಖಂಡರ ನಡುವೆ ಮಾತುಕತೆ ನಡೆಯಿತು. ಮಾತುಕತೆಯ ನಂತರ ಧರಣಿನಿರತರು ತಮ್ಮ ಪ್ರತಿಭಟನೆಯನ್ನು ವಾಪಸ್ಸು ತೆಗೆದುಕೊಂಡರು. ಮಾತುಕತೆಯ...

ಬೇಟೆಗೆ ಬಂದು ತಂತಿ ಬೇಲಿಗೆ ಸಿಕ್ಕಿ ನರಳಾಡಿದ ಚಿರತೆ

ಹಾಸನ :ಅಹಾರ ಅರಸುತ್ತಾ ಗ್ರಾಮಕ್ಕೆ ನುಗ್ಗಿದ ಹೆಣ್ಣು ಚಿರತೆಯೊಂದು ಜಮೀ ನೊಂದರ ತಂತಿ ಬೇಲಿಗೆ ಸಿಕ್ಕಿ ಕೊಂಡು ಸುಮಾರು ೧೦ ಗಂಟೆಗಳಿಗೂ ಹೆಚ್ಚು ಕಾಲ ನೋವಿನಿಂದ ನರಳಾಡಿದ ಹೃದಯ ವಿದ್ರಾವಕ ಘಟನೆ ಪುರದಮ್ಮ ದೇವಸ್ಥಾನದ ಬಳಿ ಇರುವ ಬೀಕನಹಳ್ಳಿಯಲ್ಲಿ ನಡೆದಿದೆ. ನಿಟ್ಟೂರು ಹಾಗೂ ಬೀಕನಹಳ್ಳಿ ಸುತ್ತಮುತ್ತ ಕಾಡು ಹಂದಿ, ಚಿರತೆಯ ಹಾವಳಿ ಇದ್ದು, ಬೆಳೆಗಳ ರಕ್ಷಣೆಗೆ ರೈತರು ಜಮೀನುಗಳಿಗೆ ತಂತಿ ಬೇಲಿ ಹಾಕಿ...

ಭಾರೀ ಮಳೆ : ಜನಜೀವನ ಅಸ್ತವ್ಯಸ್ತ

ಹಾಸನ:ಸೋಮವಾರ ಮಧ್ಯಾಹ್ನ ದವರೆವಿಗೂ ಸುರಿದ ಭಾರೀ ಮಳೆ ಯಿಂದ ನಗರದಲ್ಲಿನ ಜನಜೀವನ ಅಸ್ತ ವ್ಯಸ್ತಗೊಂಡಿತ್ತು. ಭಾನುವಾರ ರಾತ್ರಿ ಆರಂಭ ಗೊಂಡ ಮಳೆ, ಸೋಮವಾರ ಬೆಳಗಿನ ಜಾವದ ವೇಳೆಗೆ ಬಿರುಸು ಪಡೆದು ಕೊಂಡಿತು. ಬೆಳಿಗ್ಗೆ ೧೦ ಗಂಟೆಯವರೆ ವಿಗೂ ಮಳೆ ಸುರಿಯಿತು. ನಂತರ ಮಧ್ಯಾಹ್ನದವರೆವಿಗೂ ತುಂತುರು ಮಳೆ ಮುಂದುವರೆದೇ ಇತ್ತು. ಮಳೆ ಬಿದ್ದಿದ್ದರಿಂದ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಬಿ.ಎಂ.ರಸ್ತೆ, ಕಸ್ತೂರಿ ಬಾ ರಸ್ತೆಗಳಲ್ಲಿ...

ಹಾಸನದಲ್ಲಿಜನವರಿಮೊದಲವಾರಮಕ್ಕಳಸಾಹಿತ್ಯಸಮ್ಮೇಳನ

ಹಾಸನ : ಜನವರಿ ಮೊದಲನೇ ವಾರದಲ್ಲಿ ಹಾಸನದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಚಿಂತನೆ ನಡೆಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಶಂಕರ ಹಲಗತ್ತಿ, ಈ ಸಂಬಂಧ ಹಲವರನ್ನು ಸಂಪರ್ಕಿಸಿ, ಚರ್ಚೆ ನಡೆಸ ಲಾಗಿದೆ ಎಂದು ತಿಳಿಸಿದರು. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಲಾಗುವುದು. ಸದ್ಯಕ್ಕೆ ಸಮ್ಮೇಳನ ಯಶಸ್ವಿಗೆ ಶ್ರವಣಬೆಳ ಗೊಳ ಮಠದ...

ಬೇಡಿಕೆಗೆ ಒತ್ತಾಯಿಸಿ ಅಂಚೆ ನೌಕರರ ಧರಣಿ

ಹಾಸನ : ಬೇಡಿಕೆಗೆ ಒತ್ತಾಯಿಸಿ ಅಂಚೆ ನೌಕರರು ಸೋಮವಾರ ನಗರದಲ್ಲಿ ಧರಣಿ ನಡೆಸಿ, ಜಿಲ್ಲಾಧಿಕಾರಿ ಕೇಂದ್ರ ಸ್ಥಾನಿಕ ಸಹಾಯಕರಿಗೆ ಮನವಿ ಸಲ್ಲಿಸಿದರು. ಮಧ್ಯಾಹ್ನ ೩-೩೦ರ ವೇಳೆಯಲ್ಲಿ ಜಿಲ್ಲಾ ಪ್ರಧಾನ ಅಂಚೆ ಕಛೇರಿ ಮುಂದೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಅಂಚೆ ನೌಕರರು ಜಮಾಯಿಸಿದರಲ್ಲದೆ, ಅರ್ಧ ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು. ಧರಣಿಯ ವೇಳೆ ಪ್ರತಿ ಭಟನಾ ಘೊಷಣೆ ಕೇಳಿ ಬಂದವು. ಧರಣಿಯ...

ಶಾಟ್ಸರ್ಕ್ಯೂಟ್ಗೆಗೃಹಬಳಕೆವಸ್ತುಗಳುಆಹುತಿ

ಹಾಸನ : ಶಾಟ್ ಸರ್ಕ್ಯೂಟ್ನಿಂದ ಮನೆಯಲ್ಲಿದ್ದ ಗೃಹಬಳಕೆ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಗರದ ಅರಳೀಕಟ್ಟೆ ವೃತ್ತದ ಗೌರಿ ಕೊಪ್ಪಲಿನಲ್ಲಿ ಸಂಭವಿಸಿದೆ. ಭಾನುವಾರ ೧೨ ಗಂಟೆ ವೇಳೆಯಲ್ಲಿ ಇಲ್ಲಿನ ನಿವಾಸಿ ಪರಮೇಶ್ ಎಂಬುವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಟಿ.ವಿ., ಫ್ರಿಡ್ಜ್ , ಹಾಸಿಗೆ ಮತ್ತಿತರ ವಸ್ತು ಗಳು ಸುಟ್ಟು ಹೋಗಿವೆ. ಈ ಸಂದರ್ಭದಲ್ಲಿ ಮನೆಯೊಳಗೆ ಕುಟುಂಬದ ಸದಸ್ಯರೆಲ್ಲಾ ಇದ್ದರೂ ಆಶ್ಚರ್ಯಕರ ರೀತಿಯಲ್ಲಿ...

ವಿದೇಶಿ ವ್ಯಾಮೋಹ ತೊರೆಯಿರಿ: ಶಂಕರ ಹಲಗತಿ

ಹಾಸನ : ವಿದೇಶಿ ವ್ಯಾಮೋಹ ತೊರೆದು ಈ ನೆಲದಲ್ಲಿಯೇ ದುಡಿಯ ಬೇಕು ಎಂದು ರಾಜ್ಯ ಬಾಲ ವಿಕಾಸ ಅಕಾ ಡೆಮಿ ಅಧ್ಯಕ್ಷ ಶಂಕರ್ ಹಲಗತ್ತಿ ಹೇಳಿದರು. ಭಾನುವಾರ ರಾಜ್ಯ ಸರ್ಕಾರಿ ನೌಕ ರರ ಸಂಘದ ಜಿಲ್ಲಾ ಶಾಖೆಯ ಆಶ್ರಯ ದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ವಿದ್ಯಾಭ್ಯಾಸ ಮುಗಿದ ಕೂಡಲೇ ವಿದೇಶಕ್ಕೆ ಹೋಗಿ ನೆಲೆಸಿದರೆ ಪೋಷಕರು...

ನಗರಕ್ಕೆ ಬಂದ ಅಮೇರಿಕಾದ ಸಾಹಸಿ : ಸೈಕಲ್ ಮೇಲೆ ವಿಶ್ವಯಾತ

-ಅಮ್ಮ ಕೂಡ ಅಲ್ಲೇ ಇದ್ದಾರೆ. ಓದಿ ರೋದು ಬಯೋಕೆಮಿಸ್ಟ್ರಿಯಲ್ಲಿ ಸ್ನಾತ ಕೋತ್ತರ ಪದವಿ. ಇದು ವರೆಗೂ ೬೦ ದೇಶಗಳ ೭೦ ಸಾವಿರ ಕಿಲೋ ಮೀಟರ್ ಗಳನ್ನು ಸೈಕಲ್ನಲ್ಲೇ ಸುತ್ತಿದ್ದೇನೆ.ಈಅನು ಭವವನ್ನು ಬರೆದು ಹಂಚಿಕೊಳ್ಳುವುದೇ ನನ್ನ ಜೀವನದ ಗುರಿಘಿ’. ಈಮಾತುಗಳು ನಗರಕ್ಕೆ ಭಾನುವಾರ ಆಗಮಿಸಿದ ವಿದೇಶಿ ಅತಿಥಿ ಹಿರ್ಶ್ಚ್ ಅವ ರದು. ಸೈಕಲ್ ಮೇಲೆ ದೇಶ ಸುತ್ತಿ ಸ್ವಂತ ಅನುಭವ ಪಡೆದು, ಬರೆಯಬೇಕು ಎಂಬ...

ಹಲ್ಲೆ ನಡೆಸಿಲ್ಲ: ಹೆಚ್.ಎಂ.ವಿಶ್ವನಾಥ್

ಸಕಲೇಶಪುರ : ತಾವು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೆಕ್ಕನ ಹಳ್ಳಿ ನಾಗರಾಜ. ಅವರ ಮೇಲೆ ಹಲ್ಲೆ ನಡೆಸಿಲ್ಲ ಎಂದು ಮಾಜಿ ಶಾಸಕ ಹಾಗೂ ಜೆ.ಡಿ.ಎಸ.. ಮುಖಂಡ ಹೆಚ..ಎಂ.ವಿಶ್ವನಾಥ. ಪ್ರತಿಕ್ರಿಯಿಸಿದ್ದಾರೆ. ತಾಲ್ಲೂಕು ಪಂಚಾಯಿತಿ ಅಧ್ಯ ಕ್ಷರು ಹಾಗೂ ಉಪಾಧ್ಯಕ್ಷರ ಚುನಾ ವಣೆ ವೇಳೆ ನಾಲ್ಕು ಜನರ ನಡುವೆ ಪೈಪೋಟಿ ಇದ್ದುದರಿಂದ ಲಾಟರಿ ಮೂಲಕ ಆಯ್ಕೆ ಮಾಡಲು ತೀರ್ಮಾ ನಿಸಲಾಯಿತು. ಸದಸ್ಯರು ಯಾರೂ ಕೂಡ...

ಗುಂಡ್ಯ ಜಲ ವಿದ್ಯುತ್ಯೋಜನೆ:ಗಂಗಾಧರೇಂದ್ರ ಸ್ವಾಮೀಜಿ ವಿರೋಧ

ಹಾಸನ : ಗುಂಡ್ಯ ಜಲವಿದ್ಯುತ. ಯೋಜನೆಗೆ ಶ್ರೀ ಸೋಂದಾ ಸ್ವರ್ಣವಲ್ಲಿ ಪೀಠಾಧ್ಯಕ್ಷರಾದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಪತ್ರಿಕೆಯೊಂದಿಗೆ .ುಧವಾರ ಮಾತ ನಾಡಿದ ಅವರು, ಪರಿಸರಕ್ಕೆ ಹಾನಿ ಯಾಗುವ ಈ ಯೋಜನೆ ಕಾರ್ಯಗತ ವಾಗುವುದು ಸೂಕ್ತವಲ್ಲವೆಂದು ಹೇಳಿದರು. ಯೋಜನೆ ಅನುಷ್ಟಾನ ಪೂರ್ಣ ಗೊಳ್ಳುವ .ಗ್ಗೆ ಸಂಶಯ ವ್ಯಕ್ತಪಡಿಸಿದರ ಲ್ಲದೆ, ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಯೋಜನೆಗೆ ರಾಜ್ಯ ಸರ್ಕಾರ ಶಂಕುಸ್ಥಾಪನೆ...

ಪಕ್ಷದಲ್ಲಿ ಗುಂಪುಗಾರಿಕೆ : ಶಿಸ್ತು ಕ್ರಮ ಕೈಗೊಳ್ಳಲು ಒತ್ತಾಯ

ಸಕಲೇಶಪುರ: ಪಕ್ಷದಲ್ಲಿ ಗುಂಪುಗಾರಿಕೆ ಆರಂಭಿಸಿರುವ ಮಾಜಿ ತಾ ಪಂ ಅಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್‌ ಅವರ ಮೇಲೆ ಪಕ್ಷದ ವರಿಷ್ಠರು ಶಿಸ್ತಿನ ಕ್ರಮ ಕೈಗೊಳ್ಳ ಬೇಕೆಂದು ಜೆ.ಡಿ.ಎಸ್‌. ಮುಖಂಡರು ಒತ್ತಾಯಿಸಿದ್ದಾರೆ. ಸೋಮವಾರ ಜಂಟಿ ಪ್ರತಿಕಾ ಗೋಷ್ಟಿಯಲ್ಲಿ ಮಾತನಾಡಿದ, ಜಿ ಪಂ ಸದ್ಯಸರಾದ ಕುಮಾರಸ್ವಾಮಿ, ಪರ್ವತಯ್ಯ, ಮಾಜಿ ತಾ ಪಂ ಅಧ್ಯಕ್ಷ ರಂಗನಾಥ,ಮಾಜಿ ಪುರಸಭ ಅಧ್ಯಕ್ಷ ಜಾಕೀರ್‌ ಅಹಮದ್‌, ತಾ ಪಂ ಅಧ್ಯಕ್ಷೆ ಕುಸುಮ, ಪುರಸಭೆ...

ಮಾರುಕಟ್ಟೆಯೊಳಗೊಂದು ಸುತ್ತು…

ಹಾಸನ : ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಇಳಿಕೆಯಾಗಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಗತ್ಯ ವಸ್ತುಗಳು ಕೂಡ ಇದ ಕ್ಕೇನೂ ಹೊರತಲ್ಲ. ದರ ಏರಿಕೆಯಿಂದ ಮಧ್ಯಮ ವರ್ಗದ ಜೀವನಕ್ಕೆ ತೊಂದರೆ ಯಾಗಿದೆ. ಈ ವರ್ಷದ ಆರಂಭದಿಂದಲೂ ದಿನ .ಳಕೆಯ ತರಕಾರಿ, ದಿನಸಿ ಪದಾರ್ಥಗಳ ಧಾರಣೆಗಳು ಗೃಹಿಣಿ ಯರನ್ನು, ಮಧ್ಯಮ, ಸಾಮಾನ್ಯ ವರ್ಗದ ಜನರನ್ನು ಬೆಚ್ಚಿ ಬೀಳಿಸುವಂತೆ ಏರಿಕೆ ಕಾಣುತ್ತಲೇ ಹೋಗಿದ್ದು,...

ನಶಿಸುತ್ತಿರುವ ಗ್ರಾಮೀಣ ಸಂಸ್ಕೃತಿ ಉಳಿಸಿ

ಹಾಸನ : ನಶಿಸುತ್ತಿರುವ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎ.ಈ.ಚಂದ್ರ ಶೇಖರ್‌ ಹೇಳಿದರು. ಅವರು ಮಂಗಳವಾರ ಅಂಬೇ ಡ್ಕರ್‌ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶೀಯ ಕಲೆ ಇಂದು ನಶಿಸುತ್ತಿದೆ. ಇದನ್ನು ಬೆಳೆಸುವತ್ತ ಆಲೋಚಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು. ಭಾರತೀಯ ಸಂಸ್ಕೃತಿ ವಿಭಿನ್ನವಾಗಿ ದ್ದರೂ ಏಕತೆ ಇದೆ. ಇಡೀ ಪ್ರಪಂಚ ದಲ್ಲಿಯೇ...

ಕೃಷಿ, ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿ :ರಾಜಶೇಖರ್‌

ಹಾಸನ : ಹಾಸನ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ. ಕೈಗಾರಿಕಾ ವಲಯವು ಅಭಿವೃದಿಟಛಿ ಹೊಂದುತ್ತಿದೆ. ಹಾಗಾಗಿ ಈ ಎರಡೂ ವಲಯಕ್ಕೆ ಆದ್ಯತೆ ಮೇಲೆ ಸಾಲ ನೀಡುವಂತೆ ನಬಾರ್ಡ್‌ನ ಸಹಾಯಕ ಜನರಲ್‌ ಮ್ಯಾನೇಜರ್‌  ಪ್ರಸಕ್ತ ಸಾಲಿನ ಸಾಲ ಯೋಜನೆ ಯಡಿ ಮೊದಲ ತ್ರೆೃಮಾಸಿಕದಲ್ಲಿ ೧೬೭.೪೬ ಕೋಟಿ ರೂ. ಹಣವನ್ನು ಮೇಲ್ಕಂಡ ಕ್ಷೇತ್ರಗಳಿಗೆ ಸಾಲ ಸೌಲಭ್ಯದ ಆರ್ಥಿಕ ನೆರವು ಕಲ್ಪಿಸಲಾಗಿದೆ. ಎ.ಜಿ. ಎಸ್‌.ವೈ. ಕಾರ್ಯಕ್ರಮದಡಿ ಸಾಲ...

ಹೆಮ್ಮಿಗೆಯಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮರಳು ಮಂಗಮಾಯ

ಆಲೂರು : ಆಲೂರು ತಾಲ್ಲೂಕಿ ನಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಹೇಮಾವತಿ ನದಿಯಿಂದ ತೆಗೆ ದಿದ್ದ ಮರಳನ್ನು ಸರ್ಕಾರ ಮುಟ್ಟು ಗೋಲು ಹಾಕಿಕೊಂಡಿದ್ದು, ಅದನ್ನು ಬಹಿರಂಗವಾಗಿ ಹರಾಜು ಮಾಡ ಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಈ ರೀತಿ ಸಂಗ್ರಹವಾಗಿದ್ದ ಮರಳನ್ನು ರಾತ್ರೋ ರಾತ್ರಿ ಬೇರೆಡೆಗೆ ಸಾಗಿಸಲಾಗಿದೆ. ಈ ರೀತಿಯ ಸುದ್ದಿಯೊಂದು ಕೆ.ಹೊಸಕೋಟೆ ಹೋಬಳಿಯ ಹೆಮ್ಮಿಗೆ ಗ್ರಾಮದಿಂದ ಬಂದಿದೆ. ಹೆಮ್ಮಿಗೆ ಗ್ರಾಮದಲ್ಲಿ ಏಳು...

ಸರ್ವೇಯರ್‌ ಲೋಕಾಯುಕ್ತ ಬಲೆಗೆ

ಹಾಸನ : ಲಂಚ ಪಡೆಯುತ್ತಿದ್ದಾಗ ಸರ್ವೇಯರ್‌ ಗಿರೀಶ್‌ ಲೋಕಾಯುಕ್ತರ ಬಲೆಗೆ ಮಂಗಳವಾರ ಬಿದ್ದಿದ್ದಾರೆ. ಗಿರೀಶ್‌ ಅವರು ಮಧ್ಯಾಹ್ನ ೧೨-೩೦ರ ವೇಳೆಯಲ್ಲಿ ಲಂಚ ಪಡೆ ಯುತ್ತಿದ್ದಾಗ ಲೋಕಾಯುಕ್ತ ಪೊಲೀ ಸರು ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಡಿ.ಎಸ್‌.ಗಿರೀಶ್‌ ಅವರು ಶಾಂತಿ ಗ್ರಾಮ ಹೋಬಳಿಯ ದೊಡ್ಡಮಲ್ಲೇನ ಹಳ್ಳಿ ಗ್ರಾಮದ ಅಪ್ಪಣ್ಣ ಅವರಿಂದ ೨ ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತರು ಬಂಧಿಸಿದ್ದಾರೆ. ದೊಡ್ಡಮಲ್ಲೇನಹಳ್ಳಿ ಸಮೀಪದ...

ಕೃಷಿ, ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿ :ರಾಜಶೇಖರ್‌

ಹಾಸನ : ಹಾಸನ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ. ಕೈಗಾರಿಕಾ ವಲಯವು ಅಭಿವೃದಿಟಛಿ ಹೊಂದುತ್ತಿದೆ. ಹಾಗಾಗಿ ಈ ಎರಡೂ ವಲಯಕ್ಕೆ ಆದ್ಯತೆ ಮೇಲೆ ಸಾಲ ನೀಡುವಂತೆ ನಬಾರ್ಡ್‌ನ ಸಹಾಯಕ ಜನರಲ್‌ ಮ್ಯಾನೇಜರ್‌ ರಾಜಶೇಖರ್‌ ಸೂಚಿಸಿದರು. ಅವರು ಮಂಗಳವಾರ ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನೆ ಮತ್ತು ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಬ್ಯಾಂಕುಗಳು ಈ ಕುರಿತು ಹೆಚ್ಚಿನ ಆಸಕ್ತಿ ವಹಿಸುವಂತೆ ಅವರು...

ಅರೇಹಳ್ಳಿ : ಒಂಟಿ ಮನೆಯಲ್ಲಿ ದರೋಡ

ಅರೇಹಳ್ಳಿ : ಇಲ್ಲಿನ ಕಾಫಿ ತೋಟದ ಮಾಲೀಕ ರಾಮೇಗೌಡ ಮನೆಗೆ ನುಗ್ಗಿದ ೪ ಮಂದಿ ಡಕಾಯಿತರ ತಂಡ, ೪ ಲಕ್ಷ ರೂ. ಮೌಲ್ಯದ ಒಡವೆ ಹಾಗೂ ೯೫ ಸಾವಿರ ರೂ.ನಗದನ್ನು ದೋಚಿಪರಾರಿಯಾಗಿದೆ. ಭಾನುವಾರ ರಾತ್ರಿ ೧-೩೦ರಲ್ಲಿ ರಾಮೇಗೌಡರ ಮಕ್ಕಳಾದ ಅನಿಲ್ ಹಾಗೂಶಾಲಿನಿಇಬ್ಬರೇ ಇದ್ದ ಸಂದರ್ಭದಲ್ಲಿ ಈ ದರೋಡೆ ನಡೆದಿದೆ. ಅನಿಲ್ ಅವರ ಮನೆಗೆ ನಾಲ್ಕು ಮಂದಿ ಡಕಾಯಿತರ ಗುಂಪು ರಾತ್ರಿ ೧೦-೩೦ರ ಹೊತ್ತಿನಲ್ಲಿ...

ಆಲೂರು ತಾ.ಪಂ.ಅಧ್ಯಕ್ಷ ಜಗದೀಶ್-ಉಪಾಧ್ಯಕ್ಷೆ ಧರ್ಮಾವತಿ

ಆಲೂರು: ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷರಾಗಿ ಕಬ್ಬಿನಹಳ್ಳಿ ಜಗ ದೀಶ್ ಹಾಗೂ ಉಪಾಧ್ಯಕ್ಷರಾಗಿ ಧರ್ಮಾವತಿ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಕಬ್ಬಿನಹಳ್ಳಿ ಜಗದೀಶ್, ವಿಧಾನ ಪರಿಷತ್ ಸದಸ್ಯ ಬಿ.ಆರ್.ಗುರುದೇವ್ ಅವರಬೆಂಬಲಿಗರಾಗಿದ್ದಾರೆ.ಜೆ.ಡಿ.ಎಸ್. ಹಿಡಿತದಲ್ಲಿದ್ದ ತಾಲ್ಲೂಕು ಪಂಚಾ ಯಿತಿ, ಈಗ ಗುರುದೇವ್ ಬೆಂಬಲಿಗರ ಪಾಲಾಗಿದೆ. ಹಾಗಾಗಿ ಜೆ.ಡಿ.ಎಸ್. ಮುಖಭಂಗ ಅನುಭವಿಸಿದಂತಾಗಿದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸದಸ್ಯ ರುದ್ರೇಗೌಡ ಹಾಗೂ ಕಬ್ಬಿನಹಳ್ಳಿ ಜಗದೀಶ್ ಅವರ...

ಅಭಿವೃದ್ಧಿ ಶುಲ್ಕ ಏರಿಕೆ : ಸದಸ್ಯರ ತೀವ್ರ ಆಕ್ರೋಶ-ಡಿ.ಸಿ.ಗೆ ಮನವಿ

ಹಾಸನ : ಅಭಿವೃದ್ಧಿ ಶುಲ್ಕ ಏರಿಕೆ ಯನ್ನು ವಿರೋಧಿಸಿ ನಗರಸಭೆ ಸಾಮಾನ್ಯ ಸಭೆಯನ್ನು ಮೊಟಕು ಗೊಳಿಸಿದ ನಗರಸಭಾ ಸದಸ್ಯರು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬೆಳಿಗ್ಗೆ ೧೧ ಗಂಟೆ ವೇಳೆಯಲ್ಲಿ ನಗರ ಸಭಾ ಅಧ್ಯಕ್ಷೆ ನೇತ್ರಾವತಿ ಗಿರೀಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭ ಗೊಂಡಿತು. ಸಭೆ ಆರಂಭಗೊಂಡ ಕೂಡಲೇ ಉಪಾಧ್ಯಕ್ಷ ಶಂಕರ್, ಪ್ರತಿ ಚದರ ಮೀಟರ್ಗೆ ೩೦೦ ರೂ. ಏರಿಕೆ ಮಾಡಿರುವುದರಿಂದ...

ಹಾಸನ ನಗರಸಭೆ :ಆಡಳಿತ-ಪ್ರತಿಪಕ್ಷಗಳ ನಡುವೆ ಪ್ರತಿಷ್ಠೆ ಮೇಲಾಟ!

ಹಾಸನ : ಎತ್ತು ಏರಿಗಿಳಿದರೆ, ಎಮ್ಮೆ ನೀರಿಗಿಳಿಯುವ ಸ್ಥಿತಿಯಂತಾಗಿದೆ ಹಾಸನ ನಗರಸಭೆಯ ಸ್ಥಿತಿ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಪ್ರತಿಷ್ಠೆಯ ಮೇಲಾಟ ಹೆಚ್ಚಿದೆ. ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿಈಮೇಲಾಟ ಎದ್ದು ಕಂಡು ಬಂತು. ಪ್ರತಿ ಚದರ ಮೀ.ಗೆ ೩೦೦ ರೂ. ಅಭಿವೃದ್ಧಿ ಶುಲ್ಕ ಏರಿಸಿರುವ ಜಿಲ್ಲಾಧಿ ಕಾರಿಗಳ ಕ್ರಮದ ಬಗ್ಗೆ ಎಲ್ಲಾ ಸದಸ್ಯರಿಗೂ ಅಸಮಾಧಾನ ಇದೆ. ಕಳೆದ ನಗರಸಭಾ ಅಧಿವೇಶನದಲ್ಲಿ ಈ...

ಪ್ರಿನ್ಸಿಪಾಲ್‌ ಸೆಷನ್ಸ್‌ ನ್ಯಾಯಾಲಯದ ಕಲಾಪ ಬಹಿಷ್ಕಾರ

ಹಾಸನ : ಹಿರಿಯ ವಕೀಲರೊಬ್ಬ ರೊಂದಿಗೆ ತುಚ್ಛವಾಗಿ ಜಿಲ್ಲಾ ನ್ಯಾಯಾ ಧೀಶರಾದ ಸೋಮಶೇಖರ್‌ ನಡೆದು ಕೊಂಡರೆಂದು ಆರೋಪಿಸಿ, ಗುರುವಾರ ಮಧ್ಯಾಹ್ನದವರೆವಿಗೂ ಪ್ರಧಾನ ಪ್ರಿನ್ಸಿ ಪಲ್‌ ಸೆಷನ್ಸ್‌ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ವಕೀಲರು ಬಹಿಷ್ಕರಿಸಿದ ಘಟನೆ ನಡೆಯಿತು. ಪ್ರಕರಣವೊಂದಕ್ಕೆ ಸಂಬಂಧಿಸಿ ದಂತೆ ವಿಚಾರಣೆ ವಿಳಂಬದ ಬಗ್ಗೆ ಬುಧ ವಾರ ಪ್ರಧಾನ ಪ್ರಿನ್ಸಿಪಾಲ್‌ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್‌ ಅವರು ಹಿರಿಯ ವಕೀಲ ನಾಗೇಂದ್ರಯ್ಯ ಅವರನ್ನು...